ಭಾರತದ ಸಂಸತ್ತಿನಲ್ಲಿ ವಿಪಕ್ಷಗಳಿಗೆ ಉಸಿರುಗಟ್ಟಿಸುವ ಸ್ಥಿತಿ; ಬಿಜೆಪಿಯದ್ದು ಹೇಡಿತನದ ಸಿದ್ಧಾಂತ: ರಾಹುಲ್‌ ಗಾಂಧಿ ಆರೋಪ

By Kannadaprabha News  |  First Published Mar 7, 2023, 8:57 AM IST

ಭಾರತದಲ್ಲಿ ವಿಪಕ್ಷಗಳಿಗೆ ಉಸಿರುಗಟ್ಟಿಸುವ ವಾತಾವರಣವಿದೆ, ಸಂಸತ್‌ನಲ್ಲಿ ವಿಪಕ್ಷ ಸದಸ್ಯರ ಮೈಕ್‌ ಆಫ್‌ ಮಾಡಲಾಗುತ್ತದೆ ಎಂದು ಬ್ರಿಟನ್‌ ಸಂಸದರ ಮುಂದೆ ರಾಹುಲ್‌ ಗಾಂಧಿ ಆರೋಪ ಮಾಡಿದ್ದಾರೆ. 


ಲಂಡನ್‌ (ಮಾರ್ಚ್‌ 7, 2023): ಭಾರತದ ಸಂಸತ್‌ನಲ್ಲಿ ವಿಪಕ್ಷಗಳ ಸದಸ್ಯರು ಮಾತನಾಡುವಾಗ ಪದೇ ಪದೇ ಅವರ ಮೈಕ್ರೋಫೋನ್‌ಗಳನ್ನು ಆಫ್‌ ಮಾಡಲಾಗುತ್ತದೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಆರೋಪಿಸಿದ್ದಾರೆ. ನನಗೆ ಇಂಥ ಹಲವು ಅನುಭವ ಆಗಿದೆ ಎಂದು ಅವರು ಹೇಳಿದ್ದಾರೆ.

ಪ್ರಸಕ್ತ ಲಂಡನ್‌ (London) ಪ್ರವಾಸದಲ್ಲಿರುವ ರಾಹುಲ್‌ ಗಾಂಧಿ (Rahul Gandhi), ಸೋಮವಾರ ಹೌಸ್‌ ಆಫ್‌ ಕಾಮನ್ಸ್‌ನ (House of Commons) ಗ್ರ್ಯಾಂಡ್‌ ಕಮಿಟಿ ಕೊಠಡಿಯಲ್ಲಿ ಆಯ್ದ ಸಂಸದರ ಜೊತೆ ಸಂವಾದ ನಡೆಸಿದ ರಾಹುಲ್‌ ಗಾಂಧಿ, ‘ಭಾರತದಲ್ಲಿ (India) ವಿಪಕ್ಷಗಳಿಗೆ (Opposition Parties) ಉಸಿರುಕಟ್ಟಿಸುವ ವಾತಾವರಣ ಇದೆ. ನಮ್ಮ ಸಂಸತ್ತಿನ (Parliament) ಮೈಕ್‌ಗಳು (Mikes) ಹಾಳಾಗಿರುವುದಿಲ್ಲ, ಅವು ಕಾರ್ಯನಿರ್ವಹಿಸುತ್ತಿರುತ್ತವೆ, ಆದರೂ ನಾವು ಅದನ್ನು ಆನ್‌ ಮಾಡಲು ಸಾಧ್ಯವಾಗುವುದಿಲ್ಲ. ಸಂಸತ್‌ನಲ್ಲಿ ಮಾತನಾಡುವ ವೇಳೆ ನನಗೂ ಹಲವು ಬಾರಿ ಇಂಥ ಅನುಭವ ಆಗಿದೆ’ ಎಂದರು.

Tap to resize

Latest Videos

ಇದನ್ನು ಓದಿ: ಭಾರತದ ವಿದೇಶಾಂಗ ಸಚಿವರಿಗೆ ಚೀನಾದ ಬೆದರಿಕೆ ಇನ್ನೂ ಅರ್ಥವಾಗಿಲ್ಲ, ರಾಹುಲ್ ಗಾಂಧಿ!

ಜೊತೆಗೆ, ‘ವಿನಾಶಕಾರಿ ಹಣಕಾಸು ನೀತಿಯಾದ ಅಪನಗದೀಕರಣದ (Demonetisation) ಬಗ್ಗೆ ನಮಗೆ ಚರ್ಚೆ ಮಾಡಲು ಅವಕಾಶ ನೀಡಲಿಲ್ಲ, ಜಿಎಸ್‌ಟಿ ವಿಷಯ ಚರ್ಚೆಗೆ ನಮಗೆ ಅವಕಾಶ ನೀಡಲಿಲ್ಲ, ಚೀನಿಯರು ನಮ್ಮ ದೇಶದೊಳಗೆ ನುಗ್ಗಿದ ವಿಷಯ ಚರ್ಚೆಗೆ ಅವಕಾಶ ಕೊಡಲಿಲ್ಲ. ಸ್ಪಂದನಶೀಲ ಚರ್ಚೆ, ಕಾವೇರಿದ ಚರ್ಚೆ, ವಾದ-ಪ್ರತಿವಾದ, ಭಿನ್ನಾಭಿಪ್ರಾಯಕ್ಕೆ ಅವಕಾಶವಿದ್ದ ಸಂಸತ್‌ ಕಲಾಪಗಳು ನನಗೆ ಈಗಲೂ ನೆನಪಿದೆ. ಆದರೆ ಅದನ್ನೀಗ ನಾವು ಕಳೆದುಕೊಂಡಿದ್ದೇವೆ. ಅಲ್ಲೀಗ ಉಸಿರುಕಟ್ಟಿಸುವ ವಾತಾವರಣ ಇದೆ’ ಎಂದು ರಾಹುಲ್‌ ಹೇಳಿದರು.

ಬಿಜೆಪಿಯದ್ದು ಹೇಡಿತನದ ಸಿದ್ಧಾಂತ: ಲಂಡನ್‌ನಲ್ಲಿ ರಾಹುಲ್‌ ಗಾಂಧಿ ಟೀಕೆ
ಬ್ರಿಟನ್‌ನಲ್ಲಿ ಬಿಜೆಪಿ ಮೇಲಿನ ವಾಗ್ದಾಳಿ ಮುಂದುವರೆಸಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ಬಿಜೆಪಿ ದ್ವೇಷ ಮತ್ತು ಹಿಂಸೆಯ ಸಿದ್ಧಾಂತವನ್ನು ಅನುಸರಿಸುತ್ತದೆ. ಆ ಸಿದ್ಧಾಂತದ ಆಂತರ್ಯದಲ್ಲಿರುವುದು ಹೇಡಿತನ ಎಂದು ಹೇಳಿದ್ದಾರೆ.

ಇದನ್ನೂ ಓದಿ: ರಾಹುಲ್‌ ಗಾಂಧಿ ಭಾರತ ವಿರೋಧಿ ಏಜೆನ್ಸಿಯಲ್ಲಿ ಏಜೆಂಟರಾಗಿ ಕೆಲಸ ಮಾಡ್ತಿದ್ದಾರಾ..? ಬಿಜೆಪಿ ಪ್ರಶ್ನೆ

ಅನಿವಾಸಿ ಭಾರತೀಯರೊಂದಿಗೆ ಇಲ್ಲಿ ನಡೆದ ಸಂವಾದದಲ್ಲಿ ಮಾತನಾಡಿದ ಅವರು, ದ್ವೇಷ ಮತ್ತು ಹಿಂಸೆಯ ಸಿದ್ಧಾಂತಗಳು ಯಾವಾಗಲೂ ಜನರ ಮೇಲೆ ದಾಳಿ ಮಾಡುತ್ತವೆ. ನೀವು ಗಮನಿಸಿದ್ದರೆ ಈ ರೀತಿ ದಾಳಿ ಮಾಡುವುದು ಬಿಜೆಪಿ ಹಾಗೂ ಆರ್‌ಎಸ್‌ಎಸ್‌ನ ಸ್ವಭಾವದಲ್ಲೇ ಇದೆ ಎಂದು ಹೇಳಿದ್ದಾರೆ.

ಇದೇ ವೇಳೆ ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಅವರ ಹೇಳಿಕೆಯನ್ನು ಉಲ್ಲೇಖಿಸಿ ಮಾತನಾಡಿದ ರಾಹುಲ್‌, ‘ಚೀನಾ ನಮಗಿಂತ ಶಕ್ತಿಶಾಲಿಯಾಗಿದೆ ಎಂದು ವಿದೇಶಾಂಗ ಸಚಿವರು ಹೇಳಿದ್ದಾರೆ. ಇದರ ಅರ್ಥ, ನಮಗಿಂತ ಹೆಚ್ಚು ಶಕ್ತಿಶಾಲಿಯಾದವರೊಂದಿಗೆ ಹೇಗೆ ಹೋರಾಡುವುದು ಎನ್ನುವ ಭಯ. ಬಿಜೆಪಿಯ ಸಿದ್ಧಾಂತದ ಆಂತರ್ಯದಲ್ಲಿ ಹೇಡಿತನವಿದೆ. ಹಾಗಾಗಿ ಭಾರತದಲ್ಲಿ ನಡೆಯುತ್ತಿರುವುದು ಧೈರ್ಯ ಮತ್ತು ಹೇಡಿತನದ ನಡುವಿನ ಯುದ್ಧ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ರಾಹುಲ್ ಗಾಂಧಿಯಂಥ ಬಚ್ಚಾ ಕಟ್ಟಿಕೊಂಡು ಕಾಂಗ್ರೆಸ್ ಏನು ಮಾಡಲು ಸಾಧ್ಯ?: ಬಿಎಸ್‌ವೈ ಟೀಕೆ

ಬಿಜೆಪಿ ನನ್ನ ಮೇಲೆ ಎಷ್ಟೇ ದಾಳಿ ಮಾಡಿದರು ಅದು ನನ್ನನ್ನು ಕುಗ್ಗಿಸುವುದಿಲ್ಲ. ಪ್ರತಿ ಟೀಕೆಗಳು ನಾನು ಮತ್ತಷ್ಟು ಬೆಳೆಯಲು ಸಹಾಯ ಮಾಡುತ್ತದೆ. ಬಿಜೆಪಿ ಹೇಡಿಯಂತೆ ದಾಳಿ ಮಾಡುತ್ತದೆ. ನಾವು ಪ್ರೀತಿಯೊಂದಿಗೆ ಧೈರ್ಯದಿಂದ ಹೋರಾಡುತ್ತೇವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಮೋದಿ ಸರ್ಕಾರದ ಉಜ್ವಲಾ, ಜನಧನ್‌ಗೆ ರಾಹುಲ್‌ ಮೆಚ್ಚುಗೆ

click me!