ವ್ಯಕ್ತಿಯ ತಲೆಯಲ್ಲರಳಿದ ಡೊನಾಲ್ಡ್‌ ಟ್ರಂಪ್‌: ವಿಡಿಯೋ

Published : Mar 30, 2022, 11:41 AM IST
ವ್ಯಕ್ತಿಯ ತಲೆಯಲ್ಲರಳಿದ ಡೊನಾಲ್ಡ್‌ ಟ್ರಂಪ್‌: ವಿಡಿಯೋ

ಸಾರಾಂಶ

ಅಮೆರಿಕಾ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ತಲೆಯಲ್ಲಿ ಟ್ರಂಪ್ ಚಿತ್ರಿಸಿಕೊಂಡ ವ್ಯಕ್ತಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್  

ನ್ಯೂಯಾರ್ಕ್‌(ಮಾ.30) ಅಮೆರಿಕಾ ಮಾಜಿ ಅಧ್ಯಕ್ಷ (former US President) ಡೊನಾಲ್ಡ್‌ ಟ್ರಂಪ್ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ. ಈಗ ನಾವು ಹೇಳುತ್ತಿರುವ ವಿಚಾರ ಡೊನಾಲ್ಡ್ ಟ್ರಂಪ್ ಬಗೆಗಲ್ಲ ಆತನ ಹುಚ್ಚು ಅಭಿಮಾನಿಯ ಬಗ್ಗೆ. ಹೌದು ವ್ಯಕ್ತಿಯೊಬ್ಬ ತನ್ನ ತಲೆಯಲ್ಲಿ ಡೊನಾಲ್ಡ್ ಟ್ರಂಪ್‌ ಕಾಣಿಸುವಂತೆ ಕೇಶ ವಿನ್ಯಾಸ ಮಾಡಿಕೊಂಡಿದ್ದು, ಅದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವ್ಯಕ್ತಿಯ ತಲೆಯ ಹಿಂಭಾಗದಲ್ಲಿ ಹೀಗೆ ಡೊನಾಲ್ಡ್ ಟ್ರಂಪ್‌ನ್ನು ಚಿತ್ರಿಸಲಾಗಿದೆ. 

ಡೊನಾಲ್ಡ್ ಟ್ರಂಪ್  ಅಮೆರಿಕಾದ ಅಧ್ಯಕ್ಷ ಪದವಿಯಿಂದ ಕೆಳಗಿಳಿದಿರಬಹುದು. ಆದರೆ ಅವರ ಅನುಯಾಯಿಗಳು ಮಾತ್ರ ಅವರನ್ನು ಇಂದಿಗೂ ಪ್ರೀತಿಸುತ್ತಾರೆ. ಮಾಜಿ ಅಮೆರಿಕಾ ಅಧ್ಯಕ್ಷರ ಅಂತಹ ಕಟ್ಟಾ ಅಭಿಮಾನಿಯೊಬ್ಬ ತಲೆಯಲ್ಲಿ ಡೊನಾಲ್ಡ್‌ ಟ್ರಂಪ್‌ (Donald Trump) ಅವರನ್ನು ಕೆತ್ತಿಸಿಕೊಂಡಿದ್ದಾನೆ.  ವಿಡಿಯೋದಲ್ಲಿ ಕ್ಷೌರಿಕನೊಬ್ಬ ವ್ಯಕ್ತಿಯ ತಲೆ ಹಿಂಭಾಗದಲ್ಲಿ ತನ್ನ ಪ್ರೊ ಮೆಗಾ ಕೇಶವಿನ್ಯಾಸದ ಅಂತಿಮ ಸ್ಪರ್ಶವನ್ನು ಎಚ್ಚರಿಕೆಯಿಂದ ಪೂರ್ಣಗೊಳಿಸುತ್ತಿರುವುದನ್ನು ಕಾಣಬಹುದು.

ಈ ವೀಡಿಯೊ ವೈರಲ್ ಆಗಿದ್ದು, ಕೆಲವರು ಈ ರೀತಿ ಮಾಡಿಸಿಕೊಂಡ ವ್ಯಕ್ತಿಯನ್ನು ಹೊಗಳಿದ್ದಾರೆ. ಆದರೆ ಹೆಚ್ಚಿನ ಜನರು ಆತನನ್ನು ಟ್ರೋಲ್ ಮಾಡಿದ್ದಾರೆ. ನನ್ನ ಪ್ರಕಾರ ಇದು ದೇಶಭಕ್ತಿ ಮತ್ತು ಅಸಹ್ಯಕರವಾಗಿದೆ ಎಂದು ಕಾಮೆಂಟ್ ಮಾಡಿದ್ದಾರೆ.

ಟ್ರಂಪ್ ಅಮೆರಿಕಾ ಅಧ್ಯಕ್ಷರಾಗಿದ್ದಾಗ ಅವರ ಸಾಂಪ್ರದಾಯಿಕ ಕೇಶವಿನ್ಯಾಸವನ್ನು (hairstyle) ನಕಲಿ ಮಾಡಲು ಅನೇಕರು ಪ್ರಯತ್ನಿಸಿದ್ದರು. ವಿಯೆಟ್ನಾಂ (Vietnam) ಕೇಶ ವಿನ್ಯಾಸಕಿ ಲೆ ಟುವಾನ್ ಡುವಾಂಗ್ (Le Tuan Duong) ಅವರು ಟ್ರಂಪ್ ಅವರ ಕೇಶವಿನ್ಯಾಸದ ಬೇಡಿಕೆಯನ್ನು ಅರಿತುಕೊಂಡು  ಹನೋಯಿಯಲ್ಲಿ (Hanoi) ಉದ್ಯಮವನ್ನು ಕೂಡ ಆರಂಭಿಸಿದ್ದರು.

ಡೊನಾಲ್ಡ್‌ ಟ್ರಂಪ್‌ಗೆ ನೀಡಿದ್ದ ಕೊರೋನಾ ಔಷಧ ಇದೀಗ ಭಾರತದಲ್ಲಿ: ದರ 59,750 ರು.!

ಕಳೆದ ವರ್ಷ ಅಮೆರಿಕಾ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಹೊಸ ಸಾಮಾಜಿಕ ಜಾಲತಾಣ ಆ್ಯಪ್‌ (Social Media App) ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಹ್ಯಾಕ್‌(Hack) ಆಗಿದೆ ಎಂದು ವರದಿಯಾಗಿತ್ತು. ಟ್ವೀಟರ್‌ ಮತ್ತು ಇತರ ಸಾಮಾಜಿಕ ಜಾಲತಾಣ ದೈತ್ಯ ಕಂಪನಿಗಳಿಗೆ ಸೆಡ್ಡು ಹೊಡೆಯಲು  ಟ್ರಂಪ್‌ ತಮ್ಮದೇ ಆದ ಹೊಸ ಸಾಮಾಜಿಕ ಜಾಲತಾಣ ಟ್ರುತ್‌ ಸೋಷಿಯಲ್‌ (Truth Social) ಆರಂಭಿಸುವುದಾಗಿ ತಿಳಿಸಿದ್ದರು. ಆದರೆ ಈಗ ಯೆನೋನಿಮಸ್‌ (Anonymous) ಎಂಬ ಹ್ಯಾಕರ್‌ಗಳು ಈ ಆ್ಯಪ್‌ನ್ನು ಹ್ಯಾಕ್‌ ಮಾಡಿದ್ದು ನಕಲಿ ಖಾತೆಗಳನ್ನು(Fake accounts) ತೆರೆದಿದ್ದಾರೆ.

ಟ್ರುತ್‌ ಸೋಷಿಯಲ್‌ ಆಗ ಅಧಿಕೃತವಾಗಿ ಬಿಡುಗಡೆಯಾಗಿರಲಿಲ್ಲ. ಪರಿಕ್ಷಾರ್ಥವಾಗಿ ಆ್ಯಪ್‌ನ ಬೀಟಾ ವರ್ಷನ್‌ (Beta Version)  ಲಭ್ಯವಿತ್ತು. ಇದನ್ನೇ ಬಂಡವಾಳ ಮಾಡಿಕೊಂಡ ಹ್ಯಾಕರ್ಸ್‌ ಆ್ಯಪ್‌ನ  ಆ್ಯಕ್ಸಸ್‌ (Access) ಪಡೆದುಕೊಂಡಿದ್ದಾರೆ. ಆ್ಯಪ್‌ನಲ್ಲಿ 'donaldjtrump' ಮತ್ತು 'mikepence' ಎಂಬ ಹೆಸರಿನಲ್ಲಿ ಖಾತೆಗಳನ್ನು ತೆರೆಯಲಾಗಿದೆ. ಅಲ್ಲದೇ ಹಂದಿಯೊಂದು ಮಲವಿಸರ್ಜನೆ ಮಾಡುತ್ತಿರುವ ಪೋಟೋವನ್ನು donaldjtrump ಖಾತೆಯಿಂದ ಪೋಸ್ಟ್‌ ಮಾಡಲಾಗಿದೆ. 

ಟ್ರಂಪ್‌ ಟ್ವೀಟರ್‌ ಖಾತೆ ರದ್ದತಿ ಹಿಂದೆ ಭಾರತೀಯೆ!

ಯೆನೋನಿಮಸ್‌ ಕಂಪನಿಯ ಸಂಸ್ಥಾಪಕರಲ್ಲಿ ಒಬ್ಬರಾದ Aubrey Cottle 'ಆ್ಯಪಲ್‌ ಸ್ಟೋರ್‌ನಲ್ಲಿ (Apple store) ಗ್ರಾಹಕರಿಗಾಗಿ ಲಭ್ಯವಿರುವ ಆ್ಯಪ್‌ ಮೂಲಕ ನಾವು ಹ್ಯಾಕ್‌ ಮಾಡಿದ್ದೇವೆ ಎಂದು ಹೇಳಿದ್ದಾರೆ.  ಜತೆಗೆ ಆ್ಯಪ್‌ಗೆ sing-up ಆಗಲು ಸಹಾಯ ಮಾಡುವ ಲಿಂಕ್‌ವೊಂದನ್ನು ತನ್ನ ಟ್ವೀಟರ್‌ ಖಾತೆಯಲ್ಲಿ ಶೇರ್‌ ಮಾಡಿದ್ದು ಇದರಿಂದ ಜನರು ಸುಲಭವಾಗಿ ಆ್ಯಪ್‌ ಬಳಕೆ ಮಾಡಿದ್ದಾರೆ ಎಂದು ಹೇಳಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಆಕಾಶಕ್ಕೇ ಕನ್ನಡಿ ಹಾಕಿ ರಾತ್ರಿಗೆ ಗುಡ್‌ ಬೈ ಸಾಹಸ!
PUBG ಗೇಮ್​ನಿಂದ 6ನೇ ಮಗುವಿನತ್ತ ಪಯಣ: ಅಕ್ರಮವಾಗಿ ಭಾರತಕ್ಕೆ ಬಂದಿದ್ದಾಕೆ ಮತ್ತೊಮ್ಮೆ ಗರ್ಭಿಣಿ!