ಕೊರೋನಾಗೆ ಪರಿಣಾಮಕಾರಿಯಾದ ಲಸಿಕೆ ಕಂಡುಹಿಡಿದಿದ್ದೇವೆ; ಸಿಹಿ ಸುದ್ದಿ ನೀಡಿದ ಇಸ್ರೇಲ್!

By Suvarna News  |  First Published Aug 7, 2020, 3:23 PM IST

ಕೊರೋನಾ ವೈರಸ್ ನಿಯಂತ್ರಣಕ್ಕೆ ಲಸಿಕೆ ಕಂಡು ಹಿಡಿಯುವ ಪ್ರಯತ್ನಗಳು ಹಂತ ಹಂತವಾಗಿ ನಡೆಯುತ್ತಿದೆ. ಹಲವು ಲಸಿಕೆಗಳು ಅಂತಿಮ ಹಂತದ ಪ್ರಯೋಗದಲ್ಲಿದೆ. ಇದೀಗ ಇಸ್ರೇಲ್ ಪರಿಣಾಮಕಾರಿಯಾದ ಲಸಿಕೆ ಕಂಡು ಹಿಡಿದಿರುವುದಾಗಿ ಹೇಳಿದೆ. 


ಜೆರುಸಲೇಮ್(ಆ.07): ಕೊರೋನಾ ವೈರಸ್ ವಿರುದ್ಧ ಹೋರಾಡಲು ಲಸಿಕೆಯೊಂದೆ ಅಸ್ತ್ರ. ಕಾರಣ ಲಾಕ್‌ಡೌನ್, ಸಾಮಾಜಿಕ ಅಂತರ, ಮಾಸ್ಕ್ ಧಾರಣೆ, ಸ್ಯಾನಿಟೈಸರ್ ಬಳಕೆ ಸೇರಿದಂತೆ ಹಲವು ಕ್ರಮಗಳನ್ನು ಕೈಗೊಂಡಲು ಕೊರೋನಾ ನಿಯಂತ್ರಣವಾಗುತ್ತಿಲ್ಲ. ಹೀಗಾಗಿ ಲಸಿಕೆಗಾಗಿ ಎಲ್ಲಾ ದೇಶಗಳು ಕಾಯುತ್ತಿವೆ. ಭಾರತ ಸೇರಿದಂತೆ ಹಲವು ರಾಷ್ಟ್ರಗಳು ಲಸಿಕೆ ಪ್ರಯೋಗ ಮಾಡುತ್ತಿದ್ದು, ಶೀಘ್ರದಲ್ಲೇ ಅಂತಿಮ ರೂಪ ಪಡೆದುಕೊಳ್ಳಲಿದೆ. ಇದರ ನಡುವೆ ಇಸ್ರೇಲ್ ಕೊರೋನಾಗೆ ಪರಿಣಾಮಕಾರಿಯಾದ ಲಸಿಕೆ ಕಂಡು ಹಿಡಿದಿರುವುದಾಗಿ ಹೇಳಿದೆ.

20 ಲಕ್ಷ ದಾಟಿದ ಸೋಂಕಿತರ ಸಂಖ್ಯೆ: ಮೋದಿ ವಿರುದ್ಧ ಕವಿತೆ ಮೂಲಕ ರಾಹುಲ್ ಕಿಡಿ

Tap to resize

Latest Videos

ಇಸ್ರೇಲ್‌ನ ಬಯೋಲಾಜಿಕಲ್ ಸಂಶೋಧನಾ ಕೇಂದ್ರದಲ್ಲಿ ಲಸಿಕೆ ಅಭಿವೃದ್ದಿ ಪಡಿಸಲಾಗಿದೆ. ಬಯೋಲಾಜಿಕಲ್ ಸಂಶೋಧನಾ ಕೇಂದ್ರಕ್ಕೆ ಬೇಟಿ ನೀಡಿದ ಇಸ್ರೇಲ್ ರಕ್ಷಣಾ ಸಚಿವ ಬೆನ್ನೇ ಗ್ಯಾಂಟ್ಜ್, ನಿರ್ದೇಶಕ ಶಾಮ್ಯುಯೆಲ್ ಶಾಪಿರಾ ಅವರಿಂದ ಮಾಹಿತಿ ಪಡೆದಿದ್ದಾರೆ. ಇಸ್ರೇಲ್ ಕೊರೋನಾ ವಿರುದ್ಧ ಪರಿಣಾಮಕಾರಿಯಾಗಿ ಹೋರಾಡುವ ಹಾಗೂ ಸಂಪೂರ್ಣ ನಿಯಂತ್ರಿಸುವ ಲಸಿಕೆ ಕಂಡು ಹಿಡಿದಿದೆ. ಆದರೆ ಮಾರ್ಗಸೂಚಿಯಂತೆ ಮಾನವನ ಮೇಲಿನ ಪ್ರಯೋಗ ನಡೆಯಬೇಕಿದೆ ಎಂದಿದ್ದಾರೆ.

ಕೊರೋನಾ: ಕರ್ನಾಟಕ ಸೇರಿ 22 ರಾಜ್ಯಕ್ಕೆ 890 ಕೋಟಿ ರುಪಾಯಿ ಬಿಡುಗಡೆ

ಲಸಿಕೆ ಮಾರುಕಟ್ಟೆಗೆ ಬಿಡುವು ಮುನ್ನ ಪ್ರಯೋಗಗಳು ನಡೆಯಬೇಕು. ಇದು ನಿಯಮ. ಇದರಂತೆ ಇಸ್ರೇಲ್ ತಯಾರಿಸಿದ ಕೊರೋನಾ ಲಸಿಕೆ ಇದೀಗ ಪ್ರಯೋಗ ಆರಂಭಿಸಲಿದೆ. ಇದು ಅತ್ಯಂತ ಪರಿಣಾಮಕಾರಿ ಕೊರೋನಾ ಲಸಿಕೆಯಾಗಿದೆ ಎಂದು ಸಂಶೋಧನೆಯಲ್ಲಿ ದೃಢಪಟ್ಟಿದೆ. ಇದೀಗ ನಮ್ಮ ಕೈಸೇರಿರುವ ಈ ಲಸಿಕೆಯ ಪ್ರಯೋಗ ನಡೆಯಲಿದೆ. ಆರೋಗ್ಯ ಸಚಿವಾಲಯದ ನೆರವಿನ ಮೂಲಕ ಮಾನವನ ಮೇಲೆ ಈ ಲಸಿಕೆ ಪ್ರಯೋಗ ನಡೆಯಲಿದೆ ಎಂದು ಬೆನ್ನಿ ಹೇಳಿದ್ದಾರೆ.
 

click me!