ಕಣ್ಣಿಗೆ ಬಿದ್ದ ಮಕ್ಕಳು, ಶಿಶು, ಮಹಿಳೆಯರ ಕೊಂದೆವು: ಹಮಾಸ್‌ ಉಗ್ರ ಸ್ಫೋಟಕ ಹೇಳಿಕೆ Video

Published : Oct 15, 2023, 09:43 AM ISTUpdated : Oct 15, 2023, 09:52 AM IST
ಕಣ್ಣಿಗೆ ಬಿದ್ದ ಮಕ್ಕಳು, ಶಿಶು, ಮಹಿಳೆಯರ ಕೊಂದೆವು: ಹಮಾಸ್‌ ಉಗ್ರ ಸ್ಫೋಟಕ ಹೇಳಿಕೆ Video

ಸಾರಾಂಶ

ಜನರ ತಲೆಗಳನ್ನು ಕತ್ತರಿಸಿ ನೆಲದ ಮೇಲೆ ಎಸೆದೆವು. ಎದುರಿಗೆ ಬಂದವರನ್ನು ಚೆಂಡಾಡಿದೆವು. ಸಿಕ್ಕ ಸಿಕ್ಕ ಮಹಿಳೆಯರ ಮೇಲೆ ಅತ್ಯಾಚಾರ ಎಸಗಿದೆವು ಎಂದೂ ಸೆರೆಸಿಕ್ಕ ಉಗ್ರನೋರ್ವ ಇಸ್ರೇಲಿ ಪಡೆಯ ಮುಂದೆ ಹೇಳಿದ ವೀಡಿಯೋವೊಂದು ಈಗ ವೈರಲ್ ಆಗಿದೆ.

ಜೆರುಸಲೇಂ: ಕಳೆದ ಶನಿವಾರ ನಾವು ಇಸ್ರೇಲ್‌ ಮೇಲೆ ದಾಳಿ ನಡೆಸಿದಾಗ ಅಲ್ಲಿ ನಮಗೆ ಸಿಕ್ಕ ಸಿಕ್ಕ ಯುವತಿಯರ ಮೇಲೆ ಅತ್ಯಾಚಾರ ಮಾಡಿದೆವು. ಮಕ್ಕಳು, ಶಿಶುಗಳು, ವೃದ್ಧರು ಮತ್ತು ಮಹಿಳೆಯರು ಸೇರಿದಂತೆ ನಮ್ಮ ಕಣ್ಣಿಗೆ ಬಿದ್ದ ಎಲ್ಲರನ್ನೂ ನಾವು ಕೊಂದು ಹಾಕಿದೆವು. ಅವರ ತಲೆ ಕತ್ತರಿಸಿದೆವು ಇದು ಇಸ್ರೇಲ್‌ ಮೇಲಿನ ತಮ್ಮ ಭಯಾನಕ ದಾಳಿಯ ಕ್ರೂರತೆ ಹೇಗಿತ್ತು ಎಂಬುದನ್ನು ಸ್ವತಃ ಹಮಾಸ್‌ ಉಗ್ರನೇ ವಿವರಿಸಿರುವ ರೀತಿ.

ಇಸ್ರೇಲಿ ಪಡೆಗಳಿಗೆ ಸೆರೆಸಿಕ್ಕ ಓರ್ವ ಹಮಾಸ್‌ ಉಗ್ರ (Hamas Terrorist) ವಿಚಾರಣೆ ವೇಳೆ ಈ ಭಯಾನಕ ಅಂಶಗಳನ್ನು ಬಹಿರಂಗಪಡಿಸಿದ್ದಾನೆ. ಆತನ ವಿಚಾರಣೆ ವಿಡಿಯೋ ಸೋಷಿಯಲ್‌ ಮೀಡಿಯಾಗಳಲ್ಲಿ ಸೋರಿಕೆಯಾಗಿದೆ. ತನ್ನ ಹೆಸರು ಮೊಹಮ್ಮದ್‌ ನಹೇದ್‌ ಅಹ್ಮದ್‌ ಎಲ್‌- ಅರ್ಷಾ. ತಾನು ಗಾಜಾಪಟ್ಟಿಯ ರಫಾಹ್‌ ನಿವಾಸಿ ಎಂದು ಹೇಳಿಕೊಂಡಿರುವ ಉಗ್ರ ಜನರ ತಲೆಗಳನ್ನು ಕತ್ತರಿಸಿ ನೆಲದ ಮೇಲೆ ಎಸೆದೆವು. ಎದುರಿಗೆ ಬಂದವರನ್ನು ಚೆಂಡಾಡಿದೆವು. ಸಿಕ್ಕ ಸಿಕ್ಕ ಮಹಿಳೆಯರ ಮೇಲೆ ಅತ್ಯಾಚಾರ ಎಸಗಿದೆವು ಎಂದೂ ಉಗ್ರ ಹೇಳಿದ್ದಾನೆ.

 

ಇಸ್ರೇಲ್‌ ಕ್ಷಿಪಣಿ ದಾಳಿಗೆ ಪತ್ರಕರ್ತ ಬಲಿ: 6 ಮಂದಿಗೆ ಗಾಯ

ಟೆಲ್‌ ಅವೀವ್‌: ಇಸ್ರೇಲ್‌-ಹಮಾಸ್‌ ಯುದ್ಧಕ್ಕೆ ಲೆಬನಾನ್‌ನ ಹಿಜ್ಬುಲ್ಲಾ ಉಗ್ರರು ಕೈಜೋಡಿಸಿರುವ ಹಿನ್ನೆಲೆಯಲ್ಲಿ ಲೆಬನಾನ್‌ ಮೇಲೂ ಇಸ್ರೇಲ್‌ ವಾಯುದಾಳಿ ನಡೆಸಿದ್ದು, ಸಂಘರ್ಷ ಸ್ಥಳದಲ್ಲಿ ವರದಿಗಾರಿಕೆ ಮಾಡುತ್ತಿದ್ದ ಒಬ್ಬ ರಾಯಿಟರ್ಸ್‌ ಸುದ್ದಿಸಂಸ್ಥೆ ವರದಿಗಾರನು ದಾಳಿಗೆ ಬಲಿಯಾಗಿದ್ದಾನೆ. ಇನ್ನು 6 ಪತ್ರಕರ್ತರು ಗಾಯಗೊಂಡಿದ್ದಾರೆ. 
ಅಸು ನೀಗಿದ ವಿಡಿಯೋ ಪತ್ರಕರ್ತನನ್ನು (Video Journalist) ಇಸಾಂ ಅಬ್ದಲ್ಲಾ ಎಂದು ಗುರುತಿಸಲಾಗಿದ್ದು, ಗಾಯಗೊಂಡವರು ರಾಯಿಟರ್ಸ್‌ (Reuters), ಏಜೆನ್ಸ್‌ ಫ್ರಾನ್ಸ್‌ ಪ್ರೆಸ್‌ ಹಾಗೂ ಆಲ್‌ ಜಜೀ಼ರಾ (Al Jazeera) ಸಂಸ್ಥೆಗೆ ಸೇರಿದವರಾಗಿದ್ದಾರೆ.

ಇಸ್ರೇಲ್ ಜೊತೆಯಲ್ಲಿ ಹಮಾಸ್ ಆಡ್ತಿರೋ ಆಟವೆಂಥದ್ದು..? ಭೂಸೇನೆಯನ್ನ ನುಗ್ಗಿಸೋಕೆ ಯಾಕೆ ಹಿಂದೇಟು..!

ಈ ಬಗ್ಗೆ ವಿಶ್ವಸಂಸ್ಥೆ ಇಸ್ರೇಲ್‌ನ ವಿಶ್ವಸಂಸ್ಥೆ ಪ್ರತಿನಿಧಿ ಪ್ರತಿಕ್ರಿಯಿಸಿದ್ದು, ‘ಇದು ಉದ್ದೇಶಪೂರಿತ ಕೃತ್ಯವಲ್ಲ. ಯುದ್ಧಪೀಡಿತ ಪ್ರದೇಶದಲ್ಲಿ ಇವೆಲ್ಲ ಸಹಜ. ನಾವು ಪ್ರಕರಣವನ್ನು ತನಿಖೆಗೆ ಒಳಪಡಿಸುತ್ತೇವೆ’ ಎಂದು ತಿಳಿಸಿದ್ದಾರೆ.  ಇನ್ನು ತಮ್ಮ ಪತ್ರಕರ್ತರು ಗಾಯಗೊಂಡಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಸುದ್ದಿಸಂಸ್ಥೆಗಳು, ಪ್ರೆಸ್‌ ಎಂದು ವಿಶಾಲವಾಗಿ ಕಾಣುವ ಜಾಕೆಟ್‌ ಹಾಕಿಕೊಂಡಿದ್ದರೂ ದಾಳಿ ಮಾಡಿರುವುದು ಅಮಾನವೀಯ ಎಂದು ಖಂಡಿಸಿವೆ.

ಗಾಜಾ ಪಟ್ಟಿಯಲ್ಲಿ 1300 ಕಟ್ಟಡ ನಾಶ, 5540 ಮನೆಗಳಿಗೆ ಹಾನಿ: ವಿಶ್ವಸಂಸ್ಥೆ

 1300 ಇಸ್ರೇಲಿಗಳ ಹತ್ಯೆಗೈದ ದಾಳಿಯ 2 ರೂವಾರಿಗಳ ಹತ್ಯೆ

ಟೆಲ್‌ ಅವಿವ್‌/ಗಾಜಾ: ದೇಶದೊಳಗೆ ನುಗ್ಗಿ 1300 ಅಮಾಯಕರನ್ನು ಹತ್ಯೆಗೈದಿದ್ದ ಹಮಾಸ್‌ ಉಗ್ರರ ತಂಡವನ್ನು ಮುನ್ನಡೆಸಿದ್ದ ಇಬ್ಬರು ಹಮಾಸ್‌ ಉಗ್ರಗಾಮಿ ನಾಯಕರನ್ನು ಗಾಜಾ ಪ್ರದೇಶದಲ್ಲಿ ನಡೆಸಿದ ವಾಯುದಾಳಿಯಲ್ಲಿ ಇಸ್ರೇಲ್‌ ಶನಿವಾರ ಹತ್ಯೆ ಮಾಡಿದೆ. ಇದು ಯುದ್ಧ ಆರಂಭವಾದ 7ನೇ ದಿನ ಉಗ್ರ ಹಮಾಸ್‌ ನಿಗ್ರಹ ಕಾರ್ಯಾಚರಣೆಯಲ್ಲಿ ಇಸ್ರೇಲಿ ಪಡೆಗಳಿಗೆ ಸಿಕ್ಕ ಬಹುದೊಡ್ಡ ಗೆಲುವು ಎಂದು ಬಣ್ಣಿಸಲಾಗಿದೆ.

'ಬಿಸ್ಮಿಲ್ಲಾ' ಎಂದರೆ ಮಾತ್ರ ಮಗುವಿಗೆ ನೀರು: ಇಸ್ರೇಲ್‌ ಮಕ್ಕಳ ಒತ್ತೆಯಾಗಿರಿಸಿ ಹಮಾಸ್‌ ಉಗ್ರರ ಕ್ರೌರ್ಯ

1300 ಇಸ್ರೇಲಿಗಳ ಹತ್ಯೆಯ ಕಾರ್ಯಾಚರಣೆ ನೇತೃತ್ವ ವಹಿಸಿದ್ದ ಹಮಾಸ್‌ ಕಮಾಂಡರ್‌ ಅಲಿ ಖಾದಿ ಎಂಬಾತನನ್ನು ಇಸ್ರೇಲಿ ಪಡೆಗಳು ಶನಿವಾರ ಮಧ್ಯಾಹ್ನ ಗಾಜಾ ಮೇಲೆ ನಡೆಸಿದ ವಾಯುದಾಳಿಯಲ್ಲಿ ಸಾಯಿಸಿವೆ. ಇದಕ್ಕೂ ಮುನ್ನ ಬೆಳಗ್ಗೆ ಗಾಜಾ ನಗರದಲ್ಲಿನ ಪ್ರತ್ಯೇಕ ವಾಯುದಾಳಿಯಲ್ಲಿ ಹಮಾಸ್‌ ವೈಮಾನಿಕ ಪಡೆ ಮುಖ್ಯಸ್ಥ ಮೆರಾದ್‌ ಅಬು ಮೆರಾ ಕೂಡ ಬಲಿಯಾಗಿದ್ದಾನೆ .

ಕಳೆದ ಶನಿವಾರ ಹಮಾಸ್‌ ಉಗ್ರರು ಏಕಾಏಕಿ ಇಸ್ರೇಲ್‌ ಮೇಲೆ ಸಾವಿರಾರು ರಾಕೆಟ್‌ ದಾಳಿ (Rocket Attack) ನಡೆಸಿದ್ದಲ್ಲದೇ, ಇಸ್ರೇಲ್‌ ಗಡಿಯೊಳಗೆ ನುಗ್ಗಿ ಯೋಧರು, ಮಹಿಳೆಯರು, ಮಕ್ಕಳೆನ್ನದೆ ಕಂಡಕಂಡವರ ಮೇಲೆ ಗುಂಡಿನ ದಾಳಿ ನಡೆಸಿ ಸಾವಿರಾರು ಜನರನ್ನು ಹತ್ಯೆಗೈದಿದ್ದರು. ಜೊತೆಗೆ 250ಕ್ಕೂ ಹೆಚ್ಚು ಜನರನ್ನು ಅಪಹರಿಸಿ ಒತ್ತೆಯಾಳಾಗಿ ಇಟ್ಟುಕೊಂಡಿದ್ದರು.

ಈ ದಾಳಿಯ ನೇತೃತ್ವವನ್ನು ಹಮಾಸ್‌ ಉಗ್ರ ನಾಯಕನಾದ ‘ನಕ್ಬಾ ಪಡೆ’ ಕಮಾಂಡರ್‌ ಅಲಿ ಖಾದಿ ಮುನ್ನಡೆಸಿದ್ದ ಎಂಬ ಮಾಹಿತಿ ಇಸ್ರೇಲಿ ಪಡೆಗಳಿಗೆ ಸಿಕ್ಕಿತ್ತು. ಹೀಗಾಗಿ ಆತನಿಗಾಗಿ ಕಳೆದೊಂದು ವಾರದಿಂದ ಹುಡುಕಾಡಿದ್ದ ಇಸ್ರೇಲಿ ಪಡೆಗಳಿಗೆ ಆತ ಅಡಗಿಕೊಂಡಿರುವ ಮಾಹಿತಿ ಸಿಕ್ಕಿತ್ತು. ಈ ಮಾಹಿತಿ ಆಧರಿಸಿ, ಇಸ್ರೇಲಿ ಸೇನಾ ಪಡೆ, ಶಿನ್‌ ಬೆಟ್‌ ಗುಪ್ತಚರ ಪಡೆ ಮತ್ತು ಸೇನಾ ಗುಪ್ತಚರ ನಿರ್ದೇಶನಾಲಯದ ಶುಕ್ರವಾರ ರಾತ್ರಿ ಜಂಟಿ ಕಾರ್ಯಾಚರಣೆ ನಡೆಸಿ ವಾಯುದಾಳಿಯಲ್ಲಿ ಅಲಿಯನ್ನು ಹತ್ಯೆಗೈಯುವಲ್ಲಿ ಯಶಸ್ವಿಯಾಗಿವೆ. ಖಾದಿ ಜೊತೆಗೆ ಆತನ ಪಡೆಯ ಇನ್ನೂ ಹಲವು ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದು ಇಸ್ರೇಲಿ ಸೇನೆ ಮಾಹಿತಿ ನೀಡಿದೆ.

ಇಸ್ರೇಲ್‌ ದಾಳಿಗೆ ಬೆದರಿ ಗಾಜಾ ಪಟ್ಟಿಯ 4 ಲಕ್ಷ ಜನ ವಲಸೆ: 5100 ದಾಟಿದ ಸಾವಿನ ಸಂಖ್ಯೆ

ಇದೆ ಅಲಿ ಖಾದಿಯನ್ನು ಇಸ್ರೇಲಿ ಪಡೆಗಳು 2005ರಲ್ಲಿ ಬಂಧಿಸಿದ್ದವು. ಆದರೆ ಬಳಿಕ ಗಿಲಾದ್‌ ಶಾಲಿತ್‌ ವಿನಿಮಯ ಒಪ್ಪಂದದ ಅನ್ವಯ ಅಲಿಯನ್ನು ಬಿಡುಗಡೆ ಮಾಡಲಾಗಿತ್ತು. ಇದೇ ವೇಳೆ ಗಾಜಾ ಪಟ್ಟಣದಲ್ಲಿನ ಹಮಾಸ್‌ ವೈಮಾನಿಕ ವಿಭಾಗದ ಕಮಾಂಡರ್‌ ಮೆರಾದ್‌ ಅಬು ಮೆರಾ ಕೂಡಾ ಹತ್ಯೆಗೀಡಾಗಿದ್ದಾನೆ ಎಂದು ಇಸ್ರೇಲಿ ಸೇನೆ ಮಾಹಿತಿ ನೀಡಿದೆ. ಕಳೆದ ವಾರ ಹಮಾಸ್‌ ಉಗ್ರರು ನಡೆಸಿದ ರಾಕೆಟ್‌ ದಾಳಿ ಮತ್ತು ಇಸ್ರೇಲ್‌ ಗಡಿಯೊಳಗೆ ನುಗ್ಗಿ ಸಾವಿರಾರು ಜನರನ್ನು ಹತ್ಯೆಗೈಯುವಂತೆ ಪ್ರೇರೇಪಿಸುವಲ್ಲಿ ಮೆರಾದ್‌ ಕೂಡ ಪ್ರಮುಖ ಪಾತ್ರ ವಹಿಸಿದ್ದ ಎಂದು ಇಸ್ರೇಲ್ ಮಾಹಿತಿ ನೀಡಿದೆ.

ಇಸ್ರೇಲ್ ಮೇಲಿ ದಾಳಿ ಮಾಡಿ ಕೆಟ್ಟ ಹಮಾಸ್, ಓಡಿ ಹೋಗಲು ಗಡಿ ತೆರೆಯುವಂತೆ ಮನವಿ!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಭಾರಿ ಸದ್ದು ಮಾಡ್ತಿದೆ ಪುಟಿನ್​ ತಂದ ಸೂಟ್​ಕೇಟ್: ಅದರ ಹಿಂದಿದೆ ಊಹೆಗೆ ನಿಲುಕದ ವಿಚಿತ್ರ ಸ್ಟೋರಿ! ಏನಿದೆ ಅದರಲ್ಲಿ?
ಪಾಕಿಸ್ತಾನ ಪುಸ್ತಕ ಮೇಳ: ಸೇಲ್ ಆದ ಪುಸ್ತಕ ಬರೀ 35, ಖಾಲಿಯಾದ ಬಿರಿಯಾನಿ, ಶವರ್ಮಾ ಎಷ್ಟು ಕೇಳಿದ್ರೆ ಗಾಬರಿ ಆಗ್ತೀರಿ