ಘನಘೋರ 11 ದಿನಗಳ ಇಸ್ರೇಲ್-ಹಮಾಸ್ ಕದನ ಅಂತ್ಯ; ಆತಂಕ ತಂದ ಉಗ್ರರ ಹೇಳಿಕೆ!

By Suvarna NewsFirst Published May 21, 2021, 2:38 PM IST
Highlights
  • ಇಸ್ರೇಲ್ ಹಾಗೂ ಹಮಾಸ್ ಉಗ್ರರ ನಡುವಿನ ಕದನ ವಿರಾಮ
  • ಸತತ 11 ದಿನಗಳ ಕಾಲ ನಡೆದ ಉಗ್ರ ಹೋರಾಟ ಅಂತ್ಯ
  • ಕದನ ವಿರಾಮದ ಬೆನ್ನಲ್ಲೇ ಹೇಳಿಕೆ ತಂದ ಆತಂಕ

ಗಾಜಾ(ಮೇ.21):  ಹಮಾಸ್ ಉಗ್ರರನ್ನು ಸದೆಬಡೆಯಲು ಇಸ್ರೇಲ್ ಸತತ 11 ದಿನಗಳ ಕಾಲ ಗಾಜಾ ಪಟ್ಟಿಯಲ್ಲಿ ನಡೆಸಿದ ಕದನ ಇಂದು(ಮೇ.21) ಅಂತ್ಯಗೊಂಡಿದೆ. ಈಜಿಪ್ಟ್ ಮಧ್ಯಪ್ರವೇಶದಿಂದ ಇಸ್ರೇಲ್ ಕದನ ವಿರಾಮ ಘೋಷಿಸಿದೆ. ಇತ್ತ ಹಮಾಸ್ ಹೋರಾಟ ಅಂತ್ಯಗೊಳಿಸಲು ಒಪ್ಪಿಕೊಂಡಿದ್ದು, ಇಂದು ಮುಂಜಾನೆ 2 ಗಂಟೆಯಿಂದ ಕದನ ವಿರಾಮ ಜಾರಿಯಾಗಿದೆ.

ಇಸ್ರೇಲ್‌ ವಾಯುದಾಳಿಗೆ ಗಾಜಾದಲ್ಲಿನ ಹಮಾಸ್‌ ಉಗ್ರರ ಸುರಂಗ ಧ್ವಂಸ!.

ಜೆರುಸಲೇಂನ ಅಲ್ ಅಕ್ಸಾ ಮಸೀದಿಯಲ್ಲಿ ನಡೆದ ಸಂಘರ್ಷ ಕಳೆದ 11 ದಿನಗಳಲ್ಲಿ ಮಿನಿ ಯುದ್ಧವಾಗಿ ಮಾರ್ಪಟ್ಟಿತ್ತು. ಉಗ್ರರ ಸದ್ದಡಗಿಸಲು ಇಸ್ರೇಲ್ ಸಜ್ಜಾಗಿತ್ತು. ಹೀಗಾಗಿ ಗಾಜಾ ಪಟ್ಟಿಯಲ್ಲಿ ಅಡಗಿದ್ದ ಉಗ್ರರ ನೆಲೆಗಳ ಮೇಲೆ ಇಸ್ರೇಲ್ ಸತತ ದಾಳಿ ಮಾಡಿತ್ತು. ಈ ದಾಳಿಯಲ್ಲಿ ಹಲವು ನಾಗರೀಕರು, ಮಕ್ಕಳು ಸಾವನ್ನಪ್ಪಿದ್ದರು.

ಇದೇ ಕಾರಣಕ್ಕೆ ವಿಶ್ವ ಸಂಸ್ಥೆ ಕದನ ವಿರಾಮಕ್ಕೆ ಪ್ರಯತ್ನ ನಡೆಸಿತ್ತು. ಇತ್ತ ಈಜಿಪ್ಟ್ ಪ್ರಸ್ತಾವನ್ನು ಸರ್ವಾನುಮತದಿಂದ ಒಪ್ಪಿಕೊಂಡಿರುವ ಇಸ್ರೇಲ್, ತಡರಾತ್ರಿ  ಪ್ರಧಾನಿ ಬೆಂಜಮಿನ್ ನೇತನ್ಯಾಹು ಸೆಕ್ಯೂರಿಟಿ ಕ್ಯಾಬಿನೆಟ್ ಜೊತೆ ಸಭೆ ನಡೆಸಿದ್ದಾರೆ. ಬಳಿಕ ಕದನ ವಿರಾಮ ಘೋಷಿಸಿದ್ದಾರೆ.

ಇಸ್ರೇಲ್ ದಾಳಿಗೆ ನುಚ್ಚು ನೂರಾದ ಮನೆ: ಬದುಕುಳಿದ 6 ವರ್ಷದ ಮಗು!

ಕದನ ವಿರಾಮದ ಬೆನ್ನಲ್ಲೇ ಹಮಾಸ್ ಉಗ್ರರು ನೀಡಿದ ಹೇಳಿಕೆ ಇದೀಗ ಆತಂಕ ತಂದಿದೆ. ಕದನ ವಿರಾಮದಿಂದ ಇಸ್ರೇಲ್ ಸೋಲೋಪ್ಪಿಕೊಂಡಿದೆ . ಇದು ಹಮಾಸ್ ಹಾಗೂ ಪ್ಯಾಲೆಸ್ಟೈನ್ ಗೆಲುವು ಎಂದು ಸಂಭ್ರಮಾಚರಣೆ ನಡೆಸಿದ್ದಾರೆ. ಹಮಾಸ್ ಉಗ್ರರ ಹೇಳಿಕೆ ಇದೀಗ ಇಸ್ರೇಲ್ ಕೆರಳಿಸಿದೆ. ಆದರೆ ಈ ಕುರಿತು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

click me!