ಅಮೆರಿಕದಿಂದ ಭಾರತಕ್ಕೆ 36 ಸಾವಿರ ಕೋಟಿಗೂ ಹೆಚ್ಚು ಕೊರೋನಾ ನೆರವು

By Suvarna NewsFirst Published May 21, 2021, 10:32 AM IST
Highlights
  • ಭಾರತಕ್ಕೆ 36,000 ಕೋಟಿಗೂ ಹೆಚ್ಚು ನೆರವು
  • COVID-19 ಸಾಂಕ್ರಾಮಿಕ ರೋಗದಿಂದ ತತ್ತರಿಸಿದ ದಕ್ಷಿಣ ಏಷ್ಯಾದ ಇತರ ದೇಶಗಳಿಗೂ ನೆರವು
  • ಸಹಾಯ ವಿಸ್ತರಿಸಲು ಈಗ ಬೈಡೆನ್ ಆಡಳಿತದಿಂದ ಕೆಲಸ

ವಾಷಿಂಗ್ಟನ್(ಮೇ.21): ಅಮೆರಿಕ ಈವರೆಗೆ ಭಾರತಕ್ಕೆ $ 500 ಮಿಲಿಯನ್ COVID-19 ನೆರವು ನೀಡಿದೆ. 80 ಮಿಲಿಯನ್ ಲಸಿಕೆಗಳನ್ನು ಇತರ ದೇಶಗಳಿಗೆ ವಿತರಿಸುವ ಬಗ್ಗೆ ಶೀಘ್ರದಲ್ಲೇ ನಿರ್ಣಯವನ್ನು ಮಾಡಲಿದೆ ಎಂದು ಶ್ವೇತಭವನವು ಹೇಳಿದೆ.

ಇಲ್ಲಿಯವರೆಗೆ, ಅಮೆರಿಕ ಫೆಡರಲ್ ಮತ್ತು ರಾಜ್ಯ ಸರ್ಕಾರಗಳು, ಅಮೇರಿಕನ್ ಕಂಪನಿಗಳು ಮತ್ತು ಸಂಸ್ಥೆಗಳು ಮತ್ತು ಖಾಸಗಿ ನಾಗರಿಕರ ಕೊಡುಗೆಗಳನ್ನು ಒಳಗೊಂಡಂತೆ ಯುನೈಟೆಡ್ ಸ್ಟೇಟ್ಸ್ ಭಾರತಕ್ಕೆ 36 ಸಾವಿರ ಕೋಟಿಗೂ ಹೆಚ್ಚು COVID19 ಪರಿಹಾರವನ್ನು ನೀಡಿದೆ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಜೆನ್ ಸಾಕಿ ಶ್ವೇತಭವನದ ವಿದೇಶಾಂಗ ಸದಸ್ಯರಿಗೆ ತಿಳಿಸಿದ್ದಾರೆ.

ಭಾರತೀಯ IT ಉದ್ಯೋಗಿಗಳಿಗೆ ಬಿಗ್ ರಿಲೀಫ್; ಕಠಿಣ H-1B ವೀಸಾ ನಿಷೇಧ ತೆರವು !

COVID-19 ಸಾಂಕ್ರಾಮಿಕದಿಂದ ತತ್ತರಿಸಿದ ದಕ್ಷಿಣ ಏಷ್ಯಾದ ಇತರ ದೇಶಗಳಿಗೆ ಆ ಸಹಾಯವನ್ನು ವಿಸ್ತರಿಸಲು ಈಗ ಬೈಡೆನ್ ಆಡಳಿತವು ಕಾರ್ಯನಿರ್ವಹಿಸುತ್ತಿದೆ ಎಂದು ಅವರು ಹೇಳಿದ್ದಾರೆ. ನಾವು ಆರೋಗ್ಯ ಸರಬರಾಜು, ಆಮ್ಲಜನಕ ಸರಬರಾಜು ಮತ್ತು N95 ಮಾಸ್ಕ್, ಕ್ಷಿಪ್ರ ರೋಗನಿರ್ಣಯ ಪರೀಕ್ಷಾ ಕಿಟ್‌ ಮತ್ತು ಔಷಧ ಕಳುಹಿಸಿದ್ದೇವೆ ಎನ್ನಲಾಗಿದೆ.

800 ಮಿಲಿಯನ್ ಕೊರೋನ ಲಸಿಕೆಗಳಲ್ಲಿ 60 ಮಿಲಿಯನ್ ಅಸ್ಟ್ರಾಝೆನಕಾ ಮತ್ತು 20 ಮಿಲಿಯನ್ ಇತರ ಅಂಗೀಕೃತ ವ್ಯಾಕ್ಸೀನ್ ಇದೆ. ಇದೀಗ, ಇದು ಸಂವಾದಾತ್ಮಕ ಪ್ರಕ್ರಿಯೆಯ ಮೂಲಕ ಕಾರ್ಯನಿರ್ವಹಿಸುತ್ತಿದೆ ಎಂದು ಮಿಸ್ ಸಾಕಿ ಹೇಳಿದ್ದಾರೆ.

ಈ ಲಸಿಕೆ ಪ್ರಮಾಣವನ್ನು ಯುನೈಟೆಡ್ ಸ್ಟೇಟ್ಸ್ ಹೇಗೆ ವಿತರಿಸಲು ಮತ್ತು ಹಂಚಿಕೊಳ್ಳಲು ಹೊರಟಿದೆ ಎಂಬುದನ್ನು ನಿರ್ಧರಿಸಲು ರಾಷ್ಟ್ರೀಯ ಭದ್ರತಾ ಸಲಹೆಗಾರ ಜೇಕ್ ಸುಲ್ಲಿವಾನ್ ಮತ್ತು ರಾಜ್ಯ ಇಲಾಖೆಯವರು ಸೇರಿದಂತೆ ಸಂವಾದಾತ್ಮಕ ತಂಡಗಳು ಚರ್ಚಿಸುತ್ತಿವೆ.

ನಿಸ್ಸಂಶಯವಾಗಿ, ಭಾರತದ ಜನರು ಅನುಭವಿಸಿದ ಎಲ್ಲ ತೊಂದರೆ ಸ್ಪಷ್ಟವಾಗಿ ನಮ್ಮ ಮನಸ್ಸಿನಲ್ಲಿದೆ. ಆದರೆ ಪ್ರಪಂಚದಾದ್ಯಂತ ಹಲವಾರು ದೇಶಗಳು ಮತ್ತು ಪ್ರದೇಶಗಳು ಸಹ ಕೊರೋನಾದಿಂದ ತತ್ತರಿಸಿವೆ. ಅವುಗಳಿಗೆ ನೆರವಾಗುವುದು ಸಹ ಅಗತ್ಯವಾಗಿವೆ. ಆದ್ದರಿಂದ ಇವೆಲ್ಲ ಅಂಶಗಳನ್ನು ಮುಂದಿನ ದಿನಗಳಲ್ಲಿ ಗಮನಿಸಬೇಕಾಗುತ್ತದೆ ಎಂದು ಮಿಸ್ ಸಾಕಿ ಹೇಳಿದ್ದಾರೆ.

click me!