
ವಾಶಿಂಗ್ಟನ್(ಏ.13) ಹಿಂದುತ್ವ ವಿರೋಧಿ ಭಾಷಣದ ಮೂಲಕ ಭಾರೀ ಜನಪ್ರಿಯತೆ ಗಳಿಸಿಕೊಂಡಿದ್ದ ಭಾರತ ಮೂಲದ ಅಮೆರಿಕ ನಿವಾಸಿ ರಿದ್ದಿ ಪಟೇಲ್ ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಚಪ್ಪಾಳೆ ಗಿಟ್ಟಿಸಿಕೊಳ್ಳಲು, ಫೈರ್ ಬ್ರ್ಯಾಂಡ್ ಎಂದು ಗುರುತಿಸಿಕೊಳ್ಳಲು ಹೋದ ರಿದ್ದಿ ಪಟೇಲ್ ಇದೀಗ ಅಮೆರಿಕದಲ್ಲಿ ಅರೆಸ್ಟ್ ಆಗಿದ್ದಾರೆ. ಪ್ಯಾಲೆಸ್ತಿನ ಪರ ಘರ್ಜಿಸಿ ಮಾತನಾಡಿದ ರಿದ್ದಿ ಪಟೇಲ್ ಮೇಯರ್ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದರು. ಈ ಬೆದರಿಕೆ ಬೆನ್ನಲ್ಲೇ ರಿದ್ದಿ ಪಟೇಲನ್ನು ಬಂಧಿಸಲಾಗಿದೆ. ಬರೋಬ್ಬರಿ 2 ಮಿಲಿಯನ್ ಪಾವತಿಸಿದರೆ ಮಾತ್ರ ರಿದ್ದಿ ಪಟೇಲ್‌ಗೆ ಬಿಡುಗಡೆ ಭಾಗ್ಯ ಸಿಗಲಿದೆ. ಅರೆಸ್ಟ್ ಬೆನ್ನಲ್ಲೇ ರಿದ್ದಿ ಪಟೇಲ್ ಗಳಗಳನೆ ಕಣ್ಣೀರಿಟ್ಟಿದ್ದಾರೆ.
ಪ್ಯಾಲೆಸ್ತಿನ್ ಪರ ಪ್ರತಿಭಟನೆ ಮೂಲಕ ರಿದ್ದಿ ಪಟೇಲ್ ಅಮೆರಿಕದಲ್ಲಿ ಭಾರಿ ಗಮನಸೆಳೆದಿದ್ದಾಳೆ. ಅಮೆರಿಕದ ಇಸ್ರೇಲ್ ಪರ ನೀತಿಯನ್ನು ವಿರೋಧಿಸುತ್ತಾ ಅಬ್ಬರಿಸಿದ್ದ ರಿದ್ದಿ ಪಟೇಲ್, ಮೇಯರ್ ಹಾಗೂ ಸಿಟಿ ಕೌನ್ಸಿಲ್ ಸದಸ್ಯರನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಳು. ಕ್ಯಾಲಿಫೋರ್ನಿಯಾದಲ್ಲಿನ ಸ್ಥಳೀಯ ಕೌನ್ಸಿಲ್ ವಿಚಾರಣೆ ವೇಳೆ ರಿದ್ದಿ ಪಟೇಲ್ ತಮ್ಮ ಆಕ್ರೋಶದ ಮಾತುಗಳನ್ನಾಡಿದ್ದರು. ಪ್ರತಿ ಭಾರಿ ಭಾಷಣದ ವೇಳೆ ನಾಲಿಗೆ ಹರಿಬಿಡುವ ರಿದ್ದಿ ಪಟೇಲ್‌ಗೆ ಇದೀಗೆ ಜೈಲು ಸಂಕಷ್ಟ ಎದುರಾಗಿದೆ.
ಈದ್ ದಿನವೇ ಹಮಾಸ್ ಮುಖ್ಯಸ್ಥನ ಮೂವರು ಪುತ್ರರ ಹತ್ಯೆ, ಇಸ್ಮಾಯಿಲ್ ಹನಿಯೆಹ್ ಪ್ರತಿಕ್ರಿಯೆ ವೈರಲ್!
ಇಸ್ರೇಲ್ ಸೇನೆ ಗಾಜಾ ಮೇಲೆ ನಡೆಸುತ್ತಿರುವ ಸತತ ದಾಳಿಯನ್ನು ಖಂಡಿಸಿ ಹಲವು ಪ್ರತಿಭಟನೆ ನಡೆಸಿರುವ ರಿದ್ದಿ ಪಟೇಲ್, ಕದನ ವಿರಾಮ ನಿರ್ಣಯವನ್ನು ಅಮೆರಿಕ ಕೌನ್ಸಿಲ್ ಸದಸ್ಯರು ಬೆಂಬಲಿಸಿದ ಕಾರಣ ಆಕ್ರೋಶಗೊಂಡಿದ್ದಾಳೆ. ನಾವು ನಿಮ್ಮನ್ನು(ಮೇಯರ್) ಹಾಗೂ ಸಿಟಿ ಕೌನ್ಸಿಲ್ ಸದಸ್ಯರನ್ನು ಕೊಲೆ ಮಾಡುತ್ತೇವೆ. ಪ್ಯಾಲೆಸ್ತಿನ್‌ನಲ್ಲಿ ಏನು ನಡೆಯುತ್ತಿದೆ ಅನ್ನೋದರ ಕುರಿತು ನಿಮಗೆ ಕಾಳಜಿ ಇಲ್ಲ. ನೀವೆಲ್ಲಾ ಮನುಷ್ಯರಾ? ಗಾಜದಲ್ಲಿ ದಬ್ಬಾಳಿಕೆ , ದೌರ್ಜನ್ಯ ನಡೆಯುತ್ತಿದೆ. ಅಮಾಯಕರು ಸಾಯುತ್ತಿದ್ದಾರೆ.ಆದರೆ ಯಾರೂ ತಲೆಕೆಡಿಸಿಕೊಳ್ಳುತ್ತಿಲ್ಲ ಎಂದು ರಿದ್ದಿ ಪಟೇಲ್ ಹೇಳಿದ್ದರು.
ಕೌನ್ಸಿಲ್ ವಿಚಾರಣೆ ವೇಳೆ ರಿದ್ದಿ ಪಟೇಲ್ ಆಡಿದ ಈ ಮಾತುಗಳು ವೈರಲ್ ಆಗಿದೆ. ಇದು ಮೇಯರ್ ಹಾಗೂ ಸಿಟಿ ಕೌನ್ಸಿಲ್ ಸದಸ್ಯರಿಗೆ ಈ ರೀತಿ ಬೆದರಿಕೆ ಹಾಕುವ ಮೂಲಕ ಅಪಾಯಕ್ಕೆ ಅಹ್ವಾನ ನೀಡಿದ್ದೀರಿ ಎಂದು ಆಕ್ರೋಶಗೊಂಡ ಮೇಯರ್ ಕ್ರಮಕ್ಕೆ ಮುಂದಾಗಿದ್ದಾರೆ. ಸಿಟಿ ಕೌನ್ಸಿಲ್ ಸಭೆಯಲ್ಲಿ ಮಾತುಗಳು ಮುಗಿಸಿ ತೆರಳಿದ ರಿದ್ದಿ ಪಟೇಲ್‌ನ್ನು ಪೊಲೀಸರು ಬಂಧಿಸಿದ್ದಾರೆ. ಆಕ್ರೋಶದಲ್ಲಿ ನಿಮಗೆ ಬಯಸಿದ್ದು ಹೇಳುವುದಲ್ಲ. ನೀವು ಬೆದರಿಕೆ ಹಾಕಿದ್ದೀರಿ. ಇದು ಕಾನೂನು ಬಾಹಿರ ಎಂದು ಮೇಯರ್ ಹೇಳಿದ್ದಾರೆ.
ಇಸ್ರೇಲ್-ಪ್ಯಾಲೆಸ್ತೀನ್ ಕದನಕ್ಕೆ 6 ತಿಂಗಳು: ಈವರೆಗೆ 35,000 ಬಲಿ..!
ಬಂಧನದ ವೇಳೆ ಡ್ರಾಮಾ ಮಾಡಿದ ರಿದ್ದಿ ಪಟೇಲ್‌ಗೆ ಬೇಲ್ ನೀಡಲು ಕೋರ್ಟ್ 2 ಮಿಲಿಯನ್ ಅಮೆರಿಕನ್ ಡಾಲರ್ ಮೊತ್ತ ದಂಡವಾಗಿ ಪಾವತಿಸಲು ಹೇಳಿದೆ. ಈ ಮಾತುಗಳು ಹೊರಬೀಳುತ್ತಿದ್ದಂತೆ ರಿದ್ದಿ ಪಟೇಲ್ ಗಳಗಳನೆ ಅತ್ತಿದ್ದಾರೆ. ಘರ್ಜನೆಗಳು ನೀರಾಗಿದೆ. ಇತ್ತ ರಿದ್ದಿ ಪಟೇಲ್ ಜೊತೆ ಘೋಷಣ ಕೂಗಿದ ಪ್ಯಾಲೆಸ್ತಿನ್ ಪರ ಹೋರಾಟಗಾರರು ರಿದ್ದಿ ಪಟೇಲ್‌ನಿಂದ ಅಂತರ ಕಾಯ್ದುಕೊಂಡು ಬಂಧನ ಭೀತಿಯಿಂದ ದೂರವಾಗಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ