ಬ್ರಿಟನ್‌ನಲ್ಲಿ ಕೊರೋನಾ ಹೊಸ ವೈರಸ್‌ ಆತಂಕ, ಹೈಅಲರ್ಟ್‌ ಘೋಷಿಸಿದ ಸರ್ಕಾರ!

By Suvarna NewsFirst Published Dec 17, 2020, 7:22 AM IST
Highlights

ಬ್ರಿಟನ್‌ನಲ್ಲಿ ಕೊರೋನಾ ಹೊಸ ವೈರಸ್‌ ಆತಂಕ!| 1000 ಮಂದಿಯಲ್ಲಿ ಸೋಂಕು| ವಿಶ್ವ ಆರೋಗ್ಯ ಸಂಸ್ಥೆಯಿಂದಲೂ ದೃಢೀಕರಣ| ಹೈಅಲರ್ಟ್‌ ಘೋಷಿಸಿದ ಬ್ರಿಟನ್‌ ಸರ್ಕಾರ

ಲಂಡನ್(ಡಿ.17)‌: ಕಳೆದೊಂದು ವರ್ಷದಿಂದ ವಿಶ್ವವನ್ನೇ ನಡುಗಿಸಿರುವ ಕೊರೋನಾ ವೈರಸ್‌ ಹುಟ್ಟಡಗಿಸಲು ಕಳೆದ ವಾರದಿಂದ ಲಸಿಕೆ ವಿತರಣೆ ಆರಂಭಿಸಿರುವ ಬ್ರಿಟನ್‌ನಲ್ಲಿ ಮಾರಕ ವೈರಾಣುವಿನ ಹೊಸ ಮಾದರಿಯೊಂದು ಪತ್ತೆಯಾಗಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ. ವೈರಸ್‌ನ ಹೊಸ ರೂಪಾಂತರದಿಂದಾಗಿ ಒಂದು ವಾರದಿಂದ ಬ್ರಿಟನ್‌ನಲ್ಲಿ ಸೋಂಕು ವೇಗವಾಗಿ ಹಬ್ಬುತ್ತಿದೆ. ಕೆಲವು ಪ್ರದೇಶಗಳಲ್ಲಿ ಸೋಂಕು ದ್ವಿಗುಣಗೊಳ್ಳುವ ಅವಧಿ 7 ದಿನಗಳಿಗೆ ಇಳಿದಿದೆ. ಈ ಹಿನ್ನೆಲೆಯಲ್ಲಿ ಬ್ರಿಟನ್‌ ಸರ್ಕಾರ ಹೈ ಅಲರ್ಟ್‌ ಘೋಷಣೆ ಮಾಡಿದೆ.

ಗಣರಾಜ್ಯೋತ್ಸವದ ಅತಿಥಿಯಾಗಿ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್!

ರಾಜಧಾನಿ ಲಂಡನ್‌, ಸುತ್ತಲಿನ ಪ್ರದೇಶಗಳಾದ ಎಸ್ಸೆಕ್ಸ್‌, ಹರ್ಟ್‌ಫೋರ್ಡ್‌ ಶೈರ್‌ಗಳಲ್ಲಿ 3ನೇ ಸ್ತರದ ಕೊರೋನಾ ಕ್ರಮ ಕೈಗೊಳ್ಳಲಾಗಿದೆ. ಇದರರ್ಥ- ಬಹುತೇಕ ಲಾಕ್‌ಡೌನ್‌ ಜಾರಿ ಮಾಡಲಾಗಿದೆ. ಇದರಿಂದಾಗಿ ಸದ್ಯ ಇಂಗ್ಲೆಂಡ್‌ನ ಶೇ.61ರಷ್ಟುಮಂದಿ ಕಠಿಣ ಲಾಕ್‌ಡೌನ್‌ ನಿಯಮಗಳಿಗೆ ಒಳಗಾಗಿದ್ದಾರೆ. ಅಕ್ಕಪಕ್ಕದ ಮನೆಯವರು ಬೆರೆಯುವುದನ್ನು ನಿಷೇಧಿಸಲಾಗಿದೆ. ಎಲ್ಲ ರೆಸ್ಟೋರೆಂಟ್‌ ಹಾಗೂ ಬಾರ್‌ಗಳನ್ನು ಬಂದ್‌ ಮಾಡಲಾಗಿದ್ದು, ಟೇಕ್‌ ಅವೇ ಹಾಗೂ ಡೆಲಿವರಿಗಳಿಗೆ ಮಾತ್ರ ಅನುಮತಿ ನೀಡಲಾಗಿದೆ.

ಹೊಸ ಮಾದರಿ ಪತ್ತೆ:

ಇಂಗ್ಲೆಂಡ್‌ನ ಕೆಲವು ಭಾಗಗಳಲ್ಲಿ ಕೊರೋನಾ ವೈರಸ್‌ನ ಹೊಸ ಮಾದರಿ ಪತ್ತೆಯಾಗಿದ್ದು, ವೇಗವಾಗಿ ಹಬ್ಬುತ್ತಿದೆ. 1000 ಮಂದಿಯಲ್ಲಿ ಹೊಸ ಬಗೆಯ ಕೊರೋನಾ ಕಂಡುಬಂದಿದೆ. ಇದನ್ನು 60 ವಿವಿಧ ಸ್ಥಳೀಯ ಸಂಸ್ಥೆಗಳು ವರದಿ ಮಾಡಿವೆ. ಈ ಕುರಿತು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ)ಗೆ ಮಾಹಿತಿ ನೀಡಲಾಗಿದೆ. ಬ್ರಿಟನ್‌ನ ವಿಜ್ಞಾನಿಗಳು ಹೊಸ ಬಗೆಯ ವೈರಸ್‌ ಕುರಿತು ಅಧ್ಯಯನ ನಡೆಸುತ್ತಿದ್ದಾರೆ ಎಂದು ಆರೋಗ್ಯ ಸಚಿವ ಮ್ಯಾಟ್‌ ಹ್ಯಾಂಕಾಕ್‌ ಅವರು ತಿಳಿಸಿದ್ದಾರೆ.

ಒಂದೂ ಲಸಿಕೆ ಬಿಡುಗಡೆ ಮಾಡಿರದ ಕಂಪನಿಯಿಂದ ಕೊರೋನಾಗೆ ಮದ್ದು!

ವಿಶ್ವ ಆರೋಗ್ಯ ಸಂಸ್ಥೆಯ ತುರ್ತು ಪರಿಸ್ಥಿತಿ ತಜ್ಞ ಮೈಕ್‌ ರಾರ‍ಯನ್‌ ಅವರು ಜಿನೆವಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಇಂಗ್ಲೆಂಡ್‌ನಲ್ಲಿ 1000 ಮಂದಿಯಲ್ಲಿ ಕೊರೋನಾ ಹೊಸ ಮಾದರಿ ಪತ್ತೆಯಾಗಿರುವುದು ನಮಗೂ ಗೊತ್ತಾಗಿದೆ. ನಾವು ಹಲವು ಮಾದರಿಗಳನ್ನು ನೋಡಿದ್ದೇವೆ. ಈ ವೈರಸ್‌ ಕಾಲಕಾಲಕ್ಕೆ ರೂಪಾಂತರ ಹೊಂದುತ್ತಿರುತ್ತದೆ ಎಂದು ಹೇಳಿದ್ದಾರೆ.

ಬ್ರಿಟನ್‌ನಲ್ಲಿ ಈಗಾಗಲೇ ಲಸಿಕೆ ಅಭಿಯಾನ ಆರಂಭವಾಗಿದೆ. ಹೊಸ ಬಗೆಯ ವೈರಸ್‌ ಲಸಿಕೆಗೆ ಸ್ಪಂದಿಸುತ್ತದೋ ಅಥವಾ ಲಸಿಕೆ ಆ ವೈರಸ್‌ ವಿರುದ್ಧ ವಿಫಲವಾಗುತ್ತದೋ ಎಂಬುದನ್ನು ಡಬ್ಲ್ಯುಎಚ್‌ಒ ಆಗಲಿ, ಬ್ರಿಟನ್‌ ಸರ್ಕಾರವಾಗಲಿ ಖಚಿತಪಡಿಸುತ್ತಿಲ್ಲ.

ಸ್ವಾ್ಯಬ್‌ ಪರೀಕ್ಷೆಯ ಮೂಲಕವೇ ಕೊರೋನಾ ಹೊಸ ಮಾದರಿಯನ್ನು ಪತ್ತೆ ಹಚ್ಚಬಹುದಾಗಿದೆ. ಕೆಂಟ್‌, ಸುತ್ತಲಿನ ಪ್ರದೇಶಗಳಲ್ಲಿ ಇದು ಹೆಚ್ಚಾಗಿ ಕಂಡುಬರುತ್ತಿದೆ ಎಂದು ಇಂಗ್ಲೆಂಡ್‌ನ ಮುಖ್ಯ ವೈದ್ಯಾಧಿಕಾರಿ ಪ್ರೊ. ಕ್ರಿಸ್‌ ವಿಟ್ಟಿತಿಳಿಸಿದ್ದಾರೆ.

ಕೊರೋನಾ ಮಣಿಸಲು ಬಂತು ಮೊದಲ ಲಸಿಕೆ, ಇನ್ನು ಏಳೇ ದಿನದಲ್ಲಿ ಲಭ್ಯ!

ಹೊಸ ಮಾದರಿ ವೈರಸ್‌

1.ಸ್ವಾ್ಯಬ್‌ ಪರೀಕ್ಷೆಯ ಮೂಲಕವೇ ಕೊರೋನಾ ಹೊಸ ಮಾದರಿಯನ್ನು ಪತ್ತೆ ಹಚ್ಚಬಹುದು

2. ಕೆಂಟ್‌, ಸುತ್ತಲಿನ ಪ್ರದೇಶಗಳಲ್ಲಿ ಇದು ಹೆಚ್ಚಾಗಿ ಕಂಡುಬರುತ್ತಿದೆ.

3. ಈಗಾಗಲೇ 1000 ಮಂದಿಯಲ್ಲಿ ಹೊಸ ವೈರಸ್‌ ಪತ್ತೆ. ವೇಗವಾಗಿ ಹಬ್ಬುತ್ತಿದೆ ಈ ವೈರಸ್‌

4. ಹೊಸ ಲಸಿಕೆ ಈ ಹೊಸ ಮಾದರಿ ಮೇಲೆ ಕೆಲಸ ಮಾಡುವುದೋ ಇಲ್ಲವೋ ಎಂಬ ಅನುಮಾನ

5. ವಿಜ್ಞಾನಿಗಳಿಂದ ಈ ಹೊಸ ವೈರಸ್‌ ಬಗ್ಗೆ ಅಧ್ಯಯನ

click me!