ಪೆಂಟಗಾನ್‌ ಮುಂದೆ ಸುಳಿದಾಡುತ್ತಿದ್ದ ಕೋಳಿ ವಶಕ್ಕೆ

Suvarna News   | Asianet News
Published : Feb 04, 2022, 06:33 PM IST
ಪೆಂಟಗಾನ್‌ ಮುಂದೆ ಸುಳಿದಾಡುತ್ತಿದ್ದ ಕೋಳಿ ವಶಕ್ಕೆ

ಸಾರಾಂಶ

ಪೆಂಟಗನ್‌ನ ಭದ್ರತಾ ಪ್ರದೇಶದಲ್ಲಿ ಸುತ್ತಾಡುತ್ತಿದ್ದ ಕೋಳಿ ಕೋಳಿ ವಶಕ್ಕೆ ಪಡೆದ ಭದ್ರತಾ ಸಿಬ್ಬಂದಿ

ವಾಷಿಂಗ್ಟನ್‌(ಫೆ.4):  ಪೆಂಟಗನ್‌ನ ಭದ್ರತಾ ಪ್ರದೇಶದಲ್ಲಿ ಸುತ್ತಾಡುತ್ತಿದ್ದ ಕೋಳಿಯೊಂದನ್ನು ಭದ್ರತಾ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ ಎಂದು ಸ್ಥಳೀಯ ಪ್ರಾಣಿ ಕಲ್ಯಾಣ ಸಂಸ್ಥೆ ತಿಳಿಸಿದೆ. ಅಮೆರಿಕಾದ ರಕ್ಷಣಾ ಇಲಾಖೆಯ ಪ್ರಧಾನ ಕಚೇರಿಯ ಬಳಿ ಸೋಮವಾರ ಮುಂಜಾನೆ ಕೋಳಿಯೊಂದು ಕಾಣಿಸಿಕೊಂಡಿತ್ತು ಎಂದು ವರ್ಜೀನಿಯಾದ (Virginia) ಆರ್ಲಿಂಗ್ಟನ್‌ನ ( Arlington) ಪ್ರಾಣಿ ಕಲ್ಯಾಣ ಸಂಸ್ಥೆ ಸಾಮಾಜಿಕ ಮಾಧ್ಯಮದಲ್ಲಿ ತಿಳಿಸಿದೆ.

ಸ್ಪಷ್ಟವಾಗಿ, 'ಕೋಳಿ ರಸ್ತೆಯನ್ನು ಏಕೆ ದಾಟಿತು' ಎಂಬುದಕ್ಕೆ ಉತ್ತರ ಪೆಂಟಗನ್‌ಗೆ ತೆರಳುವುದಕ್ಕ ಆಗಿತ್ತು ಎಂದು ಸಂಸ್ಥೆ ಸೋಶಿಯಲ್‌ ಮೀಡಿಯಾದಲ್ಲಿ ಬರೆದು ಕೋಳಿಯ ಫೋಟೋವನ್ನು ಪೋಸ್ಟ್ ಮಾಡಿದೆ.   ಕೋಳಿಯನ್ನು ಸಂಸ್ಥೆಯ ಉದ್ಯೋಗಿಯೊಬ್ಬರು ವಶಕ್ಕೆ ತೆಗೆದುಕೊಂಡರು. ಕೋಳಿಯನ್ನು ಕರೆದುಕೊಂಡು ಬರಲು ನಮ್ಮ ಅಧಿಕಾರಿಗಳನ್ನು ಕರೆಸಲಾಯಿತು. ಸಾರ್ಜೆಂಟ್ ಬಲ್ಲೆನಾ (Sgt Ballena) ಅವರು ಕೋಳಿಯನ್ನು ಸುರಕ್ಷಿತವಾಗಿ  ಪ್ರಾಣಿ ಕಲ್ಯಾಣ ಸಂಸ್ಥೆಗೆ ಕರೆ ತಂದರು.  ನಾವು ಕೋಳಿಗೆ ಹೊಸ ವಾಸ್ತವ್ಯವನ್ನು ಕಂಡುಕೊಳ್ಳುವವರೆಗೆ ಕೋಳಿ ಇಲ್ಲಿಯೇ ಇರುತ್ತದೆ. ಸಂಘಟನೆ ಹೇಳಿದೆ. 

 

ಸಂಸ್ಥೆಯ ವಕ್ತಾರರಾದ ಚೆಲ್ಸಿಯಾ ಜೋನ್ಸ್ (Chelsea Jones), ಕೋಳಿ ಎಲ್ಲಿ ಕಂಡು ಬಂದಿದೆ ಎಂಬುದನ್ನು ನಿಖರವಾಗಿ ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಹೇಳಿದರು. ಕೋಳಿ ಎಲ್ಲಿ ಕಂಡುಬಂದಿತ್ತು ಎಂಬುದನ್ನು ನಿಖರವಾಗಿ ಬಹಿರಂಗಪಡಿಸಲು ನಮಗೆ ಅನುಮತಿ ಇಲ್ಲ ಎಂದು ಜೋನ್ಸ್  ತಿಳಿಸಿದ್ದಾರೆ.. ಇದು ಭದ್ರತಾ ಚೆಕ್‌ಪಾಯಿಂಟ್‌ನಲ್ಲಿ ಇತ್ತು ಎಂಬುದನ್ನು ಮಾತ್ರ ನಾವು ಹೇಳಬಹುದು.

Davanagere: 6 ಫೈಟರ್ ಕೋಳಿ ಕದ್ದೊಯ್ದ ಕಳ್ಳರು: ಕೈಚಳಕ ಸಿಸಿಟಿವಿಯಲ್ಲಿ ಸೆರೆ

ಕೋಳಿ ಎಲ್ಲಿಂದ ಬಂತು ಅಥವಾ  ಪೆಂಟಗನ್‌ಗೆ ಹೇಗೆ ಹೋಯಿತು ಎಂಬುದು ಕೂಡ ಅಸ್ಪಷ್ಟವಾಗಿದೆ. ಕಂದು ಹಾಗೂ ಕೆಂಪು  ಬಣ್ಣದ ಗರಿಗಳಿರುವ ಕೋಳಿಯು ಕೆಂಪು ಬಣ್ಣದ ಜುಟ್ಟು ಹೊಂದಿದೆ.  ಈ ಕೋಳಿಯನ್ನು ಈಗ ಹೆನ್ನಿ ಪೆನ್ನಿ ಎಂದು ಕರೆಯಲಾಗುತ್ತದೆ ಎಂದು ಅವರು ಹೇಳಿದರು.  ಪಶ್ಚಿಮ ವರ್ಜೀನಿಯಾದಲ್ಲಿ ( western Virginia) ಸಣ್ಣ ಫಾರ್ಮ್ ಹೊಂದಿರುವ ಸಿಬ್ಬಂದಿಯೊಬ್ಬರು ಹೆನ್ನಿ ಪೆನ್ನಿಯನ್ನು ದತ್ತು ತೆಗೆದುಕೊಳ್ಳುತ್ತಿದ್ದಾರೆ ಎಂದು ಜೋನ್ಸ್ ಹೇಳಿದ್ದಾರೆ.

KSRTC Bus : 10 ರು. ಕೋಳಿ ಮರಿಗೆ ಬಸ್ಸಲ್ಲಿ 52 ರು. ಟಿಕೆಟ್‌!

ಪ್ರಾಣಿಗಳ ಪ್ರೀತಿ, ಅಕ್ಕರೆ, ವಾತ್ಸಲ್ಯ, ಆತ್ಮೀಯತೆಗೆ ಸರಿಸಾಟಿ ಯಾವುದೂ ಇಲ್ಲ. ಕಾರಣ ಪ್ರಾಣಿಗಳ ಈ ಪ್ರೀತಿಯಲ್ಲಿ ಕಲ್ಮಶವಿಲ್ಲ. ಈ ರೀತಿಯ ಪ್ರಾಣಿಗಳ ನಡುವಿನ ಪ್ರೀತಿ ವಿಡಿಯೋ ಕಳೆದ ವರ್ಷ ವೈರಲ್‌ ಆಗಿತ್ತು. ಇದು ಕೋಳಿ ಮರಿ ಹಾಗೂ ಕೋತಿ ಮರಿ ವಿಡಿಯೋ. ಕೋಳಿ ಮರಿ ಜೊತೆ ಆಟವಾಡುತ್ತಿರುವ ಕೋತಿ ಮರಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪುರುಷರ ಕೊರತೆ: ಈ ದೇಶದಲ್ಲಿ ಗಂಡನ ಬಾಡಿಗೆಗೆ ಪಡೆಯುತ್ತಾರೆ ಹೆಣ್ಣು ಮಕ್ಕಳು
ಅಸ್ವಸ್ಥ ಖಲೀದಾ ಜಿಯಾ ಹೆಚ್ಚಿನ ಚಿಕಿತ್ಸೆಗೆ ನಾಳೆ ಲಂಡನ್‌ಗೆ