
ರೋಮ್ : ಇಟಲಿ ಪ್ರಧಾನಿ ಜಾರ್ಜಿಯಾ ಮೆಲೊನಿ ಅವರು ತಮ್ಮ ಗಂಡನಿಗೆ ವಿಚ್ಛೇದನ ಘೋಷಿಸಿದ ಬೆನ್ನಲ್ಲೇ, ಅವರ ಪತ್ರಕರ್ತ ಪತಿ ಆ್ಯಂಡ್ರೆಯಾ ಗಿಯಾಂಬ್ರುನೊ ಅವರ ರಾಸಲೀಲೆಗಳು ಒಂದೊಂದಾಗಿ ಹೊರಬರುತ್ತಿವೆ. ಗಿಯಾಂಬ್ರುನೊ ಅವರು ಇತ್ತೀಚಿನ ಟೀವಿ ಕಾರ್ಯಕ್ರಮವೊಂದರಲ್ಲಿ ಬಹಿರಂಗವಾಗಿ ತಮ್ಮ ಮಹಿಳಾ ಸಹೋದ್ಯೋಗಿಗಳನ್ನು ‘ಗುಂಪು ಸೆಕ್ಸ್’ಗೆ ಆಹ್ವಾನಿಸಿರುವ ವಿಡಿಯೋ ಹೊರಬಿದ್ದಿದೆ.
ಪತ್ರಕರ್ತರಾಗಿರುವ ಆ್ಯಂಡ್ರೆಯಾ ಟೀವಿ ನಿರೂಪಕರಾಗಿದ್ದು ಇತ್ತೀಚೆಗೆ ಕಾರ್ಯಕ್ರಮದಲ್ಲಿ ತಮ್ಮ ಆಶ್ಲೀಲ ಲೈಂಗಿಕ ಮಾತುಗಳನ್ನು ಆಡಿದ್ದರು ಹಾಗೂ ತಮ್ಮ ಗುಪ್ತಾಂಗವನ್ನು ಸ್ಪರ್ಶಿಸುವ ಮೂಲಕ ಟೀಕೆಗೊಳಗಾಗಿದ್ದರು. ಇದರಲ್ಲಿ ಅವರು ತಮ್ಮ ಮಹಿಳಾ ಸಹೋದ್ಯೋಗಿಗೆ ‘ನೀ ಏಕೆ ನನಗೆ ಮೊದಲೇ ಸಿಗಲಿಲ್ಲ. ನಿನಗೆ ಗೊತ್ತಾ? ನನಗೆ ಅಕ್ರಮ ಸಂಬಂಧವಿದೆ. ಗುಂಪು ಸೆಕ್ಸ್ ಮಾಡಲು ನಾವು ಮೂರನೇ ವ್ಯಕ್ತಿಯನ್ನು ಹುಡುಕುತ್ತಿದ್ದೇವೆ. ನಾಲ್ವರು ಕೂಡ ಮಾಡಬಹುದು. ನೀವು ನಮ್ಮ ಜತೆ ಗುಂಪು ಸೆಕ್ಸ್‌ನಲ್ಲಿ ಭಾಗವಹಿಸುವಿರಾ’ ಎಂದಿದ್ದಾರೆ. ಕಳೆದ ಎರಡು ದಿನಗಳ ಹಿಂದಷ್ಟೇ ಪ್ರಧಾನಿ ಮೆಲೊನಿ ಅವರು ತಮ್ಮ ಪತಿ ಆ್ಯಂಡ್ರಿಯಾಗೆ ವಿಚ್ಛೇದನ ನೀಡುತ್ತಿರುವುದಾಗಿ ಘೋಷಿಸಿದ್ದರು.
ಹಣ, ತಂತ್ರಜ್ಞಾನವಿಲ್ಲದೆ ಕಾಡಲ್ಲಿ ಬದುಕುತ್ತಿರುವ ಐರಿಶ್ ಬರಹಗಾರನಿಗೆ ಗಾಂಧೀಜಿಯೇ ಸ್ಫೂರ್ತಿ!
ತನ್ನ ಪತಿ ಆಂಡ್ರಿಯಾ ಗಿಂಬ್ರೂನೊರಿಂದ ದೂರವಾಗುತ್ತಿರುವ ಬಗ್ಗೆ ಸ್ವತಃ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ, ತಮ್ಮ ಫೇಸ್‌ಬುಕ್ ಪೇಜ್‌ನಲ್ಲಿ ಬಹಿರಂಗಪಡಿಸಿದ್ದರು. ಸುಮಾರು 10 ವರ್ಷಗಳ ಕಾಲ ಆಂಡ್ರಿಯಾ ಗಿಯಾಂಬ್ರುನೊ ಅವರೊಂದಿಗಿನ ನನ್ನ ಸಂಬಂಧವು ಇಲ್ಲಿಗೆ ಕೊನೆಗೊಳ್ಳುತ್ತದೆ ಎಂದು ಹೇಳಿದ್ದರು. ಜಾರ್ಜಿಯಾ ಮೆಲೋನಿ ಪತಿ ಆಂಡ್ರಿಯಾ ಗಿಂಬ್ರೂನೊ ಟಿವಿ ಪತ್ರಕರ್ತನಾಗಿದ್ದು, ಇತ್ತೀಚೆಗೆ ಟಿವಿ ಲೈವ್‌ನಲ್ಲೇ ಸೆಕ್ಸಿಯೆಷ್ಟ್ ಕಾಮೆಂಟ್ ಮಾಡಿ ವ್ಯಾಪಕ ಟೀಕೆಗೆ ಒಳಗಾಗಿದ್ದರು. ಇವರಿಬ್ಬರಿಗೆ ಒಂದು ಹೆಣ್ಣು ಮಗುವಿದೆ.
ಫೋರ್ಬ್ಸ್ ಶ್ರೀಮಂತರ ಪಟ್ಟಿಯಲ್ಲಿ ಇನ್ಫಿ ನಾರಾಯಣಮೂರ್ತಿಯವರನ್ನು ಹಿಂದಿಕ್ಕಿದ ಕನ್ನಡದ ಸಹೋದರರು!
ಇಟಲಿಯ ಬಲಪಂಥೀಯ ನಾಯಕಿಯಾಗಿರುವ ಮೆಲೋನಿ ಅಧಿಕಾರಕ್ಕೆ ಬಂದ ನಂತರ ಆಡಳಿತದಲ್ಲಿ ಹಲವು ಬದಲಾವಣೆ ತಂದಿದ್ದು, ಇಟಾಲಿಯನ್ ಹೊರತಾಗಿ ಇಂಗ್ಲೀಷ್ ಅಥವಾ ಬೇರಾವುದೇ ವಿದೇಶಿ ಭಾಷೆ ಬಳಸಿದರೆ ಬರೋಬ್ಬರಿ 89 ಲಕ್ಷ ರು. ಗಳ ದಂಡ ವಿಧಿಸುವ ನೂತನ ಕಾನೂನನ್ನು ಜಾರಿಗೆ ತಂದು ಸುದ್ದಿಯಾಗಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ