ಅಕ್ವೇರಿಯಂ ಒಳಗೆ ಟಾಯ್ಲೆಟ್ ನಿರ್ಮಿಸಿದ ಜಪಾನ್: ವೀಡಿಯೋ ವೈರಲ್

Published : Jun 27, 2023, 05:14 PM ISTUpdated : Jun 27, 2023, 05:25 PM IST
ಅಕ್ವೇರಿಯಂ ಒಳಗೆ ಟಾಯ್ಲೆಟ್ ನಿರ್ಮಿಸಿದ ಜಪಾನ್:  ವೀಡಿಯೋ ವೈರಲ್

ಸಾರಾಂಶ

ಅಕ್ವೇರಿಯಂ ಒಳಭಾಗದಲ್ಲಿ ಜಪಾನ್ ಟಾಯ್ಲೆಟ್ ಒಂದನ್ನು ನಿರ್ಮಿಸಿದ್ದು, ಇದರ ವೀಡಿಯೋ ಈಗ ವೈರಲ್ ಆಗಿದೆ. 

ಜಪಾನ್: ತಂತ್ರಜ್ಞಾನದ ಸದ್ಭಳಕೆ ಹಾಗೂ ಅತ್ಯಾಧುನಿಕ ತಂತ್ರಜ್ಞಾನಗಳ ಬಳಕೆಯಲ್ಲಿ ಜಪಾನ್ ಸದಾ ಮುಂದು. ಒಂದಲ್ಲ ಒಂದು ಹೊಸ ಹೊಸ ತಂತ್ರಜ್ಞಾನಗಳನ್ನು ದಿನಬಳಕೆಯಲ್ಲಿ ಅಳವಡಿಸಿಕೊಂಡು ಜಗತ್ತನ್ನು ಸದಾ ಅಚ್ಚರಿಗೆ ದೂಡುತ್ತೆ ಜಪಾನ್. ಅಧುನಿಕತೆಯ ಜೊತೆ ಪರಿಸರ ಕಾಳಜಿಗೆ ಮಹತ್ವ ನೀಡುವ ಜಪಾನ್‌ನಲ್ಲಿ ಚರಂಡಿಯಲ್ಲಿ ಹರಿಯುವ ನೀರು ಕೂಡ ಬಲು ತಿಳಿ ತಿಳಿ. ಈ ಚರಂಡಿಯ ವೀಡಿಯೋವೂ ವರ್ಷಗಳ ಹಿಂದೆ ಸಾಕಷ್ಟು ವೈರಲ್ ಆಗಿತ್ತು. ಈಗ ಮತ್ತೊಂದು ವೀಡಿಯೋ ವೈರಲ್ ಆಗಿದೆ. ಅಕ್ವೇರಿಯಂ ಒಳಭಾಗದಲ್ಲಿ ಜಪಾನ್ ಟಾಯ್ಲೆಟ್ ಒಂದನ್ನು ನಿರ್ಮಿಸಿದ್ದು, ಇದರ ವೀಡಿಯೋ ಈಗ ವೈರಲ್ ಆಗಿದೆ. 

ಇಂಟರ್‌ನೆಟ್ ಹಾಗೂ ಸೋಶಿಯಲ್ ಮೀಡಿಯಾಗಳು ನಮಗೆ ಅತ್ಯಾಧ್ಬುತವಾದ ಅಸಾಮಾನ್ಯ ಕಟ್ಟಡಗಳು, ಮನೆಗಳು, ಕೊಠಡಿ, ಸ್ನಾನಗೃಹಗಳು ಸೇರಿದಂತೆ ವೈವಿಧ್ಯಮಯವಾದ ವಾಸ್ತುಶಿಲ್ಪದ ವೀಡಿಯೋಗಳನ್ನು ಆಗಾಗ ತೋರಿಸುತ್ತಿರುತ್ತವೆ. ಇವುಗಳು ಕುತೂಹಲ ಕೆರಳಿಸುವ ಜೊತೆ ಇದರ ವಾಸ್ತುಶಿಲ್ಪ ಸೌಂದರ್ಯವೂ ಜನರನ್ನು ಮಂತ್ರಮುಗ್ಧಗೊಳಿಸುತ್ತವೆ. ಅದೇ ರೀತಿ ಈಗ ವೈರಲ್ ಆಗಿರುವ ವೀಡಿಯೋದಲ್ಲಿ ಅಕ್ವೇರಿಯಂನಿಂದ ಸುತ್ತುವರಿದ ಶೌಚಾಲಯವೂ ನೋಡುಗರನ್ನು ಅಚ್ಚರಿಗೆ ದೂಡುತ್ತಿದೆ. 

ಇದು ಅಕ್ವೇರಿಯಂ ಅಲ್ಲ ಜಪಾನ್‌ನ ಚರಂಡಿ... ಹಳೆ ವಿಡಿಯೋ ಮತ್ತೆ ವೈರಲ್

ಜಪಾನ್‌ನ (Japan) ಹಿಪೊಪೊ ಪಾಪಾ ಕೆಫೆಯಲ್ಲಿ ಈ  ಅಕ್ವೇರಿಯಂ (aquarium) ಟಾಯ್ಲೆಟ್  ಇದ್ದು, ಇದು ಈ ಕೆಫೆಯ ಗ್ರಾಹಕರಿಗೆ ಒಂದು ರೀತಿಯ ವಿಭಿನ್ನ ಅನುಭವವನ್ನು ಒದಗಿಸುತ್ತದೆ. ಕೆಫೆಯ ಒಳಗಿರುವ ಶೌಚಾಲಯವು ಗಾಜಿನ ಗೋಡೆಗಳಿಂದ ಸುತ್ತುವರಿದಿದ್ದು,, ನೀರು ಮತ್ತು ಮೀನುಗಳಿಂದ ತುಂಬಿದೆ. ಆದ್ದರಿಂದ, ಒಬ್ಬ ವ್ಯಕ್ತಿಯು ತಮ್ಮ ನೈಸರ್ಗಿಕ ಕರೆಗಾಗಿ (Nature call) ಈ ಶೌಚಾಲಯಕ್ಕೆ ಹೋದರೆ ಅವರನ್ನು ಹಲವಾರು ಸುಂದರವಾದ ಜಲಚರಗಳು ಸುತ್ತುವರಿಯುತ್ತವೆ. 

ಈ ವೀಡಿಯೋವನ್ನು ಕಳೆದ ವರ್ಷ ಪೋಸ್ಟ್ ಮಾಡಲಾಗಿದ್ದು, ಸಾವಿರಾರು ಜನ ವೀಕ್ಷಿಸಿದ್ದಾರೆ.  ಅನೇಕರು ಈ ವೀಡಿಯೋಗೆ ತಮಾಷೆಯಾಗಿ ಕಾಮೆಂಟ್ ಮಾಡಿದ್ದಾರೆ. ಟಾಯ್ಲೆಟ್‌ಗೆ ಹೋದ ನನಗೆ ಈ ಮೀನುಗಳು ಹೀಗೆ ಗುರಾಯಿಸುವುದನ್ನು ನೋಡಿ ನಾಚಿಕೆ ಆಯ್ತು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ನೀವು ಕಕ್ಕಾ ಮಾಡುವುದನ್ನು ಅವುಗಳು ನೋಡುತ್ತಿರುತ್ತವೆ ಎಂದು ಕಾಮೆಂಟ್ ಮಾಡಿದ್ದಾರೆ.  ಮತ್ತೆ ಕೆಲವರು ಆ ಮೀನುಗಳೆಲ್ಲಾ ನೀವು ಟೂ ಮಾಡುವುದನ್ನೇ ಕಾಯುತ್ತಿರುತ್ತವೆ ಎಂದು ಕಾಮೆಂಟ್ ಮಾಡಿದ್ದಾರೆ. ಇದರಿಂದ ಪ್ರೈವೆಸಿಗೆ ಧಕ್ಕೆಯಾಗ್ತಿದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಅದೇನೆ ಇರಲಿ ನೇಚರ್ ಕಾಲ್ ಅಥವಾ ನೈಸರ್ಗಿಕ ಕರೆ ಎಂದು ಕರೆಯಲ್ಪಡುವ  ದೈನಂದಿನ ಶೌಚಕಾರ್ಯವನ್ನು ಮಾಡುವಾಗ ಯಾರಾದರೂ ಗುರಾಯಿಸಿದರೆ ಹೇಗಿರುತ್ತೆ? ನಾಚಿಕೆಯಲ್ಲಿ ಎದ್ದು ಓಡಿ ಹೋಗೋದಂತೂ ಗ್ಯಾರಂಟಿ. ಹೀಗಿರುವಾಗ ಇಲ್ಲಿ ಮೀನುಗಳು ಗುರಾಯಿಸಿದ್ರೆ ಕೋರೋದ್ಯಾಗೆ ಎಂಬುದು ಅನೇಕರ ಪ್ರಶ್ನೆ. ಅದೇನೆ ಇರಲಿ ಜಪಾನ್ ತಂತ್ರಜ್ಞಾನವನಂತು ಮೆಚ್ಚಲೇಬೇಕು ಅಲ್ಲವೇ?

ಆಹಹಾ ಖಾರ ಖಾರ.... ಭಾರತೀಯ ಸ್ಟ್ರೀಟ್ ಫುಡ್‌ಗೆ ಮನಸೋತ ಜಪಾನ್ ರಾಯಭಾರಿ

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

PUBG ಗೇಮ್​ನಿಂದ 6ನೇ ಮಗುವಿನತ್ತ ಪಯಣ: ಅಕ್ರಮವಾಗಿ ಭಾರತಕ್ಕೆ ಬಂದಿದ್ದಾಕೆ ಮತ್ತೊಮ್ಮೆ ಗರ್ಭಿಣಿ!
ಭಾರಿ ಸದ್ದು ಮಾಡ್ತಿದೆ ಪುಟಿನ್​ ತಂದ ಸೂಟ್​ಕೇಟ್: ಅದರ ಹಿಂದಿದೆ ಊಹೆಗೆ ನಿಲುಕದ ವಿಚಿತ್ರ ಸ್ಟೋರಿ! ಏನಿದೆ ಅದರಲ್ಲಿ?