Russia Ukraine Crisis : ರಷ್ಯಾದೊಂದಿಗೆ ಮಾತುಕತೆಗೆ ಮುಂದಾದ ಅಮೆರಿಕ.. ಬಟ್ ಒನ್ ಕಂಡಿಶನ್!

Published : Feb 22, 2022, 03:21 AM ISTUpdated : Feb 24, 2022, 10:19 AM IST
Russia Ukraine Crisis : ರಷ್ಯಾದೊಂದಿಗೆ ಮಾತುಕತೆಗೆ ಮುಂದಾದ ಅಮೆರಿಕ.. ಬಟ್ ಒನ್ ಕಂಡಿಶನ್!

ಸಾರಾಂಶ

* ಪುಟಿನ್‌ ಜತೆ ಮಾತುಕತೆಗೆ ಬೈಡೆನ್‌ ಷರತ್ತಿನ ಒಪ್ಪಿಗೆ * ರಷ್ಯಾ ದಾಳಿ ನಡೆಸದಿದ್ದರೆ ಮಾತ್ರ ಸಭೆ: ಅಮೆರಿಕ * ಭೇಟಿ ಬಗ್ಗೆ ಈಗಲೇ ಏನೂ ಹೇಳಲಾಗದು: ರಷ್ಯಾ * ಈ ವಾರ ಉಭಯ ದೇಶಗಳ ವಿದೇಶಾಂಗ ಸಚಿವರ ಸಭೆ ನಿಗದಿ

ವಾಷಿಂಗ್ಟನ್‌/ಮಾಸ್ಕೋ (ಫೆ. 22)  ರಷ್ಯಾ (Russia)  ಹಾಗೂ ಉಕ್ರೇನ್‌  (Ukraine) ನಡುವೆ ಯುದ್ಧ (War) ಸನ್ನಿಹಿತ ಎಂಬ ವಾತಾವರಣ ಇದ್ದರೂ, ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ (Vladimir Putin) ಜತೆ ಸಂಧಾನ ಮಾತುಕತೆಗೆ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ (Joe Biden) ‘ಷರತ್ತಿನ ಸಮ್ಮತಿ’ ಸೂಚಿಸಿದ್ದಾರೆ. ಉಕ್ರೇನ್‌ ಮೇಲೆ ರಷ್ಯಾ ದಾಳಿ ಮಾಡುವುದಿಲ್ಲ ಎಂಬ ಭರವಸೆ ನೀಡಬೇಕು. ಹಾಗಿದ್ದರೆ ಮಾತ್ರ ತಾವು ಸಭೆ ನಡೆಸಲು ಸಿದ್ಧ ಎಂದು ಬೈಡೆನ್‌ ಷರತ್ತು ವಿಧಿಸಿದ್ದಾರೆ.

ಆದರೆ ‘ಬೈಡೆನ್‌-ಪುಟಿನ್‌ ನಡುವೆ ಸಭೆ ನಡೆಸುವ ಬಗ್ಗೆ ಈಗಲೇ ಏನೂ ಹೇಳಲಾಗದು. ವಿದೇಶಾಂಗ ಸಚಿವರ ನಡುವಿನ ಸಭೆ ಮಾತ್ರ ನಿಗದಿಯಾಗಿದೆ. ಅಗತ್ಯಬಿದ್ದರೆ ಪುಟಿನ್‌-ಬೈಡೆನ್‌ ಫೋನ್‌ ಮೂಲಕ ಅಥವಾ ಇತರ ವಿಧಾನದಲ್ಲಿ ಸಭೆ ನಡೆಸಬಹುದು’ ಎಂದು ರಷ್ಯಾ ಸರ್ಕಾರದ ವಕ್ತಾರರು ಹೇಳಿದ್ದಾರೆ.

ಭಾನುವಾರ ಫ್ರಾನ್ಸ್‌ ಅಧ್ಯಕ್ಷ ಇಮ್ಯಾನ್ಯುಯೆಲ್‌ ಮ್ಯಾಕ್ರಾನ್‌ ಅವರು, ‘ನಾನು ಪುಟಿನ್‌ ಹಾಗೂ ಬೈಡೆನ್‌ ಜತೆ ಮಾತನಾಡಿದ್ದೇನೆ. ಇಬ್ಬರ ನಡುವೆಯೂ ಶೃಂಗಸಭೆ ನಡೆಸುವ ನನ್ನ ಪ್ರಸ್ತಾಪಕ್ಕೆ ಅವರು ತಾತ್ವಿಕ ಒಪ್ಪಿಗೆ ನೀಡಿದ್ದಾರೆ’ ಎಂದು ಹೇಳಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ ಅಮೆರಿಕ ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಜೇನ್‌ ಪೆಸ್ಕಿ, ‘ಯುದ್ಧ ಆರಂಭವಾಗುವ ಕೊನೆಯ ಕ್ಷಣದವರೆಗೂ ಅಮೆರಿಕ ಮಾತುತೆ ನಡೆಸಲು ಸಿದ್ಧವಿದೆ. ಪುಟಿನ್‌ ಜತ ಸಭೆ ನಡೆಸಲು ಬೈಡೆನ್‌ ಒಪ್ಪಿಕೊಂಡಿದ್ದಾರೆ. ರಷ್ಯಾ ಯುದ್ಧ ಆರಂಭಿಸದಿದ್ದರೆ ಮಾತ್ರ ಸಭೆ ನಡೆಸುವ ಷರತ್ತು ವಿಧಿಸಿದ್ದೇವೆ’ ಎಂದರು.

‘ಆದರೆ ಈ ವಾರ ಯುರೋಪ್‌ನಲ್ಲಿ ಅಮೆರಿಕ ವಿದೇಶಾಂಗ ಸಚಿವ ಆ್ಯಂಟನಿ ಬ್ಲಿಂಕನ್‌ ಹಾಗೂ ರಷ್ಯಾ ವಿದೇಶಾಂಗ ಸಚಿವ ಸರ್ಗೈ ಲಾವ್ರೋವ್‌ ನಡುವೆ ಸಭೆ ನಿಗದಿಯಾಗಿದೆ. ರಷ್ಯಾ ದಾಳಿ ಮಾಡದಿದ್ದರೆ ಮಾತ್ರ ಸಭೆ ನಡೆಯಲಿದೆ’ ಎಂದು ಸ್ಪಷ್ಟಪಡಿಸಿದರು.

Russia Ukraine Crisis ರಷ್ಯಾ ಬೆಂಬಲಿತ ಬಂಡುಕೋರರಿಂದ ಉಕ್ರೇನ್‌ನಲ್ಲಿ ಶೆಲ್‌ ದಾಳಿ!

ಉಕ್ರೇನ್‌ ಗಡಿಯತ್ತ ನುಗ್ಗುತ್ತಿರುವ ರಷ್ಯಾ ಸೇನೆ:  ಉಕ್ರೇನ್‌ ಮೇಲೆ ರಷ್ಯಾ ದಾಳಿ ನಡೆಸುವುದು ಸನ್ನಿಹಿತ ಎಂಬ ವರದಿಗಳಿಗೆ ಪೂರಕವಾದ ಉಪಗ್ರಹ ಚಿತ್ರಗಳು ಲಭ್ಯವಾಗಿವೆ. ಇತ್ತೀಚಿನವರೆಗೂ ಇದ್ದ ಸ್ಥಾನದಿಂದ ಅವು ಸ್ಥಾನ ಬದಲಿಸಿರುವುದು ಹಾಗೂ ಉಕ್ರೇನ್‌ ಗಡಿಯತ್ತ ನುಗ್ಗುತ್ತಿರುವುದು ಕಂಡುಬರುತ್ತದೆ.

ಯುದ್ಧ ಟ್ಯಾಂಕರ್‌ಗಳು, ಶಸ್ತಾ್ರಸ್ತ್ರ ಪೂರೈಸುವ ವಿಮಾನಗಳು, ಪದಾತಿದಳಗಳು ಹಾಗೂ ಸೈನಿಕರಿಗೆ ನೆರವು ಒದಗಿಸುವ ಘಟಕಗಳು ಸ್ಥಾನ ಬದಲಿಸಿವೆ ಎಮದು ಮ್ಯಾಕ್ಸರ್‌ ಟೆಕ್ನಾಲಜೀಸ್‌ ಬಿಡುಗಡೆ ಮಾಡಿದ ಉಪಗ್ರಹ ಚಿತ್ರಗಳಲ್ಲಿ ಕಂಡುಬಂದಿದೆ. ಈ ಮೊದಲು ಇದ್ದ ಸ್ಥಾನದಿಂದ ಅವು ಉಕ್ರೇನ್‌ ಗಡಿಗೆ ಸಮೀಪ ಬಂದಿವೆ ಎಂಬುದನ್ನು ಚಿತ್ರಗಳು ತೋರಿಸುತ್ತವೆ.

ಅಲ್ಲದೆ, ಗಡಿಗೆ ಸಮೀಪದ ಅರಣ್ಯದಲ್ಲಿ ರಷ್ಯಾ ಪಡೆಗಳು ಚಿಕ್ಕ ಸೇನಾ ನೆಲೆಗಳನ್ನು ಸ್ಥಾಪಿಸುತ್ತಿವೆ ಎಂಬುದೂ ತಿಳಿದುಬರುತ್ತದೆ. ಫೆ.13ರಂದು ಸೊಲೊಟಿ ಎಂಬ ಗ್ರಾಮದ ಖಾಲಿ ಮೈದಾನದಲ್ಲಿ ಇದ್ದ ಸೇನೆ ಫೆ.20ರಂದು ಕಂಡುಬರುತ್ತಿಲ್ಲ. ಉಕ್ರೇನ್‌ ಗಡಿಯಿಂದ 30-35 ಕಿ.ಮೀ. ಅಂತರದಲ್ಲಿ ಸೇನಾಪಡೆಗಳು ಇವೆ ಜಮೆಯಾಗಿವೆ ಎಂದು ಉಪಗ್ರಹ ಚಿತ್ರ ಆಧರಿಸಿ ವರದಿಗಳು ಹೇಳಿವೆ.

ಭಾರತೀಯರಿಗೆ  ಸೂಚನೆ:  ರಷ್ಯಾ ಹಾಗೂ ಉಕ್ರೇನ್(Russia Ukraine Crisis) ನಡುವಿನ ಯುದ್ಧ ಭೀತಿ ಹೆಚ್ಚಾಗಿದೆ. ಈಗಾಗಲೇ ರಷ್ಯಾ ಬೆಂಬಲಿತ ಬಂಡುಕೋರರು ಉಕ್ರೇನ್‌ನಲ್ಲಿ ಶೆಲ್ ದಾಳಿ ನಡೆಸಿದ್ದಾರೆ. ಇಬ್ಬರು ಉಕ್ರೇನ್ ಯೋಧರು ದಾಳಿಯಲ್ಲಿ ಹತರಾಗಿದ್ದಾರೆ. ಇದರ ಬೆನ್ನಲ್ಲೇ ಉಕ್ರೇನ್ ರಾಜಧಾನಿ ಕೀವ್‌ನಲ್ಲಿ ಭಾರತೀಯ ರಾಯಭಾರ ಕಚೇರಿ(Indian Embassy) ಮಹತ್ವದ ಸೂಚನೆ ನೀಡಿದೆ. ಉಕ್ರೇನ್‌ನಲ್ಲಿರುವ ಭಾರತೀಯ ವಿದ್ಯಾರ್ಥಿಗಳು(Indian Nationals and Students), ನಾಗರೀಕರು  ತಾತ್ಕಾಲಿಕವಾಗಿ ಉಕ್ರೇನ್ ತೊರೆಯುವಂತೆ ಸೂಚನೆ ನೀಡಲಾಗಿದೆ.

ಉಕ್ರೇನ್‌ನಲ್ಲಿ ಸದ್ಯದ ಪರಿಸ್ಥಿತಿ ಉತ್ತಮವಾಗಿಲ್ಲ. ರಷ್ಯಾ ದಾಳಿಗೆ ಸಜ್ಜಾಗುತ್ತಿದೆ. ಹೀಗಾಗಿ ಭಾರತೀಯ ನಾಗರೀಕರು, ವಿದ್ಯಾರ್ಥಿಗಳು ಉಕ್ರೇನ್‌ನಲ್ಲಿರುವುದು ಕ್ಷೇಮವಲ್ಲ. ಹೀಗಾಗಿ ಭಾರತ ಸರ್ಕಾರ ನಿಯೋಜಿಸಿರುವ ವಂದೇ ಭಾರತ್ ಸೇರಿದಂತೆ ಚಾರ್ಟೆಡ್ ವಿಮಾನದ ಮೂಲಕ ತಾತ್ಕಾಲಿಕವಾಗಿ ಉಕ್ರೇನ್ ತೊರೆಯಲು ರಾಯಭಾರ ಕಚೇರಿ ಸೂಚಿಸಿದೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಈ 6 ದೇಶಗಳಲ್ಲಿ ‘ಧುರಂಧರ್’ ಬ್ಯಾನ್; ಆದ್ರೂ ಕಲೆಕ್ಷನ್‌ಗೆ ಸ್ವಲ್ಪವೂ ಹೊಡೆತವಿಲ್ಲ, ಅದು ಹೇಗೆ..!
ಟ್ರಂಪ್ ನಿರ್ಧಾರಕ್ಕೆ 20 ರಾಜ್ಯಗಳ ಸೆಡ್ಡು: ಅಮೆರಿಕದಲ್ಲೇ ಶುರುವಾಯ್ತು ಸಮರ!