
ಸ್ಪೇನ್‌ನಲ್ಲಿ ಒಬ್ಬ ಖತರ್ನಾಕ್ ವ್ಯಕ್ತಿ ಇದ್ದಾನೆ. ಈತ ಸುಮಾರು 20 ಹೋಟೆಲುಗಳಲ್ಲಿ ಭಯಾನಕ ಐಡಿಯಾ ಮಾಡಿ ಹೋಟೆಲ್ ಬಿಲ್ ತಪ್ಪಿಸಿಕೊಂಡಿದ್ದಾನೆ. ಅದೇನಪ್ಪಾ ಅಂದ್ರೆ, ಅಲ್ಲೆಲ್ಲ ಹೊಟ್ಟೆ ಬಿರಿಯುವ ತನಕ ತಿಂದು ಬಿಲ್ ಕೇಳಿದಾಗ ಎದೆ ನೋವು ಎಂದು ಆ್ಯಂಬುಲೆನ್ಸ್ ಕರೆಸಿ ತಪ್ಪಿಸಿಕೊಂಡಿದ್ದಾನೆ. ಅದೇ ರೀತಿ ಮತ್ತೊಂದು ಹೋಟೆಲಿನಲ್ಲಿ ಮಾಡುವಾಗ ಸಿಬ್ಬಂದಿಗೆ ಗೊತ್ತಾಗಿ ಆ್ಯಂಬುಲೆನ್ಸ್ ಬದಲು ಪೊಲೀಸರನ್ನು ಕರೆಸಿದ್ದಾರೆ. ಪೊಲೀಸರು ಬಂದು ‘ಬಾ ರಾಜ. ನಾವು ನಿನಗೆ ಜೀವನ ಪರ್ಯಂತ ಜೈಲಲ್ಲಿ ಉಚಿತ ಊಟ ಹಾಕುತ್ತೇವೆ’ ಎಂದು ಬಂಧಿಸಿದ್ದಾರೆ. ಜೊತೆಗೆ ಆತನ ಫೋಟೋವನ್ನು ತೆಗೆದು ಇಂಥ ವ್ಯಕ್ತಿ ಬಂದರೆ ಸೇರಿಸಬೇಡಿ ಎಂದು ಬೇರೆ ಹೋಟೆಲುಗಳಿಗೂ ಕಳಿಸಿದ್ದಾರೆ.
100 ಕೊಠಡಿಯ ಅರಮನೆಯಲ್ಲಿ ಭಾರತದ ಅತ್ಯಂತ ದುಬಾರಿ ರಾಜಮನೆತನದ ವಿವಾಹ, ಇಶಾ ಅಂಬಾನಿ ಮದುವೆಗೂ ಇದಕ್ಕೂ ಲಿಂಕ್ ಇಲ್ಲ
50 ವರ್ಷದ ಐಡಾಸ್ ಜೆ, ಅವರು ಲಿಥುವೇನಿಯನ್ ರಾಷ್ಟ್ರೀಯತೆಯನ್ನು ಹೊಂದಿದ್ದಾರೆ ಮತ್ತು ಅಲಿಕಾಂಟೆಯಲ್ಲಿ ವಾಸಿಸುತ್ತಿದ್ದಾರೆ, ಅವರು ಬಿಲ್ ಪಾವತಿಸಲು ನಿರಾಕರಿಸುವ ಮೂಲಕ ವಂಚಿಸಿದ್ದಾರೆ. ಐಡಾಸ್ ರಷ್ಯಾದ ಪ್ರವಾಸಿಯಂತೆ ವೇಷ ಹಾಕಿ, ಮೆನುವಿನಲ್ಲಿ ತನಗೆ ಬೇಕಾದ ಅನೇಕ ವಸ್ತುಗಳನ್ನು ಆರ್ಡರ್ ಮಾಡುತ್ತಾನೆ. ಬಳಿಕ ಹಣ ಪಾವತಿಸಲು ನಿರಾಕರಿಸುವ ಮೊದಲು ಬಹು ಭಾಷೆಗಳನ್ನು ಮಿಶ್ರಣ ಮಾಡಿ ಮಾತನಾಡಿ ಯಾಮಾರಿಸಲು ಮುಂದಾಗುತ್ತಾನೆ ಎಂದು ಸ್ಪ್ಯಾನಿಷ್ ಪತ್ರಿಕೆ ವರದಿ ಮಾಡಿದೆ.
ಹಣ, ತಂತ್ರಜ್ಞಾನವಿಲ್ಲದೆ ಕಾಡಲ್ಲಿ ಬದುಕುತ್ತಿರುವ ಐರಿಶ್ ಬರಹಗಾರನಿಗೆ ಗಾಂಧೀಜಿಯೇ ಸ್ಫೂರ್ತಿ!
ಒಂದು ವರ್ಷದಲ್ಲಿ ಐಡಾಸ್ 20 ಬಾರಿ ಈ ರೀತಿ ಮಾಡಿದ್ದು ಈ ಬಾರಿಯೂ ತನ್ನ ಅದೃಷ್ಟವನ್ನು ಪರೀಕ್ಷಿಸಿದ. ಆದರೆ ಬ್ಯೂನ್ ಕಮರ್ ರೆಸ್ಟೋರೆಂಟ್‌ನ ಮ್ಯಾನೇಜರ್ ಐಡಾಸ್ ಓಡಿಹೋಗಲು ಪ್ರಯತ್ನಿಸುತ್ತಿರುವುದನ್ನು ಗಮನಿಸಿದರು. ಈ ವೇಳೆ ಪೊಲೀಸರಿಗೆ ಕರೆ ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ