ಪಾಕ್ ಪ್ರಧಾನಿ ಶೆಹಬಾಜ್ - ಇಮ್ರಾನ್ ಖಾನ್ ನಡುವೆ ಟ್ವಿಟ್ಟರ್‌ ವಾರ್

By BK AshwinFirst Published Jul 24, 2022, 11:04 AM IST
Highlights

ಪಾಕ್‌ ಪ್ರಧಾನಿ ಶೆಹಬಾಜ್‌ ಹಾಗೂ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ನಡುವೆ ಟ್ವಿಟ್ಟರ್‌ ವಾರ್‌ ಏರ್ಪಟ್ಟಿದೆ. ಪಾಕ್‌ ಸರ್ಕಾರದ ಸಾಲ ತೀರಿಸಲು ಆಗದೆ ವಿದೇಶಗಳಿಗೆ ಆಸ್ತಿ ಮಾರಾಟ ಮಾಡುವ ಕುರಿತು ಸರ್ಕಾರ ಕೈಗೊಂಡಿರುವ ನಿರ್ಧಾರದ ವಿರುದ್ಧ ಪಿಟಿಐ ಮುಖ್ಯಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಮತ್ತು ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಮುಖ್ಯಸ್ಥ ಇಮ್ರಾನ್ ಖಾನ್ ನಡುವೆ ಟ್ವಿಟ್ಟರ್‌ನಲ್ಲಿ ಮಾತಿನ ಸಮರ ಏರ್ಪಟ್ಟಿದೆ. ಪಾಕಿಸ್ತಾನ ಸರ್ಕಾರ ಚೀನಾ ಸೇರಿ ಇತರೆ ದೇಶಗಳಿಂದ ಸಿಕ್ಕಾಪಟ್ಟೆ ಸಾಲ ಮಾಡಿದ್ದು, ಇದನ್ನು ತೀರಿಸಲು ಪರದಾಡುತ್ತಿದೆ. ಈ ವಿಚಾರದಲ್ಲಿ ಪಾಕಿಸ್ತಾನದ ಪ್ರಸ್ತುತ ಪ್ರಧಾನಿ ಹಾಗೂ ಮಾಜಿ ಪ್ರಧಾನಿ ವಿರುದ್ಧ ಟ್ವಿಟ್ಟರ್‌ ವಾರ್‌ ಏರ್ಪಟ್ಟಿದೆ.

ಸಾಲ ತೀರಿಸಲು ಆಗದೆ ಪರದಾಡುತ್ತಿರುವ ಪಾಕಿಸ್ತಾನ ಸರ್ಕಾರ ಬೃಹತ್‌ ಮೊತ್ತದ ಸಾಲವನ್ನು ತೀರಿಸಲು ಆಗದೆ ದಿವಾಳಿಯಾಗುವುದನ್ನು ತಪ್ಪಿಸಲು ವಿದೇಶಗಳಿಗೆ ಆಸ್ತಿಗಳನ್ನು ಮಾರಾಟ ಮಾಡುವ ಎಲ್ಲಾ ಕಾರ್ಯವಿಧಾನದಲ್ಲಿ ನಿಯಮ ಸಡಿಲಿಕೆ ಮಾಡುವ ವಿಷಯದ ಕುರಿತು ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಮತ್ತು ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಮುಖ್ಯಸ್ಥ ಇಮ್ರಾನ್ ಖಾನ್ ನಡುವೆ ಶನಿವಾರ ಟ್ವಿಟ್ಟರ್‌ನಲ್ಲಿ ಸಮರ ನಡೆದಿದೆ. 

ಲಂಕಾ ಅಲ್ಲ ಇನ್ನೂ ಒಂದು ಡಜನ್ ದೇಶದಲ್ಲಿ ಆರ್ಥಿಕ ಜ್ವಾಲಾಮುಖಿ ಸ್ಫೋಟ!

ಈ ಸಂಬಂಧ ಪಾಕ್‌ ಸರ್ಕಾರ ಕ್ಯಾಬಿನೆಟ್ ಸುಗ್ರೀವಾಜ್ಞೆಯನ್ನು ಅನುಮೋದಿಸಿದ ಬಳಿಕ ರಾಷ್ಟ್ರೀಯ ಆಸ್ತಿಗಳ ಮಾರಾಟಕ್ಕಾಗಿ "ಆಮದು ಮಾಡಿಕೊಂಡ ಸರ್ಕಾರದ" ವಿಶ್ವಾಸಾರ್ಹತೆಯನ್ನು ಪಾಕ್‌ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಟ್ವಿಟ್ಟರ್‌ನಲ್ಲಿ ಪ್ರಶ್ನಿಸಿದ್ದಾರೆ ಎಂದು ಜಿಯೋ ನ್ಯೂಸ್ ವರದಿ ಮಾಡಿದೆ.
 
"ಅಮೆರಿಕದ ಪಿತೂರಿಯ ಮೂಲಕ ಅಧಿಕಾರಕ್ಕೆ ಬಂದ ಆಮದು ಮಾಡಿಕೊಂಡ ಸರ್ಕಾರವು ಮಾಡುವ ರಾಷ್ಟ್ರೀಯ ಆಸ್ತಿಗಳ ಮಾರಾಟವನ್ನು ಹೇಗೆ ನಂಬಬಹುದು? ಅದರಲ್ಲೂ, ಎಲ್ಲಾ ಕಾರ್ಯವಿಧಾನದ (ಮತ್ತು) ಕಾನೂನು ತಪಾಸಣೆಗಳ ನಿಯಮ ಸಡಿಲಿಕೆ ಮಾಡುವುದನ್ನು ಹೇಗೆ ನಂಬುವುದು" ಹಾಗೂ, ಅಪರಾಧ ಮಂತ್ರಿ ನೇತೃತ್ವದ ಕುಟುಂಬ (ಪಿಪಿಪಿ ಸಹ-ಅಧ್ಯಕ್ಷ ಆಸಿಫ್ ಅಲಿ) ಜರ್ದಾರಿ ಅವರ ಜತೆಗೆ ಭ್ರಷ್ಟಾಚಾರದ ಸಂಪುಟಗಳನ್ನು ಬರೆದಿದೆ’’ ಎಂದೂ ಇಮ್ರಾನ್‌ ಖಾನ್‌ ಪಾಕ್‌ ಪ್ರಧಾನಿ ಶೆಹಬಾಜ್‌ ಷರೀಫ್‌ರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ವಿದೇಶಗಳಿಗೆ ರಾಜ್ಯದ ಆಸ್ತಿಗಳ ತುರ್ತು ಮಾರಾಟದ ಮೂಲಕ ದೇಶವನ್ನು ದಿವಾಳಿಯನ್ನಾಗಿಸುವ ಪರಿಸ್ಥಿತಿಯಿಂದ ರಕ್ಷಿಸುವ ಹತಾಶ ಕ್ರಮದಲ್ಲಿ 6 ಸಂಬಂಧಿತ ಕಾನೂನುಗಳ ಅನ್ವಯಿಕೆ ಸೇರಿದಂತೆ ನಿಯಂತ್ರಕ ಪರಿಶೀಲನೆಗಳನ್ನು ಪಾಕಿಸ್ತಾನದ ಕ್ಯಾಬಿನೆಟ್ ರದ್ದುಗೊಳಿಸಿದೆ ಎಂದು ದಿ ಎಕ್ಸ್‌ಪ್ರೆಸ್ ಟ್ರಿಬ್ಯೂನ್ ವರದಿ ಮಾಡಿದೆ.

30 ವರ್ಷಗಳಿಂದ ಪಾಕ್‌ ಲೂಟಿ
ಕಳೆದ 30 ವರ್ಷಗಳಿಂದ ಶೆಹಬಾಜ್‌ ಷರೀಫ್‌ ಅವರ ಕುಟುಂಬ ಪಾಕಿಸ್ತಾನವನ್ನು ಲೂಟಿ ಮಾಡುತ್ತಿದೆ ಮತ್ತು ಪ್ರಸ್ತುತ ಆರ್ಥಿಕ ಕುಸಿತಕ್ಕೆ ಇವರೇ ಕಾರಣವೆಂದೂ ಪಾಕ್‌ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಆರೋಪಿಸಿದ್ದಾರೆ. 

"ಈ ಕಳ್ಳರು ನಮ್ಮ ರಾಷ್ಟ್ರೀಯ ಸ್ವತ್ತುಗಳನ್ನು ಮೋಸದ ರೀತಿಯಲ್ಲಿ ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದು, ಅದನ್ನು ಎಂದಿಗೂ ಅನುಮತಿಸಬಾರದು. ನಮ್ಮ ರಾಷ್ಟ್ರೀಯ ಆಸ್ತಿಗಳೊಂದಿಗೆ ರಾಷ್ಟ್ರವು ಅವರನ್ನು ಎಂದಿಗೂ ನಂಬುವುದಿಲ್ಲ" ಎಂದು ಇಮ್ರಾನ್‌ ಖಾನ್‌ ಬರೆದಿದ್ದಾರೆ.

ಪಾಕ್‌ ಗೂಢಚಾರಿ ಪತ್ರಕರ್ತನ ಜತೆ ಅನ್ಸಾರಿ ಫೋಟೋ!

ಇಮ್ರಾನ್‌ ಖಾನ್‌ಗೆ ಶೆಹಬಾಜ್‌ ತಿರುಗೇಟು
ಈ ಮಧ್ಯೆ, ಪಿಟಿಐ ಅಧ್ಯಕ್ಷರ ಟ್ವೀಟ್‌ಗಳಿಗೆ ಉತ್ತರಿಸಿದ ಪ್ರಧಾನಿ ಶೆಹಬಾಜ್ ಅವರು ‘’(ಇಮ್ರಾನ್‌ ಖಾನ್‌) ನೆನಪಿನ ನಷ್ಟದಿಂದ ಬಳಲುತ್ತಿದ್ದಾರೆ ಮತ್ತು ಕೆಲವು ಜ್ಞಾಪನೆಗಳ ಅಗತ್ಯವಿದೆ" ಎಂದು ಹೇಳಿರುವ ಬಗ್ಗೆ ಪಾಕಿಸ್ತಾನದ ಜಿಯೋ ನ್ಯೂಸ್ ವರದಿ ಮಾಡಿದೆ.

ನಾಲ್ಕು ಅಂಶಗಳ ತಿರುಗೇಟು..!
ಇನ್ನೊಂದೆಡೆ, 4 ಅಂಶಗಳ ಮೂಲಕ ಇಮ್ರಾನ್‌ ಖಾನ್‌ ವಿರುದ್ಧ ಶೆಹಬಾಜ್‌ ತಿರುಗೇಟು ನೀಡಿದ್ದಾರೆ. 

ಟ್ರಾನ್ಸ್‌ಪರೆನ್ಸಿ ಇಂಟರ್‌ನ್ಯಾಷನಲ್ ವರದಿಯ ಪ್ರಕಾರ, ಅವರ ಆಡಳಿತದಲ್ಲಿ ಭ್ರಷ್ಟಾಚಾರ ಹೆಚ್ಚಾಯಿತು. ದೊಡ್ಡ ಹಗರಣಗಳ ಜೊತೆಗೆ ವರ್ಗಾವಣೆಗಳು/ಪೋಸ್ಟಿಂಗ್‌ಗಳು ಸಹ ಮಾರಾಟವಾಗಿವೆ" ಎಂದು ಪ್ರಧಾನಿ ಶೆಹಬಾಜ್‌ ತಿರುಗೇಟು ನೀಡಿದ್ದಾರೆ. "ಅವರು ಆರ್ಥಿಕತೆಯನ್ನು ಹೇಗೆ ತಪ್ಪಾಗಿ ನಿರ್ವಹಿಸಿದರು ಎಂಬುದಕ್ಕೆ ಜನರು ಬೆಲೆ ತೆರುತ್ತಿದ್ದಾರೆ" ಎಂದೂ ಪಾಕ್‌ ಪ್ರಧಾನಿ ಹೇಳಿದ್ದಾರೆ.

ಇನ್ನು, ಮೂರನೇ ಅಂಶವನ್ನು ಎತ್ತಿ ತೋರಿಸುತ್ತಾ, ಇಮ್ರಾನ್‌ ಖಾನ್ ಅವರು ದೇಶದ ಜಾಗತಿಕ ಪ್ರತಿಷ್ಠೆ ಮತ್ತು ನಿಲುವು ಹಾಗೂ ಸ್ನೇಹಪರ ದೇಶಗಳೊಂದಿಗಿನ ಸಂಬಂಧವನ್ನು "ಆಳವಾಗಿ ಘಾಸಿಗೊಳಿಸಿದ್ದಾರೆ" ಎಂದು ಶೆಷಬಾಜ್‌ ಆರೋಪಿಸಿದ್ದಾರೆಂದು ಜಿಯೋ ನ್ಯೂಸ್ ವರದಿ ಮಾಡಿದೆ.

"ಅವರು ಅಧಿಕಾರದ ಲಾಲಸೆಯಲ್ಲಿ ಸಮತೋಲನದ ಅರ್ಥವನ್ನು ಕಳೆದುಕೊಂಡಿದ್ದಾರೆ, ಇದು ಸುಳ್ಳುಗಳಿಗೆ ಅವರ ಅಭ್ಯಾಸದ ಆಶ್ರಯದಿಂದ ಸಾಕ್ಷಿಯಾಗಿದೆ, ಪ್ರಚಾರ [ಮತ್ತು] ಸತ್ಯಗಳ ಅಸ್ಪಷ್ಟ ತಿರುಚುವಿಕೆ" ಎಂದೂ ಪಾಕ್‌ ಪ್ರಧಾನಿ ಶೆಹಬಾಜ್‌ ಷರೀಫ್‌ ಟ್ವಿಟ್ಟರ್‌ನಲ್ಲಿ ಪಿಟಿಯ ಮುಖ್ಯಸ್ಥ ಇಮ್ರಾನ್‌ ಖಾನ್‌ಗೆ ತಿರುಗೇಟು ನೀಡಿದ್ದಾರೆ. 

click me!