ಯುವಕರು ಮದುವೆಯಾಗದೇ ಜಪಾನ್‌ನಲ್ಲಿ ಜನಸಂಖ್ಯೆ ಹೆಚ್ಚಾಗಲ್ಲ: ಅಸ್ತಿತ್ವವನ್ನೇ ಕಳಕೊಳ್ಳುವ ಭೀತಿ..!

By Kannadaprabha News  |  First Published Mar 7, 2023, 11:48 AM IST

ಜನನ ಕುಸಿತವನ್ನು ಸಂಪೂರ್ಣವಾಗಿ ಬದಲಿಸಿ ಏರಿಸುವುದು ತುಂಬಾ ಕಷ್ಟವಾದ ಪರಿಸ್ಥಿತಿ ಇದೆ. ಏಕೆಂದರೆ ಮಕ್ಕಳನ್ನು ಹೆರುವ ವಯೋಮಾನದ ಮಹಿಳೆಯರ ಸಂಖ್ಯೆಯೂ ದೇಶದಲ್ಲಿ ಕುಸಿದಿದೆ. ಹೀಗಾಗಿ ಆ ಕುಸಿತದ ವೇಗವನ್ನು ತಗ್ಗಿಸಲು ಸರ್ಕಾರ ಸಾಧ್ಯವಿರುವ ಎಲ್ಲ ಕ್ರಮಗಳನ್ನೂ ಕೈಗೊಳ್ಳಬೇಕು ಎಂದು ಜಪಾನ್‌ ಸಂಸತ್ತಿನ ಮೇಲ್ಮನೆ ಸದಸ್ಯೆ ಹಾಗೂ ಮಾಜಿ ಸಚಿವೆ ಕೂಡ ಆಗಿರುವ ಮೋರಿ ತಿಳಿಸಿದ್ದಾರೆ.


ಟೋಕಿಯೋ (ಮಾರ್ಚ್‌ 7, 2023): 2022ರಲ್ಲಿ ಜಪಾನ್‌ನಲ್ಲಿ ಹುಟ್ಟಿದವರಿಗಿಂತ ಮರಣ ಹೊಂದಿದವರ ಸಂಖ್ಯೆ ದುಪ್ಪಟ್ಟಾಗಿದೆ. ಜನನ ಪ್ರಮಾಣ ಭಾರಿ ಪ್ರಮಾಣದಲ್ಲಿ ಕುಸಿತ ಕಾಣುತ್ತಿದೆ. ಅದನ್ನು ತಡೆಯಲು ಕ್ರಮ ಕೈಗೊಳ್ಳದೆ ಹೋದರೆ, ಇದೇ ಪರಿಸ್ಥಿತಿ ಮುಂದುವರಿದರೆ ಇಡೀ ದೇಶವೇ ನಾಮಾವಶೇಷವಾಗಲಿದೆ ಎಂದು ಜಪಾನ್‌ ಪ್ರಧಾನಿ ಫ್ಯುಮಿಯೋ ಕಿಶಿಡಾ ಅವರ ಸಲಹೆಗಾರ್ತಿ ಮಸಾಕಾ ಮೋರಿ ಅವರು ಎಚ್ಚರಿಕೆಯ ಗಂಟೆ ಮೊಳಗಿಸಿದ್ದಾರೆ.

ಜಪಾನ್‌ನಲ್ಲಿ (Japan) ಜನನ ಪ್ರಮಾಣ (Birth Rate) ಹಂತಹಂತವಾಗಿ ಕುಸಿತ ಕಾಣುತ್ತಿಲ್ಲ. ನೇರ ಪ್ರಪಾತಕ್ಕೆ ಕುಸಿಯುತ್ತಿದೆ. ಇದರರ್ಥ ಈಗ ಜನಿಸುವ ಮಕ್ಕಳನ್ನು (Children) ನಾವು ಕಾರ್ಯನಿರ್ವಹಿಸುವ ಸಾಮರ್ಥ್ಯವನ್ನೇ ಕಳೆದುಕೊಂಡಿರುವ ಸಮಾಜಕ್ಕೆ ಎಸೆಯುತ್ತಿದ್ದೇವೆ ಎಂದರ್ಥ. ಜನನ ಪ್ರಮಾಣ ಕುಸಿತ ತಡೆಗೆ ಕ್ರಮಗಳನ್ನು ತೆಗೆದುಕೊಳ್ಳದೆ ಹೋದರೆ, ಸಾಮಾಜಿಕ ಭದ್ರತಾ ವ್ಯವಸ್ಥೆ ಕುಸಿದು ಬೀಳುತ್ತದೆ. ಕೈಗಾರಿಕಾ ಹಾಗೂ ಆರ್ಥಿಕ ಸಾಮರ್ಥ್ಯ ನೆಲಕಚ್ಚುತ್ತದೆ. ದೇಶವನ್ನು (Country) ರಕ್ಷಣೆ ಮಾಡಲು ಇರುವ ಸ್ವಯಂ ರಕ್ಷಣಾ ಪಡೆಗಳಿಗೆ ಸಾಕಾಗುವಷ್ಟು ಸಿಬ್ಬಂದಿ ಕೂಡ ಸಿಗುವುದಿಲ್ಲ ಎಂದು ಹೇಳಿದ್ದಾರೆ.

Latest Videos

undefined

ಇದನ್ನು ಓದಿ: ಚೀನಾ ಹಿಂದಿಕ್ಕಿದ ಭಾರತ: ಈಗಾಗಲೇ ಭಾರತ ನಂ.1 ಜನಸಂಖ್ಯೆಯ ದೇಶ?

ಜನನ ಕುಸಿತವನ್ನು ಸಂಪೂರ್ಣವಾಗಿ ಬದಲಿಸಿ ಏರಿಸುವುದು ತುಂಬಾ ಕಷ್ಟವಾದ ಪರಿಸ್ಥಿತಿ ಇದೆ. ಏಕೆಂದರೆ ಮಕ್ಕಳನ್ನು ಹೆರುವ ವಯೋಮಾನದ ಮಹಿಳೆಯರ ಸಂಖ್ಯೆಯೂ ದೇಶದಲ್ಲಿ ಕುಸಿದಿದೆ. ಹೀಗಾಗಿ ಆ ಕುಸಿತದ ವೇಗವನ್ನು ತಗ್ಗಿಸಲು ಸರ್ಕಾರ ಸಾಧ್ಯವಿರುವ ಎಲ್ಲ ಕ್ರಮಗಳನ್ನೂ ಕೈಗೊಳ್ಳಬೇಕು ಎಂದು ಜಪಾನ್‌ ಸಂಸತ್ತಿನ ಮೇಲ್ಮನೆ ಸದಸ್ಯೆ ಹಾಗೂ ಮಾಜಿ ಸಚಿವೆ ಕೂಡ ಆಗಿರುವ ಮೋರಿ ತಿಳಿಸಿದ್ದಾರೆ.

ಪ್ರಧಾನಮಂತ್ರಿಗಳ ಸಲಹೆಗಾರ್ತಿಯ ಈ ರೀತಿಯ ಎಚ್ಚರಿಕೆಗೆ ಕಾರಣ 2022ರ ಜನನ- ಮರಣಕ್ಕೆ ಸಂಬಂಧಿಸಿದ ಅಂಕಿ-ಅಂಶಗಳು. ಜಪಾನ್‌ನಲ್ಲಿ ಕಳೆದ ವರ್ಷ 8 ಲಕ್ಷ ಮಂದಿ ಜನಿಸಿದ್ದರೆ, 15.8 ಲಕ್ಷ ಮಂದಿ ಮರಣ ಹೊಂದಿದ್ದಾರೆ. ಜಪಾನ್‌ನ ಜನಸಂಖ್ಯೆ 2008ರಲ್ಲಿ 12.8 ಕೋಟಿಗೆ ತಲುಪಿತ್ತು. ಆದರೆ ಅದು ಈಗ 12.4 ಕೋಟಿಗೆ ಇಳಿಮುಖವಾಗಿದೆ. 65 ವರ್ಷ ಅಥವಾ ಅದಕ್ಕಿಂತ ಹೆಚ್ಚಿನವರ ಸಂಖ್ಯೆ ಕಳೆದ ವರ್ಷ ಶೇ.29ಕ್ಕಿಂತ ಹೆಚ್ಚಾಗಿದೆ.

ಇದನ್ನೂ ಓದಿ: ಜನಸಂಖ್ಯೆ 70 ವರ್ಷದಲ್ಲೇ ಮೊದಲ ಬಾರಿ ಚೀನಾದಲ್ಲಿ ಇಳಿಕೆ

ಸಮಸ್ಯೆ ಏನಾಗಿದೆ..?

  • ಪುರುಷರಲ್ಲಿ ನಿರುದ್ಯೋಗ ಹೆಚ್ಚಾಗುತ್ತಿದೆ. ಹೀಗಾಗಿ ಸಂಸಾರ ಮಾಡಲು ಹಿಂದೇಟು ಹಾಕುತ್ತಿದ್ದಾರೆ
  • ಮಹಿಳೆಯರು ಸ್ವತಂತ್ರವಾಗಿರಲು ಬಯಸುತ್ತಿದ್ದಾರೆ. ಇಂಥವರು ಮದುವೆ ಆಗಲು ಹಿಂಜರಿಯುತ್ತಿದ್ದಾರೆ.
  • ಜಪಾನ್‌ನಲ್ಲಿ ಜೀವನ ದುಬಾರಿಯಾಗಿದೆ, ಹೀಗಾಗಿ ಮಕ್ಕಳ ಹೊಂದಲು ದಂಪತಿಯಿಂದ ಹಿಂದೇಟು
  • ಈ ಎಲ್ಲ ಕಾರಣದಿಂದ ಜಪಾನ್‌ನಲ್ಲೀಗ ವಿಶ್ವದಲ್ಲೇ ಜನನ ಪ್ರಮಾಣ ಅತಿ ಕಡಿಮೆ: ಪ್ರತಿ ದಂಪತಿಗೆ 1.3
  • ಕಳೆದ ವರ್ಷ ಜನನ ಪ್ರಮಾಣಕ್ಕಿಂತ ಮೃತರ ಪ್ರಮಾಣ ದುಪ್ಪಟ್ಟು. 8 ಲಕ್ಷ ಜನನ, 16 ಲಕ್ಷ ಸಾವುಗಳು

ಇದನ್ನೂ ಓದಿ: 2035ರಲ್ಲಿ ಬ್ರಿಟನ್‌ನಲ್ಲಿ ಮುಸ್ಲಿಮರೇ ಬಹುಸಂಖ್ಯಾತರು..! ಮೊದಲ ಬಾರಿಗೆ ಕ್ರೈಸ್ತರ ಜನಸಂಖ್ಯೆ ಅರ್ಧಕ್ಕಿಂತ ಕಮ್ಮಿ 

click me!