ಬೆಟ್ಟಿಂಗ್ ಕಟ್ಟಿ ಮನೆ ಮಠ ಕಳೆದುಕೊಂಡು ಬೀದಿಗೆ ಬಿದ್ದವರನ್ನು ನೋಡಿದ್ದೇವೆ. ಆದರೆ ಇಲ್ಲೊಂದು ಕಡೆ ಮನೆ ಮಠ ಇಲ್ಲದ ವ್ಯಕ್ತಿಯೊಬ್ಬ ಕುದುರೆ ರೇಸ್‌ನಲ್ಲಿ ಬೆಟ್ಟಿಂಗ್ ಕಟ್ಟಿ ಲಕ್ಷಾಂತರ ರೂ ಗಳಿಸಿದ್ದಾನೆ.
ಮೆಲ್ಬೋರ್ನ್: ಅದೃಷ್ಟವೇ ಹಾಗೆ ಒಮ್ಮೆ ಸಿರಿವಂತಿಕೆ ನೀಡಿದರೆ ಮತ್ತೆ ಕೆಲವೊಮ್ಮೆ ಬಡತನ ನೀಡುತ್ತದೆ. ಬಡತನದಲ್ಲಿ ಬೆಂದವನಿಗೆ ಸಿರಿ ಸಿರಿತನದಲ್ಲಿ ಮೆರೆದವನಿಗೆ ಬಡತನ ಕರುಣಿಸುವುದು ಹಣೆಬರಹದ ಆಟವೇ ಸರಿ. ಅದೇ ರೀತಿ ಬೆಟ್ಟಿಂಗ್ ಕಟ್ಟಿ ಮನೆ ಮಠ ಕಳೆದುಕೊಂಡು ಬೀದಿಗೆ ಬಿದ್ದವರನ್ನು ನೋಡಿದ್ದೇವೆ. ಆದರೆ ಇಲ್ಲೊಂದು ಕಡೆ ಮನೆ ಮಠ ಇಲ್ಲದ ವ್ಯಕ್ತಿಯೊಬ್ಬ(homeless man) ಕುದುರೆ ರೇಸ್‌ನಲ್ಲಿ ಬೆಟ್ಟಿಂಗ್ ಕಟ್ಟಿ ಲಕ್ಷಾಂತರ ರೂ ಗಳಿಸಿದ್ದಾನೆ. ರಾಬರ್ಟ್ ಎಂಬಾತನೇ ಹೀಗೆ ಬೆಟ್ಟಿಂಗ್ ಕಟ್ಟಿ ಲಕ್ಷಾಂತರ ರೂ ಗಳಿಸಿದ ಅದೃಷ್ಟವಂತ.
ಈತ ಆಸ್ಟ್ರೇಲಿಯಾದ ಮೆಲ್ಬೋರ್ನ್‌ನ (Melbourne) ಲೋಕಲ್ ಕ್ಲಬೊಂದರಲ್ಲಿ ಕುದುರೆ ಬೆಟ್ಟಿಂಗ್ ರೇಸ್ ನೋಡಲು ಹೋಗುತ್ತಿದ್ದ. ಹೀಗೆ ಹೋದವ 5 ಡಾಲರ್ (416 ರೂಪಾಯಿ 95 ಪೈಸೆ) ಮೊತ್ತದ ಬೆಟ್ಟಿಂಗ್ ಕಟ್ಟಿ ತನ್ನ ಅದೃಷ್ಟ ಪರೀಕ್ಷೆಗೆ ಇಳಿದಿದ್ದ. ಸಣ್ಣ ಮೊತ್ತದ ಬೆಟ್ಟಿಂಗ್ ಕಟ್ಟಿದ ಈತನಿಗೆ ದೊಡ್ಡ ಮೊತ್ತದ ಯಾವುದೇ ನಿರೀಕ್ಷೆ ಇರಲಿಲ್ಲ. ಆದರೆ ಅದೃಷ್ಟ ದೇವತೆ ಮಾತ್ರ ಈತನ ಅದೃಷ್ಟ ಬದಲಿಸಲು ಮುಂದಾಗಿದ್ದು. ಪರಿಣಾಮ ಈತ 3 ಅಂಕಿ ಬೆಟ್ಟಿಂಗ್ ಕಟ್ಟಿ ಆರು ಅಂಕಿ ಮೊತ್ತದ ಬಹುಮಾನ ಗಳಿಸಿದ್ದಾನೆ.
ಮೆಲ್ಬೋರ್ನ್ ಕಪ್ ಕುದುರೆ ರೇಸ್‌ನಲ್ಲಿ(Horse race) 5 ಡಾಲರ್ ಕಟ್ಟಿದ ಈತ ತನ್ನದೊಂದು ಸಣ್ಣ ಮಟ್ಟದ ಈ ಹೂಡಿಕೆ ತನ್ನ ಬದುಕನ್ನೇ ಬದಲಿಸಬಹುದೆಂಬ ಯಾವ ನಿರೀಕ್ಷೆಯನ್ನು ಹೊಂದಿರಲಿಲ್ಲ. ಆದರೆ ರೇಸ್ ಮುಗಿದ ಮೇಲೆ ಈ ರಾಬರ್ಟ್ ತಾನು ಗೆದ್ದಿರುವುದರ ಬಗ್ಗೆ ನಂಬಿಕೆ ಇಲ್ಲದೇ ಸಿಗರೇಟ್‌ಗಾಗಿ ಕ್ಲಬ್‌ನಿಂದ ಹೊರಬಂದಿದ್ದ. ಆದರೆ ಆತ ತನ್ನ ಖಾತೆ ಚೆಕ್ ಮಾಡಿದಾಗ ಅಲ್ಲಿ ಆಗಲೇ 6 ಅಂಕಿಯ ಮೊತ್ತ ಖಾತೆಗೆ ಬಿದ್ದಾಗಿತ್ತು. ಈತನ 5 ಡಾಲರ್ ಹೂಡಿಕೆಯೂ ಒಂದು ಲಕ್ಷದ 6 ಸಾವಿರ ಡಾಲರ್ ಆಗಿ ಬದಲಾಗಿತ್ತು.
ನಿರಾಶೆಯ ಕಣ್ಣೀರಿನಿಂದ ಖುಷಿಯ ಕಣ್ಣೀರಿನವರೆಗೆ
ಕೆಲವು ತಿಂಗಳ ಹಿಂದಷ್ಟೇ ಈ ರಾಬರ್ಟ್ ಬೀದಿಗೆ ಬಿದ್ದಿದ್ದ. ಆತನಿಗೆ ಇರುವುದಕ್ಕೆ ನೆಲೆ ಇರಲಿಲ್ಲ, ಎಲ್ಲಿಗೆ ಹೋಗಬೇಕೆಂಬುದು ಆತನಿಗೆ ತಿಳಿದಿರಲಿಲ್ಲ, ಆದರೆ ಈಗ ಆತನ ಬದುಕು ಬದಲಾಗಿದ್ದು, ತಾನೊರ್ವ ಅದೃಷ್ಟವಂತ ಎಂದು ಆತನಿಗೆ ಅನಿಸಿದೆ. ನಿರ್ಗತಿಕನಾದ ತನ್ನ ಅರಸಿ ಬಂದ ಅದೃಷ್ಟದ ಬಗ್ಗೆ ಆತ ಹಿರಿಹಿರಿ ಹಿಗ್ಗಿದ್ದಾನೆ. ಅಲ್ಲದೇ ತನ್ನ ಗೆಳತಿಗೆ ಕರೆ ಮಾಡಿದ ಆತ ತನ್ನ ಅದೃಷ್ಟ್ ಖುಲಾಯಿಸಿದ ಬಗ್ಗೆ ಮೊದಲಿಗೆ ಆಕೆಗೆ ತಿಳಿಸಿದ್ದಾನೆ. ಈ ಹಣದಲ್ಲಿ ಆತ ಮನೆ ಖರೀದಿಸುವ ಜಗತ್ತು ಸುತ್ತುವ ಜೊತೆ ಹಲವು ಆಸೆಗಳ ಈಡೇರಿಸುವ ಗುರಿ ಹೊಂದಿದ್ದಾನೆ.