ಬೆಕ್ಕಿನೊಂದಿಗೆ ಪ್ರೀತಿಯಲ್ಲಿ ಬಿದ್ದ ಕೋತಿ: ತಬ್ಬಿ ಕಿಸ್ ಮಾಡಲೆತ್ನಿಸಿದ ವಾನರ

By Anusha Kb  |  First Published Mar 27, 2022, 6:26 PM IST
  • ಮೊದಲ ನೋಟದಲ್ಲೇ ಪ್ರೀತಿಯಲ್ಲಿ ಬಿದ್ದ ಕಪಿ
  • ವಾನರ ಹಾಗೂ ಮಾರ್ಜಾಲದ ಪ್ರೇಮ
  • ಹಾಲಿನ ಬಣ್ಣದ ಬೆಕ್ಕಿಗೆ ಕೋತಿ ಕ್ಲೀನ್‌ಬೌಲ್ಡ್‌

ಪ್ರಾಣಿಗಳು ಪರಸ್ಪರ ಮುದ್ದಾಡುವ ಪ್ರೀತಿ ತೋರುವ ಸಾಕಷ್ಟು ವಿಡಿಯೋಗಳನ್ನು ನೀವು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ನೋಡಿರಬಹುದು. ಈಗ ಇಲ್ಲೊಂದು ವಿಡಿಯೋ ವೈರಲ್(Viral) ಆಗಿದ್ದು, ಇದರಲ್ಲಿ ಕೋತಿಯೊಂದು ಹಾಲಿನ ಬಣ್ಣದ ವಜ್ರದಂತೆ (Dimond) ಹೊಳೆಯುವ ಬೆರಗು ಕಂಗಳ ಬೆಕ್ಕಿನ ಪ್ರೇಮಕ್ಕೆ ಮೊದಲ ನೋಟದಲ್ಲಿ ಸೋತು ಹೋಗಿದೆ. ಬೆಕ್ಕನ್ನು(cat) ಬೆಕ್ಕಿನ ಒಡತಿ ಎತ್ತಿಕೊಂಡಿದ್ದು, ಈ ವೇಳೆ ಅಲ್ಲಿಗೆ ಬರುವ ಕೋತಿಯೊಂದು ಹತ್ತಿರ ಬಂದು ಬಕ್ಕನ್ನು ತಬ್ಬಿಕೊಳ್ಳಲು ಪ್ರಯತ್ನಿಸುತ್ತದೆ. ಜೊತೆಗೆ ಪ್ರೀತಿಯ ಸಿಹಿ ಮುತ್ತನ್ನು ನೀಡಲು ಯತ್ನಿಸುತ್ತದೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗಿದೆ. ಬೆಕ್ಕಿದ್ದಲ್ಲಿಗೆ ಬರುವ ಕೋತಿ ಬರುತ್ತಿದ್ದು, ಈ ವೇಳೆ ಬೆಕ್ಕಿನ ಮಾಲಕಿ ಕೋತಿಗೆ ಬೆಕ್ಕು ಸಿಗುವಂತೆ ಕೆಳಗೆ ಬಾಗುತ್ತಾಳೆ. ಈ ವೇಳೆ ಕೋತಿ ಬೆಕ್ಕಿನ ಕೈಯನ್ನು ಹಿಡಿದು ಮತ್ತಷ್ಟು ಹತ್ತಿರಕ್ಕೆ ಬಂದು ಮುತ್ತು ನೀಡಲು ಪ್ರಯತ್ನಿಸುತ್ತದೆ. 

ಇನ್ನು ಕೋತಿಗಳು ಮನುಷ್ಯ ಮೇಲೂ ಪ್ರೀತಿ ತೋರುವ ವಿಡಿಯೋವನ್ನು ನೀವು ಈಗಾಗಲೇ ನೋಡಿರಬಹುದು. ಈ ವಿಡಿಯೋದಲ್ಲಿ ಕೋತಿಯ ಕಂಡ ಬೆಕ್ಕು ಕೂಡ ಯಾವುದೇ ಅಂಜಿಕೆ ಇಲ್ಲದೇ ಕೋತಿ ಕೈ ಹಿಡಿದಾಗ ಸುಮ್ಮನಿದ್ದು, ನಿನ್ನ ಪ್ರೀತಿಗೆ ನನ್ನ ಸಮ್ಮತಿಯೂ ಇದೆ ಎಂಬಂತೆ ವರ್ತಿಸುತ್ತದೆ. ಈ ವಿಡಿಯೋವನ್ನು ನೇಚರೆ(naturre) ಎಂಬ ಇನ್ಸ್ಟಾಗ್ರಾಮ್‌ ಪೇಜ್‌ನಿಂದ ಅಪ್‌ಲೋಡ್ ಮಾಡಲಾಗಿದ್ದು, 12 ಸಾವಿರಕ್ಕೂ ಹೆಚ್ಚು ಜನ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. 

Tap to resize

Latest Videos

ನಾಯಿಯೊಂದಿಗೆ ಬೆಕ್ಕಿನ ಚೆಲ್ಲಾಟ... ನಿದ್ರಿಸಲು ಬಿಡದೇ ಕಾಟ.. ಮುದ್ದಾದ ವಿಡಿಯೋ ವೈರಲ್‌

ಎಲ್ಲಿಂದಲೋ ಬಂದ ಕೋತಿಯೊಂದು ವ್ಯಕ್ತಿಯೊಬ್ಬನ ಮೇಲೇರಿ ಆತನನ್ನು ಗಟ್ಟಿಯಾಗಿ ತಬ್ಬಿಕೊಂಡು ಅವನ ಮೇಲೆಯೇ ಮಲಗಿಕೊಂಡ ಮುದ್ದಾದ ವಿಡಿಯೋವೊಂದು ಕೆಲ ದಿನಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಪ್ರಾಣಿಗಳು ಕೂಡ ಮನುಷ್ಯರಂತೆ ಭಾವನೆಗಳನ್ನು ಹೊಂದಿವೆ. ಅವುಗಳಿಗೂ ಪ್ರೀತಿಯ ಅಗತ್ಯವಿದೆ ಎಂಬುದಕ್ಕೆ ಹಲವು ನಿದರ್ಶನಗಳನ್ನು ನೀವು ಈಗಾಗಲೇ ನೋಡಿರಬಹುದು. ಇದು ಕೂಡ ಅಂತಹದ್ದೇ ಒಂದು ಪ್ರೀತಿ ಬಯಸಿ ಬಂದ ಕೋತಿಯ ಹಾಗೂ ದೂರ ತಳ್ಳದೇ ಪ್ರೀತಿ ನೀಡಿದ ವ್ಯಕ್ತಿಯ ಚಿತ್ರಣ. 

ವಿಡಿಯೋದಲ್ಲಿ ಮನೆಯ ಬಾಲ್ಕನಿ (balcony) ಯಲ್ಲಿ ವ್ಯಕ್ತಿಯೊಬ್ಬ ಕುರ್ಚಿಯಲ್ಲಿ ಕುಳಿತಿದ್ದಾನೆ. ಅಲ್ಲಿಗೆ ಬರುವ ಸಣ್ಣ ಕೋತಿಯೊಂದು ಪಕಪಕನೇ ಆತನ ಮೇಲೇರಿ ಹಾಗೇಯೇ ಆತನನ್ನು ಗಟ್ಟಿಯಾಗಿ ತಬ್ಬಿಕೊಳ್ಳುತ್ತದೆ. ಜೊತೆಗೆ ಆತನ ಎದೆಗೊರಗಿ ಮಲಗಿ ಬಿಡುತ್ತದೆ. ವ್ಯಕ್ತಿಯೂ ಕೂಡ ಈ ಕೋತಿಗೆ ಪೂರಕವಾಗಿ ಸ್ಪಂದಿಸುತ್ತಿದ್ದು, ಆತನೂ ಕೋತಿಯನ್ನು ಪ್ರೀತಿಯಿಂದ ತಬ್ಬಿಕೊಂಡು ಬೆನ್ನು ಸವರುತ್ತಾನೆ. ಈ ಘಟನೆ ಕುಟುಂಬವೊಂದು ಮೆಕ್ಸಿಕೋ (Mexico) ದಲ್ಲಿ ತನ್ನ ರಜಾದಿನಗಳನ್ನು ಕಳೆಯುತ್ತಿದ್ದಾಗ ನಡೆದಿದೆ. 

ಯೂಟ್ಯೂಬ್‌ ಸ್ಟಾರ್‌ನನ್ನು ಬೆನ್ನಟ್ಟಿ ದೋಚಿದ ಕೋತಿಗಳು... ವಿಡಿಯೋ ನೋಡಿ
 

ಈ ವಿಡಿಯೋ ಗುಡ್ ನ್ಯೂಸ್ ಮೂವ್‌ಮೆಂಟ್ ಎಂಬ ಇನ್‌ಸ್ಟಾಗ್ರಾಮ್‌ (Instagram) ಖಾತೆಯಿಂದ  ಪೋಸ್ಟ್ ಆಗಿದೆ. 'ಪ್ರೀತಿ ಎಂಬುದು ಸಾರ್ವತ್ರಿಕ' ಈ ಕೋತಿ ಸ್ವಲ್ಪ ಪ್ರೀತಿಗಾಗಿ ಬಾಲ್ಕನಿಯಲ್ಲಿ ಮೇಲೇರಿತು. ನಂತರ ಕೋತಿ ತನ್ನ ನೈಸರ್ಗಿಕ ಆವಾಸಸ್ಥಾನಕ್ಕೆ ಹಿಂತಿರುಗಿತು ಎಂದು ಬರೆದು ಈ ವಿಡಿಯೋವನ್ನು ಪೋಸ್ಟ್‌ ಮಾಡಲಾಗಿದೆ. ಈ ವಿಡಿಯೋ ವೈರಲ್ ಆಗಿದ್ದು, ಜನರನ್ನು ಭಾವುಕರನ್ನಾಗಿಸಿದೆ. ಒಬ್ಬ ಬಳಕೆದಾರ ಪ್ರೀತಿ ಎಂಬುದು ಔಷಧಿ, ನನ್ನನ್ನು ಹುಚ್ಚ ಎಂದೂ ನೀವು ಕರೆಯಬಹುದು ಆದರೂ ನಾನು ಆ ಕೋತಿಗಾಗಿ ಅಗತ್ಯವಿದ್ದಷ್ಟು ಹೊತ್ತು ಆತನ ಬಳಿ ನಾ ಇರಲು ಬಯಸುವೆ ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ.

click me!