ಎಲ್ಲ ಅವಳಿಗಳಿಂತಿಲ್ಲ ಈ ಅವಳಿಗಳು.. ಗಿನ್ನೆಸ್ ಪುಟ ಸೇರಿದ ಜಪಾನ್‌ನ ಟ್ವಿನ್ಸ್

Published : Mar 02, 2023, 01:44 PM IST
 ಎಲ್ಲ ಅವಳಿಗಳಿಂತಿಲ್ಲ ಈ ಅವಳಿಗಳು..  ಗಿನ್ನೆಸ್ ಪುಟ ಸೇರಿದ ಜಪಾನ್‌ನ ಟ್ವಿನ್ಸ್

ಸಾರಾಂಶ

ಜಪಾನ್‌ನ ಈ ಅವಳಿ ಜವಳಿ ಜೋಡಿಯೊಂದು ನೋಡಲು ಸಂಪೂರ್ಣ ಉಲ್ಟಾ ಇದ್ದಾರೆ.  ಒಬ್ಬಳು 5 ಅಡಿ ಇದ್ದರೆ ಮತ್ತೊಬ್ಬಳ ಉದ್ದ 2 ಅಡಿಗೆ ಕುಂಠಿತಗೊಂಡಿದೆ. ಇದೇ ಕಾರಣಕ್ಕೆ ಈ ಟ್ವಿನ್ ಜೋಡಿ ಈಗ ಗಿನ್ನೆಸ್ ಪುಟ ಸೇರಿದ್ದಾರೆ. 

ಅವಳಿ ಜವಳಿ ಮಕ್ಕಳ ಬಗ್ಗೆ ಹಲವು ನಂಬಿಕೆಗಳಿವೆ. ಅವರ ಆಲೋಚನೆ ಒಂದೇ ತರ ಇರುತ್ತೆ. ನೋಡಲು  ಒಂದೇ ತರ ಇರುತ್ತಾರೆ. ಇಬ್ಬರಲ್ಲಿ ಅವಳ್ಯಾರು ಇವಳ್ಯಾರು (ಅವನ್ಯಾರು ಇವನ್ಯಾರು) ಎಂಬುದೇ ಗೊತ್ತಾಗಲ್ಲ. ಒಬ್ಬರನ್ನು ಬಿಟ್ಟು ಮತ್ತೊಬ್ಬರು ಇರುವುದಿಲ್ಲ. ಅವರ ಆಯ್ಕೆಗಳು ಒಂದೇ ರೀತಿಯದ್ದಾಗಿರುತ್ತದೆ ಹೀಗೆ ಈ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಅವಳಿಗಳು ಕೂಡ ಹಾಗೆಯೇ  ಬಹುತೇಕ ನೋಡಲು ಒಂದೇ ತರ ಇರುತ್ತಾರೆ. ಅವರ ಜೊತೆ ಇರುವ ಗೆಳೆಯ ಗೆಳತಿಯರಿಗೂ ಅವರನ್ನು ಗುರುತಿಸುವುದು ಕಷ್ಟವಾಗುತ್ತದೆ. ಆದರೆ ಅವಳಿಗಳ ಬಗ್ಗೆ ಇರುವ ಎಲ್ಲಾ ನಂಬಕೆಗಳು ನಿಜವಲ್ಲ. ಅವಳಿಗಳು ಸಂಪೂರ್ಣ ಡಿಫರೆಂಟ್ ಆಗಿ ಕೂಡ ಇರಬಲ್ಲರು.  ಅವಳಿಗಳೆಂದರೆ ನಂಬಲಾಗದಂತೆಯೂ ಇರುತ್ತಾರೆ. ಆದರೆ ಬಹುತೇಕ ಅವಳಿ ಜವಳಿಗಳು ಒಂದೇ ತರದ ಎತ್ತರವನ್ನು ಹೊಂದಿರುತ್ತಾರೆ. ಆದರೆ ಜಪಾನ್‌ನ ಈ ಅವಳಿ ಜವಳಿ ಜೋಡಿಯೊಂದು ನೋಡಲು ಸಂಪೂರ್ಣ ಉಲ್ಟಾ ಇದ್ದಾರೆ.  ಒಬ್ಬಳು 5 ಅಡಿ ಇದ್ದರೆ ಮತ್ತೊಬ್ಬಳ ಉದ್ದ 2 ಅಡಿಗೆ ಕುಂಠಿತಗೊಂಡಿದೆ. ಇದೇ ಕಾರಣಕ್ಕೆ ಈ ಟ್ವಿನ್ ಜೋಡಿ ಈಗ ಗಿನ್ನೆಸ್ ಪುಟ ಸೇರಿದ್ದಾರೆ. 

ಇಬ್ಬರ ಎತ್ತರದಲ್ಲಿ ಸುಮಾರು 75 ಸೆಂಟಿಮೀಟರ್‌ಗಳ ವ್ಯತ್ಯಾಸವಿದೆ.  ಜಪಾನ್‌ನ ಈ ಟ್ವಿನ್‌ ಜೋಡಿಗಳ ಹೆಸರು ಒಬ್ಬಳದ್ದು, ಯೋಶಿ ಕಿಕುಚಿ (Yoshie Kikuchi) ಹಾಗೂ ಮತ್ತೊಬ್ಬಳದ್ದು ಮಿಚಿ ಕಿಕುಚಿ (Michie Kikuchi) ಇವರ ಮಧ್ಯೆ ಅತ್ಯಂತ ವಿಶಿಷ್ಠ ಎಂಬಷ್ಟು ಎತ್ತರದಲ್ಲಿ ವ್ಯತ್ಯಾಸವಿದೆ. ಒಬ್ಬರ ಎತ್ತರ 5 ಅಡಿ 4 ಇಂಚು (165.5 ಸಿ.ಮಿ.) ಇದ್ದರೆ ಮತ್ತೊಬ್ಬಳ ಎತ್ತರ ಕೇವಲ 2 ಅಡಿ  10.5 ಇಂಚು (87.5 ಸಿಮಿ.) ಆಗಿದ್ದು, 75 ಸೆಂಟಿ ಮೀಟರ್‌ನಷ್ಟು ವ್ಯತ್ಯಾಸವಿದೆ. ಜಪಾನ್‌ನ ಒಕಯಾಮ(Okayama) ದಲ್ಲಿ ವಾಸಿಸುವ ಇವರು ಇದೇ ಕಾರಣಕ್ಕೆ  ಈಗ ಗಿನ್ನೆಸ್ ಪುಟ ಸೇರಿದ್ದಾರೆ.  ಅಸಾಧಾರಣ ಎತ್ತರ ವ್ಯತ್ಯಾಸವನ್ನು ಹೊಂದಿರುವ ಜಗತ್ತಿನ ಜೀವಂತ ಟ್ವಿನ್ಸ್ ಎಂದು ಇವರನ್ನು ಗಿನ್ನೆಸ್ ಪುಟಕ್ಕೆ ಸೇರಿಸಲಾಗಿದೆ. 

ಅವಳಿ ಮಕ್ಕಳಲ್ಲಿ ಸಾಮ್ಯತೆಯೇ ಇಲ್ಲ, ಕಪ್ಪು, ಬಿಳಿ ಮಗುವಿಗೆ ಜನ್ಮ ನೀಡಿದ ಮಹಿಳೆ !

33 ವರ್ಷ ಪ್ರಾಯದ ಈ ಸಹೋದರಿಯರ ಮುಖಚರ್ಯೆಯೂ (facial features) ಕೂಡ ಅವಳಿಗಳು ಎಂದು ಗುರುತಿಸಲಾಗದಷ್ಟು ವಿಭಿನ್ನವಾಗಿದೆ.  ಈ ವಿಚಾರವನ್ನು ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಸಂಸ್ಥೆ ತನ್ನ ಟ್ವಿಟ್ಟರ್ ಪೇಜ್‌ನಲ್ಲಿ ಹಂಚಿಕೊಂಡಿದೆ.  ತಮ್ಮ ದೈಹಿಕ ವಿಭಿನ್ನತೆಯ ಹೊರತಾಗಿಯೂ ಈ ಅವಳಿ ಸಹೋದರಿಯರು ಬಹಳ ಅನೋನ್ಯವಾಗಿದ್ದಾರೆ ಎಂದು ಗಿನ್ನೆಸ್ ಸಂಸ್ಥೆ ಇವರ ಫೋಟೋದೊಂದಿಗೆ ಪೋಸ್ಟ್ ಮಾಡಿದೆ. 

ಗಿನ್ನೆಸ್ ವರ್ಲ್ಡ್‌ ರೆಕಾರ್ಡ್‌ನ ಪ್ರೆಸ್ ರಿಲೀಸ್ ಪ್ರಕಾರ, ಈ ಕಿಕುಚಿ ಸಹೋದರಿಯರು ಫ್ರಾಟೆರ್ನಲ್ ಟ್ವಿನ್‌ಗಳಾಗಿದ್ದು,  ಎರಡು ಪ್ರತ್ಯೇಕ ಮೊಟ್ಟೆಗಳ ಫಲೀಕರಣದ ಪರಿಣಾಮ  ಹುಟ್ಟಿದ ಮಕ್ಕಳಾಗಿದ್ದಾರೆ. ಅಕ್ಟೋಬರ್ 15, 1989 ರಂದು ಜನಿಸಿದ ಈ ಅವಳಿಗಳಲ್ಲಿ. ಮಿಚಿಗೆ ಜನ್ಮಜಾತ ಸ್ಪೈನಲ್ ಎಪಿಫಿಸಿಯಲ್ ಡಿಸ್ಪ್ಲಾಸಿಯಾ (congenital spinal epiphyseal dysplasia) ಎಂಬ ಕಾಯಿಲೆ ಇದೆ.  ಇದು ಮೂಳೆಗೆ ಸಂಬಂಧಿಸಿದ ಕಾಯಿಲೆಯಾಗಿದ್ದು,  ಆಕೆಯ ಬೆಳವಣಿಗೆಯನ್ನು ತಡೆಯುತ್ತಿದೆ.  ಮಿಚಿ ತಂದೆಯೊಂದಿಗೆ ಕುಟುಂಬದೊಂದಿಗೆ ಜೀವಿಸುತ್ತಿದ್ದು, ಯೋಶಿಗೆ ಮದುವೆಯಾಗಿ ಮಕ್ಕಳಿವೆ. 

ಅವಳಿಗಳಾದರೂ ಹುಟ್ಟಿದ ವರ್ಷವೇ ಬೇರೆ... ಏನೀ ಅಚ್ಚರಿ

ಈ ಬಗ್ಗೆ ಗಿನ್ನೆಸ್ ವರ್ಲ್ಡ್‌ ರೆಕಾರ್ಡ್ ಸಂಸ್ಥೆ (Guinness World Record) ಜೊತೆ ಮಾತನಾಡಿದ ಮಿಚಿ, ನಾನು 2012ರಲ್ಲಿ ಅತ್ಯಂತ ಕುಳ್ಳಗಿನ ವ್ಯಕ್ತಿ ಬಗ್ಗೆ ಓದಿ ಶಾಕ್ ಆಗಿದ್ದೆ. ನಾನು ನನ್ನ ಎತ್ತರದ ಬಗ್ಗೆ ನಾಚಿಕೆ ಪಡುತ್ತಿದ್ದರೆ ಆತ, ತನ್ನ ಕುಬ್ಜತೆಯನ್ನೇ ಹೆಮ್ಮೆಯಿಂದ ಪ್ರದರ್ಶಿಸಿದ್ದ ಎಂದು ಹೇಳಿಕೊಂಡಿದ್ದಾರೆ. 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವಿಶ್ವದ ಅತಿ ಬಲಿಷ್ಠ ಕರೆನ್ಸಿಗಳಿವು: ಭಾರತದ ರುಪಾಯಿ ಮುಂದೆ ಘರ್ಜಿಸುವ ಡಾಲರ್ ಈ ದೇಶದ ಕರೆನ್ಸಿ ಮುಂದೆ ಡಮ್ಮಿ!
ರಾಜಮೌಳಿ-ಜೇಮ್ಸ್ ಕ್ಯಾಮರೂನ್ ಹೊಸ ಹೆಜ್ಜೆ, ನಟ ಮಹೇಶ್ ಬಾಬುಗೆ ಪ್ಯಾನ್ ವರ್ಲ್ಡ್ ಪಟ್ಟ..!