ಹೊಟೇಲ್‌ನಲ್ಲಿ ಉಸಿರಾಡಲು ಕಷ್ಟಪಡುತ್ತಿದ್ದವನ ಜೀವ ಉಳಿಸಿದ ಲೇಡಿ ವೈಟರ್

Published : Oct 16, 2022, 03:29 PM IST
ಹೊಟೇಲ್‌ನಲ್ಲಿ ಉಸಿರಾಡಲು ಕಷ್ಟಪಡುತ್ತಿದ್ದವನ ಜೀವ ಉಳಿಸಿದ ಲೇಡಿ ವೈಟರ್

ಸಾರಾಂಶ

ಉಸಿರಾಡಲು ಕಷ್ಟಪಡುತ್ತಿದ್ದವನನ್ನು ಮಹಿಳಾ ಪರಿಚಾರಕಿ ಒಬ್ಬರು ಕೂಡಲೇ ಪ್ರಥಮ ಚಿಕಿತ್ಸೆ ನೀಡಿ ರಕ್ಷಿಸುವ ಮೂಲಕ ಉದಾರತೆ ಮೆರೆದಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಹೊಟೇಲ್‌ನ ಮಹಿಳಾ ಪರಿಚಾರಕಿ ಅಥವಾ ವೈಟ್ರೆಸ್ ಕಾರ್ಯಕ್ಕೆ ಜನ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಉಸಿರಾಡಲು ಕಷ್ಟಪಡುತ್ತಿದ್ದವನನ್ನು ಮಹಿಳಾ ಪರಿಚಾರಕಿ ಒಬ್ಬರು ಕೂಡಲೇ ಪ್ರಥಮ ಚಿಕಿತ್ಸೆ ನೀಡಿ ರಕ್ಷಿಸುವ ಮೂಲಕ ಉದಾರತೆ ಮೆರೆದಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಹೊಟೇಲ್‌ನ ಮಹಿಳಾ ಪರಿಚಾರಕಿ ಅಥವಾ ವೈಟ್ರೆಸ್ ಕಾರ್ಯಕ್ಕೆ ಜನ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಊಟದ ಮಧ್ಯೆ ಉಸಿರಾಡಲು ಕಷ್ಟಪಡುತ್ತಿದ್ದ ಗ್ರಾಹಕನನ್ನು ಈ ಲೇಡಿ ವೈಟರ್ ನೋಡಿದ್ದು, ಕೂಡಲೇ ಅಲ್ಲಿಗೆ ಬಂದಿದ್ದಾಳೆ. ಬಳಿಕ ಉಸಿರಾಡಲು ಕಷ್ಟಪಡುವವರಿಗೆ ಮಾಡುವ  Heimlich Maneuver ಎಂದು ಕರೆಯಲ್ಪಡುವ ಪ್ರಾಥಮಿಕ ಚಿಕಿತ್ಸಾ ವಿಧಾನವನ್ನು ಮಾಡಿದ್ದಾಳೆ. Heimlich Maneuver ಎಂಬುದು ಉಸಿರಾಟದ ತೊಂದರೆಗೊಳಗಾದ ವ್ಯಕ್ತಿಯ ಹೊಕ್ಕುಳ ಮತ್ತು ಪಕ್ಕೆಲುಬಿನ ನಡುವೆ  ಹಠಾತ್ ಬಲವಾದ ಒತ್ತಡವನ್ನು ಅನ್ವಯಿಸುವ ಮೂಲಕ ವ್ಯಕ್ತಿಯ ಶ್ವಾಸನಾಳದಿಂದ ಅಡಚಣೆಯನ್ನು ತೆಗೆದು ಹಾಕುವ ಪ್ರಥಮ ಚಿಕಿತ್ಸಾ ವಿಧಾನವಾಗಿದೆ.

ಇದರಿಂದ ಆ ವ್ಯಕ್ತಿಯ ಜೀವ ಉಳಿದಿದ್ದು, ಮಹಿಳಾ ಪರಿಚಾರಕಿಯ ಕಾರ್ಯಕ್ಕೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗಿದೆ. ಘಟನೆ ನಡೆದ ರೆಸ್ಟೋರೆಂಟ್‌ನಲ್ಲಿ ಅಳವಡಿಸಲಾದ ಸಿಸಿ ಕ್ಯಾಮರಾದಲ್ಲಿ ಮಹಿಳಾ ಪರಿಚಾರಕಿಯ ಈ ಮಹೋನ್ನತ ಕಾರ್ಯ ಸೆರೆ ಆಗಿದೆ. ಈ ವಿಡಿಯೋವನ್ನು Good News Movement ಎಂಬ ಇನಸ್ಟಾಗ್ರಾಮ್ ಪೇಜ್ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದು, ವಿಡಿಯೋ ಸಾಕಷ್ಟು ವೈರಲ್ ಆಗಿದೆ. ಮಹಿಳೆಗೆ ಅನೇಕರು ಶಹಭಾಸ್ ಅಂದಿದ್ದಾರೆ. ಹೀಗೆ ವ್ಯಕ್ತಿಯ ಜೀವ ಉಳಿಸಿದ ಮಹಿಳಾ ಪರಿಚಾರಕಿಯನ್ನು ಲೇಸಿ ಗಪ್ಟಿಲ್ (Lacy Guptill) ಎಂದು ಗುರುತಿಸಲಾಗಿದೆ.

 ಉಸಿರಾಡಲು ಕಷ್ಟಪಡುತ್ತಿದ್ದ ಕೋತಿ ಮರಿಯ ಜೀವ ಉಳಿಸಿದ ತಾಯಿ

ವಿಡಿಯೋದಲ್ಲಿ ಕಾಣಿಸುವಂತೆ ಕುಟುಂಬವೊಂದು ರೆಸ್ಟೋರೆಂಟ್‌ಗೆ ಬಂದು ನಾಲ್ಕು ಚೇರುಗಳಿರುವ ಡೈನಿಂಗ್ ಟೇಬಲ್ ಸುತ್ತಲೂ ಕುಳಿತಿದ್ದಾರೆ. ಎಲ್ಲರೂ ತಾವು ಆರ್ಡರ್‌ ಮಾಡಿದ ಆಹಾರವನ್ನು ಸೇವಿಸುತ್ತಿದ್ದು, ಈ ವೇಳೆ ಆ ಕುಟುಂಬದಲ್ಲಿದ್ದ ಒಬ್ಬರು ಕೆಮ್ಮಲು ಶುರು ಮಾಡಿದ್ದು, ನಂತರ ಉಸಿರಾಡಲು ಕಷ್ಟಪಡುತ್ತಾರೆ. ಅವರ ಪಕ್ಕದಲ್ಲೇ ಕುಳಿತ ಮಗುವೊಂದು ಈ ವೇಳೆ ಅವರ ಬೆನ್ನನ್ನು ಸವರುತ್ತಿದೆ. ಆದರೆ ಸಮಸ್ಯೆ ಪರಿಹಾರವಾಗಿಲ್ಲ. ಕೂಡಲೇ ಇದನ್ನು ಗಮನಿಸಿದ ಪಕ್ಕದ ಟೇಬಲ್‌ಗೆ ಸರ್ವ್ ಮಾಡುತ್ತಿದ್ದ ಮಹಿಳೆ ಅಲ್ಲಿಗೆ ಬಂದು ಅವರಿಗೆ Heimlich Maneuver ಮಾಡುತ್ತಾರೆ. ಆ ವ್ಯಕ್ತಿಯ ಹಿಂಭಾಗದಿಂದ ಕೈ ಹಾಕಿ ಮೇಲೆತ್ತಿ ಎರಡೆರಡು ಬಾರಿ ಅವರನ್ನು ಶೇಕ್ ಮಾಡಿದ್ದು, ಅವರ ಶ್ವಾಶನಾಳದಲ್ಲಿ ಸಿಲುಕಿದ ಆಹಾರ ಹೊರ ಬರುವವರೆಗೂ ಅವವರು ಹಾಗೆ ಮಾಡಿದ್ದಾರೆ. ಇದರಿಂದ ವ್ಯಕ್ತಿಯ ಜೀವ ಉಳಿದಿದೆ. 

 

ಹೀಗೆ ಪ್ರಥಮ ಚಿಕಿತ್ಸೆ ನೀಡಿ ವ್ಯಕ್ತಿಯ ಜೀವ ಉಳಿಸಿದ ಮಹಿಳಾ ವೈಟರ್‌ ಲೇಸಿ ಗಪ್ಟಿಲ್, ವರ್ಷಗಳ ಹಿಂದೆ ಈ ಪ್ರಥಮ ಚಿಕಿತ್ಸಾ ವಿಧಾನವನ್ನು ತಾವು ಈ ಹಿಂದೆ ಮೆಡಿಕಲ್ ಎಮರ್ಜೆನ್ಸಿ ತಾಂತ್ರಿಕ ತಂಡದಲ್ಲಿ ಕೆಲಸ ಮಾಡುವ ವೇಳೆ ಕಲಿತಿದ್ದರಂತೆ. ವರ್ಷದ ಹಿಂದೆ ಈ ತಂತ್ರವನ್ನು ಅವರು ಕಲಿತಿದ್ದು, ಅದನ್ನು ಪ್ರಯೋಗಿಸುವಲ್ಲಿ ಯಾವುದೇ ಹಿಂಜರಿಕೆ ತೋರದೇ ಗುಪ್ಟಿಲ್ ಒಬ್ಬರ ಜೀವ ಉಳಿಸಿದ್ದಾಳೆ ಎಂದು ಇನ್ಸಾ ಪೋಸ್ಟ್‌ನಲ್ಲಿ ಬರೆಯಲಾಗಿದೆ. 

ಈ ವಿಡಿಯೋ ನೋಡಿದ ಅನೇಕರು ಮಹಿಳೆಯ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಆಕೆಯ ತುರ್ತು ಕಾರ್ಯನಿರ್ವಹಣೆಗೆ ಅನೇಕರು ದೇವರಿಗೆ ಥ್ಯಾಂಕ್ಸ್ ಹೇಳಿದ್ದಾರೆ. ಆತನ ಕುಟುಂಬ ಈ ವೇಳೆ ಆಘಾತಕ್ಕೊಳಗಾಗಿತ್ತು. ಅವರಿಗೆ ಸಹಾಯ ಮಾಡಿದ್ದಕ್ಕೆ ನನಗೆ ಖುಷಿ ಆಯ್ತು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಈಕೆಗೆ ದೊಡ್ಡ ಮಟ್ಟದಲ್ಲಿ ಟಿಪ್ಸ್ ನೀಡಬೇಕು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಹೇಗೆ ಇತರ ಟೇಬಲ್‌ನಲ್ಲಿ ಕುಳಿತಿರುವವರು ಈ ಸಂದರ್ಭದಲ್ಲಿ ಈ ಅಪಾಯಕಾರಿ ಸ್ಥಿತಿಯನ್ನು ನಿರ್ಲಕ್ಷಿಸಿದರು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.

ಉಸಿರಾಡೋಕೆ ಕಷ್ಟವಾಗ್ತಿದ್ಯಾ ? ಟೆಸ್ಟ್ ಮಾಡ್ಕೊಳ್ಳಿ, ಪಲ್ಮನರಿ ಎಡಿಮಾ ಕಾಯಿಲೆಯೂ ಆಗಿರ್ಬೋದು

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮದ್ಯಪ್ರಿಯರಿಗೆ ಶಾಕ್.. ಮಧ್ಯಾಹ್ನ 2 ರಿಂದ 5 ರವರೆಗೆ ಮದ್ಯ ಮಾರಾಟ ಬಂದ್: ಏನಿದು ಥಾಯ್‌ ವಿಚಿತ್ರ ನಿಯಮ!
ಮುದ್ದಿನ ಶ್ವಾನಗಳಿಗಾಗಿ ಅನಿಮೇಟೆಡ್ ಸಿನಿಮಾ ಶೋ ಆಯೋಜಿಸಿದ ಥಿಯೇಟರ್: ರೆಡ್ ಕಾರ್ಪೆಟ್ ಹಾಸಿ ಸ್ವಾಗತ