7 ವರ್ಷದ ರಾಜಕುಮಾರ ಭೂತಾನ್‌ನ ಮೊದಲ ಡಿಜಿಟಲ್ ಪ್ರಜೆ

Published : Feb 23, 2023, 06:28 PM ISTUpdated : Feb 23, 2023, 06:29 PM IST
7 ವರ್ಷದ ರಾಜಕುಮಾರ ಭೂತಾನ್‌ನ ಮೊದಲ ಡಿಜಿಟಲ್ ಪ್ರಜೆ

ಸಾರಾಂಶ

ಭಾರತದ ನೆರೆಯ ಪುಟ್ಟ ದೇಶ ಭೂತಾನ್ ತನ್ನ ಡಿಜಿಟಲ್ ಮೂಲಸೌಕರ್ಯವನ್ನು ಆಧುನೀಕರಿಸುವತ್ತ ಹೆಜ್ಜೆ ಇಟ್ಟಿದ್ದು,  ಹಿಮಾಲಯ ತಪ್ಪಲಿನ ಈ ದೇಶವೂ ತನ್ನ ಮೊದಲ ಡಿಜಿಟಲ್ ಪ್ರಜೆಯನ್ನು ಘೋಷಿಸಿದೆ

ಭೂತಾನ್: ಭಾರತದ ನೆರೆಯ ಪುಟ್ಟ ದೇಶ ಭೂತಾನ್ ತನ್ನ ಡಿಜಿಟಲ್ ಮೂಲಸೌಕರ್ಯವನ್ನು ಆಧುನೀಕರಿಸುವತ್ತ ಹೆಜ್ಜೆ ಇಟ್ಟಿದ್ದು,  ಹಿಮಾಲಯ ತಪ್ಪಲಿನ ಈ ದೇಶವೂ ತನ್ನ ಮೊದಲ ಡಿಜಿಟಲ್ ಪ್ರಜೆಯನ್ನು ಘೋಷಿಸಿದೆ. ಸುದ್ದಿ ಸಂಸ್ಥೆ ಎಎನ್‌ಐ ಪ್ರಕಾರ, ನಮ್ಮಲ್ಲಿ ಆಧಾರ್ ಇರುವಂತೆ ಭೂತಾನ್‌ನಲ್ಲಿ  ನ್ಯಾಷನಲ್ ಡಿಜಿಟಲ್ ಐಡೆಂಟಿಟಿ (NDI) ಸ್ಥಾಪಿಸಲಾಗಿದ್ದು, ಅದರಂತೆ  NDI ಮಾಡಿಸಿದ ದೇಶದ  ಮೊದಲ ಪ್ರಜೆ ರಾಯಲ್ ಹೈನೆಸ್ ದಿ ಗ್ಯಾಲ್ಸೆ ಜಿಗ್ಮೆ ನಾಮ್ಗೈಲ್ ವಾಂಗ್‌ಚುಕ್ ಆಗಿದ್ದು, ಅವರೀಗ ಭೂತಾನ್‌ನ ಮೊದಲ ಡಿಜಿಟಲ್ ಪ್ರಜೆಯಾಗಿದ್ದಾರೆ. ಈ  ವ್ಯವಸ್ಥೆಯು NDI ವ್ಯವಸ್ಥೆಯೂ ಅಲ್ಲಿನ ನಾಗರಿಕರಿಗೆ ಅವರ ಗುರುತನ್ನು ಸಾಬೀತುಪಡಿಸಬಹುದಾದ ಸುರಕ್ಷಿತ ಮತ್ತು ಪರಿಶೀಲಿಸಬಹುದಾದ ಸಾಕ್ಷ್ಯಗಳನ್ನು ಒದಗಿಸಲು ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸುತ್ತದೆ.

ಭೂತಾನ್ ಎನ್‌ಡಿಐಯೂ ಸ್ವಯಂ ಸಾರ್ವಭೌಮ ಗುರುತಿನ ಮಾದರಿಯನ್ನು ಆಧರಿಸಿದೆ, ಇದು ವಿಕೇಂದ್ರೀಕೃತ ಗುರುತು (DID) ತಂತ್ರಜ್ಞಾನದಿಂದ ಒದಗಿಸಲಾದ ಚೌಕಟ್ಟಿನ ಮೇಲೆ ಅವಲಂಬಿತವಾಗಿದೆ. ಜನರು ತಮ್ಮ ವೈಯಕ್ತಿಕ ಮಾಹಿತಿಯ ಮೇಲೆ ಹೆಚ್ಚಿನ ನಿಯಂತ್ರಣವನ್ನು ಹೊಂದಲು ಇದನ್ನು ವಿನ್ಯಾಸಗೊಳಿಸಲಾಗಿದೆ, ಅಲ್ಲದೇ ಅವರಿಗೆ ಇದರಲ್ಲಿ ಮಿತಿಗೊಳಿಸಲು ಅವಕಾಶ ನೀಡುತ್ತದೆ. ಅಲ್ಲದೇ ಯಾರು ಈ ಸೌಲಭ್ಯವನ್ನು ಮಾಡಿಸಿಕೊಳ್ಳುತ್ತಾರೋ ಅವರಿಗೆ ಗೌಪ್ಯತೆ ಹಾಗೂ ರಕ್ಷಣೆಯನ್ನು ಖಾತ್ರಿಪಡಿಸಬಹುದಾಗಿದೆ. 

HDFC ಗ್ರಾಹಕರಿಗೆ ಶುಭಸುದ್ದಿ; ಇನ್ಮುಂದೆ ಡಿಜಿಟಲ್ ಪಾವತಿಗೆ ಇಂಟರ್ನೆಟ್ ಬೇಕಾಗಿಲ್ಲ!

ಭೂತಾನ್ ಈ ಎನ್‌ಡಿಐಯನ್ನು GovTech ಭೂತಾನ್ ಮತ್ತು ಭೂತಾನ್ ಮೂಲದ DHI ಇನ್ನೊಟೆಕ್  ಪಾಲುದಾರಿಕೆಯ ಮೂಲಕ ಅಭಿವೃದ್ಧಿಪಡಿಸಿದೆ. ಸಾಧ್ಯವಾಯಿತು. ಕಂಪನಿಯ ನಿರ್ದೇಶಕ ಉಜ್ವಲ್ ದಹಲ್ ಅವರು ಈ ಯೋಜನೆಯನ್ನು ಪ್ರಮುಖ  ಮತ್ತು ಪ್ರವರ್ತಕ ಎಂದು ವಿವರಿಸಿದ್ದಾರೆ. ಭೂತಾನ್ ಎನ್‌ಡಿಐ ನಾಗರಿಕರು ಮತ್ತು ನಿವಾಸಿಗಳು ಅವರಿಗೆ ಅಗತ್ಯವಿರುವ ಸೇವೆಗಳನ್ನು ಸುರಕ್ಷಿತ ಮತ್ತು ಪರಿಣಾಮಕಾರಿ ರೀತಿಯಲ್ಲಿ ಪಡೆಯಬಹುದು ಎಂದು ದಹಲ್ ಹೇಳಿದ್ದಾರೆ.

GovTech ಭೂತಾನ್‌ನ ಹಂಗಾಮಿ ಕಾರ್ಯದರ್ಶಿ ಜಿಗ್ಮೆ ತೇನ್‌ಸಿಂಗ್ (Jigme Tenzing) ಈ ಬಗ್ಗೆ ಪ್ರತಿಕ್ರಿಯಿಸಿದ್ದು,  ಸಂತೋಷವನ್ನು ವ್ಯಕ್ತಪಡಿಸಿದ್ದಾರೆ,  ಭೂತಾನ್‌ನ ಮೊದಲ ಡಿಜಿಟಲ್ ಪ್ರಜೆಯಾಗಿ ರಾಜಕುಮಾರನನ್ನು ಹೊಂದಿರುವುದಕ್ಕೆ ನಮಗೆ ಹೆಮ್ಮೆ ಆಗುತ್ತಿದೆ. ಏಳು ವರ್ಷದ ರಾಜಕುಮಾರ ಭೂತಾನ್‌ನ ರಾಜ ಜಿಗ್ಮೆ ಖೇಸರ್ ನಾಮ್ಗ್ಯೆಲ್ ವಾಂಗ್‌ಚುಕ್ (King Jigme Khesar Namgyel Wangchuck) ಅವರ ಹಿರಿಯ ಮಗನಾಗಿದ್ದು, ಮುಂದಿನ ಭೂತಾನ್ ಉತ್ತರಾಧಿಕಾರಿ ಆಗಲಿದ್ದಾನೆ. ಈ ವ್ಯವಸ್ಥೆಯು ಸಾರ್ವಜನಿಕ ಮತ್ತು ಖಾಸಗಿ ವಲಯಗಳಲ್ಲಿ ಸೇವೆಗಳನ್ನು ವಿತರಿಸುವ ವಿಧಾನವನ್ನು ಪರಿವರ್ತಿಸುವಲ್ಲಿ ಪ್ರಮುಖ ಹೆಜ್ಜೆಯಾಗಿದೆ ಎಂದು ಜಿಗ್ಮೆ ತೇನ್‌ಸಿಂಗ್ ಹೇಳಿದರು.

ಪ್ರಜಾಪ್ರಭುತ್ವದ ಆಶಯಕ್ಕೆ ತಕ್ಕಂತೆ ತಂತ್ರಜ್ಞಾನ ಕೆಲಸ: ಸಚಿವ ರಾಜೀವ್‌ ಚಂದ್ರಶೇಖರ್‌

ಡಿಜಿಟಲ್ ಮೂಲಸೌಕರ್ಯವನ್ನು (digital infrastructure) ಸ್ಥಾಪಿಸುವ ಭೂತಾನ್‌ನ ಪ್ರಯತ್ನಗಳಿಗೆ ಭಾರತ ಸತತವಾಗಿ ಬೆಂಬಲ ನೀಡುತ್ತಿದೆ ಎಂದು ಮಾಧ್ಯಮ ವರದಿಗಳು ಹೇಳಿವೆ. ಉಭಯ ರಾಷ್ಟ್ರಗಳು ವಿವಿಧ ತಂತ್ರಜ್ಞಾನ ಪ್ರಯೋಗಗಳಲ್ಲಿ ಸಹಕರಿಸುತ್ತಿವೆ. ಇದು ಭೂತಾನ್‌ನ ಮೂರನೇ ಅಂತಾರಾಷ್ಟ್ರೀಯ ಇಂಟರ್ನೆಟ್ ಗೇಟ್‌ವೇ ನಿರ್ಮಾಣವನ್ನು ಒಳಗೊಂಡಿದೆ, ಅದರ ಕಾರ್ಯಾಚರಣೆಯ ವೆಚ್ಚವನ್ನು ಕಡಿಮೆ ಮಾಡಲು ಭಾರತ ಸರ್ಕಾರವು (Indian government) ರಿಯಾಯಿತಿ ದರವನ್ನು ಮಾಡಿದೆ. 

ಭೂತಾನ್‌ನ (Bhutan) ಪ್ರಮುಖ ಕಾರ್ಯಕ್ರಮವಾದ 'ಡಿಜಿಟಲ್ ಡ್ರುಕುಲ್' (Digital Drukul) ಅಡಿಯಲ್ಲಿ, ದೇಶದ ಎಲ್ಲಾ 20 ಜಿಲ್ಲೆಗಳಲ್ಲಿ ಗ್ರಾಮ ಮಟ್ಟದಲ್ಲಿ ಆಪ್ಟಿಕಲ್ ಫೈಬರ್ ಬೆನ್ನೆಲುಬನ್ನು ಒದಗಿಸಲಾಗಿದೆ. ದೇಶವು ತನ್ನ ಡಿಜಿಟಲ್ ಸಾಮರ್ಥ್ಯಗಳನ್ನು ವಿಸ್ತರಿಸುವುದನ್ನು ಮುಂದುವರೆಸುತ್ತಿರುವುದರಿಂದ, ಇತ್ತೀಚಿನ ಬೆಳವಣಿಗೆಯು ಡಿಜಿಟಲ್ ಭವಿಷ್ಯದ ಕಡೆಗೆ ಭೂತಾನ್‌ನ ಪ್ರಯಾಣದಲ್ಲಿ ಪ್ರಮುಖ ಮೈಲಿಗಲಾಗಿದೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ವಿಶ್ವದ ಅತಿ ಬಲಿಷ್ಠ ಕರೆನ್ಸಿಗಳಿವು: ಭಾರತದ ರುಪಾಯಿ ಮುಂದೆ ಘರ್ಜಿಸುವ ಡಾಲರ್ ಈ ದೇಶದ ಕರೆನ್ಸಿ ಮುಂದೆ ಡಮ್ಮಿ!
ರಾಜಮೌಳಿ-ಜೇಮ್ಸ್ ಕ್ಯಾಮರೂನ್ ಹೊಸ ಹೆಜ್ಜೆ, ನಟ ಮಹೇಶ್ ಬಾಬುಗೆ ಪ್ಯಾನ್ ವರ್ಲ್ಡ್ ಪಟ್ಟ..!