ಡಿಸ್ಚಾರ್ಜ್ ಆದ ವೈರಸ್‌ ಪೀಡಿತರಿಗೆ ಮೊದಲ 10 ದಿನ ಬಲು ಡೇಂಜರ್‌!

Published : Dec 16, 2020, 09:19 AM IST
ಡಿಸ್ಚಾರ್ಜ್ ಆದ ವೈರಸ್‌ ಪೀಡಿತರಿಗೆ ಮೊದಲ 10 ದಿನ ಬಲು ಡೇಂಜರ್‌!

ಸಾರಾಂಶ

ಡಿಸ್ಚಾರ್ಜ್ ಆದ ವೈರಸ್‌ಪೀಡಿತರಿಗೆ ಮೊದಲ 10 ದಿನ ಬಲು ಡೇಂಜರ್‌!| ಮರಳಿ ಆಸ್ಪತ್ರೆ ಸೇರಬಹುದು, ಸಾವೂ ಸಂಭವಿಸಬಹುದು| ಅಮೆರಿಕದಲ್ಲಿ ನಡೆದ ಅಧ್ಯಯನದಲ್ಲಿ ಮಾಹಿತಿ ಬೆಳಕಿಗೆ| 

ವಾಷಿಂಗ್ಟನ್‌(ಡಿ.16): ಕೊರೋನಾ ವೈರಸ್‌ ಸೋಂಕಿಗೆ ತುತ್ತಾಗಿ, ಚೇತರಿಸಿಕೊಂಡು ಮನೆಗೆ ಮರಳುವ ಕೊರೋನಾ ರೋಗಿಗಳಿಗೆ ಮೊದಲ 10 ದಿನ ಅತ್ಯಂತ ಅಪಾಯಕಾರಿ ಎಂದು ಅಮೆರಿಕದಲ್ಲಿ ನಡೆದ ಅಧ್ಯಯನವೊಂದು ಎಚ್ಚರಿಕೆ ನೀಡಿದೆ. ಈ 10 ದಿನಗಳ ಅವಧಿಯಲ್ಲಿ ಕೊರೋನಾ ಗೆದ್ದವರು ಮತ್ತೆ ಆಸ್ಪತ್ರೆಗೆ ಸೇರಬಹುದು, ಪರಿಸ್ಥಿತಿ ಕೈ ಮೀರಿದರೆ ಸಾವೂ ಸಂಭವಿಸಬಹುದು ಎಂಬುದು ಈ ವರದಿಯ ಸಾರ.

ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ ರೋಗಿಗಳ ಪೈಕಿ ಮೊದಲ 10 ದಿನದಲ್ಲಿ ಶೇ.40ರಿಂದ ಶೇ.60ರಷ್ಟುಮಂದಿ ಮತ್ತೆ ಆಸ್ಪತ್ರೆಗೆ ಸೇರಬೇಕಾಗಬಹುದು. ಹೃದಯ ವೈಫಲ್ಯ ಅಥವಾ ನ್ಯುಮೋನಿಯಾಗೆ ಅದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದವರಿಗೆ ಹೋಲಿಸಿದರೆ ಆಸ್ಪತ್ರೆ ಸೇರುವ ಕೊರೋನಾ ರೋಗಿಗಳಿಗೆ ಅಪಾಯ ಹೆಚ್ಚಿದೆ ಎಂಬ ವರದಿ ‘ಜಾಮಾ’ ಎಂಬ ಜರ್ನಲ್‌ನಲ್ಲಿ ಪ್ರಕಟವಾಗಿದೆ.

ಆದರೆ ಆಸ್ಪತ್ರೆ ವಾಸ ಮುಗಿದ 60 ದಿನಗಳ ಬಳಿಕ ನ್ಯುಮೋನಿಯಾ ಅಥವಾ ಹೃದ್ರೋಗಿಗಳಿಗೆ ಹೋಲಿಸಿದರೆ ಕೊರೋನಾ ಸೋಂಕಿತರು ಮತ್ತೊಮ್ಮೆ ಆಸ್ಪತ್ರೆ ಸೇರುವ ಅಥವಾ ಸಾವನ್ನಪ್ಪುವ ಸಾಧ್ಯತೆ ಕಡಿಮೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. 2200 ಕೊರೋನಾ ಪೀಡಿತರು, 1800 ಕೊರೋನಾ ರಹಿತ ನ್ಯುಮೋನಿಯಾಪೀಡಿತರು ಹಾಗೂ 3500 ಹೃದಯ ಸಮಸ್ಯೆ ಉಳ್ಳವರನ್ನು ಪರಿಶೀಲಿಸಿ ಈ ಅಧ್ಯಯನ ಸಿದ್ಧಪಡಿಸಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಜಪಾನ್‌ನಲ್ಲಿ 7.5 ತೀವ್ರತೆಯ ಭೂಕಂಪ: ಧರಣಿ ಗರ ಗರನೇ ತಿರುಗಿದ ಕ್ಷಣದ ವೀಡಿಯೋಗಳು ವೈರಲ್
ವಿಯೆಟ್ನಾಂ ಇಂಡಿಯಾ ಇಂಟರ್​ನ್ಯಾಷನಲ್ ಬ್ಯುಸಿನೆಸ್​ ಕಾನ್​ಕ್ಲೇವ್: ಕರುನಾಡಿನ 29 ಗಣ್ಯರಿಗೆ ಪ್ರಶಸ್ತಿ ಪ್ರದಾನ