
ಲಂಡನ್(ಆ. 07) ಬ್ರಿಟನ್ ನ ಲೇಬರ್ ಪಾರ್ಟಿಯ ಸಂಸದೆಯೊಬ್ಬರು ಯುಕೆ ವಿದೇಶಾಂಗ ಕಾರ್ಯದರ್ಶಿ ಡೊಮಿನಿಕ್ ರಾಬ್ ಅವರಿಗೆ ಪತ್ರವೊಂದನ್ನು ಬರೆದಿದ್ದಾರೆ. ಅರೆ, ಇಂಗ್ಲೆಂಡ್ ನಲ್ಲಿ ಪತ್ರ ಬರೆದರೆ ನಮಗೇನು ಸಂಬಂಧ ಅಂದುಕೊಂಡ್ರಾ? ಇದೆ..
ಭಾರತದ ಜಮ್ಮು-ಕಾಶ್ಮೀರ ವಿಚಾರದಲ್ಲಿ ಸಂಸದೆ ಕ್ಯಾತೆ ತೆಗೆದಿದ್ದಾಳೆ. ಕಾಶ್ಮೀರದ ಜನರಿಗೆ ನ್ಯಾಯ ಕೊಡಿಸಬೇಕು ಎಂದು ದೊಡ್ಡದಾಗಿ ಮಾತನಾಡಿದ್ದಾಳೆ. ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ಭಾರತ ಹಿಂಪಡೆದಿದ್ದು, ಕಾಶ್ಮೀರ ವಿಷಯದಲ್ಲಿ ಮಧ್ಯಸ್ಥಿಗೆ ವಹಿಸಲು ಬ್ರಿಟನ್ ಬಾಧ್ಯತೆ ಹೊಂದಿದೆ. ಕಾಶ್ಮೀರವನ್ನು ವಿವಾದಿತ ಪ್ರದೇಶವೆಂದು ಗುರುತಿಸಬೇಕು ಎಂದು ಮನಸಿಗೆ ಬಂದಂತೆ ಹಲುಬಿದ್ದಾಳೆ.#
ಭಾರತ ಆಕ್ರಮಿತ ಕಾಶ್ಮೀರ ಎಂದು ತನ್ನ ಪತ್ರದಲ್ಲಿ ಕರೆದಿದ್ದು 370 ಮತ್ತು 35ಎ ವಿಧಿ ರದ್ದು ಮಾಡಿ ಹಕ್ಕು ಕಸಿದುಕೊಳ್ಳಲಾಗಿದ್ದು ಬ್ರಿಟನ್ ಮಧ್ಯ ಪ್ರವೇಶ ಮಾಡಬೇಕು ಎಂದು ಕೇಳಿಕೊಂಡಿರುವುದು ದೊಡ್ಡ ಸುದ್ದಿಯಾಗಿದೆ.
ಜಮ್ಮು ಕಾಶ್ಮೀರಕ್ಕೆ ಭೇಟಿ ನೀಡಿದ್ದ ಬ್ರಿಟನ್ ಸಂಸದರು ರಚಿಸಿಕೊಂಡಿದ್ದ ಸರ್ವಪಕ್ಷೀಯ ಸಂಸದೀಯ ಕಾಶ್ಮೀರ ನಿಯೋಗ (ಎಪಿಪಿಜಿಕೆ) ಭಾರತದ ವಿರುದ್ಧ ಅಪಪ್ರಚಾರ ನಡೆಸಲು ಪಾಕಿಸ್ತಾನದಿಂದ ಹಣ ಪಡೆದುಕೊಂಡಿತ್ತು ಎಂಬ ವಿಚಾರವೂ ಕೆಲ ದಿನಗಳ ಹಿಂದೆ ಚರ್ಚೆಯಾಗಿತ್ತ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ