ಲ್ಯಾಬ್‌ನಲ್ಲಿ ಸೃಷ್ಟಿಸಿದ ಮಾಂಸ ನಾಡಿದ್ದಿಂದ ತಿನ್ನಲು ಲಭ್ಯ!

By Suvarna News  |  First Published Dec 17, 2020, 8:13 AM IST

ಲ್ಯಾಬ್‌ನಲ್ಲಿ ಸೃಷ್ಟಿಸಿದ ಮಾಂಸ ನಾಡಿದ್ದಿಂದ ತಿನ್ನಲು ಲಭ್ಯ!| ಸಿಂಗಾಪುರ ಹೋಟೆಲ್‌ನಿಂದ ಮಾರಾಟ


ಸಿಂಗಾಪುರ(ಡಿ.17): ಅಮೆರಿಕ ಮೂಲದ ಕಂಪನಿಯೊಂದು ಪ್ರಯೋಗಾಲಯದಲ್ಲಿ ಕೋಳಿ ಮಾಂಸ ಅಭಿವೃದ್ಧಿಪಡಿಸಿದ್ದು, ಆ ಮಾಂಸ ಇದೀಗ ಹೋಟೆಲ್‌ ಸೇರಿ ಅಲ್ಲಿಂದ ಆಹಾರದ ರೂಪದಲ್ಲಿ ಗ್ರಾಹಕರ ಹೊಟ್ಟೆಸೇರಲು ಕ್ಷಣಗಣನೆ ಆರಂಭವಾಗಿದೆ.

ಕೋಳಿಗಳಿಗೀಗ ಭಾರೀ ಡಿಮ್ಯಾಂಡ್ : ಮಾಂಸದ ರೇಟ್ ಭಾರೀ ಹೈಕ್

Tap to resize

Latest Videos

ಅಮೆರಿಕ ಮೂಲದ ಈಟ್‌ ಎಂಬ ಸ್ಟಾರ್ಟಪ್‌ ಕಂಪನಿ ಪ್ರಯೋಗಾಲಯದಲ್ಲಿ ಕೋಳಿ ಮಾಂಸ ಅಭಿವೃದ್ಧಿಪಡಿಸಿದೆ. ಈ ಮಾಂಸವನ್ನು ಮಾರಾಟ ಮಾಡಲು ವಿಶ್ವದಲ್ಲೇ ಮೊದಲ ಬಾರಿಗೆ ಸಿಂಗಾಪುರ ಸರ್ಕಾರ ಇತ್ತೀಚೆಗಷ್ಟೇ ಅನುಮತಿ ನೀಡಿತ್ತು. ಅದರ ಬೆನ್ನಲ್ಲೇ ಸಿಂಗಾಪುರದ 1880 ಎಂಬ ರೆಸ್ಟೋರೆಂಟ್‌, ಲ್ಯಾಬ್‌ನಲ್ಲಿ ಸೃಷ್ಟಿಯಾದ ಕೋಳಿ ಮಾಂಸದ ಆಹಾರ ಒದಗಿಸಲು ನಿರ್ಧರಿಸಿದೆ. ಶನಿವಾರದಿಂದ ಹೋಟೆಲ್‌ನಲ್ಲಿ ಈ ಮಾಂಸವನ್ನು ಬಳಸಿದ ವಿವಿಧ ಆಹಾರ ಪೂರೈಸಲಾಗುತ್ತದೆ.

ಪ್ರಾಣಿಗಳನ್ನು ಮಾಂಸಕ್ಕಾಗಿಯೇ ಬೆಳೆಸಿ ಹತ್ಯೆ ಮಾಡುವ ವಿಧಾನ ಆಕ್ಷೇಪದ ವಿಷಯವಾಗಿತ್ತು. ಹೀಗಾಗಿ ಪ್ರಾಣಿಗಳ ಜೀವಕೋಶಗಳನ್ನು ಬಳಸಿ ಪ್ರಯೋಗಾಲಯದಲ್ಲಿ ಅಭಿವೃದ್ಧಿಪಡಿಸಿರುವ ಮಾಂಸ, ಹೆಚ್ಚಿನ ಪ್ರಮಾಣದಲ್ಲಿ ಆಹಾರ ಪ್ರಿಯರ ಸೆಳೆಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಬಿಜೆಪಿ ಸರ್ಕಾರದ ಈ ನಿರ್ಧಾರ ಹುನ್ನಾರ : ಪ್ರೊ.ಭಗವಾನ್‌ ವಿರೋಧ

ಲ್ಯಾಬ್‌ನಲ್ಲಿ ಸೃಷ್ಟಿಸಲಾಗಿರುವ ಮಾಂಸ ಗ್ರಾಹಕರನ್ನು ಸೆಳೆಯಲು ಯಶಸ್ವಿಯಾಗಲಿದೆ ಎಂದು ಈಟ್‌ ಕಂಪನಿಯ ಸಿಇಒ ಜೋಸ್‌ ಟೆಟ್ರಿಕ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

click me!