ಹೊತ್ತಿ ಉರಿಯುವ ಸೂರ್ಯನೂ ನಗುವ... ಫೋಟೋ ಶೇರ್ ಮಾಡಿದ ನಾಸಾ

Published : Oct 28, 2022, 10:30 PM IST
ಹೊತ್ತಿ ಉರಿಯುವ ಸೂರ್ಯನೂ ನಗುವ... ಫೋಟೋ ಶೇರ್ ಮಾಡಿದ ನಾಸಾ

ಸಾರಾಂಶ

ನಾಸಾದ ಕ್ಯಾಮರಾ ಕಣ್ಣಿನಲ್ಲಿ ನಗುವ ಸೂರ್ಯ ಸೆರೆಯಾಗಿದ್ದಾನೆ. ಹೌದು ಅಮೆರಿಕಾದ ಬಾಹ್ಯಾಕಾಶ ಸಂಸ್ಥೆ ನಾಸಾ ಸೂರ್ಯನ ಫೋಟೋವೊಂದನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ಸೂರ್ಯ ನಗುವಂತೆ ಗೋಚರಿಸುತ್ತಿದೆ.

ನ್ಯೂಯಾರ್ಕ್: ಸೂರ್ಯ ನಗುತ್ತಾನೆ ಅಂದರೆ ಅದು ಕೇವಲ ಹಾಡುಗಳಲ್ಲಿ ಸಾಹಿತ್ಯಗಳಲ್ಲಿ ಬಣ್ಣನೆಯಷ್ಟೇ. ಒಂದು ವೇಳೆ ಸೂರ್ಯ ನಕ್ಕರೂ ನೋಡಲಾಗದು ಬಿಡಿ, ಪ್ರಕಾಶಮಾನವದ ಬೆಳಕಿನಿಂದ ಜಗತ್ತನ್ನು ಬೆಳಗುವ ಸೂರ್ಯ ನಗುವುದನ್ನು ನೋಡುವುದು ಕಷ್ಟವೇ. ಆದರೆ ನಾಸಾದ ಕ್ಯಾಮರಾ ಕಣ್ಣಿನಲ್ಲಿ ನಗುವ ಸೂರ್ಯ ಸೆರೆಯಾಗಿದ್ದಾನೆ. ಹೌದು ಅಮೆರಿಕಾದ ಬಾಹ್ಯಾಕಾಶ ಸಂಸ್ಥೆ ನಾಸಾ ಸೂರ್ಯನ ಫೋಟೋವೊಂದನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ಸೂರ್ಯ ನಗುವಂತೆ ಗೋಚರಿಸುತ್ತಿದೆ.

ಸಾಮಾನ್ಯವಾಗಿ ನಾಸಾ(NASA), ಇಸ್ರೋ(ISRO) ಮುಂತಾದ ಬಾಹ್ಯಾಕಾಶ ಸಂಸ್ಥೆಗಳು (Space Center) ಆಗಾಗ ಖಗೋಳ ವಿಸ್ಮಯದ ಹಲವು ಫೋಟೋಗಳನ್ನು ಬಹಿರಂಗಪಡಿಸುತ್ತಿರುತ್ತವೆ. ಸೂರ್ಯಗ್ರಹಣ ಚಂದ್ರಗ್ರಹಣ, ಮಂಗಳನ ಅಂಗಳದ ಹಲವು ಫೋಟೋಗಳನ್ನು ಬಾಹ್ಯಾಕಾಶ ಸಂಸ್ಥೆಗಳು ಈಗಾಗಲೇ ಬಿಡುಗಡೆ ಮಾಡಿವೆ. ಅದೇ ರೀತಿ ಈಗ ನಾಸಾ ಬಿಡುಗಡೆ ಮಾಡಿರುವ ಫೋಟೋ ಸೂರ್ಯನೂ ನಗುತ್ತಾನ ಎಂದು ಕೇಳುವಂತೆ ಮಾಡಿವೆ. ನಾಸಾ ಬಿಡುಗಡೆ ಮಾಡಿದ ಈ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ (Social Media) ನೆಟ್ಟಿಗರು ಶೇರ್ ಮಾಡಿಕೊಂಡಿದ್ದು ಹಲವು ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ. 

ಅಬ್ಬಾ.. ಇದೆಂಥಾ ಖಗೋಳ ಸ್ಫೋಟ: ನಾಸಾ ವಿಜ್ಞಾನಿಗಳೇ ಕಂಗಾಲು!

 

Sun is smiling down on us (ಸೂರ್ಯ ಕೆಳಗಿರುವ ನಮ್ಮನ್ನು ನೋಡಿ ನಗುವನು) ಎಂಬ ಇಂಗ್ಲೀಷ್ ನುಡುಗಟ್ಟನ್ನು ನಿಜ ಮಾಡುವಂತಿದೆ ಈ ಫೋಟೋ ಎಂದು ಹಲವರು ಪ್ರತಿಕ್ರಿಯಿಸಿದ್ದಾರೆ. 'ಚೀಸ್ ಎಂದು ಹೇಳಿ, ಇಂದು, ನಾಸಾದ ಸೌರ ಡೈನಾಮಿಕ್ಸ್ ವೀಕ್ಷಣಾಲಯವು ಸೂರ್ಯನನ್ನು ನಗುತ್ತಿರುವಂತೆ ಸೆರೆ ಹಿಡಿದಿದೆ. ನೇರಳಾತೀತ ಬೆಳಕಿನಲ್ಲಿ ನೋಡಿದರೆ, ಸೂರ್ಯನ ಮೇಲಿನ ಈ ಡಾರ್ಕ್ ಪ್ಯಾಚ್‌ಗಳನ್ನು ಕರೋನಲ್ ರಂಧ್ರಗಳು ಎಂದು ಕರೆಯಲಾಗುತ್ತದೆ ಮತ್ತು ಅವು ವೇಗದ ಸೌರ ಮಾರುತವು ಬಾಹ್ಯಾಕಾಶಕ್ಕೆ ಚಿಮ್ಮುವ ಪ್ರದೇಶಗಳಾಗಿವೆ ಎಂದು ನಾಸಾ ಈ ಫೋಟೋ ಟ್ವಿಟ್ ಮಾಡಿ ಬರೆದುಕೊಂಡಿದೆ. 


NASA ಪ್ರಾಜೆಕ್ಟ್‌ಗೆ ಆಯ್ಕೆಯಾದ ಛತ್ತೀಸ್‌ಗಢದ 16 ವರ್ಷದ ಬುಡಕಟ್ಟು ಬಾಲಕಿ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮದ್ಯಪ್ರಿಯರಿಗೆ ಶಾಕ್.. ಮಧ್ಯಾಹ್ನ 2 ರಿಂದ 5 ರವರೆಗೆ ಮದ್ಯ ಮಾರಾಟ ಬಂದ್: ಏನಿದು ಥಾಯ್‌ ವಿಚಿತ್ರ ನಿಯಮ!
ಮುದ್ದಿನ ಶ್ವಾನಗಳಿಗಾಗಿ ಅನಿಮೇಟೆಡ್ ಸಿನಿಮಾ ಶೋ ಆಯೋಜಿಸಿದ ಥಿಯೇಟರ್: ರೆಡ್ ಕಾರ್ಪೆಟ್ ಹಾಸಿ ಸ್ವಾಗತ