Asianet Suvarna News Asianet Suvarna News

FIFA World Cup 2022:ದೇಶಿ ತಂಡದ ಸೋಲನ್ನು ಸಂಭ್ರಮಿಸಿದ ಇರಾನಿಯರು, ಓರ್ವನ ಹತ್ಯೆ

ಫುಟ್ಬಾಲ್ ವಿಶ್ವಕಪ್‌ನಲ್ಲಿ ಅಮೆರಿಕಾ ಹಾಗೂ ಇರಾನ್‌ ತಂಡಗಳ ಮಧ್ಯೆ ಸೆಣೆಸಾಟ ನಡೆದಿದ್ದು, ಈ ವೇಳೆ ಅಮೆರಿಕಾ ವಿರುದ್ಧ ಇರಾನ್ ಸೋಲು ಕಂಡಿತ್ತು. ಆದರೆ ಈ ಸೋಲನ್ನು ಸ್ವತಃ ಇರಾನ್ ಪ್ರಜೆಗಳು ಸಂಭ್ರಮಿಸಿದ್ದಾರೆ.

Iranian celebrate in Kurdish Iranian city of Kamyaran after Iran regimes national football team lost against US in FIFA World Cup akb
Author
First Published Dec 1, 2022, 7:36 PM IST

ಅರಬ್ ರಾಷ್ಟ್ರ ಕತಾರ್‌ನಲ್ಲಿ ಫಿಫಾ ವಿಶ್ವಕಪ್ ಸಂಭ್ರಮ ಜೋರಾಗಿದೆ. ವಿಶ್ವದ ಹಲವು ಫುಟ್ಬಾಲ್ ತಂಡಗಳು ಪ್ರೇಕ್ಷಕರಿಗೆ ಆತಂಕ, ಕುತೂಹಲ, ರೋಚಕತೆಯ ಜೊತೆ ಮೈದಾನದಲ್ಲಿ ಮನೋರಂಜನೆಯ ರಸದೌತಣ ಉಣಬಡಿಸುತ್ತಿವೆ. ಆಟವೆಂದ ಮೇಲೆ ಸೋಲು ಗೆಲುವು ಸಾಮಾನ್ಯ. ಆದರೆ ಬೆಂಬಲಿಗರು ಮಾತ್ರ ಅದನ್ನು ಕ್ರೀಡಾಸ್ಪೂರ್ತಿಯಿಂದ ತೆಗೆದುಕೊಳ್ಳದೇ ಕೆಲವು ಕಡೆ ಕಿತ್ತಾಟಗಳು ಕೂಡ ನಡೆದಿದ್ದವು. ನಿನ್ನೆ ಈ ಫುಟ್ಬಾಲ್ ವಿಶ್ವಕಪ್‌ನಲ್ಲಿ ಅಮೆರಿಕಾ ಹಾಗೂ ಇರಾನ್‌ ತಂಡಗಳ ಮಧ್ಯೆ ಸೆಣೆಸಾಟ ನಡೆದಿದ್ದು, ಈ ವೇಳೆ ಅಮೆರಿಕಾ ವಿರುದ್ಧ ಇರಾನ್ ಸೋಲು ಕಂಡಿತ್ತು. ಆದರೆ ಈ ಸೋಲನ್ನು ಸ್ವತಃ ಇರಾನ್ ಪ್ರಜೆಗಳು ಸಂಭ್ರಮಿಸಿದ್ದಾರೆ.

ಸಾಮಾನ್ಯವಾಗಿ ನಮ್ಮ ದೇಶ ಯಾವುದಾದರೂ ಪಂದ್ಯಾವಳಿಗಳಲ್ಲಿ ವಿರೋಧಿ ದೇಶದೊಂದಿಗೆ ಆಡುತ್ತಿದ್ದರೆ, ನಮ್ಮ ದೇಶ ಗೆಲ್ಲಬೇಕು ಎಂದು ದೇಶದ ಪ್ರತಿಯೊಬ್ಬರೂ ಬಯಸುತ್ತಾರೆ. ಆದರೆ ಇರಾನ್‌ನಲ್ಲಿ ಮಾತ್ರ ಕತೆ ಬೇರಾಗಿದೆ. ಇದಕ್ಕೆ ಕಾರಣ ಹಿಜಾಬ್(Hijab) ವಿಚಾರಕ್ಕೆ ಆರಂಭವಾಗಿರುವ ಹಿಂಸಾಚಾರ. ಹೀಗಾಗಿಯೇ ಅಲ್ಲಿ ಆಡಳಿತ ವಿರೋಧಿ ಅಲೆ ಎದ್ದಿದ್ದು, ಅದಿನ್ನು ತಣ್ಣಗಾದಂತೆ ಕಾಣುತ್ತಿಲ್ಲ. ಇದೇ ಕಾರಣಕ್ಕೆ ಅಮೆರಿಕಾ ತಂಡದ ವಿರುದ್ಧ ಇರಾನ್‌ನ ರಾಷ್ಟ್ರೀಯ ಫುಟ್ಬಾಲ್ ತಂಡ (National Footbal Team) ಸೋಲು ಕಾಣುತ್ತಿದ್ದಂತೆ ಇರಾನ್‌ನ ಕೆಲ ನಗರಗಳಲ್ಲಿ ಅನೇಕರು ಸಂಭ್ರಮಾಚರಣೆ ನಡೆಸಿದ್ದಾರೆ. ಕುರ್ದಿಶ್-ಇರಾನಿಯನ್ ನಗರವಾದ ಕಮ್ಯಾರನ್ ಜನ ರಸ್ತೆಯಲ್ಲೇ ಸಂಭ್ರಮಿಸಿದ್ದಾರೆ.

ಆದರೆ ಹೀಗೆ ಇರಾನ್‌ನಲ್ಲಿ ಸಂಭ್ರಮಾಚರಣೆಯಲ್ಲಿ ತೊಡಗಿದ್ದ ಯುವಕನನ್ನು ಭದ್ರತಾ ಪಡೆಗಳು ಗುಂಡಿಕ್ಕಿ ಹತ್ಯೆ ಗೈದಿದ್ದು, ಇರಾನ್‌ನಲ್ಲಿ ಖುಷಿಯಾಗಿರುವುದು ಕೂಡ ಅಪರಾಧ ಎಂದು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. 27 ವರ್ಷದ ಮೆಹ್ರಮ್ ಶಮಕ್ ಎಂಬಾತ ಯುಎಸ್‌ ಗೆಲುವನ್ನು ಸಂಭ್ರಮಿಸಿದ್ದು, ಈತನ್ನು ಇರಾನ್ ಭದ್ರತಾ ಪಡೆ ಸಿಬ್ಬಂದಿ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. 

ಫಿಫಾ ವಿಶ್ವಕಪ್‌‌ನಲ್ಲಿ ಮತ್ತೊಂದು ವಿವಾದ, ರಾಷ್ಟ್ರಗೀತೆ ಹಾಡಲು ನಿರಾಕರಿಸಿದ ಇರಾನ್!

ರಸ್ತೆಗಳಲ್ಲಿ ವಾಹನ ಸವಾರರು ಹಾರ್ನ್ ಮಾಡಿದರೂ ಕೇಳಿಸಿಕೊಳ್ಳದಷ್ಟು ಜೋರಾಗಿ ಜನರು ರಸ್ತೆಗಳಲ್ಲಿ ಸಂಭ್ರಮಾಚರಣೆ ಮಾಡುತ್ತಿರುವುದನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋಗಳಲ್ಲಿ ಕಾಣಬಹುದಾಗಿದ್ದು. ಮಧ್ಯರಾತ್ರಿ ಅಮೆರಿಕಾ ವಿರುದ್ಧ ಇರಾನ್ ತಂಡ ಸೋಲುತ್ತಿದ್ದಂತೆ ಇರಾನ್‌ನಾದ್ಯಂತ ಜನ ಸಂಭ್ರಮಾಚರಣೆಯಲ್ಲಿ ತೊಡಗಿದ್ದರು. ಇರಾನ್‌ನಲ್ಲಿ ಆಡಳಿತ ವಿರೋಧಿ ಕ್ರಾಂತಿ ಜೋರಾಗಿದ್ದು, ಈಗಿರುವ ಆಡಳಿತವನ್ನು ಹೊರಗಟ್ಟಲು ಇರಾನ್ ಜನ ಕಾಯುತ್ತಿದ್ದಾರೆ. 

Iran Crisis: ಹಿಜಾಬ್ ವಿರೋಧಿಸಿದ್ದಕ್ಕೆ ಮರಣದಂಡನೆ: ಇನ್ನೂ 15ಸಾವಿರ ಜನಕ್ಕೆ ಗಲ್ಲು?

ಫಿಫಾ ವಿಶ್ವಕಪ್‌ನಲ್ಲಿ ಇರಾನ್ ಹಾಗೂ ಅಮೆರಿಕಾ ನಡುವಿನ ಸಂಬಂಧದ ಕುರಿತಾಗಿ ಉಂಟಾಗಿರುವ ಉದ್ವಿಗ್ನತೆ ಹೊಸದೇನಲ್ಲ. ಸಿಎನ್‌ಎನ್‌ ಪ್ರಕಾರ, ಅಮೆರಿಕಾದ ಸಾಕರ್ ಫೆಡರೇಷನ್ ತನ್ನ ಸೋಶಿಯಲ್ ಮೀಡಿಯಾದಲ್ಲಿ ಇರಾನ್ ಧ್ವಜವನ್ನು ಬದಲಾಯಿಸಿದ ನಂತರ ಇರಾನ್‌ನ ದೇಶೀಯ ಮಾಧ್ಯಮವೂ ಅಮೆರಿಕಾ ತಂಡವನ್ನು ಫುಟ್ಬಾಲ್‌ನಿಂದ ಹೊರಗಟ್ಟುವಂತೆ ಆಗ್ರಹಿಸಿತ್ತು. ಆದರೆ ಸಾಕರ್ ಫೆಡರೇಷನ್ ಇರಾನ್‌ನಲ್ಲಿರುವ ಹಿಜಾಬ್ ಪ್ರತಿಭಟನಾಕಾರರನ್ನು ಬೆಂಬಲಿಸಿ ಈ ಬದಲಾವಣೆ ಮಾಡಿತ್ತು. ಅಲ್ಲದೇ ಬದಲಾದ ಧ್ವಜವನ್ನು ತನ್ನ ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್(Facebook), ಟ್ವಿಟ್ಟರ್(Twitter) ಇನ್ಸ್ಟಾಗ್ರಾಮ್‌ನಲ್ಲಿ(Instagram) ಪ್ರದರ್ಶಿಸಿತ್ತು. ಅಲ್ಲದೇ ಇರಾನ್‌ ರಾಷ್ಟ್ರೀಯ ಧ್ವಜವನ್ನು ಇಸ್ಲಾಮಿಕ್ ಗಣರಾಜ್ಯದ ಲಾಂಛನವಿಲ್ಲದೇ ಪ್ರದರ್ಶಿಸಿತ್ತು. ಆದರೆ ನಂತರ ಈ ಗ್ರಾಫಿಕ್ಸ್‌ನ್ನು ಡಿಲೀಟ್ ಮಾಡಲಾಯಿತು.

ಹಿಜಾಬ್‌ಗೆ ಬೆಂಕಿ ಇಟ್ಟು ಇರಾನ್ ಪ್ರತಿಭಟನೆಗೆ ಬೆಂಬಲಿಸಿದ ಕೇರಳದ ಮುಸ್ಲಿಂ ಮಹಿಳೆಯರು


ಈ ಬಗ್ಗೆ ಸಿಎನ್‌ಎನ್‌ಗೆ ಪ್ರತಿಕ್ರಿಯಿಸಿದ ಅಮೆರಿಕಾ ತಂಡದ ಅಧಿಕಾರಿಗಳು, ಮೂಲಭೂತವಾದ ಮಾನವ ಹಕ್ಕುಗಳಿಗೆ ಹೋರಾಡುತ್ತಿರುವ ಇರಾನ್‌ನಲ್ಲಿ ಮಹಿಳೆಯರಿಗೆ ಬೆಂಬಲ ಸೂಚಿಸುವ ಸಲುವಾಗಿ ಅಧಿಕೃತ ಧ್ವಜವನ್ನು 24 ಗಂಟೆಗಳ ಕಾಲ ಬದಲಾಯಿಸಲು ಬಯಸಿದ್ದಾಗಿ ಹೇಳಿದ್ದಾರೆ. 24 ಗಂಟೆಯ ನಂತರ ಮೂಲಧ್ವಜವನ್ನೇ ಮುಂದುವರಿಸುವ ಉದ್ದೇಶವಿತ್ತು ಎಂದು ಹೇಳಿದ್ದಾರೆ. ಇರಾನ್‌ನಲ್ಲಿ ಮಹಿಳೆಯರ ವಿರುದ್ಧ ಸರ್ಕಾರಿ ಪ್ರಾಯೋಜಿತ ಹಿಂಸಾಚಾರ ನಡೆಯುತ್ತಿದ್ದು, ಪ್ರತಿಭಟನಾಕಾರರನ್ನು ಕ್ರೂರವಾಗಿ ಹತ್ತಿಕ್ಕುವ ಸಂದರ್ಭದಲ್ಲಿ ಅಮೆರಿಕಾವೂ ಇರಾನ್ ಜನರನ್ನು ಬೆಂಬಲಿಸುತ್ತಿದೆ ಎಂದು ಅವರು ಹೇಳಿಕೊಂಡಿದ್ದಾರೆ.

ಇರಾನ್ (Iran) ಈ ಹಿಂದೆಯೂ ಹಲವು ಪ್ರತಿಭಟನೆಗಳನ್ನು(protests) ಎದುರಿಸಿದ್ದರೂ ಮಹಿಳೆಯರ ಈ ಹಿಜಾಬ್ ಹೋರಾಟ ಇತ್ತೀಚಿನ ವರ್ಷಗಳಲ್ಲಿ ನಡೆದ ಅತ್ಯಂತ ಸುಧೀರ್ಘ ಪ್ರತಿಭಟನೆಯಾಗಿದೆ. ಈ ಪ್ರತಿಭಟನೆಯಲ್ಲಿ 326ಕ್ಕೂ ಹೆಚ್ಚು ಜನ ಈಗಾಗಲೇ ಪ್ರಾಣ ಕಳೆದುಕೊಂಡಿದ್ದಾರೆ. ಪ್ರತಿಭಟನೆಗೆ ಸಂಬಂಧಿಸಿದಂತೆ ಸಾವಿರಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ. ಹಿಜಾಬ್ ಸರಿಯಾಗಿ ಧರಿಸಿಲ್ಲ ಎಂಬ ಕಾರಣಕ್ಕೆ ಮಾಶ ಅಮಿನಿ ಎಂಬ 22 ವರ್ಷದ ವರ್ಷದ ಯುವತಿಯನ್ನು ಇರಾನ್ ಭದ್ರತಾ ಸಿಬ್ಬಂದಿ ಹತ್ಯೆ ಮಾಡಿದ ಬಳಿಕ ಈ ಹಿಜಾಬ್ ಗಲಾಟೆ ಆರಂಭವಾಗಿತ್ತು.


Iran Anti-Hijab Protest: ಸೆಲೆಬ್ರಿಟಿ ಚೆಫ್‌ ಹೊಡೆದು ಕೊಂದ ಇರಾನ್‌ ಪಡೆ

Follow Us:
Download App:
  • android
  • ios