
ಲಂಡನ್: ಹವಾಮಾನ ಬದಲಾವಣೆಯಿಂದ ಸಂಕಷ್ಟಕ್ಕೆ ಗುರಿಯಾಗಿರುವ ರೈತರ ನೆರವಿಗಾಗಿ ಕೆಲಸ ಮಾಡುತ್ತಿರುವ 'ಭೂಮಿತ್ರ' ಸಂಸ್ಥೆಗೆ ಪರಿಸರ ಆಸ್ಕರ್ ಎಂದೇ ಪ್ರಸಿದ್ಧವಾಗಿರುವ 2023ನೇ ಸಾಲಿನ ಅರ್ಥ್ ಶಾಟ್ ಪ್ರಶಸ್ತಿ ಲಭಿಸಿದೆ. ವಿಶೇಷವೆಂದರೆ, ಈ ಸಂಸ್ಥೆಯನ್ನು ಕರ್ನಾಟಕ ಮೂಲದ ಆದಿತ್ ಮೂರ್ತಿ ಸಾಪಿಸಿದ್ದಾರೆ. ಇವರು ಅಮೆರಿಕದಲ್ಲಿ ನೆಲೆಸಿದ್ದು, ಅಲ್ಲೇ ಇವರ ಸಂಸ್ಥೆಯ ಮುಖ್ಯ ಕಚೇರಿಯೂ ಇದೆ.
ಬ್ರಿಟನ್ನ ರಾಜಕುಮಾರ ವಿಲಿಯಮ್ಸ್ ಸ್ಥಾಪಿಸಿರುವ ಈ ಪ್ರಶಸ್ತಿಯು 10 ದಶಲಕ್ಷ ಪೌಂಡ್ (ಸುಮಾರು 10 ಎಲ್ಲರಿಗೂ ಕೋಟಿ ರು.) ಮೌಲ್ಯದ್ದಾಗಿದೆ. ಭೂಮಿತ್ರ' ಜೊತೆಗೆ ಭಾರತೀಯ ಮೂಲದ ಎಸ್ 4 ಎಸ್ ಟೆಕ್ನಾಲಜೀಸ್ ಸಂಸ್ಥೆಯು ಪ್ರಶಸ್ತಿ ಪಡೆದಿದೆ. ಎಸ್ 4 ಎಸ್ ಟೆಕ್ನಾಲಜೀಸ್ ಸಂಸ್ಥೆಯು ಸೌರಶಕ್ತಿ ಬಳಸಿ ಆಹಾರ ತ್ಯಾಜ್ಯಗಳನ್ನು ಪರಿಸರಸ್ನೇಹಿಯಾಗಿ ವಿಲೇವಾರಿ ಮಾಡುತ್ತದೆ. ಭೂಮಿತ್ರ, ಸಂಸ್ಥೆಗೆ 'ಫಿಕ್ಸ್ ಅವರ್ ಕ್ಲೈಮೇಟ್ ವಿಭಾಗದಲ್ಲಿ ಅರ್ಥ್‌ಶಾಟ್ ಪ್ರಶಸ್ತಿ ಲಭಿಸಿದೆ. ಸಿಂಗಾಪುರದಲ್ಲಿ ನಡೆದ ಸಮಾರಂಭದಲ್ಲಿ ಭೂಮಿತ್ರ, ಎಸ್ 4 ಎಸ್ ಟೆಕ್ನಾಲಜೀಸ್ ಸಂಸ್ಥೆ ಸೇರಿದಂತೆ ಒಟ್ಟು ಐದು ಸಂಸ್ಥೆಗಳಿಗೆ ಅರ್ಥ್‌ಶಾಟ್ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಹಬ್ಬಕ್ಕೆ ದೇಶಿ ನಿರ್ಮಿತ ವಸ್ತುಗಳ ಖರೀದಿಗೆ ಜನರ ಒಲವು: ಚೀನಾಗೆ ಭಾರಿ ಹೊಡೆತ
ರೈತನ ಆತ್ಮಹತ್ಯೆ ನೋಡಿ ಕಟ್ಟಿದ ಕಂಪನಿ:
ಪ್ರಶಸ್ತಿಗೆ ಸಂತಸ ವ್ಯಕ್ತಪಡಿಸಿರುವ ಆದಿತ್ ಮೂರ್ತಿ, 'ಹವಾಮಾನ ಬದಲಾವಣೆಯ ಸವಾಲಿನ ಜೊತೆಜೊತೆಗೇ ಜಗತ್ತಿನ ಎಲ್ಲರಿಗೂ ಆಹಾರ ನೀಡಲು ಮಣ್ಣಿನಲ್ಲಿ ಬೆವರು ಹರಿಸಿ ಕೆಲಸ ಮಾಡುತ್ತಿರುವ ಎಲ್ಲ ರೈತರಿಗೆ ಈ ಪ್ರಶಸ್ತಿ ಅರ್ಪಿಸುತ್ತೇನೆ' ಎಂದು ಹೇಳಿದ್ದಾರೆ. 2017ರಲ್ಲಿ ಒಂದು ದಿನ ಭಾರತದ ಹಳ್ಳಿಯೊಂದರಲ್ಲಿ ಆದಿತ್ ರೈತನೊಬ್ಬನ ಶವ
ಯಾತ್ರೆಯನ್ನು ನೋಡಿದ್ದರು. ಆತ ಬೆಳೆನಷ್ಟದಿಂದಾಗಿ ಆತ್ಮಹತ್ಯೆ ಮಾಡಿಕೊಂಡಿದ್ದ. ಆ ಭಾವನಾತ್ಮಕ ಕ್ಷಣವು ಆದಿತ್ ಅವರ ಮನದಲ್ಲಿ ಹೇಗಾದರೂ ಮಾಡಿ ರೈತರಿಗೆ
ನೆರವಾಗುವ ಕಾರ್ಯ ಮಾಡಬೇಕು ಎಂಬ ಆಸೆ ಮೂಡಿಸಿತು. ಅದರಿಂದಾಗಿಯೇ ಭೂಮಿತ್ರ ಜನ್ಮತಾಳಿತು.
'ಭೂಮಿತ್ರ' ಏನು ಮಾಡುತ್ತದೆ?
'ಭೂಮಿತ್ರ' ಕಂಪನಿಯು ಮಣ್ಣಿನಲ್ಲಿ ಇಂಗಾಲವನ್ನು ಉಳಿಸುವ ಮೂಲಕ ರೈತರಿಗೆ ಭೂಮಿಯ ಸಂರಕ್ಷಣೆಗೆ ಪ್ರೋತ್ಸಾಹ ನೀಡುತ್ತದೆ. ತನ್ಮೂಲಕ ವಾತಾವರಣಕ್ಕೆ ಇಂಗಾಲದ ಬಿಡುಗಡೆಯಾಗುವುದನ್ನು ತಡೆಯುವ ಹಾಗೂ ರೈತರ ಭೂಮಿಯನ್ನು ಫಲವತ್ತಾಗಿಸಿ ಅವರ ಆದಾಯವನ್ನು ಹೆಚ್ಚಿಸುವ ಕೆಲಸವನ್ನೂ ಮಾಡುತ್ತದೆ. ಭೂಮಿತ್ರ ಅಂದರೆ ಮಣ್ಣಿನ ಸ್ನೇಹಿತ ಎಂದರ್ಥ. ಇದು ಸುಸ್ಥಿರ ಭೂಸಂರಕ್ಷಣೆ ಮಾಡುವ ರೈತರಿಗೆ ಪ್ರೋತ್ಸಾಹ ನೀಡುತ್ತದೆ. ಅರ್ಧ ಎಕರೆ ಸಣ್ಣ ಹಿಡುವಳಿಯಿಂದ ಹಿಡಿದು ದೊಡ್ಡ ಪ್ರಮಾಣದ ಭೂ ಹಿಡುವಳಿ ಹೊಂದಿರುವ ಆಫ್ರಿಕಾ, ದಕ್ಷಿಣ ಅಮೆರಿಕ ಹಾಗೂ ಏಷ್ಯಾದ 1,50,000 ರೈತರ ಜೊತೆ ಸೇರಿ ಇದು ಕೆಲಸ ಮಾಡುತ್ತಿದೆ. ಒಟ್ಟಾರೆ ಇದು 50 ಲಕ್ಷ ಎಕರೆ ಭೂಮಿಯ ಸಂರಕ್ಷಣೆಯಲ್ಲಿ ಕೈಜೋಡಿಸಿದೆ.
ಗಾಜಾ ಶಿಬಿರ: 50 ಸಾವಿರ ನಿರಾಶ್ರಿತರಿಗೆ ಬರೀ 4 ಟಾಯ್ಲೆಟ್, 4 ತಾಸಷ್ಟೇ ನೀರು!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ