Gaza War: ಟ್ರಂಪ್ ಶಾಂತಿ ಸೂತ್ರಕ್ಕೆ ನೆತನ್ಯಾಹು ಡೊಂಟ್ ಕೇರ್! Board of Peace ಒಪ್ಪಂದಕ್ಕೆ ಇಸ್ರೇಲ್ ರೆಡ್ ಸಿಗ್ನಲ್

Published : Aug 09, 2026, 09:20 PM IST
Netanyahu Rejects Trumps 15 Point Board of Peace Plan for Gaza

ಸಾರಾಂಶ

ಗಾಝಾದಲ್ಲಿ ಯುದ್ಧ ನಿಲ್ಲಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮುಂದಿಟ್ಟಿದ್ದ 15 ಅಂಶಗಳ ಶಾಂತಿ ಒಪ್ಪಂದವನ್ನು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ತಿರಸ್ಕರಿಸಿದ್ದಾರೆ. ಹಮಾಸ್ ಸಂಪೂರ್ಣವಾಗಿ ಶಸ್ತ್ರತ್ಯಾಗ ಮಾಡುವವರೆಗೂ ಸೇನೆ ಹಿಂಪಡೆಯುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಜೆರುಸಲೇಂ: ಗಾಝಾ(Gaza)ದಲ್ಲಿ ಯುದ್ಧ ನಿಲ್ಲಿಸೋಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ಮುಂದಿಟ್ಟಿದ್ದ 15 ಅಂಶಗಳ ಶಾಂತಿ ಯೋಜನೆಯನ್ನು ಇಸ್ರೇಲ್(Israel) ತಿರಸ್ಕರಿಸಿದೆ. ಟ್ರಂಪ್ ಅವರು 'Board of Peace' ಅನ್ನೋ ಹೆಸರಲ್ಲಿ ಈ ಶಾಂತಿ ಯೋಜನೆಯನ್ನು ಪ್ರಸ್ತಾಪಿಸಿದ್ದರು. ಆದರೆ, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು(Benjamin netanyahu) ಈ ಪ್ರಸ್ತಾಪವನ್ನು ಒಪ್ಪಿಲ್ಲ.

ಹಮಾಸ್ ಸಂಪೂರ್ಣ ಶಸ್ತ್ರಾಸ್ತ್ರ ಇಳಿಸದೆ ಯುದ್ಧ ನಿಲ್ಲದು

ಹಮಾಸ್(HAMAS) ಸಂಘಟನೆ ಸಂಪೂರ್ಣವಾಗಿ ಶಸ್ತ್ರಾಸ್ತ್ರಗಳನ್ನು ಕೆಳಗಿಡುವವರೆಗೂ ಗಾಝಾದಿಂದ ಇಸ್ರೇಲ್ ಸೇನೆಯನ್ನು ವಾಪಸ್ ಪಡೆಯುವುದಿಲ್ಲ ಅಂತ ನೆತನ್ಯಾಹು ಖಡಾಖಂಡಿತವಾಗಿ ಹೇಳಿದ್ದಾರೆ. ಕದನ ವಿರಾಮ ಒಪ್ಪಂದ ಜಾರಿಯಲ್ಲಿದ್ದರೂ, ಹಮಾಸ್ ಸಂಪೂರ್ಣವಾಗಿ ನಿಶ್ಯಸ್ತ್ರೀಕರಣಗೊಳ್ಳಬೇಕು ಅನ್ನೋ ಕಾರಣ ಹೇಳಿ ಇಸ್ರೇಲ್ ಗಾಝಾದಲ್ಲಿ ಸೇನಾ ದಾಳಿಗಳನ್ನು ಮುಂದುವರಿಸಿದೆ. ಇಂತಹ ಸಮಯದಲ್ಲಿಯೇ ನೆತನ್ಯಾಹು, ಟ್ರಂಪ್ ಅವರ 15 ಅಂಶಗಳ ಶಾಂತಿ ಯೋಜನೆಯನ್ನು ತಿರಸ್ಕರಿಸಿರೋದು ಮಹತ್ವ ಪಡೆದಿದೆ.

ಅಮೆರಿಕದ ಶಾಂತಿ ಒಪ್ಪಂದ ತಿರಸ್ಕರಿಸಿದ ಇಸ್ರೇಲ್

ಕಳೆದ ತಿಂಗಳು, ಟ್ರಂಪ್ ತಮ್ಮ 15 ಅಂಶಗಳ ಯೋಜನೆಯಲ್ಲಿ ದೊಡ್ಡ ಮಟ್ಟದ ಪ್ರಗತಿಯಾಗಿದೆ ಎಂದು ಹೇಳಿಕೊಂಡಿದ್ದರು. ಕದನ ವಿರಾಮದ ನಂತರ ಯುದ್ಧವನ್ನು ಸಂಪೂರ್ಣವಾಗಿ ಕೊನೆಗೊಳಿಸುವುದೇ ಈ ಯೋಜನೆಯ ಉದ್ದೇಶವಾಗಿತ್ತು. 2023ರ ಅಕ್ಟೋಬರ್ 7 ರಂದು ಹಮಾಸ್ ಇಸ್ರೇಲ್ ಮೇಲೆ ದಾಳಿ ಮಾಡಿತ್ತು. ಇದರ ನಂತರ ಇಸ್ರೇಲ್, ಪ್ಯಾಲೆಸ್ತೀನ್ ವಿರುದ್ಧ ಭಾರಿ ದಾಳಿ ಆರಂಭಿಸಿತ್ತು. ಇನ್ನು ಭಾನುವಾರ ನಡೆದ ಕ್ಯಾಬಿನೆಟ್ ಸಭೆಯಲ್ಲಿ ನೆತನ್ಯಾಹು ಅವರು ಟ್ರಂಪ್ ಅವರ ಶಾಂತಿ ಒಪ್ಪಂದವನ್ನು ತಿರಸ್ಕರಿಸುವ ನಿರ್ಧಾರ ಪ್ರಕಟಿಸಿದರು.

ಮುಂದಿನ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ನೆತನ್ಯಾಹು ಈ ಕಠಿಣ ನಿಲುವು ತೆಗೆದುಕೊಂಡಿದ್ದಾರೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಶಾಂತಿ ಒಪ್ಪಂದವನ್ನು ಕೈಬಿಡುವಂತೆ ಇಸ್ರೇಲ್‌ನ ತೀವ್ರ ಬಲಪಂಥೀಯ ಬೆಂಬಲಿಗರಿಂದ ನೆತನ್ಯಾಹು ಮೇಲೆ ಒತ್ತಡವಿತ್ತು. ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ಟ್ರಂಪ್ ಅವರು ಗಾಝಾ ಕುರಿತ ಈ ಶಾಂತಿ ಯೋಜನೆಯನ್ನು ಘೋಷಿಸಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Toxic: ಯಶ್‌ಗೂ ಮೊದಲು ರಾಧಿಕಾ ಪಂಡಿತ್‌ಗೆ ನಿರ್ಮಾಪಕ ಕೆವಿಎನ್ ವೆಂಕಟ್ 'ಧನ್ಯವಾದ' ಹೇಳಿದ್ದೇಕೆ? ಆ ಸೀಕ್ರೆಟ್ ಇಲ್ಲಿದೆ ನೋಡಿ!
ಹಾಲಿವುಡ್ ಸ್ಟುಡಿಯೋದಲ್ಲಿ ಬೆಂಗಳೂರಿನ 'ಮೆಜೆಸ್ಟಿಕ್' ಏರಿಯಾದ ಸೀಕ್ರೆಟ್ ಬಿಚ್ಚಿಟ್ಟ ಯಶ್.. 'ಸ್ಟೇಡಿಯಂ' ಅಂದಿದ್ಯಾಕೆ?