Iran: ಯುದ್ಧ ನಿಲ್ಲಿಸಿದ್ರೆ ಮಾತ್ರ ಮಾತುಕತೆ: ಅಮೆರಿಕಕ್ಕೆ ಇರಾನ್ ಖಡಕ್ ಸಂದೇಶ, ಹಾರ್ಮುಜ್ ಜಲಸಂಧಿಯಲ್ಲಿ ಹೊಸ ರೂಲ್ಸ್

Published : Mar 31, 2026, 08:35 AM IST
Iran: ಯುದ್ಧ ನಿಲ್ಲಿಸಿದ್ರೆ ಮಾತ್ರ ಮಾತುಕತೆ: ಅಮೆರಿಕಕ್ಕೆ ಇರಾನ್ ಖಡಕ್ ಸಂದೇಶ, ಹಾರ್ಮುಜ್ ಜಲಸಂಧಿಯಲ್ಲಿ ಹೊಸ ರೂಲ್ಸ್

ಸಾರಾಂಶ

ಹಾರ್ಮುಜ್ ಜಲಸಂಧಿಯಲ್ಲಿ ಇರಾನ್ ಭದ್ರತಾ ಮಂಡಳಿ ಹೊಸ ಕ್ರಮಗಳನ್ನು ಪ್ರಕಟಿಸಿದೆ. ಹಡಗುಗಳ ಸಂಚಾರಕ್ಕೆ ಹೊಸ ಮಾರ್ಗಸೂಚಿಗಳನ್ನು ಜಾರಿ ಮಾಡಿದ್ದು, ಮತ್ತಷ್ಟು ಕಠಿಣ ನಿಯಂತ್ರಣ ಹೇರಲು ಮುಂದಾಗಿದೆ.

ಅಮೆರಿಕದ ಪ್ರಸ್ತಾಪಗಳಿಗೆ ಇರಾನ್ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ. ಯುದ್ಧವನ್ನು ನಿಲ್ಲಿಸಿದರೆ ಮಾತ್ರ ಮಾತುಕತೆಗೆ ಸಿದ್ಧ ಎಂದು ಇರಾನ್ ಅಮೆರಿಕಕ್ಕೆ ಖಡಕ್ಕಾಗಿ ಹೇಳಿದೆ. ಈ ಸಂಬಂಧ ಇರಾನ್ ಮತ್ತು ಟರ್ಕಿ ವಿದೇಶಾಂಗ ಸಚಿವರು ಮಾತುಕತೆ ನಡೆಸಿದ್ದಾರೆ. ‘ಶಾಂತಿ ಮಾತುಕತೆಯ ನೆಪದಲ್ಲಿ ದಾಳಿ ಮಾಡಿ ಮಾಡಿದ ವಂಚನೆಯನ್ನು ನಾವು ಮರೆಯುವುದಿಲ್ಲ’ ಎಂದು ಇರಾನ್ ಗುಡುಗಿದೆ.

ಹಾರ್ಮುಜ್ ಜಲಸಂಧಿಗೆ ಹೊಸ ರೂಲ್ಸ್!

ಇದೇ ವೇಳೆ, ಹಾರ್ಮುಜ್ ಜಲಸಂಧಿಯಲ್ಲಿ ಇರಾನ್‌ನ ಭದ್ರತಾ ಮಂಡಳಿ ಹೊಸ ಕ್ರಮಗಳನ್ನು ಘೋಷಿಸಿದೆ. ಹಡಗುಗಳ ಸಂಚಾರಕ್ಕೆ ಹೊಸ ಮಾರ್ಗಸೂಚಿಗಳನ್ನು ಜಾರಿ ಮಾಡಿದ್ದು, ಈ ಪ್ರದೇಶದಲ್ಲಿ ನಿಯಂತ್ರಣವನ್ನು ಮತ್ತಷ್ಟು ಬಿಗಿಗೊಳಿಸಲು ಕ್ರಮ ಕೈಗೊಳ್ಳಲಿದೆ.

ಸಂಘರ್ಷದ ನಡುವೆಯೂ ಭಾರತಕ್ಕೆ ಎರಡು ಎಲ್‌ಪಿಜಿ ಹಡಗು

ಟರ್ಕಿ ಈ ವಿಚಾರವಾಗಿ ವಿಶ್ವಸಂಸ್ಥೆಯೊಂದಿಗೂ ಚರ್ಚೆ ನಡೆಸಿದೆ. ಈಗಾಗಲೇ ಜಲಸಂಧಿಯನ್ನು ದಾಟಿದ ಎರಡು ಎಲ್‌ಪಿಜಿ ಟ್ಯಾಂಕರ್‌ಗಳು ಭಾರತಕ್ಕೆ ಬರಲಿವೆ. ಇದಲ್ಲದೆ, ಇನ್ನೂ 18 ಹಡಗುಗಳಿಗೆ ಶೀಘ್ರದಲ್ಲೇ ಅನುಮತಿ ಸಿಗಲಿದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಶೀಘ್ರ ಡೀಲ್‌ ಆಗದಿದ್ರೆ ಭೀಕರ ದಾಳಿ : ಟ್ರಂಪ್‌
ಇರಾನ್‌ ಮೇಲೆ ಭಾರಿ ಭೂದಾಳಿಗೆ 57000 ಅಮೆರಿಕ ಯೋಧರು ರೆಡಿ !