ದೇವರು ಕೊಟ್ಟಿದ್ದಕ್ಕೆಲ್ಲಾ ಕತ್ತರಿ ಹಾಕಿದ್ರೆ ಹಿಂಗೇ ಆಗೋದು ನೋಡಿ..!

Published : Jul 24, 2022, 07:13 PM ISTUpdated : Jul 24, 2022, 07:16 PM IST
ದೇವರು ಕೊಟ್ಟಿದ್ದಕ್ಕೆಲ್ಲಾ ಕತ್ತರಿ ಹಾಕಿದ್ರೆ ಹಿಂಗೇ ಆಗೋದು ನೋಡಿ..!

ಸಾರಾಂಶ

ಕೆಲ ದಿನಗಳ ಹಿಂದಷ್ಟೇ ನಟಿಯೊಬ್ಬಳು ಸಣ್ಣ ಸೊಂಟ ಪಡೆಯಲು ಹೋಗಿ ಶಸ್ತ್ರಚಿಕಿತ್ಸೆಗೆ ಒಳಗಾಗಿ ಜೀವ ಕಳೆದುಕೊಂಡಿದ್ದು, ಎಲ್ಲರಿಗೂ ತಿಳಿದಿದೆ. ಅದೇ ರೀತಿ ಫ್ರಾನ್ಸ್‌ನ ವ್ಯಕ್ತಿಯೊಬ್ಬನಿಗೆ ಏಲಿಯನ್ ರೀತಿ ಕಾಣುವಾಸೆ. ಏಲಿಯನ್ ಆಸೆಯಿಂದಾಗಿ ಇಂದು ಆತನ ಬದುಕೇ ಬರ್ಬಾದ್ ಆಗೋಗಿದೆ.

ಕೆಲ ದಿನಗಳ ಹಿಂದಷ್ಟೇ ನಟಿಯೊಬ್ಬಳು ಸಣ್ಣ ಸೊಂಟ ಪಡೆಯಲು ಹೋಗಿ ಶಸ್ತ್ರಚಿಕಿತ್ಸೆಗೆ ಒಳಗಾಗಿ ಜೀವ ಕಳೆದುಕೊಂಡಿದ್ದು, ಎಲ್ಲರಿಗೂ ತಿಳಿದಿದೆ. ಅದೇ ರೀತಿ ಫ್ರಾನ್ಸ್‌ನ ವ್ಯಕ್ತಿಯೊಬ್ಬನಿಗೆ ಏಲಿಯನ್ ರೀತಿ ಕಾಣುವಾಸೆ. ಏಲಿಯನ್ ಆಸೆಯಿಂದಾಗಿ ಇಂದು ಆತನ ಬದುಕೇ ಬರ್ಬಾದ್ ಆಗೋಗಿದೆ. ನೋಡಲು ಸುಂದರವಾಗಿಯೇ ಇದ್ದ 34 ವರ್ಷದ ಅಂಥೋನಿ ಲೋಫ್ರೆಡೊ ಏಲಿಯನ್ ರೀತಿ ಕಾಣುವ ಸಲುವಾಗಿ ಮೈ ತುಂಬ ಕಪ್ಪು ಟ್ಯಾಟೂ ಹಾಕಿಸಿಕೊಂಡಿದ್ದು, ಈತನ ವೇಷ ನೋಡಿದರೆ ಜನ ಹೆದರಿ ಓಡುವಂತಾಗಿದೆ. ಈತ ಬರಿ ಟ್ಯಾಟೂ ಹಾಕಿಸಿಕೊಂಡಿದ್ದರೆ ತೊಂದರೆ ಇರಲಿಲ್ಲ. ಏಲಿಯನ್ ರೀತಿ ಕಾಣಬೇಕು ಎಂದು ಈತ ತನ್ನ ಕೈಗಳ ಮೂರು ಬೆರಳುಗಳು, ತನ್ನೆರಡು ಕವಿಗಳು ಹಾಗೂ ಮೂಗಿನ ಕೆಳಭಾಗವನ್ನು ಕೂಡ ಕತ್ತರಿಸಿಕೊಂಡಿದ್ದಾನೆ.  ತುಟಿಯನ್ನು ಕೂಡ ಸೀಳ್ದುಟಿಯಂತೆ ಮಾಡಿಕೊಂಡಿದ್ದಾನೆ. ಕಣ್ಣುಗಳೊಳಗೂ ಕಪ್ಪು ಬಣ್ಣ ತುಂಬಿದ್ದಾನೆ. 

ಜೊತೆಗೆ ದೇಹದ ತುಂಬೆಲ್ಲಾ ಕಪ್ಪು ಜೇಡದ ಬಲೆಯಂತೆ ಟ್ಯಾಟೂ ಹಾಕಿಸಿಕೊಂಡು ಅಸಹ್ಯವಾಗಿ ಕಾಣುವ ಈತನಿಗೆ ಈಗ ಯಾರೂ ಕೆಲಸ ಕೊಡುತ್ತಿಲ್ಲವಂತೆ. ಹೀಗಾಗಿ ಈತನಿಗೆ ಈಗ ಜೀವನ ಮಾಡುವುದು ಕಷ್ಟವಾಗಿದೆಯಂತೆ. ಆದಾಗ್ಯೂ ಇವನಿಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಫಾಲೋವರ್ಸ್‌ಗಳಿದ್ದಾರೆ. ಈತನ ವಿಚಿತ್ರ ಹಾವಭಾವ, ದೆವ್ವದಂತೆ ಕಾಣುವ ಹಾರರ್‌ ಲುಕ್ ಈತನಿಗೆ ಸಾಕಷ್ಟು ಅಭಿಮಾನಿಗಳನ್ನು ತಂದು ಕೊಟ್ಟಿದೆ. ಇವನ ಈ ವಿಚಿತ್ರ ಲುಕ್‌ನ ವಿಡಿಯೋಗಳನ್ನು ಲಕ್ಷಾಂತರ ಜನ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಇನ್ಸ್ಟಾಗ್ರಾಮ್‌ ಒಂದರಲ್ಲಿಯೇ ಈತನಿಗೆ 1.2 ಮಿಲಿಯನ್‌ ಫಾಲೋವರ್‌ಗಳಿದ್ದಾರೆ. 

 

ತಾನು ಈ ರೀತಿ ವಿಚಿತ್ರವಾಗಿ ಬದಲಾದುದರ ಬಗ್ಗೆ ಅಂಥೋಣಿ ಪ್ರತಿಕ್ರಿಯಿಸಿದ್ದು, ನನ್ನನ್ನು ನೋಡಿ ಪಾಸಿಟಿವ್ ಆಗಿ ಯೋಚಿಸುವವರಿಗಿಂತ ನೆಗೆಟೀವ್‌ ಆಗಿ ಯೋಚನೆ ಮಾಡುವವರೇ ಹೆಚ್ಚಾಗಿದ್ದಾರೆ. ನನ್ನನ್ನು ನೋಡಿ ಕಿರುಚಿಕೊಂಡ ಹಾಗೂ ಹೆದರಿ ಓಡಿ ಹೋದ ಜನರಿದ್ದಾರೆ. ಆದರೆ ನಾನು ಎಲ್ಲರಂತೆಯೇ ಓರ್ವ ಸಾಮಾನ್ಯ ಮನುಷ್ಯ. ಆದರೆ ಜನ ನನ್ನನ್ನು ಹುಚ್ಚನೆಂಬಂತೆ ಭಾವಿಸಿದ್ದಾರೆ. ಅಲ್ಲದೇ ನನ್ನ ಈ ರೂಪವನ್ನು ನೋಡಿ ಯಾರೂ ನನಗೆ ಉದ್ಯೋಗ ನೀಡಲು ಮುಂದೆ ಬರುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದಾನೆ.

ಅನ್ಯಗ್ರಹ ಜೀವಿ ಈ ನಾರಿ ನಿದ್ರೆ ಕದೀತಾವಂತೆ!

ಬಹುತೇಕ ಜನರಿಗೆ ತಮ್ಮ ಬಳಿ ಇರುವುದರ ಬಗ್ಗೆ ತೃಪ್ತಿ ಇಲ್ಲ. ಬೇರೆಯವರ ಬಳಿ ಇರುವುದರ ಮೇಲೆ ಇನ್ನಿಲ್ಲದ ಆಸೆ. ಇದು ಮನುಷ್ಯರ ಸಹಜ ಲಕ್ಷಣ. ಕೆಲವರು ಇದ್ದಿದ್ದರಲ್ಲೇ ಸುಖ ಪಡಲು ತೃಪ್ತಿ ಪಡಲು ಬಯಸಿದರೆ ಮತ್ತೆ ಕೆಲವರಿಗೆ ಇನ್ನೇನೋ ಪಡೆದುಕೊಳ್ಳುವ ಆಸೆ. ದೇವರು ಕೊಟ್ಟ ಸುಂದರವಾದ ಕೈ ಕಾಲುಗಳ ಮಲೆ ಅನೇಕರು ಅದನ್ನು ಇನ್ನಷ್ಟು ಚೆಂದಗಾಣಿಸಬೇಕೆಂಬ ಆಸೆಯಿಂದ ಟ್ಯಾಟೂ ಹಾಕಿಸಿಕೊಳ್ಳುತ್ತಾರೆ. ಸೊಗಸಾದ ಹುಬ್ಬುಗಳನ್ನು ಮತ್ತಷ್ಟು ಚೆಂದಗಾಣಿಸಲು ನೋವಾದರೂ ಅವುಗಳಿಗೆ ಶೇಪ್‌ ಕೊಡಿಸುತ್ತಾರೆ. ಸುರುಳಿ ಸುತ್ತಿದ ಗುಂಗುರು ಕೂದಲು ಹೊಂದಿರುವವರಿಗೆ ಸೂಜಿಯಂತೆ ನೇರವಾಗಿರುವ ಕೂದಲಿನ ಮೇಲಾಸೆ ನೇರವಾದ ರೇಷಿಮೆಯಂತಹ ಕೂದಲು ಹೊಂದಿರುವವರಿಗೆ ಗುಂಗುರು ಕೂದಲಿನ ಮೇಲಾಸೆ. ದಪ್ಪ ಇರುವವರಿಗೆ ಬಳಕುವ ಬಳ್ಳಿಯಾಗುವಾಸೆ, ಕೋಲಿನಂತಿರುವವರಿಗೆ ಗುಂಡು ಗುಂಡನೆ ದೇಹ ಹೊಂದುವ ಆಸೆ ಈ ಆಸೆಯೇ ಕೆಲವೊಮ್ಮೆ ಅನಾಹುತಕ್ಕೆ ಕಾರಣವಾಗುತ್ತದೆ.

‘ಏಲಿಯನ್ಸ್ ಭೂಮಿಗೆ ಬಂದಾಗಿದೆ, ಮಾನವ ಜನಾಂಗ ಆಪತ್ತಿನಲ್ಲಿದೆ’!

ಕೈಕಾಲು ದೇಹ ಸರಿ ಇದ್ದವರಿಗೆ ಕೆಲಸ ಸಿಗುವುದು ಕಷ್ಟ. ಅಂತಹದರಲ್ಲಿ ಈತ ದೇವರು ಕೊಟ್ಟಿದ್ದೆಲ್ಲವುಗಳಿಗೆ ಕತ್ತರಿ ಹಾಕಿ ಈಗ ನನಗೆ ಜನ ಕೆಲಸ ಕೊಡುತ್ತಿಲ್ಲ ಎಂದರೆ ಏನು ಮಾಡೋಣ ಹೇಳಿ. ಕೈಕಾಲು ಸರಿ ಇಲ್ಲದವರೇ ತಮ್ಮ ಅಂಗವೈಕಲ್ಯತೆಯನ್ನು ಮೆಟ್ಟಿನಿಂತು ಬದುಕು ಕಟ್ಟಿಕೊಂಡ ಅನೇಕರು ನಮ್ಮ ನಡುವೆ ಇದ್ದಾರೆ. ಆದರೆ ಈತ ಸರಿಯಾಗಿಯೇ ಇದ್ದ ತನ್ನ ಅಂಗಗಳಿಗೆ ಕತ್ತರಿ ಹಾಕಿ ಈಗ ಗೋಳಾಡುತ್ತಿದ್ದಾನೆ. ಪ್ರಪಂಚದಲ್ಲಿ ಎಂತೆಂಥಾ ಜನರಿರುತ್ತಾರೆ ನೋಡಿ. ಇವರಿಗೆಲ್ಲಾ ಏನು ಹೇಳಬೇಕು ದೇವರೇ ಬಲ್ಲ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಜಪಾನ್‌ನಲ್ಲಿ 7.5 ತೀವ್ರತೆಯ ಭೂಕಂಪ: ಧರಣಿ ಗರ ಗರನೇ ತಿರುಗಿದ ಕ್ಷಣದ ವೀಡಿಯೋಗಳು ವೈರಲ್
ವಿಯೆಟ್ನಾಂ ಇಂಡಿಯಾ ಇಂಟರ್​ನ್ಯಾಷನಲ್ ಬ್ಯುಸಿನೆಸ್​ ಕಾನ್​ಕ್ಲೇವ್: ಕರುನಾಡಿನ 29 ಗಣ್ಯರಿಗೆ ಪ್ರಶಸ್ತಿ ಪ್ರದಾನ