
ಇರಾನ್ ಮೇಲೆ ಅಮೆರಿಕಾ ಇಸ್ರೇಲ್ ಯುದ್ಧ 32ನೇ ದಿನಕ್ಕೆ ಕಾಲಿರಿಸಿದೆ. ಜಾಗತಿಕ ಆರ್ಥಿಕತೆಯನ್ನೇ ತಲ್ಲಣಗೊಳಿಸಿದ ಈ ಯುದ್ಧಕ್ಕೆ ಬರೋಬ್ಬರಿ ಒಂದು ತಿಂಗಳು ಕಳೆದಿದೆ. ಈ ಯುದ್ಧವೂ ಪ್ರಪಂಚದ ಆರ್ಥಿಕತೆಯನ್ನು ಮಾತ್ರ ತಲ್ಲಣಗೊಳಿಸಿಲ್ಲ, ಇಡೀ ಪ್ರಪಂಚದ ಜನಜೀವನವನ್ನೇ ಅಸ್ತವ್ಯಸ್ತಗೊಳಿಸಿದೆ. ಈ ಯುದ್ಧದ ಪರಿಣಾಮ ಭಾರತವೂ ಸೇರಿದಂತೆ ಪ್ರಪಂಚದ ಹಲವು ರಾಷ್ಟ್ರಗಳಲ್ಲಿ ಎಲ್‌ಪಿಜಿ ಕೊರತೆ ಉಂಟಾಗಿದೆ. ಕೇವಲ ಭಾರತದಲ್ಲೇ ಹಲವು ಉದ್ಯಮಗಳು, ಹೊಟೇಲ್‌ಗಳು ಬಂದ್ ಆಗಿವೆ. ಹೀಗಿರುವಾಗ ಯುದ್ಧ ಶುರು ಮಾಡಿದ ಅಮೆರಿಕಾದಲ್ಲೂ ಏನಾದ್ರೂ ಬದಲಾವಣೆ ಆಗಿರಲೇಬೇಕಲ್ಲ, ಹೌದು ಇರಾನ್ ಮೇಲೆ ಸಮರ ಸಾರಿದ ಅಮೆರಿಕಾದಲ್ಲಿಯೂ ಈಗ ಪ್ರತಿ ಗ್ಯಾಲನ್ ಪೆಟ್ರೋಲ್ ಬೆಲೆ 4 ಡಾಲರ್‌ಗೆ ಏರಿಕೆ ಆಗಿದೆ.
ಅಮೆರಿಕದಲ್ಲಿ ಪೆಟ್ರೋಲ್ ಬೆಲೆಯಲ್ಲಿ ಪ್ರತಿ ಗ್ಯಾಲನ್‌ಗೆ 4 ಡಾಲರ್‌ಗೆ ಏರಿಕೆಯಾಗಿದೆ. ಮೂರು ವರ್ಷಗಳಿಗಿಂತಲೂ ಹೆಚ್ಚು ಅವಧಿಯಲ್ಲಿ ಇದೇ ಮೊದಲ ಬಾರಿಗೆ ಅಮೆರಿಕದಲ್ಲಿ ಪೆಟ್ರೋಲ್‌ನ ಸರಾಸರಿ ಬೆಲೆ ಗ್ಯಾಲನ್‌ಗೆ 4 ಡಾಲರ್ ದಾಟಿರುವುದು ಇದೇ ಮೊದಲು. ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವೆ ನಡೆಯುತ್ತಿರುವ ಯುದ್ಧದ ಪರಿಣಾಮ ಇದಾಗಿದೆ. ಈ ಸಂಘರ್ಷವು ಜಾಗತಿಕ ತೈಲ ಪೂರೈಕೆಯ ಬಗ್ಗೆ ಗೊಂದಲ ಉಂಟು ಮಾಡಿದ್ದರಿಂದ ಕಚ್ಚಾ ಮತ್ತು ಪೆಟ್ರೋಲ್ ಬೆಲೆಗಳಲ್ಲಿ ಭಾರಿ ಏರಿಕೆಯಾಗಿದೆ. ಇದು ಅಲ್ಲಿನ ಸಾಮಾನ್ಯ ಜನರ ಮೇಲೆ ನೇರವಾಗಿ ಪರಿಣಾಮ ಬೀರುತ್ತಿದೆ. ಒಂದು ಸಮೀಕ್ಷೆಯ ಪ್ರಕಾರ, ಸುಮಾರು 55% ಅಮೆರಿಕನ್ನರು ಪೆಟ್ರೋಲ್ ಬೆಲೆಗಳು ಏರುತ್ತಿರುವುದು ತಮ್ಮ ಖರ್ಚಿನ ಮೇಲೆ ನಕಾರಾತ್ಮಕ ಪರಿಣಾಮ ಬೀರಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಅಮೆರಿಕಾ ವಿಮಾನಗಳಿಗೆ ವಾಯುಪ್ರದೇಶ ನಿರ್ಬಂಧಿಸಿದ ಸ್ಪೇನ್: ಇರಾನ್ ಯುದ್ಧ ಬೆಂಬಲಿಸದ ನ್ಯಾಟೋ ರಾಷ್ಟ್ರಗಳ ವಿರುದ್ಧ ಟ್ರಂಪ್ ಕಿಡಿ
ಗ್ಯಾಲನ್ ಎಂದರೆ ಎಷ್ಟು ಲೀಟರ್?
ಒಂದು ಗ್ಯಾಲನ್ ಎಂದರೆ 3 ಲೀಟರ್‌ಗಿಂತ ಅಧಿಕವಾಗಿದ್ದು, 4 ಲೀಟರ್‌ಗಿಂತ ಕಡಿಮೆಯಾಗಿದೆ. ಇದಕ್ಕೂ ಮೊದಲು ಅಮೆರಿಕಾದಲ್ಲಿ ಪೆಟ್ರೋಲ್ ಬೆಲೆ ಒಂದು ಗ್ಯಾಲನ್‌ಗೆ 2.80 ಡಾಲರ್‌ನಿಂದ 3.10 ಡಾಲರ್ ಇತ್ತು. ಆದರೆ ಯುದ್ಧದಿಂದಾಗಿ ಈಗ 4 ಡಾಲರ್‌ಗೆ ಏರಿಕೆಯಾಗಿದೆ. 2.80 ಡಾಲರ್‌ನಿಂದ 3.10 ಡಾಲರ್‌ನಲ್ಲಿ ಇಲ್ಲಿ ಪೆಟ್ರೋಲ್ ಬೆಲೆ ಕೆಲ ಪ್ರದೇಶಗಳಿಗೆ ತಕ್ಕಂತೆ ತುಸು ಹೆಚ್ಚು ಕಡಿಮೆ ಇರುತ್ತಿತ್ತು. ಅಂದರೆ ಒಂದು ಲೀಟರ್ ಪೆಟ್ರೋಲ್ 0.74 ಡಾಲರ್‌ನಿಂದ 0.82 ಡಾಲರ್‌ಗೆ ಸಿಗುತ್ತಿತ್ತು. (ಅಂದರೆ ಭಾರತದ ರೂಪಾಯಿಗಳಲ್ಲಿ ಹೇಳುವುದಾದರೆ ಇಲ್ಲಿ 69 ರಿಂದ 76 ರೂಪಾಯಿಯ ನಡುವೆ ಒಂದು ಲೀಟರ್ ಪೆಟ್ರೋಲ್ ಸಿಗುತ್ತಿತ್ತು. ಆದರೆ ಈಗ ಒಂದು ಗ್ಯಾಲನ್‌ಗೆ 4 ಡಾಲರ್‌ಗೆ ಏರಿಕೆಯಾಗಿರುವುದರಿಂದ ಅಮೆರಿಕಾದಲ್ಲಿ ಪೆಟ್ರೋಲ್ ಬೆಲೆ ಪ್ರತಿ ರೂಪಾಯಿಗೆ ಭಾರತೀಯ ರೂಪಾಯಿಯಲ್ಲಿ ಹೇಳುವುದಾದರೆ 99 ರೂಪಾಯಿ 45 ಪೈಸೆ ಆಗಿರಲಿದೆ.
ಇದನ್ನೂ ಓದಿ: ಬಿರಿಯಾನಿಯಲ್ಲಿ ಚಿಕನ್ ಲೆಗ್‌ಪೀಸ್ ಸಿಗ್ತಿಲ್ಲ ಅಂತ ಮದುವೆ ಮನೆಯಾಯ್ತು ರಣಾಂಗಣ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ