ಬಿರುಗಾಳಿಗೆ ಹಾರಿ ಹೋದ ವ್ಯಕ್ತಿಯ ವಿಗ್‌... ವಿಡಿಯೋ ನೋಡಿ

Suvarna News   | Asianet News
Published : Feb 21, 2022, 07:11 PM IST
ಬಿರುಗಾಳಿಗೆ ಹಾರಿ ಹೋದ ವ್ಯಕ್ತಿಯ ವಿಗ್‌... ವಿಡಿಯೋ ನೋಡಿ

ಸಾರಾಂಶ

ವೇಗವಾಗಿ ಬೀಸಿದ ಗಾಳಿಗೆ ಹಾರಿ ಹೋದ ವಿಗ್‌ ವಿಗ್‌ ಹಿಂದೆ ಓಡಿದ ವ್ಯಕ್ತಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌

ಎಲ್ಲರಿಗೂ ತಲೆತುಂಬ ತಲೆ ಕೂದಲು ಇರುವುದಿಲ್ಲ. ಆದರೆ ಬೋಳು ತಲೆಯನ್ನು ತೋರಿಸಿಕೊಂಡು ಬೋಳ ಅನಿಸಿಕೊಳ್ಳಲು ಯಾರೂ ಇಷ್ಟಪಡುವುದಿಲ್ಲ. ಹೀಗಾಗಿ ಕೆಲವರು ಸೊಂಪಾದ ಕೂದಲಿಗಾಗಿ ಏನೇನೋ ಸಾಹಸ ಮಾಡಿದರೆ ಬೇಕಾದಷ್ಟು ಕಾಸಿದ್ದವರು ಕೂದಲು ಕಸಿಯ ಮೊರೆ ಹೋಗುತ್ತಾರೆ. ಮತ್ತೆ ಕೆಲವರು ವಿಗ್ ಧರಿಸಿ ಸುಮ್ಮನಾಗುತ್ತಾರೆ. ಆದರೆ ತಲೆಯಲ್ಲಿದ್ದ ವಿಗ್‌ ಒಮ್ಮೆಲೆ ಹಾರಿ ಹೋದರೆ ಪರಿಸ್ಥಿತಿ ಹೇಗಿರಬೇಡ. ಎಲ್ಲರೂ ಇರುವ ಸ್ಥಳದಲ್ಲಿ ಹಾಗಾದರೆ ಮುಜುಗರವಾಗುವುದಂತೂ ಸತ್ಯ. ವಿಗ್‌ ಹಾಕಿಕೊಂಡವರಿಗೆ ಮುಜುಗರವಾದರೆ. ಅದು ಹಾರಿಹೋದುದನ್ನು ನೋಡಿದವರಿಗೆ ನಗು ಉಕ್ಕಿ ಬರುವುದಂತು ನಿಜ.

ಇಲ್ಲೊಂದು ಕಡೆ ಹಾಗೆಯೇ ಆಗಿದೆ. ಇಂಗ್ಲೆಂಡ್‌ನ ಡೆವೊನ್‌ನಲ್ಲಿ (Devon) ವೇಗವಾಗಿ ಬೀಸಿದ ಗಾಳಿಗೆ ನಿಂತುಕೊಂಡಿದ್ದ ವ್ಯಕ್ತಿಯೊಬ್ಬರ ತಲೆಯಲ್ಲಿದ್ದ ವಿಗ್‌ ಹಾರಿ ಹೋಗಿದೆ. ಈ ದೃಶ್ಯ ಕ್ಯಾಮರಾದಲ್ಲಿ ಸರೆಯಾಗಿ ಬಳಿಕ ಸಾಮಾಜಿಕ ಜಾಲತಾಣ ತಲುಪಿದ್ದು ನೋಡುಗರಿಗೆ ತಮಾಷೆ ಎನಿಸುವ ಈ ವಿಡಿಯೋ ಎಲ್ಲೆಡೆ ವೈರಲ್‌ ಆಗುತ್ತಿದೆ. ವಿಡಿಯೋದಲ್ಲಿ ಕಾಣಿಸುವಂತೆ ವಿಗ್‌ ಧರಿಸಿದ ವ್ಯಕ್ತಿಯೊಬ್ಬರು ಕಾರು ಪಾರ್ಕಿಂಗ್ ಪ್ರದೇಶದಲ್ಲಿ ನಿಂತಿರುತ್ತಾರೆ. ಈ ವೇಳೆ ವೇಗವಾಗಿ ಬೀಸಿಬಂದ ಗಾಳಿ ಅವರ ತಲೆಯಲ್ಲಿದ್ದ ವಿಗ್‌ ಅನ್ನು ಎಗರಿಸಿಕೊಂಡು ಹೋಗಿದೆ. ಕಳೆದ ಶುಕ್ರವಾರ ನಡೆದ ಘಟನೆ ಇದಾಗಿದ್ದು ಈಗ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.

ಡೆವೊನ್ ನಿವಾಸಿ ಸೈಮನ್ ವಿಲ್ಕ್ಸ್ (Simon Wilkes) ಎಂಬುವವರು ಬಾರ್ನ್‌ಸ್ಟೇಪಲ್‌ನಲ್ಲಿ(Barnstaple) ಕಾರು ಪಾರ್ಕಿಂಗ್‌ ಸ್ಥಳದಲ್ಲಿ ನಿಂತಿದ್ದಾಗ ಗಾಳಿಯೊಂದು ವೇಗವಾಗಿ ಬೀಸಿ ಬಂದಿದ್ದು, ಸೈಮನ್ ವಿಲ್ಕ್ಸ್ ತಲೆಯಲ್ಲಿದ್ದ ವಿಗ್‌ ಅನ್ನು ಹಾರಿಸಿಕೊಂಡು ಹೋಗಿದೆ. ಈ ವೇಳೆ ಗಾಬರಿಗೊಂಡ ಅವರು ಹಾರಿ ಹೋದ ವಿಗ್‌ನ ಹಿಂದೆಯೇ ಓಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು.

ಬೋಳು ತಲೆಯಿಂದ ಶಾಕ್ ಆಗಲಿಲ್ಲ, ಬದುಕು ದೊಡ್ಡದು ಎನಿಸಿತು: ಸೋನಾಲಿ ಬೇಂದ್ರೆ

ದಶಕಗಳಲ್ಲೇ ಅತ್ಯಂತ ಕೆಟ್ಟ ಚಂಡಮಾರುತಗಳಲ್ಲಿ ಒಂದಾದ ಯುನೈಸ್ (Eunice) ಚಂಡಮಾರುತವು ಇಂಗ್ಲೆಂಡ್‌ಗೆ ಅಪ್ಪಳಿಸಿದ್ದು, ಇದರಿಂದಾಗಿ ಹಲವು ವಿಮಾನಗಳ ಪ್ರಯಾಣವನ್ನು ರದ್ದುಗೊಳಿಸಲಾಗಿದೆ. ನೂರಾರು ಶಾಲೆಗಳನ್ನು ಮುಚ್ಚಲಾಗಿದೆ ಮತ್ತು ದೇಶದಾದ್ಯಂತ ಹಲವಾರು ಪ್ರಮುಖ ಸೇತುವೆಗಳನ್ನು ಮುಚ್ಚಲಾಗಿದೆ. ಏತನ್ಮಧ್ಯೆ, ಲಕ್ಷಾಂತರ ಜನರಿಗೆ ಮನೆಯಲ್ಲೇ ಇರುವಂತೆ ಹೇಳಲಾಗಿದೆ. ಸಿರಿಯಮ್ ಮಾಹಿತಿಯ ಪ್ರಕಾರ, ಯುನೈಸ್ ಚಂಡಮಾರುತದಿಂದ ದಾಖಲೆಯ ಗಾಳಿಯ ನಡುವೆ ಇಂಗ್ಲೆಂಡ್‌ನಾದ್ಯಂತ (United Kingdom) ಒಟ್ಟು 436 ವಿಮಾನಗಳನ್ನು ರದ್ದುಗೊಳಿಸಲಾಗಿದೆ ಎಂದು ತಿಳಿದು ಬಂದಿದೆ.

ಬೋಳು ತಲೆ ಅಥವಾ ಕೂದಲು ಉದುರುವ ಸಮಸ್ಯೆಯೇ? ಈ 7 ಆಹಾರ ಸೇವಿಸಿ

ಕೂದಲು ಉದುರುವ ಸಮಸ್ಯೆ ಈಗಂತೂ ತೀರಾ ಸಾಮಾನ್ಯವಾಗಿಬಿಟ್ಟಿದೆ. ಕೂದಲು ಉದುರಲು ನಿರ್ದಿಷ್ಟ ಕಾರಣಗಳಿಲ್ಲ. ವ್ಯಕ್ತಿಯಿಂದ ವ್ಯಕ್ತಿಗೆ ಇದು ಬದಲಾಗುತ್ತದೆ. ಬಿಸಿಲು, ಮಾಲಿನ್ಯ, ರಾಸಾಯನಿಕ ಪದಾರ್ಥಗಳ ಕಲಬೆರೆಕೆ ಇತ್ಯಾದಿಗಳು ಕಾರಣವಾಗಬಹುದು. ಆದರೆ, ನಾವು ತಿನ್ನುವ ಆಹಾರದಲ್ಲೇ ಬಹುತೇಕ ಕೂದಲ ಆರೋಗ್ಯ ಅಥವಾ ಅನಾರೋಗ್ಯ ಅಡಗಿರುವ ವಿಚಾರ ಬಹುತೇಕರಿಗೆ ಗೊತ್ತಿಲ್ಲ. ಕೂದಲ ಆರೋಗ್ಯಕ್ಕೆ ನಾವು ಯಾವ್ಯಾವ ಆಹಾರ ಸೇವಿಸಬಹುದು ಎಂಬ ಪಟ್ಟಿ ಇಲ್ಲಿದೆ.

ರೆಫ್ರಿಯ ಬೋಳು ತಲೆಯನ್ನೇ ಚೆಂಡೆಂದು ಭಾವಿಸಿದ ಕ್ಯಾಮರಾ ಮಾಡಿದ ಎಡವಟ್ಟು!

ಹೆಸರು ಕಾಳು, ಹುರುಳಿಕಾಳು ಮೊದಲಾದವುಗಳಲ್ಲಿ ಕೂದಲ ಆರೋಗ್ಯಕ್ಕೆ ಅಗತ್ಯವಾದ ಪ್ರೊಟೀನ್, ಜಿಂಕ್ ಮತ್ತು ಬಯೋಟಿನ್'ಗಳಿರುತ್ತವೆ. ತಲೆಯ ಚರ್ಮಕ್ಕೆ ಆಮ್ಲಜನಕ ಪೂರೈಸುವ ಕೆಂಪು ರಕ್ತ ಕಣಗಳ ಆರೋಗ್ಯಕ್ಕೆ ಫೋಲಿಕ್ ಆ್ಯಸಿಡ್ ಬಹಳ ಉಪಯುಕ್ತ. ಬೇಳೆಕಾಳುಗಳಲ್ಲಿ ಈ ಫೋಲಿಕ್ ಆ್ಯಸಿಡ್ ಸಾಕಷ್ಟಿರುತ್ತದೆ. ಪಾಲಾಕ್ ಸೊಪ್ಪು ಕೂದಲಿನ ಬೆಳವಣಿಗೆಗೆ  ಬಹಳ ಸಹಕಾರಿ. ಕಬ್ಬಿಣ, ವಿಟಮಿನ್ ಎ ಮತ್ತು ಸಿ ಹಾಗೂ ಪ್ರೊಟೀನ್ ಅಂಶಗಳು ಈ ಪಾಲಾಕ್ ಸೊಪ್ಪಿನಲ್ಲಿ ಹೇರಳವಾಗಿವೆ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಪಾರ್ಕ್‌ನಲ್ಲಿ ವಾಕಿಂಗ್ ಹೋದಾಗ ತುಪುಕ್ ಎಂದು ಉಗುಳಿದ ವೃದ್ಧನಿಗೆ 26 ಸಾವಿರ ರೂ ದಂಡ
ಭಾರತೀಯರ ಎಚ್‌-1ಬಿ ವೀಸಾ ಸಂದರ್ಶನ ದಿಢೀರ್‌ ರದ್ದು : ಕಿಡಿ