ಆರೆ​ಸ್ಸೆ​ಸ್‌​ನಿಂದ ದೇಶದ ಭವಿಷ್ಯ ನಿರ್ಮಾಣ ಅಸಾ​ಧ್ಯ: ರಾಹುಲ್‌ ಗಾಂಧಿ

By Kannadaprabha NewsFirst Published Jun 6, 2023, 4:00 AM IST
Highlights

ಅಮೆರಿಕದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧದ ಟೀಕೆಯನ್ನು ಮುಂದುವರೆಸಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ‘ಮೋದಿ ಕಾರಿನ ಕನ್ನಡಿ ಮೂಲಕ ಹಿಂಬದಿಗೆ ನೋಡುತ್ತಾ ಕಾರು ಚಲಾಯಿಸುತ್ತಿದ್ದಾರೆ. 

ನ್ಯೂಯಾರ್ಕ್ (ಜೂ.06): ಅಮೆರಿಕದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧದ ಟೀಕೆಯನ್ನು ಮುಂದುವರೆಸಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ‘ಮೋದಿ ಕಾರಿನ ಕನ್ನಡಿ ಮೂಲಕ ಹಿಂಬದಿಗೆ ನೋಡುತ್ತಾ ಕಾರು ಚಲಾಯಿಸುತ್ತಿದ್ದಾರೆ. ಹಾಗಾಗಿಯೇ ದೇಶದಲ್ಲಿ ಒಂದರ ನಂತರ ಇನ್ನೊಂದು ಅಪಘಾತ ಸಂಭವಿಸುತ್ತಿದೆ’ ಎಂದು ಚಾಟಿ ಬೀಸಿ​ದ್ದಾ​ರೆ.

ಅಮೆರಿದಲ್ಲಿ ಸಾಗರೋತ್ತರ ಕಾಂಗ್ರೆಸ್‌ ನಡೆ​ಸಿದ ಕಾರ್ಯ​ಕ್ರ​ಮ​ದಲ್ಲಿ ಮಾತನಾಡಿದ ಆವರು, ‘ಬಿಜೆಪಿ ಮತ್ತು ಆರ್‌ಎಸ್‌ಎಸ್‌ಗೆ ಭವಿಷ್ಯದ ಬಗ್ಗೆ ಯೋಚಿಸುವುದಕ್ಕೆ ಬರುವುದಿಲ್ಲ. ಅವರು ಅಸಮರ್ಥರು. ನೀವು ಏನೇ ಕೇಳಿದರೂ ಅವರು ಹಿಂದಕ್ಕೆ ನೋಡುತ್ತಾರೆ. ಯಾರಾದರೂ ಹಿಂದಕ್ಕೆ ನೋಡುತ್ತಾ ಕಾರು ಓಡಿಸಿದರೆ ಅದು, ಒಂದರ ಬಳಿಕ ಮತ್ತೊಂದು ಅಪಘಾತಕ್ಕೆ ತುತ್ತಾಗುತ್ತಲೇ ಇರುತ್ತದೆ. ಭಾರತದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಇದನ್ನೇ ಮಾಡುತ್ತಿದ್ದಾರೆ. ಅಪಘಾತವಾದ ಬಳಿಕವೂ ಅದು ಏಕಾಯಿತು ಎಂದು ಅವರಿಗೆ ಅರಿವಾಗುತ್ತಿಲ್ಲ. ಇದೇ ಯೋಚನೆಗಳನ್ನು ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಕೂಡ ಮಾಡುತ್ತವೆ’ ಎಂದು ಹೇಳಿದರು.

Latest Videos

ಪ್ರಕೃತಿ ನಡುವಿನ ಸಂಘರ್ಷದಲ್ಲಿ ನಾವು ಸೋತರೆ ಬದುಕುತ್ತೇವೆ: ರಿಷಬ್‌ ಶೆಟ್ಟಿ

ಇದೇ ವೇಳೆ ಒಡಿಶಾ ದುರಂತದ ಬಗ್ಗೆ ಸರ್ಕಾರವನ್ನು ದೂಷಿಸಿದ ಅವರು, ‘ಈ ಅಪಘಾತದ ಬಗ್ಗೆ ಕೇಳಿದರೆ 50 ವರ್ಷಗಳ ಹಿಂದೆ ಕಾಂಗ್ರೆಸ್‌ ಸಹ ಇದನ್ನೇ ಮಾಡಿತ್ತು ಎಂದು ಹೇಳುತ್ತಾರೆ. ಏನೇ ಕೇಳಿದರೂ ಅವರ ತಕ್ಷಣದ ಪ್ರತಿಕ್ರಿಯೆ ಹಿಂದೆ ನೋಡುವುದೇ ಆಗಿರುತ್ತದೆ. ನೀವು ಅವರ ಸಚಿವರ, ಪ್ರಧಾನಿಯ ಮಾತನ್ನು ಕೇಳಿ, ಅವರು ಎಂದಿಗೂ ಭವಿಷ್ಯದ ಕುರಿತಾಗಿ ಮಾತನಾಡುವುದಿಲ್ಲ. ಯಾವಾಗಲೂ ಹಿಂದೆ ನಡೆದಿರುವುದನ್ನೇ ನೋಡುತ್ತಾರೆ ಮತ್ತು ಅವರಿಗೆ ಬೈಯುತ್ತಾ ಕಾಲ ಕಳೆಯುತ್ತಾರೆ’ ಎಂದು ಅವರು ಟೀಕಿಸಿದರು.

ನನ್ನ ಫೋನ್‌ ಕದ್ದಾಲಿಸಲಾಗ್ತಿದೆ ಅಂತ ನನಗೆ ಗೊತ್ತಿದೆ: ಪೆಗಾಸಸ್‌ ಬೇಹುಗಾರಿಕಾ ಸಾಫ್ಟ್‌ವೇರ್‌ ಹಾಗೂ ಅದೇ ರೀತಿಯ ತಂತ್ರಜ್ಞಾನಗಳ ಬಗ್ಗೆ ನಾನು ತಲೆಕೆಡಿಸಿಕೊಂಡಿಲ್ಲ. ನನ್ನ ಫೋನ್‌ ಅನ್ನು ಕದ್ದಾಲಿಸಲಾಗುತ್ತಿದೆ ಎಂಬುದು ನನಗೆ ಗೊತ್ತಿದೆ ಎಂದು ಕಾಂಗ್ರೆಸ್‌ ಮಾಜಿ ಅಧ್ಯಕ್ಷ ರಾಹುಲ್‌ ಗಾಂಧಿ ಹೇಳಿದ್ದಾರೆ. ಅಮೆರಿಕದ ಸಿಲಿಕಾನ್‌ ವ್ಯಾಲಿ ಮೂಲದ ಸ್ಟಾರ್ಟಪ್‌ ಉದ್ಯಮಿಗಳ ಜತೆ ಸಂವಾದದಲ್ಲಿ ಪಾಲ್ಗೊಂಡ ಅವರು ಈ ಸಂದರ್ಭದಲ್ಲಿ ತಮ್ಮ ಆ್ಯಪಲ್‌ ಐಫೋನ್‌ ಅನ್ನು ಎತ್ತಿಕೊಂಡು ‘ಹಲೋ ಮಿಸ್ಟರ್‌ ಮೋದಿ’ ಎಂದು ತಮಾಷೆ ಮಾಡಿದರು.

ಗ್ಯಾರಂಟಿ ಜಾರಿಗೆ ಕಾಂಗ್ರೆಸ್‌ನವರು ತೆರಿಗೆ ಹೆಚ್ಚಿಸ್ತಾರೆ: ಶಾಸಕ ಬಿ.ವೈ.ವಿಜಯೇಂದ್ರ

ಒಂದು ವೇಳೆ, ಸರ್ಕಾರ ನಿಮ್ಮ ಫೋನ್‌ ಅನ್ನು ಕದ್ದಾಲಿಸಬೇಕು ಎಂದು ನಿರ್ಧರಿಸಿದರೆ, ನಿಮ್ಮನ್ನು ಯಾರೂ ತಡೆಯಲು ಆಗದು. ಇದು ನನ್ನ ಗ್ರಹಿಕೆ. ಒಂದು ವೇಳೆ ಫೋನ್‌ ಕದ್ದಾಲಿಸುವುದರಲ್ಲಿ ಒಂದು ದೇಶ ಆಸಕ್ತಿ ಹೊಂದಿದೆ ಎಂದಾದರೆ, ಅಂತಹ ಯುದ್ಧ ಎಂಬುದು ಹೋರಾಟಕ್ಕೆ ತಕ್ಕುದಲ್ಲ. ನಾನು ಏನು ಮಾಡುತ್ತೇನೋ ಅದರ ಎಲ್ಲ ಮಾಹಿತಿ ಸರ್ಕಾರದ ಬಳಿ ಇದೆ ಎಂದು ನಾನು ಭಾವಿಸಿದ್ದೇನೆ ಎಂದು ತಿಳಿಸಿದರು. ಇದೇ ವೇಳೆ, ಡೇಟಾ ಎಂಬುದು ಹೊಸ ರೂಪದ ಚಿನ್ನ ಇದ್ದಂತೆ. ದತ್ತಾಂಶ ಸುರಕ್ಷತೆ ಹಾಗೂ ಭದ್ರತೆಗೆ ಸೂಕ್ತ ನಿಯಂತ್ರಣ ಕ್ರಮಗಳ ಅವಶ್ಯಕತೆ ಇದೆ ಎಂದು ಪ್ರತಿಪಾದಿಸಿದರು.

click me!