ವಿಮಾನ ಟೇಕಾಫ್ ಆಗುವ ಮೊದಲೇ ಕುಚೇಷ್ಟೆ: ಪೊಲೀಸರ ಕೈಗೂ ಕಚ್ಚಿದ 25ರ ಹರೆಯದ ಕುಡುಕಿ

Published : Jun 06, 2023, 02:03 PM ISTUpdated : Jun 06, 2023, 02:09 PM IST
ವಿಮಾನ ಟೇಕಾಫ್ ಆಗುವ ಮೊದಲೇ ಕುಚೇಷ್ಟೆ: ಪೊಲೀಸರ ಕೈಗೂ ಕಚ್ಚಿದ 25ರ ಹರೆಯದ ಕುಡುಕಿ

ಸಾರಾಂಶ

ವಿಮಾನ ಹಾರಾಟ ಮಾಡುವ ಮೊದಲೇ ಕಪಿಚೇಷ್ಟೆ ತೋರಲು ಶುರು ಮಾಡಿದ ಯುವತಿಯೊಬ್ಬಳನ್ನು ಪೊಲೀಸರು ಎಳೆದು ವಿಮಾನದಿಂದ ಹೊರಗೆ ಹಾಕಿದ್ದಾರೆ. ಆಕೆಯ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಮೆಕ್ಸಿಕೋ: ಇತ್ತೀಚೆಗೆ ವಿಮಾನದೊಳಗೆ ಕುಡುಕ ಪ್ರಯಾಣಿಕರ ಹಾವಳಿ ಹೆಚ್ಚಾಗುತ್ತಿದೆ. ಕುಡಿದ ಮತ್ತಿನಲ್ಲಿ ವಿಮಾನ ಪ್ರಯಾಣಿಕರು ಅನಾಗರಿಕರಂತೆ ವರ್ತಿಸುತ್ತಿದ್ದು, ನಾಗರಿಕ ಸಮಾಜ ತಲೆತಗ್ಗಿಸುವಂತೆ ಮಾಡಿದೆ. ಅದೇ ರೀತಿ ಈಗ ಮತ್ತೊಂದು ಪ್ರಕರಣ ನಡೆದಿದ್ದು, ವಿಮಾನ ಹಾರಾಟ ಮಾಡುವ ಮೊದಲೇ ಕಪಿಚೇಷ್ಟೆ ತೋರಲು ಶುರು ಮಾಡಿದ ಯುವತಿಯೊಬ್ಬಳನ್ನು ಪೊಲೀಸರು ಎಳೆದು ವಿಮಾನದಿಂದ ಹೊರಗೆ ಹಾಕಿದ್ದಾರೆ. ಆಕೆಯ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ಈ ರೀತಿ ದುರ್ವರ್ತನೆ ತೋರಿದ  25 ವರ್ಷದ ಯುವತಿಯನ್ನು ಕಮರಿನ್ ಗಿಬ್ಸನ್ ಎಂದು ಗುರುತಿಸಲಾಗಿದೆ. ಮೇ.29 ರಂದು ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. 

ಅಮೆರಿಕಾ ಮೆಕ್ಸಿಕೋ ಸಮೀಪದ ನ್ಯೂ ಒರ್ಲಿಯನ್ ವಿಮಾನ ನಿಲ್ದಾಣದಲ್ಲಿ ಟೇಕಾಫ್ ಆಗಲು ನಿಂತಿದ್ದ ಸೌತ್ ವೆಸ್ಟ್ ಏರ್‌ಲೈನ್ಸ್‌ನಲ್ಲಿ (Southwest Airlines flight) ಘಟನೆ ನಡೆದಿದೆ. ವಿಮಾನ ಟೇಕಾಫ್ ಆಗುವ ಮೊದಲೇ ಪಾನಮತ್ತಳಾಗಿದ್ದ (drunk) ಈ ಹುಡುಗಿ ತನ್ನ ಕಾಲುಗಳನ್ನು ಮೇಲೆತ್ತಿ ಮುಂದಿನ ಸೀಟಿನಲ್ಲಿ ಕುಳಿತಿದ್ದವರನ್ನು ತುಳಿಯುವುದಕ್ಕೆ ಶುರು ಮಾಡಿದ್ದಾಳೆ.  ಇದನ್ನು ಗಮನಿಸಿದ ವಿಮಾನದ ಕ್ಯಾಬಿನ್ ಸಿಬ್ಬಂದಿ ಪೈಲಟ್‌ಗೆ ಮಾಹಿತಿ ನೀಡಿದ್ದು, ಪೈಲಟ್ ವಿಮಾನ ನಿಲ್ದಾಣದ ಪೊಲೀಸರಿಗೆ ವಿಚಾರ ತಿಳಿಸಿದ್ದಾರೆ. 

Bengaluru Airport: ವಿಮಾನ ಪ್ರಯಾಣಿಕನ ಬ್ಯಾಗ್‌ನಿಂದ 2 ಐಫೋನ್‌ ಕದ್ದ ಕೆಂಪೇಗೌಡ ಏರ್‌ಪೋರ್ಟ್ ಸಿಬ್ಬಂದಿ

ನಂತರ ಟೇಕಾಫ್ ಆಗಲು ಸಿದ್ಧವಾಗಿದ್ದ ವಿಮಾನದ ಬಳಿ ಬಂದ ಪೊಲೀಸರು ಮೊದಲಿಗೆ ಯುವತಿ ಕಮರಿನ್ ಗಿಬ್ಸನ್‌ಗೆ ವಿಮಾನದಿಂದ ಇಳಿಯುವಂತೆ ಮನವಿ ಮಾಡಿದ್ದಾರೆ. ಆದರೆ ಆಕೆ ವಿಮಾನದಿಂದ ಇಳಿಯಲು ನಿರಾಕರಿಸಿದ್ದಾಳೆ. ನಾನು ವಿಮಾನದಲ್ಲಿ ಪ್ರಯಾಣಿಸುವುದಕ್ಕೆ ಹಣ ಪಾವತಿ ಮಾಡಿದ್ದೇನೆ ನಾನೇಕೆ ಇಳಿಯಬೇಕು ಎಂದು ಆಕೆ ಪೊಲೀಸರೊಂದಿಗೆ ವಾಗ್ವಾದ ನಡೆಸಲು ಶುರು ಮಾಡಿದ್ದಾಳೆ. ಇದಾದ ಬಳಿಕ ಪೊಲೀಸರು ಆಕೆಯನ್ನು ಒತ್ತಾಯಪೂರ್ವಕವಾಗಿ ವಿಮಾನದಿಂದ ಕೆಳಗಿಳಿಸುವ ಪ್ರಯತ್ನಕ್ಕೆ ಮುಂದಾದರು. ಈ ವೇಳೆ ಯುವತಿ ಪೊಲೀಸರ ಮೇಲೂ ಹಲ್ಲೆ ಮಾಡಿದ್ದು, ಅವರ ಕೈಗಳಿಗೆ ಕಚ್ಚಿ ದುರ್ವರ್ತನೆ ತೋರಿದ್ದಾಳೆ. ಈ ದುರ್ವರ್ತನೆ ನಿಲ್ಲಿಸುವಂತೆ ಪೊಲೀಸರು ಆಕೆಗೆ ಹೇಳುತ್ತಿರುವುದು ವೀಡಿಯೋದಲ್ಲಿ ಸೆರೆ ಆಗಿದೆ. 

ನಂತರ ಪೊಲೀಸರು ಆಕೆಯ ಕೈಗೆ ಕೋಳ ಹಾಕಿ ಎಳೆದುಕೊಂಡು ಹೋಗಿದ್ದಾರೆ. ಈ ವೇಳೆ ಆಕೆ 'ನಾನು ಅಕ್ಷರಶಃ ತುಂಬಾ ಗೊಂದಲಕ್ಕೊಳಗಾಗಿದ್ದೇನೆ, ಏನಾಗುತ್ತಿದೆ ಎಂದು ಹೇಳುತ್ತಿರುವುದು ಕೂಡ ಕ್ಯಾಮರಾದಲ್ಲಿ ಸೆರೆ ಆಗಿದೆ. ಅಲ್ಲದೇ ಆಕೆ ಪೊಲೀಸರಿಂದ ಬಿಡಿಸಿಕೊಳ್ಳಲು ನಿರಂತರ ಹೋರಾಟ ಮಾಡಿದ್ದು, ಇದರಿಂದ ಅಂತಿಮವಾಗಿ, ಕಮರಿನ್ ಗಿಬ್ಸನ್‌ನನ್ನು (Kamaryn Gibson) ಗಾಲಿಕುರ್ಚಿಗೆ ಕಟ್ಟಿ ನ್ಯೂ ಓರ್ಲಿಯನ್ಸ್ ವಿಮಾನ ನಿಲ್ದಾಣದಲ್ಲಿರುವ ಪೊಲೀಸ್ ಕಚೇರಿಗೆ ಕರೆದೊಯ್ಯುವ ಸ್ಥಿತಿ ನಿರ್ಮಾಣವಾಗಿತ್ತು. ನಂತರ ಆಕೆಯನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದ್ದು, ಬಳಿಕ ಮಾರನೇ ದಿನ  $6,000 ಬಾಂಡ್‌ ಪಡೆದು ಬಿಡುಗಡೆಗೊಳಿಸಲಾಗಿದೆ. 

ಏರ್‌ಲೈನ್ಸ್ ಎಡವಟ್ಟು: ಪಾಸ್‌ಪೋರ್ಟ್ ಇಲ್ಲದ ದೇಶಿಯ ಪ್ರಯಾಣಿಕ ವಿದೇಶಕ್ಕೆ

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪುರುಷರ ಕೊರತೆ: ಈ ದೇಶದಲ್ಲಿ ಗಂಡನ ಬಾಡಿಗೆಗೆ ಪಡೆಯುತ್ತಾರೆ ಹೆಣ್ಣು ಮಕ್ಕಳು
ಅಸ್ವಸ್ಥ ಖಲೀದಾ ಜಿಯಾ ಹೆಚ್ಚಿನ ಚಿಕಿತ್ಸೆಗೆ ನಾಳೆ ಲಂಡನ್‌ಗೆ