ಬ್ಯಾಲೆನ್ಸಿಂಗ್ ಅಥವಾ ಸಮತೋಲನ ಸಾಧಿಸುವುದು ಸುಲಭದ ಕೆಲಸವಲ್ಲ. ಅದಕ್ಕೆ ಸಾಕಷ್ಟು ಏಕಾಗೃತೆ ಹಾಗೂ ಶ್ರಮ ಬೇಕು. ಸೈಕಲ್ ತುಳಿದುಕೊಂಡು ತಲೆ ಮೇಲೊಂದು ಗಂಟು ಇಟ್ಟುಕೊಂಡುಸಾಗುವುದು ತುಂಬಾ ಕಷ್ಟದ ಕೆಲಸ. ಅದೇ ಕಾರಣಕ್ಕೆ ಅಮೆರಿಕಾದ ಸೈಕ್ಲಿಶ್ಟ್ ಓರ್ವನ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಬ್ಯಾಲೆನ್ಸಿಂಗ್ ಅಥವಾ ಸಮತೋಲನ ಸಾಧಿಸುವುದು ಸುಲಭದ ಕೆಲಸವಲ್ಲ. ಅದಕ್ಕೆ ಸಾಕಷ್ಟು ಏಕಾಗೃತೆ ಹಾಗೂ ಶ್ರಮ ಬೇಕು. ಸೈಕಲ್ ತುಳಿದುಕೊಂಡು ತಲೆ ಮೇಲೊಂದು ಗಂಟು ಇಟ್ಟುಕೊಂಡುಸಾಗುವುದು ತುಂಬಾ ಕಷ್ಟದ ಕೆಲಸ. ಅದೇ ಕಾರಣಕ್ಕೆ ಅಮೆರಿಕಾದ ಸೈಕ್ಲಿಶ್ಟ್ ಓರ್ವನ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ನ್ಯೂಯಾರ್ಕ್ (New York) ರಸ್ತೆಗಳಲ್ಲಿ ಸೈಕಲ್ ತುಳಿಯುತ್ತಾ ಬ್ಯಾಲೆನ್ಸ್ ಮಾಡುವ ಸೈಕಲ್ ಸವಾರನ ವಿಡಿಯೋ ಇದಾಗಿದೆ. ವಿಡಿಯೋದಲ್ಲಿ ಕಾಣಿಸುವಂತೆ ವ್ಯಕ್ತಿಯೋರ್ವ ತಲೆಮೇಲೆ ಸೂಟ್‌ಕೇಸ್ ಇರಿಸಿಕೊಂಡು ಸೈಕಲ್ ತುಳಿಯುತ್ತಿದ್ದಾನೆ. ಈತನ ಬ್ಯಾಲೆನ್ಸ್ (balancing) ಯಾವ ರೀತಿ ಇದೇ ಎಂದರೆ ತಲೆ ಮೇಲಿರುವ ಸೂಟ್‌ಕೇಸ್ (suitcase) ಸ್ವಲ್ಪವೂ ಅತ್ತಿತ್ತ ವಾಲುವುದಿಲ್ಲ. ನ್ಯೂಯಾರ್ಕ್‌ನ ಬ್ರೂಕ್ಲಿನ್ 5ನೇ ಆವೆನ್ಯೂ ರಸ್ತೆಯಲ್ಲಿ ರಸ್ತೆಯಲ್ಲಿ ಸೆರೆ ಹಿಡಿದು ವಿಡಿಯೋ ಇದಾಗಿದೆ. ಪ್ರಯಾಣದುದ್ದಕ್ಕೂ ಆತನ ತಲೆಯ ಮೇಲೆ ಸೂಟ್ಕೇಸ್ ಸಮತೋಲನ ಸಾಧಿಸುತ್ತದೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಪೋಸ್ಟ್ ಆದ ಬಳಿಕ 40 ಸಾವಿರಕ್ಕೂ ಹೆಚ್ಚು ಜನ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ.
Heavy load! This cyclist balances a suitcase on his head while traveling up Brooklyn’s 5th Avenue 🤯 pic.twitter.com/ndXdHxmd1f
— NowThis (@nowthisnews)ಕೆಲ ದಿನಗಳ ಹಿಂದೆ ಹಳ್ಳಿ ಹೈದನೊಬ್ಬನ ಅದ್ಭುತ ಬ್ಯಾಲೆನ್ಸಿಂಗ್ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಜೊತೆಗೆ ಈ ವಿಡಿಯೋ ಉದ್ಯಮಿ ಆನಂದ್ ಮಹೀಂದ್ರ ಅವರ ಗಮನವನ್ನು ಸೆಳೆದಿತ್ತು. ಯುವಕ ತಲೆಯ ಮೇಲೆ ದೊಡ್ಡದಾದ ಮೂಟೆಯೊಂದನ್ನು ಇರಿಸಿಕೊಂಡು ಹಲವು ತಿರುವುಗಳಿರುವ ಹಳ್ಳಿಯ ರಸ್ತೆಯಲ್ಲಿ ಸೈಕಲ್‌ನಲ್ಲಿ ಬರುತ್ತಾನೆ. ಸೈಕಲ್‌ನಲ್ಲಿ ಬರುವುದು ವಿಶೇಷವಲ್ಲ, ಆತ ಸೈಕಲ್‌ನ್ನು ಯಾವುದೇ ಕಾರಣಕ್ಕೂ ಕೈಗಳಲ್ಲಿ ಮುಟ್ಟುವುದಿಲ್ಲ. ಸೈಕಲ್‌ನ್ನು ತುಳಿಯುತ್ತಾ ಕಾಲಿನಲ್ಲೇ ಬ್ಯಾಲೆನ್ಸ್ ಮಾಡುತ್ತಾ ಬರುವ ಆತನ ಸ್ಟೈಲ್ ಎಂಥವರಿಗೂ ಒಂದು ಕ್ಷಣ ಸೋಜಿಗ ಉಂಟು ಮಾಡುತ್ತದೆ.
ಎಂಥಾ ಬ್ಯಾಲೆನ್ಸ್: ತಲೆ ಮೇಲೆ ದೊಡ್ಡ ಗಂಟು: ಸೈಕಲ್‌ನಲ್ಲಿ ಪಯಣ ಕೈ ಬಿಟ್ಟು
ಈ ವಿಡಿಯೋಗೆ ನೆಟ್ಟಿಗರು ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಈತನ ಸೈಕಲ್ ಹಿಂದೆ ಬೇರೆ ವಾಹನದಲ್ಲಿ ಬರುತ್ತಿರುವ ವ್ಯಕ್ತಿಯೊಬ್ಬರು ಈ ವಿಡಿಯೋವನ್ನು ಸರೆ ಹಿಡಿದಿದ್ದಾರೆ. ವಿಡಿಯೋದಲ್ಲಿ ಹಳ್ಳಿ ಕಡೆಯ ತಿರುವು ಮುರುವುಗಳಿರುವ ರಸ್ತೆಯಲ್ಲಿ ಆತ ಸಖತ್ ಆಗಿ ಬ್ಯಾಲೆನ್ಸ್ ಮಾಡುತ್ತಾನೆ. ಸಾಮಾನ್ಯವಾಗಿ ಬಹುತೇಕರಿಗೆ ತಲೆಯ ಮೇಲೆ ಮೂಟೆಯೊಂದನ್ನು ಇರಿಸಿಕೊಂಡು ನೆಲದ ಮೇಲೆ ನಡೆಯುವುದೇ ಕಷ್ಟವಾಗುವುದು. ಆದರೆ ಇಲ್ಲೊಬ್ಬ ತಲೆಯ ಮೇಲೆ ಮೂಟೆಯನ್ನು ಇರಿಸಿಕೊಂಡು ಸೈಕಲ್ ಹ್ಯಾಂಡಲ್ ಹಿಡಿಯದೇ ಅದನ್ನು ಬ್ಯಾಲೆನ್ಸ್ ಮಾಡುತ್ತಾ ವೇಗವಾಗಿ ಸಾಗುತ್ತಾನೆ.
Health Tips : ಒಂದೇ ಕಾಲಲ್ಲಿ ಬ್ಯಾಲೆನ್ಸ್ ಮಾಡೋಕಾಕ್ತಿಲ್ವಾ? ಎಚ್ಚರ
1971 ರ ಬಾಲಿವುಡ್ ಸಿನಿಮಾ ಅಂದಾಜ್ ಗಾಗಿ (Andaz) ಕಿಶೋರ್ ಕುಮಾರ್ (Kishore Kumar) ಹಾಡಿದ ಹಿಂದಿ ಹಾಡು ಜಿಂದಗಿ ಏಕ್ ಸಫರ್ ಹೈ ಸುಹಾನಾ ಹಾಡು ಈ ವಿಡಿಯೋದ ಹಿನ್ನೆಲೆಯಲ್ಲಿ ಕೇಳಿ ಬರುತ್ತಿದೆ. ಈ ಹಾಡು ವಿಡಿಯೋಗೆ ಮತ್ತಷ್ಟು ರಂಗು ನೀಡುತ್ತಿದೆ. ಮೂಲ ಹಾಡಿನಲ್ಲಿ ನಟರಾದ ರಾಜೇಶ್ ಖನ್ನಾ (Rajesh Khanna) ಮತ್ತು ಹೇಮಾ ಮಾಲಿನಿ (Hema Malini) ಮೋಟಾರು ಬೈಕ್‌ನಲ್ಲಿ (motorbike) ಸವಾರಿ ಮಾಡುವುದನ್ನು ನೋಡಬಹುದು.