
ಪುಟ್ಟ ಮಕ್ಕಳು ಅಡುಗೆ ಮಾಡುವ ಆಟವಾಡುವುದನ್ನು ನೀವು ನೋಡಿರಬಹುದು. ಬಾಲ್ಯದಲ್ಲಿ ನೀವು ಕೂಡ ತೆಂಗಿನಕಾಯಿಯ ಚಿಪ್ಪಿನಲ್ಲಿ ಮಣ್ಣು ತುಂಬಿಸಿ ಈರು ಮಿಕ್ಸ್ ಮಾಡಿ ಪುಟ್ಟ ಪುಟ್ಟ ಕಲ್ಲುಗಳನ್ನು ಜೋಡಿಸಿ ಒಲೆ ಹಾಕಿ ಅಡುಗೆಯಾಟವಾಡಿದ ನೆನಪು ಸಾಮಾನ್ಯವಾಗಿ 90-80ರ ದಶಕದ ಆಸುಪಾಸಿನಲ್ಲಿ ಜನಿಸಿದ ಮಕ್ಕಳಿಗೆ ಪಕ್ಕಾ ನೆನಪಿರುತ್ತೆ. ಆ ಜನರೇಷನ್ ಹಾಗೆ ಮಣ್ಣಿನಲ್ಲಿ ಅಡುಗೆಯಾಟವಾಡಿದರೆ ನಮ್ಮ ಈ ತಲೆಮಾರು ನಿಜವಾಗಿ ಅಡುಗೆ ಮಾಡುವಷ್ಟು ಮುಂದುವರೆದು ಬಿಟ್ಟಿದ್ದಾರೆ. ತಲೆಮಾರಿನಿಂದ ತಲೆಮಾರಿಗೆ ತಂತ್ರಜ್ಞಾನ ಅಧುನಿಕತೆ ಎಲ್ಲವೂ ಬದಲಾಗಿರುವುದರಿಂದ ಮಕ್ಕಳ ಆದ್ಯತೆಯೂ ಬದಲಾಗಿದೆ. ಸಾಮಾನ್ಯವಾಗಿ ಇತ್ತೀಚಿನ ಮಕ್ಕಳು ಬಹುತೇಕ ಸ್ಮಾರ್ಟ್‌ಫೋನ್‌ಗಳಲ್ಲಿ ವಿಡಿಯೋ ಗೇಮ್ ಆಡುತ್ತಾ ವಿಡಿಯೋ ನೋಡುತ್ತಾ ಅದನ್ನೇ ಆಟ ಎಂದುಕೊಂಡಿದ್ದಾರೆ. ಅವುಗಳ ನಡುವೆಯೂ ಇಲ್ಲೊಬ್ಬ ಬಾಲಕ ತುಂಬಾ ವಿಭಿನ್ನವಾಗಿ ನಿಂತಿದ್ದಾನೆ. ಏಕೆಂದರೆ ಈತ ತನಗೆಬೇಕಾದ ಆಹಾರವನ್ನು ತಾನೇ ತಯಾರಿಸಿ ತಿಂದಿದ್ದಾನೆ.
ಅಂದಹಾಗೆ ಮಗುವೊಂದು ಸ್ಯಾಂಡ್‌ವಿಚ್ ಮಾಡಿಕೊಂಡು ತಿನ್ನುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಫುಟ್ಟ ಬಾಲಕನ ನಳಪಾಕಕ್ಕೆ ನೆಟ್ಟಿಗರು ಮನಸೋತಿದ್ದಾರೆ. ವಿಡಿಯೋದಲ್ಲಿ ಕಾಣಿಸುವಂತೆ ಮುದ್ದಾದ ಮಗುವೊಂದು ಒಲೆ ಮೇಲೆ ಇರುವ ಕಾವಲಿಗೆ ಮೊಟ್ಟೆಯೊಂದನ್ನು ಒಡೆದು ಹಾಕಿಅದರ ಮೇಲೆ ಸಾಸ್ ಚೆಲ್ಲಿದ್ದಾನೆ. ಮತ್ತೊಂದು ಕಡೆ ಬ್ರೆಡ್ ತುಂಡನ್ನು ಕಾವಲಿಯಲ್ಲಿ ಇಟ್ಟು ಮುಚ್ಚಿ ಬೇಯಲು ಬಿಟ್ಟಿದ್ದಾನೆ. ಅದು ಒಂದು ಸೈಡ್ ಬೇಯುತ್ತಿದ್ದಂತೆ ಅದನ್ನು ಮತ್ತೊಂದು ಸೈಡ್‌ಗೆ ಮಗುಚಿ ಹಾಕಿ ಮುಚ್ಚಿಡುತ್ತಾನೆ. ಎರಡು ಕಡೆಯೂ ಬೆಂದ ನಂತರ ಆ ಬ್ರೆಡ್ ತುಂಡನ್ನು ಎರಡು ಭಾಗ ಮಾಡಿ ಅದರೊಳಗೆ ಮೊಟ್ಟೆಯ ತುಣುಕನ್ನು ಇಟ್ಟು ಮಡಚಿ ಬಿಸಿಬಿಸಿಯಾಗಿ ತಿನ್ನಲು ಶುರು ಮಾಡುತ್ತಾನೆ.
@TheFigen_ ಎಂಬ ಟ್ವಿಟ್ಟರ್ ಖಾತೆಯಿಂದ ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದ್ದು, 8 ಲಕ್ಷಕ್ಕೂ ಅಧಿಕ ಮಂದಿ ಈ ವಿಡಿಯೋವನ್ನು ವೀಕ್ಷಿಸಿ ಬಾಲಕನ ಪಾಕ ಪ್ರತಿಭೆಗೆ ಶಹಭಾಷ್ ಎಂದಿದ್ದಾರೆ. ಈ ಪುಟ್ಟ ಬಾಲಕನಿಗೆ ಎಳೆವೆಯಲ್ಲೇ ಅಡುಗೆ ಮಾಡುವ ಕಲೆ ಒಲಿದಿದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಅನೇಕರು ಈ ಬಾಲಕನನ್ನು ಕ್ಯೂಟ್ ಎಂದಿದ್ದಾರೆ.
Uttara Kannada: ಆಟದೊಂದಿಗೆ ಮಕ್ಕಳಿಗೆ ಪಾಠ ಮಾಡಲು ಬಂದ್ಲು ಪುಟಾಣಿ ರೋಬೋ ಶಿಕ್ಷಾ!
ನಮ್ಮಲೇ ಅನೇಕರಿಗೆ ಕತ್ತೆಯಷ್ಟು ವಯಸ್ಸಾದರೂ ಕನಿಷ್ಠ ಬಿಸಿನೀರು ಕಾಯಿಸಿಕೊಳ್ಳುವುದು ಹೇಗೆ, ಅನ್ನ ಮಾಡುವುದು ಹೇಗೆ ಎಂಬುದೇ ಗೊತ್ತಿರುವುದಿಲ್ಲ. ಬಹುತೇಕ ಅಮ್ಮಂದಿರು ನಮ್ಮ ಮಕ್ಕಳು ಯಾವ ಕೆಲಸದಲ್ಲೂ ನಮಗೆ ನೆರವಾಗುವುದಿಲ್ಲ. ಮೂರು ಹೊತ್ತು ಮೊಬೈಲ್ ಒತ್ತುತ್ತಾ ಕೂತಿರ್ತಾರೆ ಎಂದೆಲ್ಲಾ ದೂರುತಿರುವುದನ್ನು ಕೇಳಿರಬಹುದು. ಹೀಗಿರುವಾಗ ಈ ಪುಟ್ಟ ಬಾಲಕ ತನ್ನ ಆಹಾರವನ್ನು ತಾನೇ ತಯಾರಿಸಿ ತಿನ್ನುತ್ತಿರುವುದು ಮೆಚ್ಚಬೇಕಾದಂತಹ ವಿಚಾರ. ಇದೇ ರೀತಿ ಎಲ್ಲರೂ ಮಕ್ಕಳನ್ನು ಸ್ವತಂತ್ರರಾಗಿ ಸ್ವಾಭಿಮಾನಿಗಳಾಗಿ ತಮ್ಮ ಹೊಟ್ಟೆ ತುಂಬಲು ಪರರಿಗೆ ಅವಲಂಬಿತರಾಗದಂತೆ ಬೆಳೆಸಬೇಕಾಗಿದೆ.
ಆಟಿಕೆ ಜೊತೆ ಮಾತಲ್ಲಿ ಬ್ಯುಸಿಯಾದ ಪುಟಾಣಿ ಮತಿನ ಮಲ್ಲಿ: ವಿಡಿಯೋ ನೋಡಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ