ಮೊಜ್ತಬಾ ಖಮೇನಿ ಅನಾರೋಗ್ಯ ವದಂತಿಗೆ ವಿಡಿಯೋ ಉತ್ತರ ನೀಡಿದ ಇರಾನ್, ಸಾವಿನ ವದಂತಿ ತಳ್ಳಿಹಾಕಲು ಈ ಕ್ರಮವೇ?

Gowthami K   | Kannada Prabha
Published : Aug 10, 2026, 09:53 AM IST
Mojtaba Khamenei

ಸಾರಾಂಶ

ಇರಾನ್‌ನ ಪರಮೋಚ್ಚ ನಾಯಕನ ಪುತ್ರ ಮೊಜ್ತಬಾ ಖಮೇನಿ ಅವರ ಆರೋಗ್ಯದ ಬಗ್ಗೆ ಹಬ್ಬಿದ್ದ ವದಂತಿಗಳನ್ನು ತಳ್ಳಿಹಾಕಲು ಇರಾನ್ ಸರ್ಕಾರ ವಿಡಿಯೋವೊಂದನ್ನು ಬಿಡುಗಡೆ ಮಾಡಿದೆ. ಫೆ.28ರ ದಾಳಿಯಲ್ಲಿ ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎನ್ನಲಾಗಿದ್ದು, ಆದರೆ ಬಿಡುಗಡೆಯಾದ ವಿಡಿಯೋದಲ್ಲಿ ಅವರು ಆರೋಗ್ಯದಿಂದಿರುವಂತೆ ಕಾಣಿಸಿಕೊಂಡಿದ್ದಾರೆ.

ಟೆಹ್ರಾನ್‌: ಇರಾನ್‌ನ ಪರಮೋಚ್ಚ ನಾಯಕ ಆಯತೊಲ್ಲಾ ಖಮೇನಿ ಅವರ ಉತ್ತರಾಧಿಕಾರಿ ಆಗಿರುವ ಪುತ್ರ ಮೊಜ್ತಬಾ ಖಮೇನಿ ಅವರ ಆರೋಗ್ಯದ ಕುರಿತು ಸಾಕಷ್ಟು ಪುಕಾರುಗಳು ಹರಿದಾಡುತ್ತಿರುವಾಗ, ಇರಾನ್‌ ಸರ್ಕಾರ ಅವರ ವಿಡಿಯೋ ಬಿಡುಗಡೆ ಮಾಡಿದೆ. ಈ ಮೂಲಕ ಅವರು ಗಂಭೀರ ಸ್ಥಿತಿಯಲ್ಲಿದ್ದಾರೆ ಎಂಬ ವದಂತಿಯನ್ನು ತಳ್ಳಿಹಾಕುವ ಪ್ರಯತ್ನ ಮಾಡಿದೆ.

ಫೆ.28ರ ದಾಳಿಯಲ್ಲಿ ತಂದೆ ಆಯತೊಲ್ಲಾ ಖಮೇನಿ ಸಾವಿಗೀಡಾದಾಗ, ಮೊಜ್ತಬಾ ಕೂಡ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಹೇಳಲಾಗಿತ್ತು. ಅಲ್ಲದೆ, ತಂದೆಯ ಅಂತ್ಯಕ್ರಿಯೆಯಲ್ಲೂ ಅವರು ಕಾಣಿಸಿಕೊಂಡಿರಲಿಲ್ಲ. ಮೊನ್ನೆಯಷ್ಟೇ ಅವರು ಕೊನೆಯ ದಿನ ಎಣಿಸುತ್ತಿದ್ದಾರೆ ಎಂದು ವರದಿಗಳು ಹೇಳಿದ್ದವು.

ಇದರ ನಡುವೆ 12 ಸೆಕೆಂಡಿನ ವಿಡಿಯೋ ಬಿಡುಗಡೆ ಆಗಿದ್ದು, ಮೊಜ್ತಬಾ ಕೋಣೆಯೊಂದರಲ್ಲಿ ಕಾರ್ಪೆಟ್‌ ಮೇಲೆ ತಮ್ಮ ಮುಂದೆ ಕೂತಿರುವವರ ಜತೆಗೆ ಮಾತನಾಡುತ್ತಿದ್ದಾರೆ. ಈ ವಿಡಿಯೋವನ್ನು ಎಲ್ಲಿ, ಯಾವಾಗ ರೆಕಾರ್ಡ್‌ ಮಾಡಲಾಗಿದೆ ಎಂಬ ಮಾಹಿತಿ ಇಲ್ಲ. ಆದರೆ, ಆರೋಗ್ಯದಿಂದಿರುವಂತೆ ಕಾಣುತ್ತಿರುವ ಮೊಜ್ತಬಾ ಅವರು ಹಿಂಬಾಲಕರಿಗೆ ಧಾರ್ಮಿಕ ವಿಜ್ಞಾನವನ್ನು ಕಲಿಸುತ್ತಿರುವ ವಿಡಿಯೋ ಇದಾಗಿದೆ ಎಂದು ಇರಾನ್‌ ಹೇಳಿಕೊಂಡಿದೆ.

ಟ್ರಂಪ್‌ರ ಗಾಜಾ ಶಾಂತಿ ಯೋಜನೆಗೆ ನೆತನ್ಯಾಹು ನಕಾರ, ಹಮಾಸ್‌ ನಿಶ್ಶಸ್ತ್ರೀಕರಣದ ವರೆಗೆ ದಾಳಿ

ಇಸ್ರೇಲ್‌ ದಾಳಿಯಿಂದ ನಲುಗಿರುವ ಗಾಜಾ ಪಟ್ಟಿಯಲ್ಲಿ ಶಾಂತಿ ಸ್ಥಾಪಿಸುವ ಉದ್ದೇಶದಿಂದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಪ್ರಸ್ತಾಪಿಸಿರುವ 15 ಅಂಶಗಳ ಪೀಸ್‌ ಪ್ಲ್ಯಾನ್‌ ಅನ್ನು ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಅವರು ತಿರಸ್ಕರಿಸಿದ್ದಾರೆ.

ಅಮೆರಿಕದ ಪ್ರಸ್ತಾವನೆಯನ್ನು ಒಪ್ಪಿಕೊಂಡು ಪ್ಯಾಲೆಸ್ಟೀನಿಯನ್ ಆಡಳಿತ ಸಮಿತಿಗೆ ಶಸ್ತ್ರಾಸ್ತ್ರಗಳನ್ನು ಒಪ್ಪಿಸುವುದಾಗಿ ಹೇಳಿರುವ ಹಮಾಸ್‌, ಇದಕ್ಕೆ ಸಂಬಂಧಿಸಿದಂತೆ ಇಸ್ರೇಲ್‌ ಮೇಲೆ ಒತ್ತಡ ಹೇರುವಂತೆ ಆಗ್ರಹಿಸಿತ್ತು. ಇದರ ಬೆನ್ನಲ್ಲೆ, ‘ಹಮಾಸ್‌ ನಿಶ್ಶಸ್ತ್ರೀಕರಣ ಪೂರ್ಣವಾಗುವ ವರೆಗೆ ದಾಳಿ ನಿಲ್ಲದು. ನಮ್ಮ ದೇಶ ಹಾಗೂ ನಾಗರಿಕರಿಗೆ ಬೆದರಿಕೆ ಒಡ್ಡುವುದನ್ನು ಅವರು ನಿಲ್ಲಿಸುವ ತನಕ ನಮ್ಮ ಸೇನಾಪಡೆಗಳು ಆಕ್ರಮಣದಿಂದ ಹಿಂದೆ ಸರಿಯುವುದಿಲ್ಲ’ ಎಂದು ನೆತನ್ಯಾಹು ಸ್ಪಷ್ಟಪಡಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಜೀರೋ TO ಹೀರೋ, ಮೈಸೂರಿನಿಂದ ಅಮೆರಿಕಾ.. 'ಧರೆಗೆ ದೊಡ್ಡಣ್ಣ' ಆಗಿರೋ ರಾಕಿಂಗ್ ಸ್ಟಾರ್ ಯಶ್ ಹಿಂದಿರೋ ಸೀಕ್ರೆಟ್ ಇದು!
Gaza War: ಟ್ರಂಪ್ ಶಾಂತಿ ಸೂತ್ರಕ್ಕೆ ನೆತನ್ಯಾಹು ಡೊಂಟ್ ಕೇರ್! Board of Peace ಒಪ್ಪಂದಕ್ಕೆ ಇಸ್ರೇಲ್ ರೆಡ್ ಸಿಗ್ನಲ್