ಮುಂಬೈ: ಮಹಿಳೆಯೊಬ್ಬರು ಧರಿಸಿದ ಬಟ್ಟೆಯೊಂದು ಸೂರ್ಯನ ಬಿಸಿಲಿನಲ್ಲಿ ಒಂದು ಬಣ್ಣ, ನೆರಳಿನಲ್ಲಿದ್ದಾಗ ಒಂದು ಬಣ್ಣ ತೋರಿಸುತ್ತಿದ್ದು, ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೋಡುಗರು ಅಚ್ಚರಿಗೆ ಒಳಗಾಗಿದ್ದಾರೆ. ಸಾಮಾಜಿಕ ಜಾಲತಾಣದ ಪ್ರಭಾವಿ ಆಗಿರುವ ಇಜ್ಜಿ ಎಂಬುವವರು ಈ ವಿಡಿಯೋವನ್ನು ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.
ಇಜ್ಜಿ ಅವರು ಬಿಳಿ ಬಣ್ಣದ ಬಾಡಿಕಾನ್ ಡ್ರೆಸ್ ಧರಿಸಿದ್ದು, ಅವರು ಬಿಸಿಲಿನತ್ತ ಹೋಗುತ್ತಿದ್ದಂತೆ ಬಿಳಿ ಬಣ್ಣ ಗುಲಾಬಿ ಬಣ್ಣಕ್ಕೆ ತಿರುಗುತ್ತದೆ. ಸೂರ್ಯನ ಬೆಳಕು ಬಟ್ಟೆಯ ಮೇಲೆ ಬಿದ್ದಂತೆ ಬಟ್ಟೆ ಪಿಂಕ್ ಬಣ್ಣಕ್ಕೆ ತಿರುಗುತ್ತಿರುವುದು ಅಚ್ಚರಿಗೆ ಕಾರಣವಾಗಿದೆ. ಈ ವಿಡಿಯೋವನ್ನು ಎರಡು ಮಿಲಿಯನ್‌ಗೂ ಹೆಚ್ಚು ಜನ ವೀಕ್ಷಿಸಿದ್ದಾರೆ ಅಲ್ಲದೇ ಬಗೆ ಬಗೆಯ ಕಾಮೆಂಟ್ ಮಾಡಿದ್ದಾರೆ. ಒಂದು ವೇಳೆ ಈ ಬಾಡಿಕಾನ್ ಡ್ರೆಸ್ ನೀಲಿ ಅಥವಾ ಬಂಗಾರದ ಬಣ್ಣದಲ್ಲಿದ್ದರೆ ಯಾವ ಬಣ್ಣಕ್ಕೆ ಅದು ತಿರುಗಿರಬಹುದು ಎಂದು ಜನ ಕೇಳುತ್ತಿದ್ದಾರೆ.
ಒಂದು ವೇಳೆ ಈ ಬಟ್ಟೆ ಮದುವೆಯಲ್ಲಿ ಇದ್ದರೆ ಹೇಗಿರುತ್ತದೆ. ಮದುವೆ ನಡೆಯುವ ಸಭಾಂಗಣದಲ್ಲಿ ಒಂದು ಬಣ್ಣ ಹಾಗೂ ನಂತರ ಹೊರಗೆ ನಡೆಯುವ ಅರತಕ್ಷತೆ ವೇಳೆ ಇನ್ನೊಂದು ಬಣ್ಣ ತೋರಿದರೆ ಎಷ್ಟು ಚೆನ್ನಾಗಿರುತ್ತದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಬಹುಶಃ ಬಟ್ಟೆಯ ಹಿಂದೆ ಯಾರೋ ಅಡಗಿರಬೇಕು ಆತ, ವೇಗವಾಗಿ ನಿಮ್ಮ ಬಟ್ಟೆಯ ಬಣ್ಣವನ್ನು ಬದಲಿಸುತ್ತಿರಬೇಕು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
ಸಾಮಾನ್ಯವಾಗಿ ಕೆಲವು ಒಂದೇ ತರದ ಬಣ್ಣದ ಬಟ್ಟೆಗಳು ಉದಾಹರಣೆಗೆ ಕೆಂಪು ಹಾಗೂ ಹಳದಿ ಶೇಡ್‌ಗಳು ಇರುವ ಬಟ್ಟೆಗಳು ಸೂರ್ಯನ ಬೆಳಕಿಗೆ ಹೋಗುತ್ತಿದ್ದಂತೆ ಅ ಬಣ್ಣದಲ್ಲೇ ಸ್ವಲ್ಪ ವಿಭಿನ್ನವೆನಿಸಿದ ಬಣ್ಣಕ್ಕೆ ಬದಲಾಗುತ್ತವೆ. ಆದರೆ ಸಂಪೂರ್ಣವಾಗಿ ಶ್ವೇತವರ್ಣದಲ್ಲಿರುವ ಬಟ್ಟೆಯೊಂದು ಸಂಬಂಧವೇ ಇಲ್ಲದ ಗುಲಾಬಿ ಬಣ್ಣಕ್ಕೆ ಬದಲಾಗುವುದು ಅಚ್ಚರಿ ಮೂಡಿಸುತ್ತಿದೆ.
Social Belief : ಅಂತ್ಯಸಂಸ್ಕಾರದ ವೇಳೆ ಬಿಳಿ ಬಟ್ಟೆ ಧರಿಸುವುದ್ಯಾಕೆ?
ಸಾಮಾಜಿಕ ಜಾಲತಾಣಗಳಲ್ಲಿ ಹೀಗೆ ಇಂತಹ ಅಚ್ಚರಿಯ ಹಲವು ವಿಡಿಯೋಗಳು ಆಗಾಗ ವೈರಲ್ ಆಗುತ್ತಿರುತ್ತವೆ. ಬಟ್ಟೆ ಎಂದಾಕ್ಷಣ ನೆನಪಾಗುವುದು ಹಿಂದಿ ಬಿಗ್ಬಾಸ್ ನಟಿ ಉರ್ಫಿ ಜಾವೇದ್, ವಿಚಿತ್ರವಾದ ಬಟ್ಟೆ ಧರಿಸುವುದಕ್ಕೆ ಫೇಮಸ್ ಆಗಿರುವ ಉರ್ಫಿ ಈ ಬಟ್ಟೆಗಳಿಂದಲೇ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುವ ಜೊತೆ ಟ್ರೋಲ್ ಕೂಡ ಆಗುತ್ತಿರುತ್ತಾಳೆ. ವಿಚಿತ್ರ ಬಟ್ಟೆಯ ಕಾರಣಕ್ಕೆ ಪಾಪರಾಜಿ ಕ್ಯಾಮರಾ ಮ್ಯಾನ್‌ಗಳು ನಿರಂತರ ಆಕೆಯ ಹಿಂದೆ ಬಿದ್ದಿರುತ್ತಾರೆ. ಗೋಚಿ ಚೀಲ, ತಂತಿ ಬೇಲಿ, ಸರಿಗೆ, ಸಂಕೋಲೆ, ಪ್ಲಾಸ್ಟಿಕ್ ಲಕೋಟೆ ಇವೆಲ್ಲವೂ ಉರ್ಫಿ ಅವರ ವಿಚಿತ್ರ ಬಟ್ಟೆಯ ಭಾಗವಾಗಿವೆ.
Urfi Javed ಮೈ ತೋರಿಸ್ತಿಯಾ ಟೈಟ್ ಬಟ್ಟೆ ಹಾಕ್ತೀಯಾ ಈಗ ನಡೆಯೋಕೂ ಕಷ್ಟನಾ: ಉರ್ಫಿ ಟ್ರೋಲ್
ಇತ್ತೀಚೆಗೆ ಅಶ್ಲೀಲ ಬಟ್ಟೆ ಧರಿಸಿದ್ದ ಕಾರಣಕ್ಕೆ ಉರ್ಫಿ ವಿರುದ್ಧ ದೆಹಲಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದರು. ಇತ್ತೀಚೆಗೆ ಅವರ ಒಂದು ಹಾಡು ಹಿ ಹಿ ಯೇ ಮಜ್ಬೂರಿ' ' ಹಾಡಿನ ಕಾರಣಕ್ಕಾಗಿ ದೆಹಲಿ ಪೊಲೀಸ್ ಠಾಣೆಯಲ್ಲಿ ಅನಾಮಧೇಯ ವ್ಯಕ್ತಿಯೊಬ್ಬರು ಉರ್ಫಿ ವಿರುದ್ಧ ದೂರು ದಾಖಲಿಸಿದ್ದಾರೆ. ಅತ್ಯಂತ ಅಶ್ಲೀಲವಾಗಿರುವ ವಿಷಯವನ್ನು ಉರ್ಫಿ ಹರಡುತ್ತಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಈ ಬಗ್ಗೆ ಉರ್ಫಿ ಇದುವರೆಗೆ ಯಾವುದೇ ಹೇಳಿಕೆ ನೀಡಿಲ್ಲ. ಈ ತಿಂಗಳ 11 ರಂದು ಉರ್ಫಿ ಜಾವೇದ್ ಅವರ ಹಿ ಹಿ ಯೇ ಕಂಪಲ್ಷನ್ ಹಾಡು ಬಿಡುಗಡೆಯಾಗಿದೆ. ಈ ಹಾಡಿನಲ್ಲಿ, ಉರ್ಫಿ ಕೆಂಪು ಬಣ್ಣದ ಸೀರೆಯಲ್ಲಿ ತುಂಬಾ ಹಾಟ್ ಮತ್ತು ಮಾದಕವಾಗಿ ಕಾಣುತ್ತಿದ್ದರು. ಉರ್ಫಿ ಹಾಡಿನಲ್ಲಿ ತನ್ನ ಕಿಲ್ಲರ್ ಅಭಿನಯವನ್ನು ತೋರಿಸುತ್ತಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ