
ನ್ಯೂಯಾರ್ಕ್: ಮಿಸ್ ಶ್ರೀಲಂಕಾ ನ್ಯೂಯಾರ್ಕ್ ಸೌಂದರ್ಯ ಸ್ಪರ್ಧೆಯ ಪಾರ್ಟಿಯಲ್ಲಿ ಅತಿಥಿಗಳು ಪರಸ್ಪರ ಹೊಡೆದಾಡಿಕೊಂಡ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಶ್ರೀಲಂಕಾದ ಮರ್ಯಾದೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹರಾಜು ಹಾಕಿದೆ. ಅಮೆರಿಕಾದ ನ್ಯೂಯಾರ್ಕ್‌ನ ಸ್ಟೇಟನ್ ಐಸ್‌ಲ್ಯಾಂಡ್‌ನಲ್ಲಿ ಈ ಸೌಂದರ್ಯ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಇದೇ ಮೊದಲ ಬಾರಿಗೆ ಶ್ರೀಲಂಕಾದಲ್ಲಿ ಮಿಸ್ ಶ್ರೀಲಂಕಾ ನ್ಯೂಯಾರ್ಕ್ ಸೌಂದರ್ಯ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಈ ಸ್ಪರ್ಧೆಯಲ್ಲಿ 300ಕ್ಕೂ ಹೆಚ್ಚು ಅತಿಥಿಗಳು ಭಾಗವಹಿಸಿದ್ದರು.
ಈ ಸೌಂದರ್ಯ ಸ್ಪರ್ಧೆಯ ಪಾರ್ಟಿಯಲ್ಲಿ ಭಾಗವಹಿಸಿದ್ದ ಅತಿಥಿಗಳು ಪರಸ್ಪರ ಹೊಡೆದಾಡಿಕೊಂಡ ವಿಡಿಯೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಮಹಿಳೆಯರು ಹಾಗೂ ಪುರುಷರು ಪರಸ್ಪರ ಹೊಡೆದಾಡಿಕೊಳ್ಳುತ್ತಿರುವ ದೃಶ್ಯಗಳನ್ನು ನೋಡಿದ ನೆಟ್ಟಿಗರು ಇವರ ನಡೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೊಡೆದಾಡಿಕೊಂಡ ಇಬ್ಬರನ್ನು ಸಮಾಧಾನಪಡಿಸಲು ಅನೇಕರು ಪ್ರಯತ್ನಿಸಿದ್ದಾರೆ. ಆದರೆ ಯಾವುದೇ ಪ್ರಯೋಜನವಾಗದೇ ಹೊಡೆದಾಟ ಮುಂದುವರೆದಿದೆ. ಆದರೆ ಸೌತ್ ಬೀಚ್‌ನ ವಾಂಡರ್‌ಬಿಲ್ಟ್‌ನಲ್ಲಿ (Vanderbilt in South Beach) ಈ ರೀತಿ ಹೊಡೆದಾಟ ಆರಂಭವಾಗಲು ಕಾರಣ ಏನು ಎಂಬುದು ತಿಳಿದು ಬಂದಿಲ್ಲ.
ಸುಂದರಿ ಜೊತೆ ಶ್ವಾನಕ್ಕೂ ಸಿಕ್ತು ಕಿರೀಟ : ಬ್ಯೂಟಿ ಜೊತೆ ಹೆಜ್ಜೆ ಹಾಕಿದ ಸರ್ವೀಸ್ ಡಾಗ್
ಈ ಹೊಡೆದಾಟದಲ್ಲಿ ಯಾವುದೇ ಸ್ಪರ್ಧಿಗಳು ಭಾಗಿಯಾಗಿಲ್ಲ ಮತ್ತು ಹೊರಭಾಗದಲ್ಲಿ ಈ ಕಾದಾಟ ನಡೆದಿದ್ದರಿಂದ ಎಲ್ಲಾ 14 ಸ್ಪರ್ಧಿಗಳು ಕಟ್ಟಡದೊಳಗೆ ಇದ್ದರು ಎಂದು ಸ್ಪರ್ಧೆಯ ಆಯೋಜಕರಲ್ಲಿ ಒಬ್ಬರಾದ ಸುಜಾನಿ ಫೆರ್ನಾಂಡೋ (Sujani Fernando) ಅವರು ನ್ಯೂಯಾರ್ಕ್ ಪೋಸ್ಟ್‌ಗೆ ತಿಳಿಸಿದ್ದಾರೆ. ಸೌತ್ ಚೈನಾ ಮಾರ್ನಿಂಗ್ ಪೋಸ್ಟ್ ಪ್ರಕಾರ, ಆಯೋಜಕರು ಸ್ಟೇಟನ್ ಐಲ್ಯಾಂಡ್‌ನಲ್ಲಿ ಈವೆಂಟ್ ಅನ್ನು ನಡೆಸಲು ನಿರ್ಧರಿಸಿದ್ದರು. ಏಕೆಂದರೆ ಇದು ಹೆಚ್ಚಿನ ಸಂಖ್ಯೆಯ ವಲಸೆ ಹೋದ ಶ್ರೀಲಂಕಾದವರು ನೆಲೆ ನಿಂತ ಪ್ರದೇಶವಾಗಿದೆ. ಪ್ರಸ್ತುತ ಶ್ರೀಲಂಕಾವೂ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದೆ. ಈ ಹಿನ್ನೆಲೆಯಲ್ಲಿ ತಮ್ಮ ತವರು ದೇಶಕ್ಕೆ ಈ ಕಾರ್ಯಕ್ರಮದ ಮೂಲಕ ನೆರವಿನ ಹಸ್ತ ಚಾಚಲು ಆಯೋಜಕರು ಮುಂದಾಗಿದ್ದರು.
ಆದರೆ ಆ ಕಾರ್ಯಕ್ರಮದಲ್ಲಿ ಆದ ಈ ಕೊಳಕು ಹೊಡೆದಾಟ ಅನೇಕ ಶ್ರೀಲಂಕಾ ನಿವಾಸಿಗಳನ್ನು ಕೆರಳಿಸಿದೆ. ಶ್ರೀಲಂಕನ್ನರು ಸಂಪೂರ್ಣವಾಗಿ ಕೆಟ್ಟ ಬ್ರಾಂಡ್‌ನಲ್ಲಿಯೇ ಇರುತ್ತಾರೆ. ಎಲ್ಲಾ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸುತ್ತಾರೆ. ಆ ಪ್ರಕ್ರಿಯೆಯ ನಡುವೆ ಹೊಡೆದಾಟ ನಡೆಸಿ ನಿಷೇಧಕ್ಕೊಳಗಾಗುತ್ತೇವೆ ಎಂದು ಯುಧಂಜಯ ವಿಜೆರತ್ನೆ ಎಂಬ ಟ್ವಿಟ್ಟರ್ ಬಳಕೆದಾರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕದಿಜಾ (Kadija) ಎಂಬ ಮತ್ತೊಬ್ಬ ಟ್ವಿಟ್ಟರ್ ಬಳಕೆದಾರರು ಇದೊಂದು ಅವಮಾನಕಾರಿ ಘಟನೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇದೊಂದು ಸಂಪೂರ್ಣ ಅವಮಾನಕರ ಘಟನೆ. ಇದರಿಂದ ಶ್ರೀಲಂಕಾದ ಸ್ಥಾನಮಾನವು ಜಾಗತಿಕ ಮಟ್ಟದಲ್ಲಿ ಕುಸಿದಿದೆ. ಈ ವರ್ತನೆಯೂ ಅಸೂಯೆ ಹಾಗೂ ಮದ್ಯ ಸೇವನೆಯ ಪರಿಣಾಮವಾಗಿದೆ ಎಂದಿದ್ದಾರೆ.
ಸೌಂದರ್ಯ ಸ್ಪರ್ಧೆಯಲ್ಲಿ ಗೆದ್ದ ಕಟ್ಟಡ ಕಾರ್ಮಿಕನ ಮಗಳು, 'ಮಿಸ್ ತಮಿಳುನಾಡು' ಕಿರೀಟ
ಈ ಮಧ್ಯೆ ಈ ಸೌಂದರ್ಯ ಸ್ಪರ್ಧೆಯಲ್ಲಿ ಮಿಸ್ ಶ್ರೀಲಂಕಾ (Sri Lanka) ನ್ಯೂಯಾರ್ಕ್ (New York) ಸೌಂದರ್ಯ ಕಿರೀಟ ಮುಡಿಗೇರಿಸಿಕೊಂಡ ಏಂಜೆಲಿಯಾ ಗುಣಶೇಖರ (Angelia Gunasekara) ಅವರು ಈ ಕಿತ್ತಾಟದ ಬಗ್ಗೆ ಪ್ರತಿಕ್ರಿಯಿಸಿದ್ದು, ಈ ಜಗಳದಲ್ಲಿ ಸೌಂದರ್ಯ ಸ್ಪರ್ಧಾಳುಗಳು ಕೂಡ ಭಾಗವಹಿಸಿದ್ದರು ಎಂಬ ಆರೋಪವನ್ನು ನಿರಾಕರಿಸಿದರು. ಕಿರೀಟಕ್ಕಾಗಿ ಹೋರಾಟ ನಡೆಸಿದ್ದಾರೆ ಎಂಬ ಆರೋಪವನ್ನು ತಳ್ಳಿ ಹಾಕಿದರು. ಸೌಂದರ್ಯ ಸ್ಪರ್ಧಿಗಳ ಬಾಯ್‌ಫ್ರೆಂಡ್‌ಗಳು ಭಾಗಿಯಾದ್ದರಿಂದ ಹೊಡೆದಾಟ ಶುರುವಾಯಿತು, ನಾವು ಕಿರೀಟಕ್ಕಾಗಿ ಹೊಡೆದಾಡಿದೆವು ಎಂಬ ಮಾಧ್ಯಮಗಳ ವರದಿಯಿಂದ ಮನಸ್ಸಿಗೆ ಬೇಸರವಾಗಿದೆ ಇದು ಸತ್ಯವಲ್ಲ ಎಂದು ಆಕೆ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ