
ಢಾಕಾ(ಅ.16): ಬಾಂಗ್ಲಾದೇಶದಲ್ಲಿ(Bangladesh) ಕೋಮು ಹಿಂಸಾಚಾರ(communal violence) ತಾರಕ್ಕಕೇರಿದೆ. ಸರ್ಕಾರದ ಎಚ್ಚರಿಕೆ, ಸ್ಥಳೀಯ ಪೊಲೀಸರ ಸರ್ಪಗಾವಲಿನ ನಡುವೆಯೂ ಮತ್ತೆ ಮತ್ತೆ ಹಿಂದೂ ಮಂದಿರ ಹಾಗೂ ಹಿಂದೂಗಳ ಮೇಲೆ ಸತತ ದಾಳಿ ನಡೆಯುತ್ತಿದೆ. ದುರ್ಗಾ ಪೂಜೆ(Durga puja) ವೇಳೆ ನಡೆದ ದಾಳಿ ಬಳಿಕ ಇದೀಗ ಬೇಗಮ್‌ಗಂಜ್‌ನಲ್ಲಿರು ಹಿಂದೂ ದೇಗುಲದೆ ಮೇಲೆ ದಾಳಿ ನಡೆಸಲಾಗಿದೆ. ಈ ವೇಳೆ ನಡೆದ ಕೋಮು ಗಲಭೆಯಲ್ಲಿ ಇಬ್ಬರು ಹಿಂದೂ(Hindu) ವ್ಯಕ್ತಿಗಳು ಸಾವನ್ನಪ್ಪಿದ್ದಾರೆ.
ದುರ್ಗಾ ಪೂಜೆ ಮೇಲೆ ದಾಳಿ; ಹಿಂದೂಗಳ ರಕ್ಷಿಸಲು ಬಾಂಗ್ಲಾ ಸರ್ಕಾರ ಆಗ್ರಹಿಸಿದ ವಿಶ್ವ ಹಿಂದೂ ಪರಿಷತ್!
200ಕ್ಕೂ ಹೆಚ್ಚು ದುರ್ಷರ್ಮಿಗಳು ಹಿಂದೂ ಮಂದಿರದ ಮೇಲೆ ದಾಳಿ ನಡೆಸಿದ್ದಾರೆ. ಕೋಮು ಗಲಭೆ ಸೃಷ್ಟಿಸಿದ್ದಾರೆ. ದುರ್ಗಾ ಪೂಜೆ ಅಂತಿಮ ದಿನದಂದು ದಾಳಿ ನಡೆದಿದೆ. ಈ ವೇಳೆ ನಡೆದ ಕೋಮು ಗಲಭೆಯಲ್ಲಿ ಇಬ್ಬರು ಹಿಂದೂಗಳನ್ನು ಹತ್ಯೆ ಮಾಡಿದ್ದಾರೆ. ಇನ್ನು ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಶನಿವಾರ(ಅ.15)ರಂದು ದೇಗುಲದ ಮೇಲೆ ದಾಳಿ ನಡೆಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ದಾಳಿ ವೇಳೆ ಗಲಭೆಕೋರರು, ದೇಗುಲ ಸಮತಿ ಸದಸ್ಯನನ್ನು ಹತ್ಯೆ ಮಾಡಿದ್ದಾರೆ. ಇದೀಗ ಬಾಂಗ್ಲಾದೇಶದಲ್ಲಿನ ಹಿಂದೂಗಳು ಆತಂಕದಲ್ಲಿ ದಿನದೂಡುವಂತಾಗಿದೆ. ಇತ್ತ ಬಾಂಗ್ಲಾದೇಶ ಪ್ರಧಾನಿ ಶೇಕ್ ಹಸೀನಾ ಘಟನೆಯನ್ನು ಖಂಡಿಸಿದ್ದಾರೆ. ಇದೇ ವೇಳೆ ಕೋಮು ಹಿಂಸಾಚಾರ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಹಸೀನಾ ಗುಡುಗಿದ್ದಾರೆ.
ಭಾರತದ ಪಾಸ್‌ಪೋರ್ಟ್ ಹೊಂದಿದ್ದ ಬಾಂಗ್ಲಾದೇಶಿಗಳ ಬಂಧನ.. ದೊಡ್ಡ ಜಾಲವೇ ಇದೆ!
ಬುಧವಾರ ದುರ್ಗಾ ಪೂಜೆ ವೇಳೆ ಹಿಂದು ದೇಗುಲದ ಮೇಲೆ ದಾಳಿ ಮಾಡಲಾಗಿತ್ತು. ಈ ದಾಳಿಯಲ್ಲಿ ಮೂರ್ತಿಗಳನ್ನು ಧ್ವಂಸಗೊಳಿಸಿದ ಗಲಭೋಕರರು, ನಾಲ್ವರು ಹಿಂದೂಗಳನ್ನು ಹತ್ಯೆಗೈದಿದ್ದರು. ಈ ದಾಳಿಯಲ್ಲಿ ಹಲವು ಹಿಂದೂಗಳು ಗಾಯಗೊಂಡಿದ್ದರು.
ಈ ಘಟನೆಯನ್ನು ಭಾರತ ಕಠುವಾಗಿ ಖಂಡಿಸಿತ್ತು. ಹಿಂದೂಗಳು ಸೇರಿದಂತೆ ಬಾಂಗ್ಲಾದೇಶದ ಅಲ್ಪಸಂಖ್ಯಾತರಿಗೆ ರಕ್ಷಣೆ ನೀಡಬೇಕು ಎಂದು ಭಾರತ ಆಗ್ರಹಿಸಿತ್ತು. ಇತ್ತ ವಿಶ್ವ ಹಿಂದೂ ಪರಿಷತ್ ಕೂಡ ಬಾಂಗ್ಲಾದೇಶ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲು ಆಗ್ರಹಿಸಿತ್ತು.
ಭಾರತ ಮೂಲಕ ಆಫ್ಗಾನ್ ಪ್ರವೇಶಕ್ಕೆ ಬಾಂಗ್ಲಾ ಮೂಲಭೂತವಾದಿಗಳ ಸರ್ಕಸ್; ಗಡಿಯಲ್ಲಿ ಹೈ ಅಲರ್ಟ್!
ಹಜಿಗಂಜ್‌ನಲ್ಲಿ 500ಕ್ಕೂ ಹೆಚ್ಚು ಮಂದಿ ಹಿಂದು ದೇಗುಲದ ಮೇಲೆ ದಾಳಿ ಮಾಡಿದ್ದರು. ಬಾಂಗ್ಲಾದೇಶದ ಹಲವು ಭಾಗಗಳಲ್ಲಿನ ಮಂದಿರದ ಮೇಲೆ ದುಷ್ಕರ್ಮಿಗಳು ದಾಳಿ ಮಾಡಿದ್ದರು.
ಕಳೆದ ಕೆಲ ತಿಂಗಳುಗಳಿಂದ ಬಾಂಗ್ಲಾದೇಶದಲ್ಲಿ ಕೋಮು ಗಲಭೆ ಸಂಭವಿಸುತ್ತಲೇ ಇದೆ. ಇದೀಗ ತಾರಕಕ್ಕೇರಿದೆ. ಹಿಂದುಗಳನ್ನು ಟಾರ್ಗೆಟ್ ಮಾಡಿ ದಾಳಿ ನಡೆಸಲಾಗುತ್ತಿದೆ. ಹಿಂದು ದೇಗುಲಗಳನ್ನು ಧ್ವಂಸಗೊಳಿಸಲಾಗುತ್ತಿದೆ. ಈ ಕುರಿತು ಬಾಂಗ್ಲಾದೇಶ ಸರ್ಕಾರ ತನಿಖೆ ನಡೆಸಲು ಮುಂದಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ