40 ಕಿ.ಮೀ. ಉದ್ದ ಹಾಗೂ 10 ಕಿ.ಮೀ. ಅಗಲದ ಮತ್ತು ವಿಶ್ವದಲ್ಲೇ ಅತ್ಯಧಿಕ ದಟ್ಟಣೆಯ ಪ್ರದೇಶಗಳಲ್ಲಿ ಒಂದಾಗಿರುವ ಗಾಜಾದಲ್ಲಿ ಜನರು ಅನ್ನಾಹಾರ ಹಾಗೂ ಶುದ್ಧ ಕುಡಿಯುವ ನೀರಿಗೂ ಪರದಾಡುತ್ತಿದ್ದಾರೆ. ಆಸ್ಪತ್ರೆಗಳಲ್ಲಿ ಔಷಧಗಳು ಖಾಲಿಯಾಗಿವೆ. ಇದೀಗ ಈಜಿಪ್ಟ್ ಗಡಿಯ ಮೂಲಕ 20 ಟ್ರಕ್‌ಗಳು ಅವಶ್ಯ ವಸ್ತು ಹೊತ್ತು ಗಾಜಾಗೆ ಪ್ರವೇಶಿಸಿವೆ. ಇನ್ನೂ 200 ಟ್ರಕ್‌ಗಳು ಗಾಜಾ ಪ್ರವೇಶಿಸಲು ಕಾಯುತ್ತಿವೆ.
ರಫಾ (ಅಕ್ಟೋಬರ್ 22, 2023): ಇಸ್ರೇಲ್- ಹಮಾಸ್ ಸಮರದ ಹಿನ್ನೆಲೆಯಲ್ಲಿ ಕಳೆದ 2 ವಾರಗಳಿಂದ ಬಂದ್ ಆಗಿದ್ದ ಗಾಜಾ- ಈಜಿಪ್ಟ್ ಗಡಿಯನ್ನು ಶನಿವಾರದಿಂದ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ. ಇದರಿಂದಾಗಿ ಇಸ್ರೇಲ್ ಸಮರದ ಬಳಿಕ ಅವಶ್ಯ ವಸ್ತುಗಳನ್ನು ತರಿಸಿಕೊಳ್ಳಲು ಇದ್ದ ಏಕೈಕ ಮಾರ್ಗವೂ ಬಂದ್ ಆಗಿ ಜೀವನಾವಶ್ಯಕ ಸಾಮಗ್ರಿಗಳಿಗಾಗಿ ಪರದಾಡುತ್ತಿದ್ದ ಗಾಜಾದ 23 ಲಕ್ಷ ಜನರು ನಿರಾಳರಾಗುವಂತಾಗಿದೆ.
40 ಕಿ.ಮೀ. ಉದ್ದ ಹಾಗೂ 10 ಕಿ.ಮೀ. ಅಗಲದ ಮತ್ತು ವಿಶ್ವದಲ್ಲೇ ಅತ್ಯಧಿಕ ದಟ್ಟಣೆಯ ಪ್ರದೇಶಗಳಲ್ಲಿ ಒಂದಾಗಿರುವ ಗಾಜಾದಲ್ಲಿ ಜನರು ಅನ್ನಾಹಾರ ಹಾಗೂ ಶುದ್ಧ ಕುಡಿಯುವ ನೀರಿಗೂ ಪರದಾಡುತ್ತಿದ್ದಾರೆ. ಆಸ್ಪತ್ರೆಗಳಲ್ಲಿ ಔಷಧಗಳು ಖಾಲಿಯಾಗಿವೆ. ಇದೀಗ ಈಜಿಪ್ಟ್ ಗಡಿಯ ಮೂಲಕ 20 ಟ್ರಕ್‌ಗಳು ಅವಶ್ಯ ವಸ್ತು ಹೊತ್ತು ಗಾಜಾಗೆ ಪ್ರವೇಶಿಸಿವೆ. ಇನ್ನೂ 200 ಟ್ರಕ್‌ಗಳು ಗಾಜಾ ಪ್ರವೇಶಿಸಲು ಕಾಯುತ್ತಿವೆ.
ಇದನ್ನು ಓದಿ: ಉಗ್ರರ ಸರ್ವನಾಶಕ್ಕೆ ರೆಡಿ! ಅಮೆರಿಕ, ಯುಕೆ ಬಲದ ಬಳಿಕ ಗಾಜಾದಲ್ಲಿ ದಾಳಿಗೆ ಸಿದ್ಧರಾಗುವಂತೆ ಭೂಸೇನೆಗೆ ಇಸ್ರೇಲ್ ಸೂಚನೆ!
ಹಮಾಸ್ ಉಗ್ರ ದಾಳಿ ಹಿನ್ನೆಲೆಯಲ್ಲಿ ಉಗ್ರರಿಗೆ ಪಾಠ ಕಲಿಸಲು ನಿರ್ಧರಿಸಿದ್ದ ಇಸ್ರೇಲ್ ಸೇನಾ ಪಡೆ, ಈಜಿಪ್ಟ್ ಕಡೆಯಿಂದ ಗಾಜಾಕ್ಕೆ ಅವಶ್ಯ ವಸ್ತು ಸಾಗಿಸಲಾಗುವ ಮಾರ್ಗವನ್ನೇ ಗುರಿಯಾಗಿಸಿ ದಾಳಿ ನಡೆಸಿ, ಅದನ್ನು ಬಂದ್ ಮಾಡಿತ್ತು. ತನ್ನ 200 ಜನರನ್ನು ಹಮಾಸ್ ಉಗ್ರರು ಅಪಹರಿಸಿದ್ದು, ಅವರನ್ನು ಬಿಡುಗಡೆ ಮಾಡುವವರೆಗೂ ಗಾಜಾಕ್ಕೆ ಅವಶ್ಯ ವಸ್ತುಗಳು ಸಿಗದಂತೆ ಮಾಡುವುದಾಗಿ ಶಪಥ ಮಾಡಿತ್ತು. ಇದೀಗ ಅಮೆರಿಕ, ವಿಶ್ವಸಂಸ್ಥೆಗಳ ಮನವೊಲಿಕೆ ಬೆನ್ನಲ್ಲೇ ಈಜಿಪ್ಟ್- ಗಾಜಾ ಗಡಿ ಮತ್ತೆ ಸಂಚಾರಕ್ಕೆ ಮುಕ್ತವಾಗಿದೆ.
ಈ ನಡುವೆ, 200 ಟ್ರಕ್ ಅವಶ್ಯ ವಸ್ತುಗಳು ಏತಕ್ಕೂ ಸಾಲದು. ಬಿಕ್ಕಟ್ಟು ಆರಂಭವಾಗುವ ಮುನ್ನ ಪ್ರತಿದಿನ 400 ಟ್ರಕ್‌ಗಳು ಗಾಜಾಕ್ಕೆ ಬರುತ್ತಿದ್ದವು. ಗಾಜಾದಲ್ಲಿ ಪರಿಸ್ಥಿತಿ ವಿಕೋಪದಲ್ಲಿದೆ ಎಂದು ವಿಶ್ವಸಂಸ್ಥೆಯ ವಿಶ್ವ ಆರೋಗ್ಯ ಕಾರ್ಯಕ್ರಮದ ಮುಖ್ಯಸ್ಥೆ ಸಿಂಡಿ ಮೆಕ್‌ಕೇನ್ ತಿಳಿಸಿದ್ದಾರೆ.
ಇದನ್ನೂ ಓದಿ: ಜೋ ಬೈಡೆನ್ ಭೇಟಿ ಬೆನ್ನಲ್ಲೇ ಇಸ್ರೇಲ್‌ಗೆ ಬಂದಿಳಿದ ರಿಷಿ ಸುನಕ್: ಬೆಂಜಮಿನ್ ನೆತನ್ಯಾಹು ಭೇಟಿಯಾಗಲಿರೋ ಭಾರತದ ಅಳಿಯ
ಹಮಾಸ್‌ನಿಂದ 2 ಅಮೆರಿಕ ಒತ್ತೆಯಾಳುಗಳ ಬಿಡುಗಡೆ
ಗಾಜಾ ಸಿಟಿ/ಜೆರುಸಲೇಂ: ಇಸ್ರೇಲ್ ಮೇಲೆ ಅಕ್ಟೋಬರ್ 7ರಂದು ಹಠಾತ್ ದಾಳಿ ನಡೆಸಿ 200 ಮಂದಿಯನ್ನು ಕರೆದೊಯ್ದು ಗಾಜಾ ಪಟ್ಟಿಯಲ್ಲಿ ಒತ್ತೆಯಾಳುಗಳಾಗಿರಿಸಿಕೊಂಡಿದ್ದ ಹಮಾಸ್ ಉಗ್ರರು, ಆ ಪೈಕಿ ಇಬ್ಬರು ಅಮೆರಿಕನ್ನರನ್ನು ಬಿಡುಗಡೆ ಮಾಡಿದ್ದಾರೆ.
ಮತ್ತೊಂದೆಡೆ, ಮತ್ತಷ್ಟು ನಾಗರಿಕ ಒತ್ತೆಯಾಳನ್ನು ಬಿಡುಗಡೆ ಮಾಡುವ ಕುರಿತು ಖತಾರ್ ಹಾಗೂ ಈಜಿಪ್ಟ್ ಜತೆ ಮಾತುಕತೆ ನಡೆಸುತ್ತಿರುವುದಾಗಿ ಹೇಳಿದ್ದಾರೆ. ಇದರಿಂದಾಗಿ ಉಗ್ರರ ಹಿಡಿತದಲ್ಲಿರುವ ಇನ್ನಷ್ಟು ಮಂದಿ ಬಂಧಮುಕ್ತಗೊಳ್ಳುವ ಆಶಾವಾದ ಗರಿಗೆದರಿದೆ.
ಇದನ್ನು ಓದಿ: ಹಮಾಸ್ ಮೇಲೆ ಇನ್ನೂ ಆರಂಭವಾಗದ ಭೂಸೇನೆ ದಾಳಿ: ನಾಳೆ ಇಸ್ರೇಲ್‌ಗೆ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಮಹತ್ವದ ಭೇಟಿ
ಗಾಜಾ ಪಟ್ಟಿಯ ದಕ್ಷಿಣ ಭಾಗದಲ್ಲಿ ಇಸ್ರೇಲ್ ವಾಯುದಾಳಿ ತೀವ್ರಗೊಳಿಸಿದೆ. ಇದರ ನಡುವೆಯೇ, ಅಮೆರಿಕದ ಇಬ್ಬರು ಪ್ರಜೆಗಳನ್ನು ಹಮಾಸ್ ಉಗ್ರರು ಬಿಡುಗಡೆ ಮಾಡಿದ್ದಾರೆ. ಇಬ್ಬರನ್ನೂ ಇಸ್ರೇಲಿ ರಾಯಭಾರಿಗಳು ಸೇನಾ ನೆಲೆಗೆ ಕರೆದೊಯ್ದು ಕುಟುಂಬ ಸದಸ್ಯರನ್ನು ಭೇಟಿ ಮಾಡಿಸಿದ್ದಾರೆ.
ಇಸ್ರೇಲ್‌ನಲ್ಲಿ ರಜೆ ಕಳೆಯಲೆಂದು ಅಮೆರಿಕದ ತಾಯಿ, ಮಗಳು ಆಗಮಿಸಿದ್ದಾಗ ಅವರನ್ನು ಹಮಾಸ್ ಉಗ್ರರು ಅಪಹರಿಸಿದ್ದರು. ಇವರನ್ನೂ ಸೇರಿ ಎಲ್ಲ ಒತ್ತೆಯಾಳುಗಳ ಬಿಡುಗಡೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಭಿಯಾನ ಆರಂಭವಾಗಿತ್ತು.
ಇದನ್ನೂ ಓದಿ: ಹಮಾಸ್ ಉಗ್ರರಿಂದ ಹತ್ಯೆಯಾದ ಮಗಳು: ಫೋನ್, ಆ್ಯಪಲ್ ವಾಚ್ ಬಳಸಿ ಶವ ಪತ್ತೆಹಚ್ಚಿದ ತಂದೆ
ಈ ನಡುವೆ, ಅಮೆರಿಕದ ಇಬ್ಬರು ಪ್ರಜೆಗಳು ಬಿಡುಗಡೆಯಾಗಿರುವುದಕ್ಕೆ ಸಂತೋಷವಾಗಿದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರು ತಿಳಿಸಿದ್ದಾರೆ. ಉಗ್ರರ ಕಪಿಮುಷ್ಟಿಯಿಂದ ಹೊರಕ್ಕೆ ಬಂದ ತಾಯಿ-ಮಗಳ ಜತೆ ದೂರವಾಣಿ ಮೂಲಕ ಮಾತನಾಡಿದ್ದಾರೆ.