ಆಸ್ಟ್ರೇಲಿಯಾದಲ್ಲಿ ನಿರ್ಮಾಣವಾಗಲಿದೆ ವಿಶ್ವದ ಅತಿ ಎತ್ತರದ 721 ಅಡಿ ರಾಮಮಂದಿರ

By BK AshwinFirst Published Jan 19, 2024, 2:48 PM IST
Highlights

ಶ್ರೀರಾಮ ವೇದಿಕ್ ಮತ್ತು ಕಲ್ಚರಲ್ ಟ್ರಸ್ಟ್ ನೇತೃತ್ವದಲ್ಲಿ ಸುಮಾರು 600 ಕೋಟಿ ರೂ. ವೆಚ್ಚದ ಈ ಸ್ಮಾರಕ ಯೋಜನೆಯು 150 ಎಕರೆ ಪ್ರದೇಶದಲ್ಲಿ ನೆಲೆಯಾಗಲಿದೆ ಎಂದು ವರದಿಯಾಗಿದೆ.

ನವದೆಹಲಿ (ಜನವರಿ 19, 2024): ಅಯೋಧ್ಯೆಯಲ್ಲಿ 500 ವರ್ಷಗಳಿಂದ ಕಾದಿದ್ದ ರಾಮ ಮಂದಿರ ಲೋಕಾರ್ಪಣೆ ಇನ್ನು 3 ದಿನಗಳಲ್ಲಿ ನೆರವೇರಲಿದೆ. ಇದಕ್ಕಾಗಿ ದೇಶದ ಹಾಗೂ ಜಗತ್ತಿನ ಹಿಂದೂಗಳೆಲ್ಲ ಕಾಯುತ್ತಿದ್ದಾರೆ. ಇದರೊಂದಿಗೆ ಹಿಂದೂಗಳಿಗೆ ಮತ್ತೊಂದು ಸಂತಸವಾದ ವಿಚಾರವಿದೆ. ಆಸ್ಟ್ರೇಲಿಯಾದ ಪರ್ತ್‌ನಲ್ಲಿ ಶೀಘ್ರದಲ್ಲೇ ವಿಶ್ವದ ಅತಿ ಎತ್ತರದ ರಾಮ ಮಂದಿರ ತಲೆ ಎತ್ತಲಿದೆ.

ಈ ಬೃಹತ್ ರಚನೆಯು ಸರಿಸುಮಾರು 721 ಅಡಿ ಎತ್ತರವಿದೆ. ಶ್ರೀರಾಮ ವೇದಿಕ್ ಮತ್ತು ಕಲ್ಚರಲ್ ಟ್ರಸ್ಟ್ ನೇತೃತ್ವದಲ್ಲಿ ಸುಮಾರು 600 ಕೋಟಿ ರೂ. ವೆಚ್ಚದ ಈ ಸ್ಮಾರಕ ಯೋಜನೆಯು 150 ಎಕರೆ ಪ್ರದೇಶದಲ್ಲಿ ನೆಲೆಯಾಗಲಿದೆ ಎಂದು ವರದಿಯಾಗಿದೆ. ಈ ಯೋಜನೆಯು ದೇವಾಲಯದ ಸಾಂಪ್ರದಾಯಿಕ ಪರಿಕಲ್ಪನೆಯನ್ನು ಮೀರಿ ವಿಸ್ತರಿಸಿದೆ ಎಂದು ಟ್ರಸ್ಟ್‌ನ ಉಪ ಮುಖ್ಯಸ್ಥ ಡಾ. ಹರೇಂದ್ರ ರಾಣಾ ಬಹಿರಂಗಪಡಿಸಿದರು. 

Latest Videos

ಅಯೋಧ್ಯೆಯಲ್ಲಿ ಪ್ರಾಣ ಪ್ರತಿಷ್ಠಾನಕ್ಕೂ ಮುನ್ನ ಕಟ್ಟುನಿಟ್ಟಾದ ಆಚರಣೆ; ಹಲವು ದೇಗುಲಗಳಿಗೆ ಭೇಟಿ ನೀಡ್ತಿರೋ ಮೋದಿ..

ಯೋಜನೆಯ ಮೇಲ್ವಿಚಾರಣೆ ನಡೆಸುತ್ತಿರುವ ಅಂತರರಾಷ್ಟ್ರೀಯ ಶ್ರೀರಾಮ ವೇದಿಕ್ ಮತ್ತು ಸಾಂಸ್ಕೃತಿಕ ಒಕ್ಕೂಟವು (ISVACU) ಸಾಂಸ್ಕೃತಿಕ, ಆಧ್ಯಾತ್ಮಿಕ ಮತ್ತು ಸಮುದಾಯ ಚಟುವಟಿಕೆಗಳನ್ನು ಒಳಗೊಂಡಿರುವ ಬಹುಮುಖಿ ಕೇಂದ್ರವಾಗಿ ದೇವಾಲಯವನ್ನು ಕಲ್ಪಿಸಿದೆ.

ನದಿ ರಸ್ತೆಯಿಂದ ಪ್ರವೇಶಿಸಬಹುದಾದ, ದೇವಾಲಯದ ಸಂಕೀರ್ಣವು ಮೇಣದಬತ್ತಿಯ ಮುಖಮಂಟಪ, ಚಿತ್ರಕೂಟ ವಾಟಿಕಾ ಮತ್ತು ಪಂಚವಟಿ ವಾಟಿಕಾ ಉದ್ಯಾನಗಳು ಹಾಗೂ ಪ್ರಸ್ತಾವಿತ ರಾಮ್ ನಿವಾಸ್ ಹೋಟೆಲ್‌ನಂತಹ ಪ್ರಭಾವಶಾಲಿ ಅಂಶಗಳನ್ನು ಒಳಗೊಂಡಿರುತ್ತದೆ. ಅಲ್ಲದೆ, ಸೀತಾ ರಸೋಯಿ ರೆಸ್ಟೋರೆಂಟ್, ರಾಮಾಯಣ ಸದನ್ ಲೈಬ್ರರಿ ಮತ್ತು ತುಳಸಿದಾಸ್ ಹಾಲ್‌ನಂತಹ ಸಾಂಸ್ಕೃತಿಕ ಸ್ಥಳಗಳು ಸಹ ಇರಲಿದೆ.

ಅಯೋಧ್ಯೆಯ ರಾಮಮಂದಿರ ನೆನಪಿನ ಅಂಚೆ ಚೀಟಿಗಳನ್ನು ಬಿಡುಗಡೆ ಮಾಡಿದ ಪ್ರಧಾನಿ ಮೋದಿ

ಇನ್ನು, ದೇವಾಲಯವು ಯೋಗ, ಧ್ಯಾನ ಮಾಡಲು ಪ್ರದೇಶ, ವೇದ ಕಲಿಕಾ ಕೇಂದ್ರ, ಸಂಶೋಧನಾ ಕೇಂದ್ರ ಮತ್ತು ವಸ್ತುಸಂಗ್ರಹಾಲಯ ಸೇರಿದಂತೆ ಆಧ್ಯಾತ್ಮಿಕ ಸ್ಥಳಗಳನ್ನು ಹೊಂದಿರುತ್ತದೆ. ಹಾಗೂ, ತಂತ್ರಜ್ಞಾನ ಉದ್ಯಾನದಂತಹ ಪ್ರದೇಶಗಳೊಂದಿಗೆ ಕೆಲವು ತಾಂತ್ರಿಕ ಅಂಶಗಳನ್ನು ದೇವಾಲಯದಲ್ಲಿ ಅಳವಡಿಸಲಾಗುವುದು ಎಂದು ತಿಳಿದುಬಂದಿದೆ.

ಅಲ್ಲದೆ, ಈ ವಿಶ್ವದ ಅತಿ ಎತ್ತರ ರಾಮ ದೇಗುಲಕ್ಕೆ ಶೂನ್ಯ ಇಂಗಾಲದ ಹೆಜ್ಜೆಗುರುತು ಖಾತ್ರಿಪಡಿಸುವ ಜೈವಿಕ-ಕೊಳಚೆನೀರಿನ ಸಂಸ್ಕರಣಾ ಘಟಕ ಮತ್ತು ಸೌರ ವಿದ್ಯುತ್ ಸ್ಥಾವರವನ್ನು ಸೇರಿಸುವ ಮೂಲಕ ಪರಿಸರ ಸುಸ್ಥಿರತೆಯು ಕೇಂದ್ರ ಹಂತವನ್ನು ತೆಗೆದುಕೊಳ್ಳುತ್ತದೆ ಎಂದೂ ಟ್ರಸ್ಟ್ ಹೇಳಿದೆ. ಒಟ್ಟಾರೆ, ಆಧ್ಯಾತ್ಮಿಕ ಕೇಂದ್ರ ಮಾತ್ರವಲ್ಲದೆ, ದೇವಾಲಯದ ಸಂಕೀರ್ಣವು ರೋಮಾಂಚಕ ಸಾಂಸ್ಕೃತಿಕ ಸ್ಥಳವಾಗಿಯೂ ಇರಲಿದೆ.

ISVACU ಸಾಂಸ್ಕೃತಿಕ ಪ್ರದರ್ಶನಗಳನ್ನು ಆಯೋಜಿಸಲು, ಹಬ್ಬಗಳನ್ನು ಆಚರಿಸಲು ಮತ್ತು ಸಮಗ್ರ ಯೋಗಕ್ಷೇಮ ಕಾರ್ಯಕ್ರಮಗಳನ್ನು ಆಯೋಜಿಸಲು ಪ್ಲ್ಯಾನ್ ಮಾಡಿದ್ದು, ಇದು ಕಮ್ಯುನಿಟಿ ಎಂಗೇಜ್ಮೆಂಟ್‌ ಮತ್ತು ಒಳಗೊಳ್ಳುವಿಕೆಯನ್ನು ಉತ್ತೇಜಿಸುತ್ತದೆ.

ಈ ಮಧ್ಯೆ, ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಗೆ ಭರದ ಸಿದ್ಧತೆಗಳು ನಡೆಯುತ್ತಿವೆ. ಜನವರಿ 22 ರಂದು ಮುಖ್ಯ ಸಮಾರಂಭವನ್ನು ನಿಗದಿಪಡಿಸಲಾಗಿದ್ದು, ಜನವರಿ 16 ರಂದು ವಾರದ ಆಚರಣೆಗಳು ಪ್ರಾರಂಭವಾದವು. ಜನವರಿ 23 ರಿಂದ ದೇವಾಲಯವನ್ನು ಸಾರ್ವಜನಿಕ ದರ್ಶನಕ್ಕಾಗಿ ತೆರೆಯಲಾಗುವುದು ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಘೋಷಿಸಿದರು.

click me!