ಒಂದಲ್ಲ, ಎರಡಲ್ಲ, ಮನೆಯೊಳಗೆ 90 ಹಾವು, ತೆರವುಗೊಳಿಸಲು ಬಂದ ಅಧಿಕಾರಿ ದಂಗು!

By Suvarna News  |  First Published Oct 16, 2021, 6:56 PM IST
  • ಮನೆಯೊಳಗೆ ಸೇರಿಕೊಂಡ ಹಾವು, ಮಹಿಳೆ ಕರೆಗೆ ಸ್ಥಳಕ್ಕೆ ಬಂದ ಅಧಿಕಾರಿ
  • ಮಹಿಳೆ ಮನೆಯೊಳಗೆ ಸೇರಿಕೊಂಡಿತ್ತು 90 ಹಾವು
  • ತೆರವುಗೊಳಿಸಲು ಹರಸಾಹಸ ಪಟ್ಟ ತಂಡ

ಕ್ಯಾಲಿಫೋರ್ನಿಯಾ(ಅ.16): ಹಾವು ಮನೆ ಸೇರಿಕೊಳ್ಳುವುದು, ಜನರು ಭಯದಿಂದ ತೆರವಿಗೆ ಕರೆ ಮಾಡಿದ ಘಟನೆಗಳು ಸಾಕಷ್ಟು ನಡೆದಿದೆ. ಹೀಗೆ ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿರುವ ಮನೆಯೊಂದರಿಂದ ಕರೆಯೊಂದು ಬಂದಿದೆ. ಮನೆಯಲ್ಲಿ ತುಂಬಾ ಹಾವುಗಳಿವೆ. ತಕ್ಷಣ ಬಂದು ತರೆವುಗೊಳಿಸಬೇಕು ಎಂದು ಮನವಿ ಮಾಡಿದ್ದಾರೆ. ಹಾವನ್ನು ಸುರಕ್ಷಿತವಾಗಿ ಹಿಡಿಯಲು ಬಂದು ತಂಡಕ್ಕೆ ಶಾಕ್ ಕಾದಿತ್ತು. ಕಾರಣ ಮನೆಯಲ್ಲಿದ್ದದ್ದು ಒಂದೆರಡು ಹಾವಲ್ಲ, ಬರೋಬ್ಬರಿ 90 ಹಾವು.

4,800ಕ್ಕೂ ಹೆಚ್ಚು ಹಾವುಗಳ ರಕ್ಷಿಸಿದ ಸ್ನೇಕ್ ಕಿರಣ್

Tap to resize

Latest Videos

undefined

ಕ್ಯಾಲಿಫೋರ್ನಿಯಾದಲ್ಲಿ ಹೀಗೆ ಮನೆಯೊಳಗೆ ಹಾವು ಸೇರಿಕೊಂಡರೆ ಅವುಗಳನ್ನು ತೆರವುಗೊಳಿಸಲು AI ವೂಲ್ಫ್ ತಂಡ ಕಾರ್ಯನಿರ್ವಹಿಸುತ್ತದೆ. ಒಂದು, ಎರಡು ಹಾವನ್ನು ಈ ತಂಡ ಸುರಕ್ಷಿತವಾಗಿ ಹಿಡಿದು ಕಾಡಿಗೆ ಬಿಡುವ ಕೆಲಸ ಮಾಡುತ್ತದೆ. ಈ ತಂಡಕ್ಕೆ ಮಹಿಳೆಯೊಬ್ಬರು ಕರೆ ಮಾಡಿ ಮನೆಯಲ್ಲಿ ಹಾವು ಸೇರಿಕೊಂಡಿರುವುದಾಗಿ ತಕ್ಷಣ ಬಂದು ಸುರಕ್ಷಿತವಾಗಿ ಹಿಡಿಯಬೇಕು ಎಂದು ಮನವಿ ಮಾಡಿದ್ದಾರೆ.

ಹಾವಿನ ವಿಷದಿಂದ ಕೊರೋನಾಗೆ ಬ್ರೇಕ್‌: ಶೇ.75ರಷ್ಟು ಹರಡುವಿಕೆ ತಡೆಯುತ್ತದೆ!

ಹಾವಿನ ತಜ್ಞರು, ವೈದ್ಯರು ಸೇರಿ ಒಂದು ತಂಡ ಮಹಿಳೆಯ ಕ್ಯಾಲಿಫೋರ್ನಿಯಾ ಮನೆಗೆ ಧಾವಿಸಿದೆ. ಮನೆಯೊಳಗೆ ಹೋದ ತಂಡಕ್ಕೆ ಒಂದು ಹಾವು ಹಿಡಿದ ಬೆನ್ನಲ್ಲೇ ಮತ್ತೊಂದು ಹಾವು ಗೋಚರಿಸಿದೆ. ಹೀಗೆ ಒಂದರ ಹಿಂದೆ ಒಂದು ಹಾವನ್ನು ಹಿಡಿಯುತ್ತಾ ಹೋದ ತಂಡ 90 ಹಾವುಗಳನ್ನು ಹಿಡಿದಿದೆ.

ಚಲಿಸುತ್ತಿದ್ದ ಬೈಕ್ ಹ್ಯಾಂಡಲ್‌ಗೆ ಸುತ್ತಿಕೊಂಡ ಹಾವು, ಬೆಚ್ಚಿ ಬಿದ್ದ ಮಹಿಳೆ

ಸತತ ನಾಲ್ಕು ಗಂಟೆಗಳ ಕಾಲ ಒಂದೊಂದೇ ಹಾವುಗಳನ್ನು ಹಿಡಿಯುತ್ತಾ ಹೋಗಿದ್ದಾರೆ. ಮಹಿಳೆಯ ಕರೆ ಬಂದಾಗ ಇಷ್ಟೊಂದು ಹಾವು ಇದೆ ಎಂದು ಭಾವಿಸಿರಲಿಲ್ಲ. ಇದು ಸಾರ್ಥಕ ಕರೆಯಾಗಿದೆ ಎಂದು ವೂಲ್ಫ್ ತಂಡ ಹೇಳಿದೆ. 

90 ಹಾವುಗಳ ಪೈಕಿ 59 ಮರಿಗಳಾಗಿತ್ತು. ಮನೆಯೊಳಗೆ ಸೇರಿದ್ದ ಈ ಎಲ್ಲಾ ಹಾವುಗಳು ಅತ್ಯಂತ ವಿಷಕಾರಕ ಹಾವಾಗಿದೆ. ಈ ಹಾವುಗಳು ಉತ್ತರ ಕ್ಯಾಲಿಫೋರ್ನಿಯಾದಲ್ಲಿ ಮಾತ್ರ ಕಂಡಬರುತ್ತದೆ. ಹಲವು ಬಾರಿ ಒಂದು ಹಾವು ಹಿಡಿಯಲು ಹೋಗಿ ನಾಲ್ಕೈದು ಹಾವುಗಳನ್ನು ಹಿಡಿದ ಉದಾಹರಣೆಗಳಿವೆ. ಆದರೆ ಇದು ಅತ್ಯಂತ ವಿಶೇಷವಾಗಿದೆ. ಒಂದೇ ಮನೆಯಲ್ಲಿ 90 ಹಾವು ಇದುವರೆಗೂ ಹಿಡಿದಿಲ್ಲ ಎಂದು ವೂಲ್ಫ್ ತಂಡ ಹೇಳಿದೆ.

ಈ ವಿಷ ಹಾವುಗಳು ಎಪ್ರಿಲ್‌ನಿಂದ ಅಕ್ಟೋಬರ್ ವರೆಗೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಕಲ್ಲು ಬಂಡೆಗಳ ಅಡಿಯಲ್ಲಿ ಇರುತ್ತದೆ. ಹೀಗಾಗಿ  ವಾಸವಿಲ್ಲದ ಮನೆ ಸೇರಿದಂತೆ ಜನರ ಒಡಾಟವಿಲ್ಲದ ಮನೆಯೊಳಗೆ ಸುಲಭವಾಗಿ ಸೇರಿಕೊಳ್ಳುತ್ತದೆ. ಹೀಗಾಗಿ ಕ್ಯಾಲಿಫೋರ್ನಿಯಾ ನಿವಾಸಿಗಳು ಎಚ್ಚರಿಕೆ ವಹಿಸುವುದು ಅಗತ್ಯ ಎಂದು ವೋಲ್ಫ್ ತಂಡ ಹೇಳಿದೆ.
 

click me!