ನ್ಯೂಯಾರ್ಕ್: ಅಮೆರಿಕಾದ ಫ್ಲೋರಿಡಾದಲ್ಲಿ ಭಾರಿ ಗಾತ್ರದ ಬರ್ಮೀಸ್ ಹೆಬ್ಬಾವೊಂದು ಸೆರೆ ಸಿಕ್ಕಿದೆ. ಇದು 100-ಕೆಜಿ ತೂಕವಿದ್ದು, 122 ಮೊಟ್ಟೆಗಳೊಂದಿಗೆ ಸೆರೆ ಸಿಕ್ಕಿದೆ ಎಂದು ಫ್ಲೋರಿಡಾದ ಜೀವಶಾಸ್ತ್ರಜ್ಞರು ಹೇಳಿದ್ದಾರೆ.
ಬರ್ಮೀಸ್ ಹೆಬ್ಬಾವು, 1970 ರ ದಶಕದಲ್ಲಿ ಅಮೆರಿಕಾದಲ್ಲಿ ವಿಲಕ್ಷಣ ಸಾಕುಪ್ರಾಣಿಯಾಗಿ ಪರಿಚಯಿಸಲ್ಪಟ್ಟ ಆಕ್ರಮಣಕಾರಿ ಜಾತಿಯ ಹಾವಾಗಿದೆ. ಇದು ಕ್ಷಿಪ್ರ ಸಂತಾನೋತ್ಪತ್ತಿ ಮತ್ತು ಕಾಡು ಪ್ರಾಣಿಗಳನ್ನು ಸೆರೆಹಿಡಿಯಲು ಹೆಸರುವಾಸಿಯಾಗಿದೆ, ಇದು ಸ್ಥಳೀಯ ವನ್ಯಜೀವಿಗಳ ಸಂಖ್ಯೆ ಇಳಿಕೆಗೆ ಕಾರಣವಾಗಿದೆ. ಅದ್ಭುತವಾದ ಸಂಶೋಧನಾ ಕ್ಷಣದಲ್ಲಿ, ಜೀವಶಾಸ್ತ್ರಜ್ಞರು ಯುಎಸ್‌ಎಯ ಫ್ಲೋರಿಡಾ ರಾಜ್ಯದಲ್ಲಿ ಇದುವರೆಗೆ ದಾಖಲಾದ ಅತಿದೊಡ್ಡ ಬರ್ಮೀಸ್ ಹೆಬ್ಬಾವನ್ನು ಸೆರೆ ಹಿಡಿದಿದ್ದಾರೆ. ಸೌತ್‌ವೆಸ್ಟ್ ಫ್ಲೋರಿಡಾದ ಸಂರಕ್ಷಣಾ ಕೇಂದ್ರದಿಂದ ಹಿಡಿದ ಬೃಹತ್ ಹಾವು 18 ಅಡಿ ಉದ್ದವನ್ನು ಹೊಂದಿದೆ. ಮತ್ತು 215 ಪೌಂಡ್‌ಗಳು (ಅಂದಾಜು 98 ಕೆಜಿ) ತೂಕವನ್ನು ಹೊಂದಿದೆ.
ಸಂರಕ್ಷಣಾ ಸಂಸ್ಥೆ ಪತ್ರಿಕಾಗೋಷ್ಠಿ ನಡೆಸಿ ಹೆಣ್ಣು ಸರೀಸೃಪವನ್ನು ಪ್ರದರ್ಶಿಸಿದೆ. ಇದು ದಾಖಲೆಯ ಸಂಖ್ಯೆಯ ಮೊಟ್ಟೆಗಳನ್ನು ಹೊಂದಿದ್ದು ಗರ್ಭಿಣಿಯಾಗಿದೆ. ಏಜೆನ್ಸಿ ಬಿಡುಗಡೆ ಮಾಡಿದ ಪತ್ರಿಕಾ ಹೇಳಿಕೆಯ ಪ್ರಕಾರ, ತಪಾಸಣೆ ವೇಳೆ ಹಾವಿನ ಹೊಟ್ಟೆಯಲ್ಲಿ ಒಟ್ಟು 122 ಅಭಿವೃದ್ಧಿ ಹೊಂದುತ್ತಿರುವ ಮೊಟ್ಟೆಗಳನ್ನು ಸಂಶೋಧಕರು ಪತ್ತೆ ಮಾಡಿದ್ದಾರೆ. ಈ ಸಂಶೋಧನೆಯು ಸಂತಾನೋತ್ಪತ್ತಿ ಚಕ್ರದಲ್ಲಿ ಹೆಣ್ಣು ಹೆಬ್ಬಾವು ಸಂಭಾವ್ಯವಾಗಿ ಉತ್ಪಾದಿಸಬಹುದಾದ ಹೆಚ್ಚಿನ ಸಂಖ್ಯೆಯ ಮೊಟ್ಟೆಗಳಿಗೆ ಹೊಸ ಮಿತಿಯನ್ನು ನೀಡಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಜಿದ್ದಾ ಜಿದ್ದಿನ ಘೋರ ಕಾಳಗದಲ್ಲಿ ಗೆದ್ದಿದ್ದು 'ಸಾವು': ಶ್ವಾನ, ಸರ್ಪದ ವಿಡಿಯೋ ವೈರಲ್..!
ಈ ಆಕ್ರಮಣಕಾರಿ ಹಾವನ್ನು 1970 ರ ದಶಕದಲ್ಲಿ ಅಮೆರಿಕಾದಲ್ಲಿ ಸಾಕುಪ್ರಾಣಿಯಾಗಿ ಪರಿಚಯಿಸಲಾಯಿತು, ಇದು ಕ್ಷಿಪ್ರ ಸಂತಾನೋತ್ಪತ್ತಿಗೆ ಹೆಸರುವಾಸಿಯಾಗಿದೆ. ಇದು ಸುತ್ತಮುತ್ತಲಿನ ಸ್ಥಳೀಯ ವನ್ಯಜೀವಿಗಳ ಸಂಖ್ಯೆ ಇಳಿಕೆಗೆ ಕಾರಣವಾಗುತ್ತದೆ ಎಂದು ವನ್ಯಜೀವಿ ಜೀವಶಾಸ್ತ್ರಜ್ಞ ಮತ್ತು ಪರಿಸರ ವಿಜ್ಞಾನದ ಪ್ರಾಜೆಕ್ಟ್ ಮ್ಯಾನೇಜರ್ ಇಯಾನ್ ಬಾರ್ಟೊಸ್ಜೆಕ್ ವಿವರಿಸಿದರು.
ತಂಡವು 2013 ರಲ್ಲಿ ಕಾರ್ಯನಿರ್ವಹಿಸಲು ಪ್ರಾರಂಭಿಸಿದ ನಂತರ ಹಲವಾರು ದೊಡ್ಡ ಹಾವುಗಳನ್ನು ಹಿಡಿದಿದೆ. ಆದರೆ ಇದು ಕಾಡಿನಿಂದ ಹಿಡಿದ ಅತಿದೊಡ್ಡ ಹೆಣ್ಣು ಹೆಬ್ಬಾವು. ಈ ಕಾರ್ಯಕ್ರಮದ ಮೂಲಕ ಇದಕ್ಕಿಂತ ಹಿಂದೆ ಸೆರೆಹಿಡಿಯಲಾದ ಅತಿ ದೊಡ್ಡ ಹಾವು 185 ಪೌಂಡ್‌ಗಳಷ್ಟು (ಅಂದಾಜು 84 ಕೆಜಿ) ತೂಕವನ್ನು ಹೊಂದಿತ್ತು, ಇದು ಆ ಸಮಯದಲ್ಲಿ ಫ್ಲೋರಿಡಾದಲ್ಲಿ ಸೆರೆಹಿಡಿಯಲಾದ ಅತ್ಯಂತ ಭಾರವಾದ ಹೆಬ್ಬಾವು ಆಗಿತ್ತು.
ಗ್ಯಾನವಾಪಿ ಮಸೀದಿ ಸಮೀಕ್ಷೆ ವೇಳೆ ಪ್ರತ್ಯಕ್ಷವಾದ ನಾಗರ ಹಾವು, ವಿಡಿಯೋಗ್ರಫಿಗೆ ವಿಶೇಷ ಉಪಕರಣಗಳ ಬಳಕೆ!
ಇವುಗಳು ಅತೀವೇಗವಾಗಿ ಸಂತಾನೋತ್ಪತಿ ಮಾಡುವುದರಿಂದ ಇವುಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದ್ದು, ಇವುಗಳು ಇತರ ಪ್ರಾಣಿಗಳ ಉಳಿವಿಗೆ ಮಾರಕವಾಗಿ ಪರಿಣಮಿಸಿವೆ. ಹೀಗಾಗಿ ಹೆಣ್ಣು ಹೆಬ್ಬಾವುಗಳ ಸೆರೆ ಹಿಡಿಯಲು ತಂಡವೊಂದನ್ನು ರಚಿಸಲಾಗಿತ್ತು. ಆದರೆ ಹೆಣ್ಣು ಹೆಬ್ಬಾವುಗಳನ್ನು ಹಿಡಿಯುವುದು ಅಷ್ಟೊಂದು ಸುಲಭದ ಕೆಲಸವಲ್ಲ. ಆದರೂ ಹೆಣ್ಣು ಹೆಬ್ಬಾವುಗಳನ್ನು ಬಲೆಗೆ ಬೀಳಿಸಲು ಗಂಡು ಹಾವುಗಳನ್ನು ಬಳಸಲಾಗುತ್ತದೆ. ಹುಲ್ಲಿನ ಬಣವೆಯಲ್ಲಿ ಸೂಜಿಯನ್ನು ಕಂಡುಹಿಡಿಯುವುದು ಹೇಗೆ? ನೀವು ಮ್ಯಾಗ್ನೆಟ್ ಅನ್ನು ಬಳಸಬಹುದು ಮತ್ತು ಅದೇ ರೀತಿಯ ಪ್ರಯೋಗವನ್ನು ಮಾಡುವ ಮೂಲಕ ಈ ಹಾವುಗಳನ್ನು ಬಲೆಗೆ ಕೆಡವಲಾಗುತ್ತದೆ ಎಂದು ವನ್ಯಜೀವಿ ಜೀವಶಾಸ್ತ್ರಜ್ಞ ಮತ್ತು ಪರಿಸರ ವಿಜ್ಞಾನ ಪ್ರಾಜೆಕ್ಟ್ ಮ್ಯಾನೇಜರ್ ಇಯಾನ್ ಬಾರ್ಟೊಸ್ಜೆಕ್ ವಿವರಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ