ಗಾಜಾ ವಿಶ್ವವಿದ್ಯಾಲಯ ಕ್ಯಾಂಪಸ್‌ ಮೇಲೆ ಬಾಂಬ್ ದಾಳಿ ಮಾಡಿದ ಇಸ್ರೇಲ್? ಸ್ಪಷ್ಟೀಕರಣ ಕೇಳಿದ ಅಮೆರಿಕ

By BK Ashwin  |  First Published Jan 19, 2024, 6:28 PM IST

ಪ್ಯಾಲೆಸ್ತೀನ್‌ ವಿಶ್ವವಿದ್ಯಾಲಯದ ಮುಖ್ಯ ಕ್ಯಾಂಪಸ್ ಕಟ್ಟಡವನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್) ಗುರಿಯಾಗಿಸಿ ಬಾಂಬ್ ದಾಳಿ ನಡೆಸಲಾಗಿದೆ ಎಂಬ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 


ದೆಹಲಿ (ಜನವರಿ 19, 2024): ಗಾಜಾದಲ್ಲಿರುವ ಪ್ಯಾಲೆಸ್ತೀನ್‌ ವಿಶ್ವವಿದ್ಯಾಲಯದ ಮುಖ್ಯ ಕ್ಯಾಂಪಸ್ ಕಟ್ಟಡವನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್) ಗುರಿಯಾಗಿಸಿ ಬಾಂಬ್ ದಾಳಿ ನಡೆಸಲಾಗಿದೆ ಎಂದು ಹೇಳಲಾಗಿದೆ. ಈ ಸಂಬಂಧ ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋ ಬಗ್ಗೆ ಅಮೆರಿಕ ಇಸ್ರೇಲ್‌ ಸ್ಪಷ್ಟೀಕರಣ ಕೋರಿದೆ.

ಇಸ್ರೇಲ್‌ ಸ್ಪೋಟ ಸಂಭವಿಸುವ ಮೊದಲು ವಿಶ್ವವಿದ್ಯಾನಿಲಯದ ಕಟ್ಟಡದಂತೆ ಗೋಚರಿಸುವ ವಿಡಿಯೋವನ್ನು ಚಿತ್ರಿಸುತ್ತದೆ. ನಂತರ, ಬಾಂಬ್‌ಗಳನ್ನು ಒಳಗೆ ಅಡಗಿಸಿಡಲಾಗಿದ್ದು, ಬಳಿಕ ಸ್ಫೋಟಗೊಳಿಸುತ್ತವೆ. ಹಾಗೂ, ಎಲ್ಲ ದಿಕ್ಕುಗಳಲ್ಲಿ ಆಘಾತ ತರಂಗಗಳು ಸಂಭವಿಸಿದೆ. ಇನ್ನು, ಈ ವಿಡಿಯೋ ಬಗ್ಗೆ ಅಮೆರಿಕ ಪ್ರತಿಕ್ರಿಯೆ ನೀಡಿದ್ದು, ಮಾಹಿತಿ ಕೊರತೆ ಇದೆ ಎಂದು ಪ್ರತಿಕ್ರಿಯೆ ನೀಡಿದೆ. ಅಲ್ಲದೆ, ಯುಎಸ್ ಸ್ಟೇಟ್ ಡಿಪಾರ್ಟ್ಮೆಂಟ್ ವಕ್ತಾರ ಡೇವಿಡ್ ಮಿಲ್ಲರ್ ಈ ಸಂಬಂಧ ಸ್ಪಷ್ಟೀಕರಣ ಕೋರಿದ್ದಾರೆ.

Tap to resize

Latest Videos

ಇದನ್ನು ಓದಿ: ದಿಲ್ಲಿ ಇಸ್ರೇಲ್‌ ಕಚೇರಿ ಸಮೀಪ ಸ್ಫೋಟ: ಬಾಂಬರ್‌ಗೆ ಭದ್ರತಾ ಪಡೆಯ ತೀವ್ರ ತಲಾಶ್‌

Birzeit University condemns the brutal assault and bombing of -Israa University campus by the Israeli occupation south of city, this occurred after seventy days of the occupation occupying the campus; turning it into their base, and military barracks for their forces pic.twitter.com/vot9s1z3tz

— Birzeit University (@BirzeitU)

ಇನ್ನು, ದಕ್ಷಿಣ ಗಾಜಾದ ಪ್ರಮುಖ ನಗರವಾದ ಖಾನ್ ಯುನಿಸ್‌ನಲ್ಲಿನ ಸಾಕ್ಷಿಗಳು ಗುಂಡಿನ ದಾಳಿ ಮತ್ತು ವೈಮಾನಿಕ ದಾಳಿಗಳ ಬಗ್ಗೆ ವರದಿ ಮಾಡಿದ್ದಾರೆ. ಈ ಮಧ್ಯೆ, ಇಸ್ರೇಲಿ ಸೇನೆಯು ಈ ಪ್ರದೇಶವನ್ನು ಗುರಿಯಾಗಿಟ್ಟುಕೊಂಡು, ಹಮಾಸ್‌ನ ಸದಸ್ಯರು ಮತ್ತು ನಾಯಕರ ಭದ್ರಕೋಟೆ ಎಂದು ಹೇಳಿಕೊಂಡಿದೆ.

ಇನ್ನೊಂದೆಡೆ, ಪ್ಯಾಲೆಸ್ತೀನ್‌ನ ರೆಡ್‌ ಕ್ರೆಸೆಂಟ್ ಅಲ್-ಅಮಲ್ ಆಸ್ಪತ್ರೆಯ ಬಳಿ ತೀವ್ರವಾದ ಫಿರಂಗಿ ಗುಂಡಿನ ದಾಳಿ ಸಹ ವರದಿಯಾಗಿದೆ. ಗಾಜಾದ ಆರೋಗ್ಯ ಸಚಿವಾಲಯವು ರಾತ್ರಿಯಲ್ಲಿ 77 ಸಾವುಗಳನ್ನು ದೃಢಪಡಿಸಿದೆ. ಇನ್ನು, ಇಸ್ರೇಲಿ ಮಿಲಿಟರಿ ಡಜನ್‌ಗಟ್ಟಲೆ ಭಯೋತ್ಪಾದಕರನ್ನು ನಿರ್ಮೂಲನೆ ಮಾಡಿರೋದಾಗಿ ಹೇಳಿಕೊಂಡಿದೆ ಎಂದು ಸುದ್ದಿ ಸಂಸ್ಥೆ AFP ವರದಿ ಮಾಡಿದೆ.

ಇಸ್ರೇಲ್‌ನಲ್ಲಿ 10 ಸಾವಿರ ಜನರಿಗೆ ಕೆಲಸ: ಹರ್ಯಾಣ ಸರ್ಕಾರದ ಆಫರ್‌; ಉದ್ಯೋಗ ಸೃಷ್ಟಿಗೆ ಕಸರತ್ತು

ಅಕ್ಟೋಬರ್ 7 ರಂದು ಇಸ್ರೇಲ್ ಮೇಲೆ ಹಮಾಸ್ ದಾಳಿಯೊಂದಿಗೆ ಪ್ರಾರಂಭವಾದ ನಡೆಯುತ್ತಿರುವ ಸಂಘರ್ಷವು ಗಾಜಾದ 2.4 ಮಿಲಿಯನ್ ಜನಸಂಖ್ಯೆಯ ಸರಿಸುಮಾರು 85 ಪ್ರತಿಶತವನ್ನು ಸ್ಥಳಾಂತರಿಸಿದೆ ಎಂದು ವಿಶ್ವಸಂಸ್ಥೆ ಹೇಳಿದೆ. ಅಕ್ಟೋಬರ್ 7 ರಂದು ಹಮಾಸ್‌ನ ದಾಳಿಯಿಂದ, ಇಸ್ರೇಲ್‌ನಲ್ಲಿ ಸುಮಾರು 1,140 ಜನರು, ಹೆಚ್ಚಾಗಿ ನಾಗರಿಕರು ಮೃತಪಟ್ಟಿದ್ದಾರೆ.

ಉಗ್ರರು ಒತ್ತೆಯಾಳುಗಳನ್ನು ಹೊತ್ತೊಯ್ದು, ಇನ್ನೂ ಕೆಲವರನ್ನು ಗಾಜಾದಲ್ಲಿ ಇರಿಸಿದೆ. ಕನಿಷ್ಠ 27 ಒತ್ತೆಯಾಳುಗಳನ್ನು ಕೊಲ್ಲಲಾಗಿದೆ ಎಂದು ಇಸ್ರೇಲ್ ಹೇಳಿಕೊಂಡಿದೆ. ಇದಕ್ಕೆ, ಪ್ರತಿಕ್ರಿಯೆಯಾಗಿ, ಇಸ್ರೇಲ್ ಹಮಾಸ್ ಅನ್ನು "ನಿರ್ಮೂಲನೆ" ಮಾಡಲು ಪ್ರತಿಜ್ಞೆ ಮಾಡಿದ್ದು, ಪಟ್ಟುಬಿಡದ ವಾಯು ಮತ್ತು ನೆಲದ ಆಕ್ರಮಣಗಳನ್ನು ನಡೆಸುತ್ತಿದೆ. ಈ ದಾಳಿಯಿಂದ ಕನಿಷ್ಠ 24,620 ಪ್ಯಾಲೇಸ್ನಿಯರ ಸಾವುನೋವುಗಳಾಗಿದ್ದು, ಇದರಲ್ಲಿ ಸುಮಾರು 70 ಪ್ರತಿಶತ ಮಹಿಳೆಯರು, ಮಕ್ಕಳು ಮತ್ತು ಹದಿಹರೆಯದವರು ಸೇರಿದ್ದಾರೆ.

ಹಮಾಸ್ ವಿರುದ್ಧ ‘ಹತ್ಯೆ ಯಂತ್ರ’ ಅಖಾಡಕ್ಕಿಳಿಸಿದ ಇಸ್ರೇಲ್: ಕಿಡಾನ್ ಪಡೆಗಿದೆ ವಿಶೇಷ ಬಲ

click me!