ಇದ್ದಕ್ಕಿದ್ದಂತೆ ಅಕೌಂಟ್‌ಗೆ ಬಿತ್ತು ಕೋಟಿ ರೂ. ಸ್ಯಾಲರಿ: ಕೆಲಸಕ್ಕೆ ರಾಜೀನಾಮೆ ನೀಡಿ ಉದ್ಯೋಗಿ ಪರಾರಿ

By Anusha Kb  |  First Published Jun 29, 2022, 3:57 PM IST

ಒಂದು ತಿಂಗಳಲ್ಲಿ ಒಂದು ಸಾವಿರ ರೂಪಾಯಿ  ಹೆಚ್ಚು ಸಿಕ್ಕರೆ ನಾವು ಖುಷಿಯಲ್ಲಿ ಆಗಸದಲ್ಲಿ ಹಾರುತ್ತೇವೆ ಅಂತಹದಲ್ಲಿ ಒಂದೇ ತಿಂಗಳಲ್ಲಿ ನಿಮಗೆ  286 ಸಲ ಸ್ಯಾಲರಿ ಆದರೆ ನಿಮ್ಮ ಖುಷಿ ಹೇಗಿರುತ್ತೆ ಹೇಳಿ ಆಕಾಶಕ್ಕೆ ಏಣಿ ಹಾಕಿ ಹಾರಲು ಶುರು ಮಾಡೋದು ಸಾಮಾನ್ಯ. ಈಗ ಅದೇ ರೀತಿಯ ಘಟನೆ ಚಿಲಿ ದೇಶದಲ್ಲಿ ನಡೆದಿದೆ. 
 


ಒಂದು ತಿಂಗಳಲ್ಲಿ ಒಂದು ಸಾವಿರ ರೂಪಾಯಿ ರೂಪಾಯಿ ಹೆಚ್ಚು ಸಿಕ್ಕರೆ ನಾವು ಖುಷಿಯಲ್ಲಿ ಆಗಸಕ್ಕೆ ಹಾರುತ್ತೇವೆ ಅಂತಹದಲ್ಲಿ ಒಂದೇ ತಿಂಗಳಲ್ಲಿ ನಿಮಗೆ  286 ಸಲ ಸ್ಯಾಲರಿ ಆದರೆ ನಿಮ್ಮ ಖುಷಿ ಹೇಗಿರುತ್ತೆ ಹೇಳಿ ಆಕಾಶಕ್ಕೆ ಏಣಿ ಹಾಕಿ ಹಾರಲು ಶುರು ಮಾಡೋದು ಸಾಮಾನ್ಯ. ಈಗ ಅದೇ ರೀತಿಯ ಘಟನೆ ಚಿಲಿ ದೇಶದಲ್ಲಿ ನಡೆದಿದೆ. 

ಚಿಲಿ ದೇಶದ ಸಂಸ್ಥೆಯೊಂದು ಉದ್ಯೋಗಿಗೆ ಆಕಸ್ಮಿಕವಾಗಿ ಆತನ ಸಂಬಳದ 286 ಪಟ್ಟು ಹಣವನ್ನು ಆತನ ಖಾತೆಗೆ ಜಮೆ ಮಾಡಿದೆ. ಇದು ತಿಳಿದ ಬಳಿಕ ಸಂಸ್ಥೆ ಆತನಲ್ಲಿ ಹಣ ಹಿಂತಿರುಗಿಸುವಂತೆ ಮನವಿ ಮಾಡಿದೆ. ಆದರೆ ಹಣ ನೀಡುವುದಾಗಿ ಭರವಸೆ ನೀಡಿದ ಆತ ನಂತರ ಕೆಲಸಕ್ಕೆ ರಾಜೀನಾಮೆ ನೀಡಿ ನಾಪತ್ತೆಯಾಗಿದ್ದಾನೆ ಎಂದು ವರದಿಯಾಗಿದೆ. 

Tap to resize

Latest Videos

ಅಕ್ರಮ ನೇಮಕಾತಿ: ಶಿಕ್ಷಣ ಸಚಿವರ ಪುತ್ರಿಗೆ ಶಿಕ್ಷಕಿ ಹುದ್ದೆ: ಪೋಸ್ಟ್‌ ರದ್ದು, ಸ್ಯಾಲರಿ ಹಿಂದಿರುಗಿಸಲು ಕೋರ್ಟ್‌ ಆದೇಶ!


ನಾಪತ್ತೆಯಾದ ವ್ಯಕ್ತಿ ಚಿಲಿಯ ಕೋಲ್ಡ್ ಕಟ್‌ಗಳ ಅತಿದೊಡ್ಡ ಉತ್ಪಾದಕ ಸಂಸ್ಥೆಗಳಲ್ಲಿ ಒಂದಾದ ಕನ್ಸೋರ್ಸಿಯೊ ಇಂಡಸ್ಟ್ರಿಯಲ್ ಡಿ ಅಲಿಮೆಂಟೋಸ್ (ಸಿಯಾಲ್)ನಲ್ಲಿ ಕೆಲಸ ಮಾಡುತ್ತಿದ್ದರು. ಕಂಪನಿಯು ಆಕಸ್ಮಿಕವಾಗಿ ಈ ಉದ್ಯೋಗಿಗೆ ಆತನ ಸಂಬಳವಾಗಿದ್ದ  500,000 ಪೆಸೊಗಳ (ರೂ. 43,000) ಬದಲು 165,398,851 ಚಿಲಿಯ ಪೆಸೊಗಳನ್ನು(ಚಿಲಿಯ ಕರೆನ್ಸಿ)(Chilean pesos) (ರೂ 1.42 ಕೋಟಿ ಭಾರತೀಯ ರೂಪಾಯಿ) ಪಾವತಿಸಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ನಂತರ ಕಂಪನಿಗೆ ಈ ತಪ್ಪು ಹಣ ವರ್ಗಾವಣೆ ಗಮನಕ್ಕೆ ಬಂದಿದ್ದು, ಕಂಪನಿಯ ಆಡಳಿತ ಮಂಡಳಿಯು ಉದ್ಯೋಗಿಯ ದಾಖಲೆಗಳನ್ನು ಪರಿಶೀಲಿಸಿತು ಮತ್ತು ಉದ್ಯೋಗಿಗೆ ಅವರ ಮಾಸಿಕ ವೇತನದ ಸುಮಾರು 286 ಪಟ್ಟು ಹೆಚ್ಚು ಪಾವತಿಸಲಾಗಿದೆ ಎಂಬುದನ್ನು ದೃಢಪಡಿಸಿತು. ನಂತರ ಹೆಚ್ಚುವರಿಯಾಗಿ ಪಾವತಿಸಿದ ಹಣವನ್ನು ಹಿಂದಿರುಗಿಸಲು ಉದ್ಯೋಗಿಯನ್ನು ಕೇಳಲಾಯಿತು.ಈ ವೇಳೆ ಉದ್ಯೋಗಿ ತನಗೆ ಹೆಚ್ಚುವರಿಯಾಗಿ ಪಾವತಿಸಿದ ಮೊತ್ತವನ್ನು ಹಿಂದಿರುಗಿಸಲು ತನ್ನ ಬ್ಯಾಂಕ್‌ಗೆ ಹೋಗಲು ಒಪ್ಪಿಕೊಂಡನು. ಆದಾಗ್ಯೂ ಆತ ಹಣವನ್ನು ಹಿಂದಿರುಗಿಸಲು ಬಯಸಲಿಲ್ಲ. 

ಪೋರ್ನ್‌ ವೀಕ್ಷಿಸಲು ಪ್ರತಿ ಗಂಟೆಗೆ 1,500 ರೂಪಾಯಿ, 90 ಮಂದಿ ಹಿಂದಿಕ್ಕಿ ಕೆಲಸ ಗಿಟ್ಟಿಸಿದ ಯುವತಿ!
 

ಈ ಮಧ್ಯೆ ಬ್ಯಾಂಕ್‌ನಿಂದ ಯಾವುದೇ ಮರುಪಾವತಿ ಅಧಿಸೂಚನೆ (refund notification) ಬಾರದೇ ಇದ್ದಾಗ ಸಂಸ್ಥೆಯ ಆಡಳಿತ ಮಂಡಳಿ ತಮ್ಮ ಉದ್ಯೋಗಿಯನ್ನು ಮತ್ತೆ ಸಂಪರ್ಕಿಸಲು ಯತ್ನಿಸಿದರು. ಆದರೆ ತನ್ನ ಉದ್ಯೋಗದಾತರ ಕರೆ ಅಥವಾ ಸಂದೇಶ ಸ್ವೀಕರಿಸಲು ಆತ ಮುಂದಾಗಿಲ್ಲ. ಆದರೆ ನಂತರದಲ್ಲಿ ಫೋನ್ ಸಂಪರ್ಕಕ್ಕೆ ಸಿಕ್ಕಿದ ಆತ ತಾನು ಸಂಪೂರ್ಣ ನಿದ್ದೆಗೆ ಜಾರಿದ್ದೆ ಹಾಗೂ ಈಗ ಬ್ಯಾಂಕ್‌ಗೆ ಭೇಟಿ ನೀಡುವುದಾಗಿ ಹೇಳಿದ್ದಾನೆ. ಆದರೆ ನಂತರದಲ್ಲಿ ಆತ ತನ್ನ ಕೆಲಸಕ್ಕೆ ರಾಜೀನಾಮೆ(resignation) ನೀಡಿ ನಾಪತ್ತೆಯಾಗಿದ್ದಾನೆ ಎಂದು ತಿಳಿದು ಬಂದಿದೆ. 

ಇದಾದ ಬಳಿಕ ಕಂಪನಿಯೂ  ವ್ಯಕ್ತಿಗೆ ಆಕಸ್ಮಿಕವಾಗಿ ವರ್ಗಾವಣೆ ಮಾಡಿದ ಹಣವನ್ನು ಹಿಂಪಡೆಯಲು ವ್ಯಕ್ತಿಯ ವಿರುದ್ಧ ಕಾನೂನು ಕ್ರಮ (legal action) ಕೈಗೊಂಡಿದೆ ಎಂದು ತಿಳಿದು ಬಂದಿದೆ. 

click me!