ಕೈಯಲ್ಲಿ ಚಾಕು ಹಿಡಿದು ಡಾನ್‌ ತರ ಜನರ ಬೆದರಿಸಿದ ಕೋತಿ: ವಿಡಿಯೋ ವೈರಲ್

Published : Jun 27, 2022, 10:37 AM IST
ಕೈಯಲ್ಲಿ ಚಾಕು ಹಿಡಿದು ಡಾನ್‌ ತರ ಜನರ ಬೆದರಿಸಿದ ಕೋತಿ: ವಿಡಿಯೋ ವೈರಲ್

ಸಾರಾಂಶ

ಕೋತಿಯೊಂದು ಕೈಯಲ್ಲಿ ಚಾಕು ಹಿಡಿದು ಜನರನ್ನು ಹೆದರಿಸಿದ್ದಲ್ಲದೇ ಬೀದಿಯಲ್ಲಿ ಸುತ್ತಾಡಿದ ವಿಡಿಯೋವೊಂದು ವೈರಲ್ ಆಗಿದೆ. ಮಾಂಸ ಕತ್ತರಿಸಲು ಬಳಸುವಂತಹ ದೊಡ್ಡದಾದ ಚಾಕೊಂದು ಕೋತಿ ಕೈಗೆ ಅದ್ಹೇಗೆ ಬಂತು ಎಂಬುದು ಮಾತ್ರ ತಿಳಿದಿಲ್ಲ. ಆದರೆ ಕೋತಿ ಮಾತ್ರ ಯಾವ ಡಾನ್‌ಗೂ ಕಡಿಮೆ ಇಲ್ಲದಂತೆ ದೊಡ್ಡ ಚಾಕನ್ನು ಕೈಯಲ್ಲಿಡಿದು ಝಳಪಿಸಿದ್ದು, ನೋಡುಗರು ಭಯಗೊಂಡಿದ್ದಾರೆ. 

ಕೋತಿಯೊಂದು ಕೈಯಲ್ಲಿ ಚಾಕು ಹಿಡಿದು ಜನರನ್ನು ಹೆದರಿಸಿದ್ದಲ್ಲದೇ ಬೀದಿಯಲ್ಲಿ ಸುತ್ತಾಡಿದ ವಿಡಿಯೋವೊಂದು ವೈರಲ್ ಆಗಿದೆ. ಮಾಂಸ ಕತ್ತರಿಸಲು ಬಳಸುವಂತಹ ದೊಡ್ಡದಾದ ಚಾಕೊಂದು ಕೋತಿ ಕೈಗೆ ಅದ್ಹೇಗೆ ಬಂತು ಎಂಬುದು ಮಾತ್ರ ತಿಳಿದಿಲ್ಲ. ಆದರೆ ಕೋತಿ ಮಾತ್ರ ಯಾವ ಡಾನ್‌ಗೂ ಕಡಿಮೆ ಇಲ್ಲದಂತೆ ದೊಡ್ಡ ಚಾಕನ್ನು ಕೈಯಲ್ಲಿಡಿದು ಝಳಪಿಸಿದ್ದು, ನೋಡುಗರು ಭಯಗೊಂಡಿದ್ದಾರೆ. 

ರಾಷ್ಟ್ರೀಯ ಉದ್ಯಾನವನದ ಸಮೀಪದಲ್ಲಿರುವ ಈಶಾನ್ಯ ಪಿಯಾಯು ರಾಜ್ಯದ ಕೊರೆಂಟೆಯಲ್ಲಿ (Corrente) ಕೋತಿಯೂ ದೊಡ್ಡ ಅಡುಗೆ ಚಾಕುವನ್ನು ಝಳಪಿಸುತ್ತಿರುವ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಇಡೀ ಘಟನೆಯನ್ನು ನಿವಾಸಿಯೊಬ್ಬರು ತಮ್ಮ ಫೋನ್‌ನಲ್ಲಿ ರೆಕಾರ್ಡ್ ಮಾಡಿದ್ದಾರೆ. ಇದರಲ್ಲಿ ಕೋತಿ ಇಟ್ಟಿಗೆ ಗೋಡೆಗೆ  ಚಾಕುವನ್ನು ಉಜ್ಜುವ ಮೂಲಕ ಹರಿತಗೊಳಿಸುತ್ತಿರುವುದನ್ನು ಕಾಣಬಹುದು. ಅಂದಾಜು ಅದರಷ್ಟೇ ಎತ್ತರವಿದ್ದ ಈ ಚಾಕುವನ್ನು ಅದು ಗಟ್ಟಿಯಾಗಿ ಹಿಡಿದುಕೊಂಡಿದ್ದು ಸುತ್ತಮುತ್ತ ರೌಡಿಯಂತೆ ಝಳಪಿಸುತ್ತಾ ಓಡಾಡುತ್ತಿರುವುದು ಕಂಡು ಬಂದಿದೆ. ಅಲ್ಲದೇ ಇದನ್ನು ನೋಡಿ ಜನ ಬೆದರಿದ್ದಾರೆ ಎಂದು ಮೆಟ್ರೋ ಪತ್ರಿಕೆ ವರದಿ ಮಾಡಿದೆ.

ಒಂದು ವಾರದಿಂದ ಪಟ್ಟಣದಲ್ಲಿ ಕೋತಿ ಹೀಗೆ ಗಲಾಟೆ ಮಾಡುತ್ತಿದೆ ಎಂದು ವಿಡಿಯೋ ಚಿತ್ರೀಕರಿಸಿದ ಸ್ಥಳೀಯ ನಿವಾಸಿ ಅಲೆಸ್ಸಾಂಡ್ರೊ ಗೆರಾ (Alessandro Guerra) ಹೇಳಿದ್ದಾರೆ. ಇದು ತನ್ನನ್ನು ಮುಟ್ಟಲು ಬಿಡುತ್ತಿದೆ. ಅಲ್ಲದೇ ಜನರ ಮನೆಗಳಿಗೂ ಭೇಟಿ ನೀಡುತ್ತಿರುತ್ತದೆ. ಮತ್ತು ಅನೇಕರು ಈ ಕೋತಿಯನ್ನು ಕೈಯಲ್ಲಿ ಮುಟ್ಟಿದ್ದಾರೆ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ. ಆದರೆ ಈ ಕೋತಿ ಎಲ್ಲೆಡೆ ತೊಂದರೆ ಉಂಟು ಮಾಡುತ್ತಿದೆ. ಇದರಿಂದ ಮನೆಯ ಚಾವಣಿಗೆ ಹಾನಿಯಾಗಿದೆ. ಈ ವಾರ ಇದು ಚಾಕುವಿನೊಂದಿಗೆ (Knief) ಕಾಣಿಸಿಕೊಂಡಿದೆ ಎಂದು ಸ್ಥಳೀಯ ನಿವಾಸಿ ಅಲೆಸ್ಸಾಂಡ್ರೊ ಗುರ್ರಾ ಅವರು ಹೇಳಿದರು.

ಗಾಯಕ್ಕೆ ಚಿಕಿತ್ಸೆ ಪಡೆಯಲು ಆಸ್ಪತ್ರೆಗೆ ಬಂದ ತಾಯಿ ಕೋತಿ: ವಿಡಿಯೋ ವೈರಲ್

ಅವ್ಯವಸ್ಥೆಯಿಂದ ಬಳಲುತ್ತಿರುವವರು ಚಿಂತಿತರಾಗಿದ್ದಾರೆ. ಏಕೆಂದರೆ ಈ ಕೋತಿಯಿಂದಾಗಿ ಅವರು ತಮ್ಮ ಬಾಗಿಲು ಅಥವಾ ಕಿಟಕಿಗಳನ್ನು ತೆರೆದಿಡಲು ಸಾಧ್ಯವಾಗುತ್ತಿಲ್ಲ. ಆದರೆ ಇತರರು ಅದನ್ನು ತಮಾಷೆಯಾಗಿ ಕಾಣುತ್ತಿದ್ದಾರೆ ಕೆಲವರಿಗೆ ಇದು ಮಿಮ್ಸ್‌ ತರ ತೋರುತ್ತಿದೆ ಎಂದು ಅವರು ಹೇಳಿದರು.

ನಗರದ ಪರಿಸರ ಇಲಾಖೆಗೆ ಘಟನೆಯ ಬಗ್ಗೆ ತಿಳಿದಿದೆ. ಆದರೆ ಈ ಕೋತಿಯನ್ನು ವಶಕ್ಕೆ ಪಡೆಯಲು ಅದರ ಬಳಿ ಬೇರೆ ಯಾವುದೇ ಸೌಲಭ್ಯವಿಲ್ಲ ಎಂದು ಗುರ್ರಾ ಹೇಳಿದರು. ನಂತರ ಸ್ಥಳೀಯರು ಇಲ್ಲಿಂದ 403 ಮೈಲುಗಳು (648.5 ಕಿಲೋಮೀಟರ್) ದೂರದ ಟೆರೆಸಿನಾದಲ್ಲಿರುವ (Teresina) ಪರಿಸರ ಪೊಲೀಸರನ್ನು ಸಹ ಸಂಪರ್ಕಿಸಿದ್ದಾರೆ. ಆದರೆ ಇವರಿಂದಲೂ ಕೋತಿಯ (Monkey) ಸಮಸ್ಯೆಗೆ ಪರಿಹಾರ ಸಿಕ್ಕದೇ ಹೋದಾಗ ಹತಾಶರಾದ ಸ್ಥಳೀಯರು ನಂತರ ಬ್ರೆಜಿಲಿಯನ್ ಇನ್ಸ್ಟಿಟ್ಯೂಟ್ ಆಫ್ ಎನ್ವಿರಾನ್ಮೆಂಟ್ ಮತ್ತು ನವೀಕರಿಸಬಹುದಾದ ನೈಸರ್ಗಿಕ ಸಂಪನ್ಮೂಲ ತಂಡವನ್ನು ಸಂಪರ್ಕಿಸಿದರು ಅವರು ಪ್ರಕರಣವನ್ನು ಪರಿಶೀಲಿಸುವುದಾಗಿ ಭರವಸೆ ನೀಡಿದರು ಎಂದು ಮಾಧ್ಯಮಗಳು ವರದಿ ಮಾಡಿವೆ.

Kalaburagi: ಮಹಿಳೆಯ ಶವದ ಮುಂದೆ 20 ಗಂಟೆ ಕುಳಿತಿದ್ದ ಕೋತಿ!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮದ್ಯಪ್ರಿಯರಿಗೆ ಶಾಕ್.. ಮಧ್ಯಾಹ್ನ 2 ರಿಂದ 5 ರವರೆಗೆ ಮದ್ಯ ಮಾರಾಟ ಬಂದ್: ಏನಿದು ಥಾಯ್‌ ವಿಚಿತ್ರ ನಿಯಮ!
ಮುದ್ದಿನ ಶ್ವಾನಗಳಿಗಾಗಿ ಅನಿಮೇಟೆಡ್ ಸಿನಿಮಾ ಶೋ ಆಯೋಜಿಸಿದ ಥಿಯೇಟರ್: ರೆಡ್ ಕಾರ್ಪೆಟ್ ಹಾಸಿ ಸ್ವಾಗತ