2035ರಲ್ಲಿ ಬ್ರಿಟನ್‌ನಲ್ಲಿ ಮುಸ್ಲಿಮರೇ ಬಹುಸಂಖ್ಯಾತರು..! ಮೊದಲ ಬಾರಿಗೆ ಕ್ರೈಸ್ತರ ಜನಸಂಖ್ಯೆ ಅರ್ಧಕ್ಕಿಂತ ಕಮ್ಮಿ

By Kannadaprabha News  |  First Published Dec 3, 2022, 9:52 AM IST

2035ರಲ್ಲಿ ಬ್ರಿಟನ್‌ನಲ್ಲಿ ಮುಸ್ಲಿಮರೇ ಬಹುಸಂಖ್ಯಾತರಾಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಕ್ರೈಸ್ತರ ಜನಸಂಖ್ಯೆ ಅರ್ಧಕ್ಕಿಂತ ಕಮ್ಮಿ ಇದೆ ಎಂದು 2021ರ ಜನಗಣತಿ ವರದಿ ಈಗಾಗಲೇ ಬಹಿರಂಗಗೊಳಿಸಿದೆ. 


ಲಂಡನ್‌: ಕ್ರೈಸ್ತ (Christian) ಬಹುಸಂಖ್ಯಾತ (Majority) ದೇಶವೆನಿಸಿದ ಬ್ರಿಟನ್‌ನಲ್ಲಿ (Britain) ಇದೀಗ ತಮ್ಮನ್ನು ತಾವು ಕ್ರೈಸ್ತರೆಂದು ಗುರುತಿಸಿಕೊಳ್ಳುವವರ ಸಂಖ್ಯೆ ಶೇ. 50ಕ್ಕಿಂತಲೂ ಕೆಳಗೆ ಇಳಿದಿದೆ. ಬ್ರಿಟನ್‌ ಇತಿಹಾಸದಲ್ಲೇ ಮೊದಲ ಬಾರಿ ಈ ಬೆಳವಣಿಗೆ ಕಂಡುಬಂದಿದೆ. ಇದೇ ವೇಳೆ ದೇಶದಲ್ಲಿ ಮುಸ್ಲಿಂ (Muslim) ಸಮುದಾಯದ ಜನಸಂಖ್ಯೆ ತೀವ್ರವಾಗಿ ಏರಿಕೆಯಾಗುತ್ತಿದ್ದು, 2035ರ ವೇಳೆ ಮುಸ್ಲಿಮರೇ ಬ್ರಿಟನ್‌ನಲ್ಲಿ ಬಹುಸಂಖ್ಯಾತರೆನಿಸಿಕೊಳ್ಳಲಿದ್ದಾರೆ ಎಂಬ ಅಂಶ ಜನಗಣತಿ (Census) ಅಂಕಿ ಅಂಶಗಳಿಂದ ಕಂಡುಬಂದಿದೆ. 2021ರಲ್ಲಿ ನಡೆಸಲಾದ ಜನಗಣತಿಯ ಅಂಕಿಅಂಶಗಳನ್ನು ಬಿಡುಗಡೆಗೊಳಿಸಲಾಗಿದ್ದು, ಮೊಟ್ಟಮೊದಲ ಬಾರಿ ಬ್ರಿಟನ್‌ ಹಾಗೂ ವೇಲ್ಸ್‌ನಲ್ಲಿ (Wales) ಅರ್ಧಕ್ಕಿಂತಲೂ ಕಡಿಮೆ ಜನಸಂಖ್ಯೆಯು ತಮ್ಮನ್ನು ತಾವು ಕ್ರೈಸ್ತ ಧರ್ಮೀಯರೆಂದು ಗುರುತಿಸಿಕೊಂಡಿದ್ದಾರೆ.

ಬ್ರಿಟನ್‌ನಲ್ಲಿ ಪ್ರಸ್ತುತ 2.75 ಕೋಟಿ ಜನರು ಕ್ರೈಸ್ತರಿದ್ದಾರೆ. ಇದು ಒಟ್ಟು ಜನಸಂಖ್ಯೆಯ ಶೇ.46.2ರಷ್ಟಾಗಿದೆ. 2011ಕ್ಕೆ ಹೋಲಿಸಿದರೆ ಕ್ರೈಸ್ತರ ಜನಸಂಖ್ಯೆಯಲ್ಲಿ ಶೇ. 13.1ರಷ್ಟು ಇಳಿಕೆಯಾಗಿದೆ. ಕ್ರೈಸ್ತರ ಬಳಿಕ ಅತಿ ಹೆಚ್ಚು ಜನರು ತಾವು ‘ಯಾವುದೇ ಧರ್ಮಕ್ಕೆ ಸೇರಿಲ್ಲ’ ಎಂದು ಗುರುತಿಸಿಕೊಂಡಿದ್ದಾರೆ ಎಂದು ರಾಷ್ಟ್ರೀಯ ಅಂಕಿಅಂಶಗಳ ಕಚೇರಿ ತಿಳಿಸಿದೆ.

Tap to resize

Latest Videos

ಇದನ್ನು ಓದಿ: Census 2021: ಇಂಗ್ಲೆಂಡ್‌ ಹಾಗೂ ವೇಲ್ಸ್‌ನಲ್ಲಿ ಈಗ ಕ್ರೈಸ್ತರೇ ಅಲ್ಪಸಂಖ್ಯಾತರು..!

ಯಾವುದೇ ಧರ್ಮಕ್ಕೆ ಸೇರದವರ ಸಂಖ್ಯೆ 2.22 ಕೋಟಿಯಷ್ಟಿದ್ದು, ಇದು ಜನಸಂಖ್ಯೆಯ ಶೇ. 37.2 ಭಾಗವಾಗಿದೆ. ಇನ್ನೊಂದೆಡೆ ಮುಸ್ಲಿಮರ ಜನಸಂಖ್ಯೆಯು ಕಳೆದೊಂದು ದಶಕದಲ್ಲಿ ಶೇ. 44ರಷ್ಟು ಏರಿಕೆಯಾಗಿದೆ. ಒಟ್ಟು 39 ಲಕ್ಷ ಮುಸ್ಲಿಮರಿದ್ದಾರೆ. 2011ರಲ್ಲಿ ಶೇ.4.9 ರಷ್ಟಿದ್ದ ಮುಸ್ಲಿಮರ ಜನಸಂಖ್ಯೆಯು ಶೇ. 6.5ಕ್ಕೆ ಏರಿಕೆ ಕಂಡಿದೆ. ಇದರೊಂದಿಗೆ ಬ್ರಿಟನ್‌ನಲ್ಲಿ ಪಂಜಾಬಿ ಹಾಗೂ ಉರ್ದು ಭಾಷಿಕರ ಸಂಖ್ಯೆಯು ಏರಿಕೆಯಾಗುತ್ತಿದ್ದು, ಅವು ಕ್ರಮವಾಗಿ 5 ಹಾಗೂ 6ನೇ ಅತಿಹೆಚ್ಚು ಮಾತನಾಡುವ ಭಾಷೆಗಳು ಎನಿಸಿವೆ ಎಂದು ಜನಗಣತಿ ಅಂಕಿಅಂಶಗಳು ತಿಳಿಸಿವೆ. 

ರಿಷಿ ಸುನಕ್‌ (Rishi Sunak) ಬ್ರಿಟನ್‌ ಪ್ರಧಾನಿಯಾದ (Britain Prime Minister) ಬಳಿಕ ಇತ್ತೀಚೆಗೆ ಬಿಡುಗಡೆಯಾದ ಇಂಗ್ಲೆಂಡ್‌ ಹಾಗೂ ವೇಲ್ಸ್‌ನ (England and Wales) ಜನ ಗಣತಿ ವರದಿ ಅಚ್ಚರಿದಾಯಕ ಮಾಹಿತಿಯನ್ನು ನೀಡುತ್ತಿದೆ. ಮಂಗಳವಾರ ಬಿಡುಗಡೆಯಾಗಿರುವ 2021ರ ಜನ ಗಣತಿ ವರದಿ ಪ್ರಕಾರ ಇಂಗ್ಲೆಂಡ್‌ ಹಾಗೂ ವೇಲ್ಸ್‌ನಲ್ಲಿ ಈಗ ಕ್ರೈಸ್ತರೇ ಅಲ್ಪಸಂಖ್ಯಾತರಾಗಿದ್ದಾರೆ. ಅಂದರೆ, ಶೇಕಡ ಅರ್ಧಕ್ಕಿಂತ ಕಡಿಮೆ ಜನರು ತಾವು ಕ್ರೈಸ್ತರು ಎಂದು ಗುರುತಿಸಿಕೊಂಡಿದ್ದಾರೆ. ಈ ಮೂಲಕ ಬಹುಸಂಸ್ಕೃತಿಯ ಬ್ರಿಟನ್‌ನಲ್ಲಿ ಜಾತ್ಯಾತೀತತೆ (Secularism) ಕಡೆಗೆ ಹೆಗ್ಗುರುತು ಬದಲಾವಣೆಯಾಗಿದೆ ಎಂದು ತಿಳಿದುಬಂದಿದೆ. 

ಇದನ್ನೂ ಓದಿ: ಹಿಂದು ಧರ್ಮಕ್ಕೆ ಸೇರಿ, ಸಪ್ತಪದಿ ತುಳಿದು ವಿವಾಹವಾದ ಮುಸ್ಲಿಂ ಯುವತಿಯರು!

ಹಿಂದೂಗಳು 18-20 ವರ್ಷಕ್ಕೆ ಮದುವೆ ಆಗಿ ಜನಸಂಖ್ಯೆ ಹೆಚ್ಚಿಸಿಕೊಳ್ಳಿ: ಮುಸ್ಲಿಂ ನಾಯಕ 
ಹಿಂದೂಗಳ ಸಂಖ್ಯೆ ಹೆಚ್ಚಳವಾಗಬೇಕಾದರೆ ಅವರು ಮುಸ್ಲಿಮರ ಸೂತ್ರ ಅಳವಡಿಸಿಕೊಳ್ಳಬೇಕು ಎಂದು ಆಲ್‌ ಇಂಡಿಯಾ ಯುನೈಟೆಡ್‌ ಡೆಮಾಕ್ರಟಿಕ್‌ ಫ್ರಂಟ್‌ (ಎಐಡಿಯುಎಫ್‌)ನ ಮುಖ್ಯಸ್ಥ ಬದ್ರುದ್ದೀನ್‌ ಅಜ್ಮಲ್‌ ಹೇಳಿದ್ದಾರೆ. ದೇಶದಲ್ಲಿ ಮುಸ್ಲಿಮರ ಜನಸಂಖ್ಯೆ ಹೆಚ್ಚಾಗುತ್ತಿದೆ ಎಂಬ ಹೇಳಿಕೆಗಳಿಗೆ ಪ್ರತಿಕ್ರಿಯಿಸಿದ ಅವರು, ‘ಮೊದಲಿಗೆ ಹಿಂದೂಗಳ ಬೇಗ ಮದುವೆಯಾವುದಿಲ್ಲ. ಬಳಿಕ ಒತ್ತಡಕ್ಕೆ ಸಿಕ್ಕಿ 40 ವರ್ಷಕ್ಕೆ ಮದುವೆಯಾಗುತ್ತಾರೆ. ಹೀಗಾದಲ್ಲಿ ಮಕ್ಕಳ ಸಂಖ್ಯೆ ಹೆಚ್ಚಾಗುವುದು ಹೇಗೆ. ಹೀಗಾಗಿ ಹಿಂದೂ ಪೋಷಕರು ತಮ್ಮ ಮಕ್ಕಳಿಗೆ 18-20 ವರ್ಷದೊಳಗೆ ಮದುವೆ ಮಾಡಿ, ಮಕ್ಕಳನ್ನು ಹೆರುವಂತೆ ಮಾಡಬೇಕು ಎಂದು ಸಲಹೆ ನೀಡಿದ್ದಾರೆ.

click me!