GoPro ಕ್ಯಾಮರಾ ಕದ್ದು ಮೇಲೆ ಹಾರಿದ ಹಕ್ಕಿ... ವಿಹಂಗಮ ದೃಶ್ಯ ಸೆರೆ

Suvarna News   | Asianet News
Published : Feb 05, 2022, 02:26 PM ISTUpdated : Feb 05, 2022, 02:27 PM IST
GoPro ಕ್ಯಾಮರಾ ಕದ್ದು ಮೇಲೆ ಹಾರಿದ ಹಕ್ಕಿ...  ವಿಹಂಗಮ ದೃಶ್ಯ ಸೆರೆ

ಸಾರಾಂಶ

ಬಾನಾಡಿ ದಾರಿ ಕ್ಯಾಮರಾದಲ್ಲಿ ಸೆರೆ ಚಾರಣಿಗರ ಕ್ಯಾಮರಾ ಎಗರಿಸಿದ ಹಕ್ಕಿ ಚಾರಣ ತೆರಳಿದ್ದ ನ್ಯೂಜಿಲ್ಯಾಂಡ್ ಕುಟುಂಬ

ಹಕ್ಕಿಯೊಂದು GoPro ಕ್ಯಾಮರಾವನ್ನು ಕದ್ದು ಹೊತ್ತೊಯ್ದಿದ್ದು, ಈ ವೇಳೆ ಕ್ಯಾಮರಾ ಗಿಳಿಯ ಹಾರಾಟದ ದೃಶ್ಯವನ್ನು ಸೆರೆ ಹಿಡಿದಿದ್ದು, ವಿಡಿಯೋ ವೈರಲ್‌ ಆಗಿದೆ. ನ್ಯೂಜಿಲ್ಯಾಂಡ್‌  ಅಲೆಕ್ಸ್ ವೆರ್ಹಾಲ್ ಎಂಬವರು ತಮ್ಮ ಕುಟುಂಬದೊಂದಿಗೆ ಚಾರಣಕ್ಕೆ ತೆರಳಿದ್ದರು. ಈ ವೇಳೆ ಪಕ್ಷಿಗಳ ಚಟುವಟಿಕೆ ಸೆರೆ ಹಿಡಿಯುವ ಸಲುವಾಗಿ ಕ್ಯಾಮರಾವನ್ನು ತಾವಿದ್ದ ಸ್ಥಳದ ಹೊರಭಾಗದಲ್ಲಿ ಇಟ್ಟಿದ್ದರು. ಈ ವೇಳೆ ಎಲ್ಲಿಂದಲೋ ಹಾರಿ ಬಂದ ಹಕ್ಕಿಯೊಂದು ಕ್ಯಾಮರಾವನ್ನು ಹೊತ್ತೊಯ್ದಿದೆ. ಆದಾಗ್ಯೂ ಸ್ವಲ್ಪ ಹೊತ್ತಿನಲ್ಲೇ ಕ್ಯಾಮರಾ ಮತ್ತೆ ಅದರ ಮಾಲೀಕರ ಕೈ ಸೇರಿದ್ದು, ಅದರಲ್ಲಿ ಹಕ್ಕಿ ಹಾರುತ್ತಿರುವಾಗ ಸೆರೆಯಾದ ವಿಹಂಗಮ ನೋಟವಿದೆ. 

ಹಕ್ಕಿ GoPro ಕ್ಯಾಮೆರಾವನ್ನು ಕದ್ದು ಆಕಾಶದಲ್ಲಿ ಹಾರಿದ್ದು, ಈ ವೇಳೆ ಕ್ಯಾಮರಾ ಹಕ್ಕಿ ಹಾರಿದ ದಾರಿಯ ದೃಶ್ಯವನ್ನು ಸೆರೆ ಹಿಡಿದಿದೆ. ಈ  ಗೋ ಪ್ರೋ ಕ್ಯಾಮರಾವನ್ನು ಮೈ ಜುಮ್ಮೆನಿಸುವ ಸಾಹಸ ಕ್ರೀಡೆಗಳ ಚಿತ್ರೀಕರಣಕ್ಕೆ ಬಳಸಲಾಗುತ್ತದೆ  ಸಾಮಾನ್ಯ ಕ್ಯಾಮರಾದಿಂದ ಮಾಡಲಾಗದ ಚಿತ್ರೀಕರಣವನ್ನು ಈ ಕ್ಯಾಮರಾದಿಂದ ಮಾಡಲಾಗುತ್ತದೆ. ಅಲ್ಲದೇ ಇದನ್ನು ಜಗತ್ತಿನ ಬಹುಮುಖಿ ಕ್ಯಾಮರಾ ಎಂದೇ ಕರೆಯಲಾಗುತ್ತದೆ. 

ಈ ವಿಶೇಷ ಕ್ಯಾಮರಾದ ಸಹಾಯದಿಂದ, ಬಳಕೆದಾರರು ಸ್ಕೂಬಾ-ಡೈವಿಂಗ್ (scuba-diving), ಸ್ಕೈ-ಡೈವಿಂಗ್ (sky-diving), ಬಂಗೀ ಜಂಪಿಂಗ್ (bungee jumping) ಸೇರಿದಂತೆ ಸಾಮಾನ್ಯ ಕ್ಯಾಮೆರಾ ಮಾಡಲಾಗದ ಸಾಹಸಗಳ ಚಿತ್ರೀಕರಣವನ್ನು ಮಾಡಬಹುದು. ಇನ್ನು ಈ ಕ್ಯಾಮರಾವನ್ನು ಹೊತ್ತೊಯ್ದ ಗಿಳಿಯೂ ಸ್ಥಳೀಯ ಆಲ್ಪೈನ್  ಜಾತಿಗೆ ಸೇರಿದ ಗಿಳಿ ಆಗಿದೆ. 

ಆದಾಗ್ಯೂ, ಗಿಳಿ ಹಾರಾಟದ ವೇಳೆ GoPro ಕ್ಯಾಮರಾ ಸೆರೆ ಹಿಡಿದ ದೃಶ್ಯ ಪ್ರಪಂಚದಾದ್ಯಂತ ನೆಟ್ಟಿಗರನ್ನು ಆಕರ್ಷಿಸಿದೆ. ಏಕೆಂದರೆ ಈ ವೇಳೆ ಹಕ್ಕಿ ಚಿತ್ರೀಕರಣದ ಯೋಜನೆಯನ್ನು ರೂಪಿಸಲಾಗಿರಲಿಲ್ಲ. ಅಲ್ಲದೇ ಕ್ಯಾಮರಾ ಬಳಸಿದವರಿಗೆ ಅದರ ಬಗ್ಗೆ ಅರಿವಿರಲಿಲ್ಲ.  ಆದಾಗ್ಯೂ ಚಾರಣಿಗರಿಗೆ ಕ್ಯಾಮೆರಾ ಮರಳಿ ಸಿಕ್ಕಿರುವುದರಿಂದ ಈ ದೃಶ್ಯ ಸಾಮಾಜಿಕ ಜಾಲತಾಣ ಸೇರಿದ್ದು ವೈರಲ್ ಆಗುತ್ತಿದೆ. 

 

ದಕ್ಷಿಣ ದ್ವೀಪದ ಫಿಯೋರ್ಡ್‌ಲ್ಯಾಂಡ್ ರಾಷ್ಟ್ರೀಯ ಉದ್ಯಾನವನದಲ್ಲಿ (Fiordland National Park) ನ್ಯೂಜಿಲೆಂಡ್‌ನ ( New Zealand) ಕುಟುಂಬವೊಂದು ಚಾರಣಕ್ಕೆ ಬಂದಿತ್ತು. ಈ ವೇಳೆ ಪಕ್ಷಿ ಅವರ ಕ್ಯಾಮರಾ ಕಸಿದು ಹಾರಿ ಹೋಗಿತ್ತು. ಕೆಪ್ಲರ್ ಟ್ರ್ಯಾಕ್‌ನ (Kepler Track) ಒಂದು ಭಾಗಕ್ಕೆ ಚಾರಣ ತೆರಳಿ ಇನ್ನೇನು ಮುಗಿಯಿತು ಎನ್ನುವಾಗ ಗಿಳಿಯು ಕೆಳಗಿಳಿದು, ಅವರ ಗೋಪ್ರೊವನ್ನು ಕಸಿದು ಹಾರಿಹೋಯಿತು ಎಂದು ವರದಿಗಳು ತಿಳಿಸಿವೆ.

ಮೊಟ್ಟೆ ಕದಿಯಲು ಗೂಡಿಗೆ ಬಂದ ಕಳ್ಳ ಹಾವನ್ನು ಪುಟ್ಟ ಹಕ್ಕಿ ಹೇಗೆ ಓಡಿಸಿತು ನೋಡಿ... ವಿಡಿಯೋ ವೈರಲ್‌

ಅಯೋಟೆರೊವಾದ ( Aotearoa) ಸ್ಥಳೀಯ ಆಲ್ಪೈನ್ ಗಿಳಿ ಜಾತಿಗೆ ಸೇರಿದ ಕೀಯಾ ಹೆಸರಿನ ಪಕ್ಷಿ ಇದಾಗಿದೆ. ಇವುಗಳು ತಮ್ಮ ಚೇಷ್ಟೆಯ ಸ್ವಭಾವಕ್ಕೆ ಹೆಸರುವಾಸಿಯಾಗಿವೆ. ಅಲ್ಲದೇ ಇವುಗಳು ಇಲ್ಲಿಗೆ ಬರುವ ಪ್ರವಾಸಿಗರು ಅಥವಾ ಚಾರಣಿಗರಿಂದ ವಸ್ತುಗಳನ್ನು ಎಗರಿಸುವುದಕ್ಕೆ ಹೆಸರುವಾಸಿಯಾಗಿದ್ದು,  ಪ್ಯಾಕ್ ಮಾಡಿದ ಡಬ್ಬಿಗಳು,  ಚೀಲಗಳು ಮತ್ತು ಆಭರಣಗಳು, ಪರ್ಸ್‌ಗಳನ್ನು ಕಸಿಯುತ್ತವೆ. ಆದರೆ ಈ ಸಂದರ್ಭದಲ್ಲಿ ಮಾತ್ರ ಕುಟುಂಬವೊಂದು ಕೀಯ ಹಕ್ಕಿಯ ತುಂಟಾಟಕ್ಕೆ ಬಲಿಪಶುವಾಗ ಬೇಕಾಯಿತು.

ಒಂದು ಹಂತದಲ್ಲಿ ಪಕ್ಷಿಯು ಕ್ಯಾಮರಾದ ಕವಚದಿಂದ ಪ್ಲಾಸ್ಟಿಕ್‌ನ ತುಂಡನ್ನು ಕಿತ್ತುಹಾಕುವುದನ್ನು ದೃಶ್ಯಾವಳಿ ತೋರಿಸುತ್ತದೆ. ಆದಾಗ್ಯೂ ಕ್ಯಾಮರಾಗೆ ಯಾವುದೇ ಹಾನಿ ಆಗಿಲ್ಲ. ಅಲ್ಲದೇ ಕುಟುಂಬದ ಸದಸ್ಯರು ಅದನ್ನು ಕದ್ದ ಸ್ಥಳದಿಂದ ಸ್ವಲ್ಪ ದೂರದಲ್ಲಿ ಮರು ಪಡೆಯಲು ಸಾಧ್ಯವಾಗಿದೆ. ಗಿಳಿ ನೇರವಾಗಿ ಒಂದೇ ಹಾದಿಯಲ್ಲಿ ಹಾರಿದ್ದರಿಂದ ಕ್ಯಾಮರಾ ಪತ್ತೆ ಮಾಡಲು ಸಾಧ್ಯವಾಯಿತು ಎಂದು ಕುಟುಂಬ ಸದಸ್ಯರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಗೂಡು ಕಟ್ಟಲು ಕಡ್ಡಿ ಆರಿಸಿ ಪುಕ್ಕದಲ್ಲಿ ಸಂಗ್ರಹಿಸುವ ಹಕ್ಕಿ.... ಬಾನಾಡಿಯ ಅಪರೂಪದ ವಿಡಿಯೋ ವೈರಲ್‌

ನಾವು ಶಬ್ದವನ್ನು ಅನುಸರಿಸಿ, ಕೆಳಗೆ ಹೋದೆವು, ಆಗ ಹಕ್ಕಿ ಮರದಲ್ಲಿ ಕುಳಿತಿರುವುದು ಕಾಣಿಸಿತು. ಅಲ್ಲದೇ ನಾವು ಬರುವುದನ್ನು ನೋಡಿದ ಅದು ಕ್ಯಾಮರಾವನ್ನು ಕೈ ಬಿಟ್ಟಿತು. ಬಳಿಕ ನನ್ನ ಮಗ ಅಲ್ಲಿ ಪರಿಶೀಲಿಸಿದ ಈ ವೇಳೆ ಅಲ್ಲೇ ಕ್ಯಾಮರಾ ಇತ್ತು ಹಾಗೂ ಅದರಲ್ಲಿ ವಿಡಿಯೋ ರೆಕಾರ್ಡಿಂಗ್ ಮುಂದುವರೆದಿತ್ತು ಎಂದು  ಅಲೆಕ್ಸ್ ವೆರ್ಹಾಲ್ ಹೇಳಿದರು. ಇದಾದ ಬಳಿಕ  ದೃಶ್ಯಗಳನ್ನು ಫೋನ್‌ಗೆ ವರ್ಗಾಯಿಸಲಾಯಿತು ಮತ್ತು ಆನ್‌ಲೈನ್‌ನಲ್ಲಿ ಹಂಚಿಕೊಳ್ಳಲಾಯಿತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ವಿಶ್ವದ ಅತಿ ಬಲಿಷ್ಠ ಕರೆನ್ಸಿಗಳಿವು: ಭಾರತದ ರುಪಾಯಿ ಮುಂದೆ ಘರ್ಜಿಸುವ ಡಾಲರ್ ಈ ದೇಶದ ಕರೆನ್ಸಿ ಮುಂದೆ ಡಮ್ಮಿ!
ರಾಜಮೌಳಿ-ಜೇಮ್ಸ್ ಕ್ಯಾಮರೂನ್ ಹೊಸ ಹೆಜ್ಜೆ, ನಟ ಮಹೇಶ್ ಬಾಬುಗೆ ಪ್ಯಾನ್ ವರ್ಲ್ಡ್ ಪಟ್ಟ..!