ಹಮಾಸ್-ಇಸ್ರೇಲ್ ಕದನ ವೇಳೆ ಗಾಜಾ ಪಟ್ಟಿಯಲ್ಲಿ 5540 ಮನೆಗಳಿಗೆ ಹಾನಿಯಾಗಿದೆ. 1300 ಕಟ್ಟಡ ಸಂಪೂರ್ಣ ನಾಶವಾಗಿವೆ ಎಂದು ವಿಶ್ವ ಸಂಸ್ಥೆ ತಿಳಿಸಿದೆ.
ಜೆರುಸಲೇಂ: ಹಮಾಸ್-ಇಸ್ರೇಲ್ ಕದನ ವೇಳೆ ಗಾಜಾ ಪಟ್ಟಿಯಲ್ಲಿ 5540 ಮನೆಗಳಿಗೆ ಹಾನಿಯಾಗಿದೆ. 1300 ಕಟ್ಟಡ ಸಂಪೂರ್ಣ ನಾಶವಾಗಿವೆ ಎಂದು ವಿಶ್ವ ಸಂಸ್ಥೆ ತಿಳಿಸಿದೆ. ಕದನದಲ್ಲಿ ಗಾಜಾ ಪಟ್ಟಿಯಲ್ಲಿ ಇಸ್ರೇಲ್ ಎಡಬಿಡದೆ ದಾಳಿ ನಡೆಸುತ್ತಿದೆ. ಹಾಗಾಗಿ ಅಲ್ಲಿ 1300 ಕಟ್ಟಡ ಸಂಪೂರ್ಣ ಧ್ವಂಸವಾಗಿವೆ. ಇನ್ನು 5540 ಮನೆಗಳಿಗೆ ಹಾನಿಯಾಗಿದೆ. ಈ ಮನೆಗಳ ಪೈಕಿ 3750 ಮನೆಗಳು ತೀವ್ರವಾಗಿ ಹಾನಿಗೊಳಗಾಗಿವೆ ಎಂದು ಅದು ಹೇಳಿದೆ. ಅ.7ರಿಂದ ನಡೆಯುತ್ತಿರುವ ಈ ಯುದ್ಧದಲ್ಲಿ ಉಭಯ ಕಡೆಗಳು ಸೇರಿ ಸುಮಾರು 4000ಕ್ಕೂ ಹೆಚ್ಚಿನ ಜನರು ಮೃತಪಟ್ಟಿದ್ದಾರೆ.
ಗಾಜಾ ಸಿಲುಕಿದ್ದ ವಿದೇಶಿಗರಿಗೆ ಸ್ಥಳ ಬಿಡಲು ಅವಕಾಶ
ಕಳೆದೊಂದು ವಾರದಿಂದ ನಡೆಯುತ್ತಿರುವ ಇಸ್ರೇಲ್-ಹಮಾಸ್ ಸಂಘರ್ಷದ (Israel Hamas War) ಹಿನ್ನೆಲೆಯಲ್ಲಿ ಗಾಜಾ ಪಟ್ಟಿ (Gaza strip) ಪ್ರದೇಶದಲ್ಲಿ ಸಿಕ್ಕಿಹಾಕಿಕೊಂಡಿರುವ ವಿದೇಶಿಯರಿಗೆ ಗಾಜಾ ತೊರೆಯಲು ಕೊನೆಗೂ ಅವಕಾಶ ಮಾಡಿಕೊಡಲಾಗಿದೆ. 24 ಗಂಟೆಯೊಳಗೆ ಉತ್ತರ ಗಾಜಾದ 11 ಲಕ್ಷ ಜನರಿಗೆ ಸ್ಥಳ ತೆರವು ಮಾಡಲು ಇಸ್ರೇಲ್ ಸೇನೆ ಸೂಚನೆ ನೀಡಿದ ಬೆನ್ನಲ್ಲೇ ಈ ಅವಕಾಶ ಕಲ್ಪಿಸಲಾಗಿದೆ. ಈ ತೆರವು ಕಾರ್ಯಾಚರಣೆಗೆ ಇಸ್ರೇಲ್ ಮತ್ತು ಹಮಾಸ್ ಉಗ್ರರ ಕಡೆಯಿಂದ ಅನುಮತಿ ಸಿಕ್ಕಿದೆ. ಒಪ್ಪಂದ ಪ್ರಕ್ರಿಯೆಯಲ್ಲಿ ಈಜಿಪ್ಟ್, ಅಮೆರಿಕ ಹಾಗೂ ಕತಾರ್ ಕೂಡ ಪಾಲ್ಗೊಂಡಿವೆ.
'ಬಿಸ್ಮಿಲ್ಲಾ' ಎಂದರೆ ಮಾತ್ರ ಮಗುವಿಗೆ ನೀರು: ಇಸ್ರೇಲ್ ಮಕ್ಕಳ ಒತ್ತೆಯಾಗಿರಿಸಿ ಹಮಾಸ್ ಉಗ್ರರ ಕ್ರೌರ್ಯ
ಗಾಜಾಕ್ಕೆ ಪ್ರವೇಶ ಮಾಡಲು ಮತ್ತು ಅಲ್ಲಿಂದ ಹೊರಗೆ ಹೋಗಲು ಇರುವುದು ಎರಡೇ ಸ್ಥಳ. ಈ ಪೈಕಿ ಉತ್ತರ ಭಾಗದಲ್ಲಿರುವ ‘ಇರೇಜ್ ಚೆಕ್‌ಪಾಯಿಂಟ್’ ಇಸ್ರೇಲ್ ನಿಗಾದಲ್ಲಿದ್ದರೆ, ದಕ್ಷಿಣದ ‘ರಫಾ ಚೆಕ್‌ಪಾಯಿಂಟ್’ ಈಜಿಪ್ಟ್ ವಶದಲ್ಲಿದೆ. ಎರಡೂ ಚೆಕ್‌ಪಾಯಿಂಟ್‌ಗಳನ್ನು ಶನಿವಾರದಿಂದಲೇ ಮುಕ್ತಗೊಳಿಸಲಾಗಿದೆ. ಈ ಎರಡೂ ಚೆಕ್‌ಪಾಯಿಂಟ್‌ಗಳತ್ತ ದಾಳಿ ನಡೆಸುವುದಿಲ್ಲ ಎಂದು ಇಸ್ರೇಲ್ ಭರವಸೆ ನೀಡಿದೆ. ಹೀಗಾಗಿ ಗಾಜಾದಲ್ಲಿ ಸಿಕ್ಕಿಹಾಕಿಕೊಂಡಿದ್ದ ವಿದೇಶಿಯರು ಎರಡೂ ಚೆಕ್‌ಪಾಯಿಂಟ್‌ಗಳಿಂದ ತರಾತುರಿಯಲ್ಲಿ ದೇಶ ತೊರೆಯುತ್ತಿದ್ದಾರೆ. ಇತ್ತೀಚೆಗೆ ಭಾರತ ಸರ್ಕಾರ ಗಾಜಾದಲ್ಲಿ 4 ಹಾಗೂ ವೆಸ್ಟ್ ಬ್ಯಾಂಕ್‌ನಲ್ಲಿ 12 ಭಾರತೀಯರು ಸಿಲುಕಿದ್ದಾರೆ ಎಂದಿತ್ತು. ಈ ಒಪ್ಪಂದದಿಂದ ಇವರ ಸುರಕ್ಷಿತ ಸ್ಥಳಾಂತರಕ್ಕೂ ಅವಕಾಶ ಲಭಿಸಲಿದೆ.
ಹಮಾಸ್‌ಗಿಂತ ಅಲ್‌ಖೈದಾ ಸಂಘಟನೆಯೇ ಉತ್ತಮ ಎನಿಸುತ್ತದೆ: ಬೈಡೆನ್
ವಾಷಿಂಗ್ಟನ್: ಇಸ್ರೇಲ್ ಮತ್ತು ಪ್ಯಾಲೆಸ್ತೀನಿನ ಹಮಾಸ್ ಉಗ್ರರ ನಡುವಿನ ಸಂಘರ್ಷ ತೀವ್ರಗೊಂಡಿರುವ ಬೆನ್ನಲ್ಲೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಹಮಾಸ್ ಸಂಘಟನೆ ಬರ್ಬರ ಕೃತ್ಯಗಳ ಬಗ್ಗೆ ಆಘಾತ ವ್ಯಕ್ತಪಡಿಸಿದ್ದು, ‘ಹಮಾಸ್‌ಗಿಂತ ಅಲ್ ಖೈದಾ ಸಂಘಟನೆಯೇ ಉತ್ತಮ ಎನ್ನಿಸುತ್ತದೆ ಎಂದಿದ್ದಾರೆ. ಶನಿವಾರ ಫಿಲಡೆಲ್ಫಿಯಾದಲ್ಲಿ ಮಾತನಾಡಿದ ಬೈಡೆನ್, ‘ಇಸ್ರೇಲ್‌ನಲ್ಲಿ ಹಮಾಸ್ ಉಗ್ರರು ಹೀನ ಕೃತ್ಯ ಎಸಗಿದ್ದಾರೆ. ಹಮಾಸ್ ಉಗ್ರರ ಗುಂಪು ಕಳೆದ ವಾರ ಇಸ್ರೇಲ್ ಮೇಲೆ ನಡೆಸಿದ ದಾಳಿಯಲ್ಲಿ ಸಾವಿರಕ್ಕೂ ಹೆಚ್ಚು ಅಮಾಯಕರು ಜೀವ ತೆತ್ತಿದ್ದಾರೆ. ಇದರಲ್ಲಿ 27 ಮಂದಿ ಅಮೆರಿಕನ್ನರೂ ಸೇರಿದ್ದಾರೆ. ಇದು ಅಲ್‌ಖೈದಾಗಿಂತ ಹೀನ ಕೃತ್ಯವಾಗಿದೆ. ಹಮಾಸ್‌ಗಿಂತ ಅಲ್‌ಖೈದಾ ಉಗ್ರರೇ ಉತ್ತಮರು ಎನ್ನಿಸುತ್ತದೆ.’ ಎಂದರು.
ಇಸ್ರೇಲ್ ದಾಳಿಗೆ ಬೆದರಿ ಗಾಜಾ ಪಟ್ಟಿಯ 4 ಲಕ್ಷ ಜನ ವಲಸೆ: 5100 ದಾಟಿದ ಸಾವಿನ ಸಂಖ್ಯೆ
ಅಮೆರಿಕ ಯಾವಾಗಲೂ ಇಸ್ರೇಲ್‌ಗೆ ಬೆಂಬಲವಾಗಿ ನಿಲ್ಲುತ್ತದೆ. ಅಮೆರಿಕದ ಅಧಿಕಾರಿಗಳು ಅಲ್ಲಿದ್ದು ನೆರವಾಗುತ್ತಿದ್ದಾರೆ. ಗಾಜಾದಲ್ಲಿನ ಮಾನವೀಯ ಬಿಕ್ಕಟ್ಟನ್ನು ಪರಿಹರಿಸುವುದು ಸದ್ಯದ ನನ್ನ ಆದ್ಯತೆಯಾಗಿದೆ ಎಂದು ಹೇಳಿದರು.