ಯುಎಇಯಲ್ಲಿ 33 ಕೋಟಿ ಲಾಟರಿ ಗೆದ್ದ ಭಾರತೀಯ!

Published : Feb 11, 2024, 11:05 AM IST
ಯುಎಇಯಲ್ಲಿ  33 ಕೋಟಿ ಲಾಟರಿ ಗೆದ್ದ ಭಾರತೀಯ!

ಸಾರಾಂಶ

ಕೇರಳ ಮೂಲದ ರಾಜೀವ್‌ ಅರಿಕಾಟ್‌ಗೆ ಯುನೈಟೆಡ್‌ ಅರಬ್‌ ಎಮಿರೇಟ್ಸ್‌ನಲ್ಲಿ ಜಾಕ್‌ಪಾಟ್‌ ಹೊಡೆದಿದ್ದು, ಬಿಗ್‌ ಟಿಕೆಟ್‌ ನಡೆಸುವ ವಾರದ ಲಾಟರಿ ಡ್ರಾನಲ್ಲಿ ಮೊದಲ ಬಹುಮಾನ ಗೆಲ್ಲುವ ಮೂಲಕ 33 ಕೋಟಿ ರು. ತಮ್ಮದಾಗಿಸಿಕೊಂಡಿದ್ದಾರೆ.

ಅಬುಧಾಬಿ: ಕೇರಳ ಮೂಲದ ರಾಜೀವ್‌ ಅರಿಕಾಟ್‌ಗೆ ಯುನೈಟೆಡ್‌ ಅರಬ್‌ ಎಮಿರೇಟ್ಸ್‌ನಲ್ಲಿ ಜಾಕ್‌ಪಾಟ್‌ ಹೊಡೆದಿದ್ದು, ಬಿಗ್‌ ಟಿಕೆಟ್‌ ನಡೆಸುವ ವಾರದ ಲಾಟರಿ ಡ್ರಾನಲ್ಲಿ ಮೊದಲ ಬಹುಮಾನ ಗೆಲ್ಲುವ ಮೂಲಕ 33 ಕೋಟಿ ರು. ತಮ್ಮದಾಗಿಸಿಕೊಂಡಿದ್ದಾರೆ. ಆಲ್‌ಐನ್‌ ನಗರದಲ್ಲಿ ಕಟ್ಟಡ ವಿನ್ಯಾಸ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿರುವ ರಾಜೀವ್‌ ಈ ಹಣವನ್ನು 19 ಜನರೊಂದಿಗೆ ಹಂಚಿಕೊಳ್ಳುವುದಾಗಿ ತಿಳಿಸಿದ್ದಾರೆ. ಆಶ್ಚರ್ಯಕರ ಸಂಗತಿಯೆಂದರೆ ರಾಜೀವ್‌ಗೆ ಅದೃಷ್ಟ ಖುಲಾಯಿಸಿದ ಟಿಕೆಟ್‌ ಅವರಿಗೆ ಬಿಗ್‌ ಟಿಕೆಟ್‌ ವತಿಯಿಂದ ಆಫರ್‌ ಲೆಕ್ಕದಲ್ಲಿ ಬಂದಿದ್ದು ತಮ್ಮ ಇಬ್ಬರು ಮಕ್ಕಳ ಹುಟ್ಟುಹಬ್ಬದ ದಿನಾಂಕ ಆಧರಿಸಿ ರಾಜೀವ್‌ 2 ಟಿಕೆಟ್‌ ಖರೀದಿಸಿದ್ದರು. ಇದಕ್ಕೆ ಪ್ರತಿಯಾಗಿ 4 ಟಿಕೆಟ್‌ ಉಚಿತವಾಗಿ ನೀಡಲಾಗಿತ್ತು. ಹೀಗೆ ಉಚಿತವಾಗಿ ನೀಡಿದ ಟಿಕೆಟ್‌ಗೆ ಇದೀಗ ಬಹುಮಾನ ಬಂದಿದೆ.

ಸ್ಕ್ಯಾಮ್ ಅಂತ ಮೇಲ್ ನಿರ್ಲಕ್ಷಿಸಿದವನಿಗೆ ಅಚ್ಚರಿ: ಗೆದ್ದ ಭರ್ಜರಿ ಮೊತ್ತದ ಲಾಟರಿ

ಮಿಚಿಗನ್‌: ಸಾಮಾನ್ಯವಾಗಿ ಮೇಲ್‌ಗೆ ಮೊಬೈಲ್ ಫೋನ್‌ಗೆ ನೀವು ಇಷ್ಟು ಸಾವಿರ ಗೆದ್ದಿದ್ದಿರಿ, ಇಷ್ಟು ಲಕ್ಷ ನಿಮ್ಮ ಖಾತೆಗೆ ಬಂದಿದೆ ಲಾಗಿನ್ ಆಗಿ ಹೀಗೆ ಸಂದೇಶಗಳು ಬರುತ್ತಿರುತ್ತವೆ. ಇದೆಲ್ಲಾ ಬಹುತೇಕ ಸ್ಕ್ಯಾಮ್‌ಗಳೇ ಆಗಿರುತ್ತವೆ. ಅದೇ ರೀತಿ ಅಮೆರಿಕಾದ ವ್ಯಕ್ತಿಯೊಬ್ಬರಿಗೆ ಇದೇ ರೀತಿ ಸಂದೇಶ ಬಂದಿತ್ತು. ತಾವು ಲಕ್ಷಾಂತರ ಡಾಲರ್ ಮೊತ್ತದ ಹಣ ಗಳಿಸಿದ್ದಾಗಿ ಅವರ ಖಾತೆಗೆ ಇಮೇಲ್ ಬಂದಿತ್ತು. ಆದರೆ ಮೇಲ್ ರಿಸೀವ್ ಮಾಡಿದ ವ್ಯಕ್ತಿ ಇದು ಸ್ಕ್ಯಾಮ್ ಎಂದು  ಭಾವಿಸಿ ಸುಮ್ಮನಾಗಿದ್ದಾರೆ. ಆದರೆ ಅವರೀಗ ಅಮೆರಿಕಾದ ರಾಜ್ಯ ಲಾಟರಿಯಲ್ಲಿ ಬಹುಕೋಟಿ ಮೊತ್ತದ ಹಣ ಗೆದ್ದಿದ್ದಾರೆ.  

ಇವರಿಗೆ ತಾವು ಲಾಟರಿ ಗೆದ್ದಿರುವುದಾಗಿ ಆಗಾಗ ಮೆಸೇಜ್ ನೊಟೀಫಿಕೇಷನ್ ಬರುತ್ತಲೇ ಇತ್ತು ಆದರೆ ಅವರು ಇಷ್ಟೊಂದು ಮೊತ್ತ ಗೆಲ್ಲುವುದು ಸಾಧ್ಯವಿಲ್ಲವೆಂದು ನಂಬದೇ ಸುಮ್ಮನಾಗಿದ್ದರು. ಆದರೂ ಮತ್ತೊಮ್ಮೆ ಪರಿಶೀಲನೆ ನಡೆಸಿದಾಗ ಖುಷಿಯಿಂದ ಆಕಾಶದಲ್ಲಿ ತೇಲುವ ಸ್ಥಿತಿ ಅವರದಾಗಿದೆ. ಮಿಚಿಗನ್ ಲಾಟರಿ  ಸಂಸ್ಥೆಯ ಪ್ರಕಾರ, 67 ವರ್ಷದ ಅನಾಮಧೇಯ ವ್ಯಕ್ತಿಯೊಬ್ಬರಿಗೆ ಲಾಟರಿ ಮಗುಚಿದ್ದು, ಅವರು ಅನಾಮಧೇಯರಾಗಿಯೇ ಉಳಿಯಲು ಬಯಸಿದ್ದರಿಂದ ಸಂಸ್ಥೆ ಅವರ ಗುರುತಿನ ಬಗ್ಗೆ ಹೇಳಿಲ್ಲ, 

ಸೋಡಾ ಕುಡಿಯೋಕೆ ಹೋದವಳು 83 ಲಕ್ಷ ರೂಪಾಯಿ ಗೆದ್ಲು!

ದೇವರು ಕೊಡುವಾಗ ಕೈಬಿಚ್ಚಿ ಕೊಡ್ತಾನೆ ಎನ್ನುವ ಮಾತಿದೆ. ಸಂತೋಷ ಇರಲಿ ದುಃಖವಿರಲಿ ಒಟ್ಟಿಗೆ ತಡೆಯಲಾರದಷ್ಟು ಬರುತ್ತದೆ.  ಅದೃಷ್ಟ ನಿಮ್ಮ ಕೈಹಿಡಿದ್ರೆ ಹಣ ನಿಮ್ಮನ್ನು ಹುಡುಕಿಕೊಂಡು ಬರುತ್ತದೆ. ನಿಮ್ಮ ಕಲ್ಪನೆಗೂ ಸಿಗದ ಜಾಗದಿಂದ ನಿಮಗೆ ಹಣ ಸಿಗುತ್ತದೆ. ಒಂದೇ ಬಾರಿ ಕೋಟ್ಯಾಧಿಪತಿಗಳಾಗ್ತೀರಿ. ಇದು ಎಲ್ಲರ ಜೀವನದಲ್ಲಿ ನಡೆಯುವಂತಹದ್ದಲ್ಲ. ಕೆಲವೇ ಕೆಲವು ಮಂದಿ ಇಂಥ ಲಕ್ ಹೊಂದಿರುತ್ತಾರೆ. ಇದರಲ್ಲಿ ಈ ಮಹಿಳೆ ಕೂಡ ಸೇರಿದ್ದಾಳೆ. ತನ್ನ ಜೀವನದಲ್ಲಿ ಅಷ್ಟೊಂದು ದೊಡ್ಡ ಮೊತ್ತ ಬರುತ್ತೆ ಎನ್ನುವ ಕಲ್ಪನೆ ಆಕೆಗಿರಲಿಲ್ಲ. ಕನಸಿನಲ್ಲೂ ಆಕೆ ಈ ರೀತಿ ಘಟನೆ ನಡೆಯುತ್ತೆ ಎಂದುಕೊಂಡಿರಲಿಲ್ಲ. ಆದ್ರೆ ಆಕೆಯ ಒಂದೇ ಒಂದು ಕೆಲಸ ಅವಳ ಜೀವನದಲ್ಲಿ ದೊಡ್ಡ ಬದಲಾವಣೆ ತಂದಿದೆ. ಒಂದು ಸೋಡಾ ಕುಡಿಯುವ ನೆಪ ಆಕೆಯನ್ನು ಶ್ರೀಮಂತೆಯನ್ನಾಗಿ ಮಾಡಿದೆ. ಅಷ್ಟಕ್ಕೂ ನಡೆದಿದ್ದೇನು ಎಂಬ ವಿವರ ಇಲ್ಲಿದೆ.

8 ಕೋಟಿ ಲಾಟರಿ ಗೆದ್ದ ಖುಷಿ ತಡೆಯಲಾಗದೇ ಸ್ಟೇಜ್‌ನಲ್ಲೇ ಕುಸಿದು ಬಿದ್ದ ಮಹಿಳೆ

ಮಹಿಳೆ ಅದೃಷ್ಟ (Good Luck ) ಬದಲಿಸಿದ ಸೋಡಾ : ಆಕೆ ವರ್ಜಿನಿಯಾದ ಮಹಿಳೆ. ಅವಳ ಹೆಸರು ಜಾನೆಟ್ ಬೇನ್ (Janet Bane). ಆಕೆಯ ಜೀವನದಲ್ಲಿ ಚಮತ್ಕಾರ ನಡೆದಿದೆ. ಅಂದು ಅಂಥದ್ದೊಂದು ಕೆಲಸ ಮಾಡ್ತೇನೆ ಎಂದು ಜಾನೆಟ್ ಅಂದುಕೊಂಡಿರಲಿಲ್ಲ. ಎಲ್ಲಿಗೋ ಹೊರಟಿದ್ದ ಜಾನೆಟ್ ಬೇನ್ ಒಂದು ಅಂಗಡಿಗೆ ಹೋಗಿದ್ದಾಳೆ. ಬಾಯಾರಿದ್ದ ಕಾರಣ ಅಲ್ಲಿ ಸೋಡಾ ಖರೀದಿ ಮಾಡಿ ಕುಡಿದಿದ್ದಾಳೆ. ಅಂಗಡಿ ಮುಂದೆ ನಿಂತು ಸೋಡಾ ಕುಡಿಯುತ್ತಿದ್ದ ಜಾನೆಟ್ ಗೆ ಅಂಗಡಿಯಲ್ಲಿದ್ದ ಲಾಟರಿ ಟಿಕೆಟ್ ಕಣ್ಣಿಗೆ ಬಿದ್ದಿದೆ. ಇರಲಿ ಅಂತ ಒಂದು ಟಿಕೆಟ್ ಖರೀದಿ ಮಾಡಿದ್ದಾಳೆ. ಅಷ್ಟೆ, ಜಾನೆಟ್ ಬೇನ್ ಅದೃಷ್ಟ ಬದಲಾಗಿದೆ. ಸುಮ್ಮನೇ ಖರೀದಿ ಮಾಡಿದ್ದ ಲಾಟರಿ ಟಿಕೆಟ್ ಆಕೆಗೆ ದೊಡ್ಡ ಮೊತ್ತವನ್ನು ತಂದುಕೊಟ್ಟಿದೆ.

ಯುಎಇ ಲಾಟರಿ ಗೆದ್ದ ಭಾರತೀಯ: ಚೆನ್ನೈನ ಮಗೇಶ್‌ಗೆ 16 ಕೋಟಿಯ ಜಾಕ್‌ಪಾಟ್‌

ಲಾಟರಿ ಖರೀದಿ ಮಾಡಿದ ಜಾನೆಟ್ ಅದನ್ನು ಸ್ಕ್ರ್ಯಾಚ್ ಮಾಡಿದ್ದಾಳೆ. ಆಗ ಆಕೆಗೆ 100,000 ಡಾಲರ್ ಅಂದ್ರೆ ಸುಮಾರು 83 ಲಕ್ಷ ರೂಪಾಯಿ ಲಾಟರಿ ಹಣ ತನಗೆ ಸಿಕ್ಕಿದೆ ಎಂಬುದು ಗೊತ್ತಾಗಿದೆ. ಸೋಡಾ ಕುಡಿಯಲು ನಿಲ್ಲಿಸಿದ್ದ ಕಾರಣ ಜಾನೆಟ್ ಬೇನ್ ಟಿಕೆಟ್ ಖರೀದಿ ಮಾಡಿದ್ದಳು. ಅದೇ ಆಕೆ ಜೀವನವನ್ನು ಬದಲಿಸಿದೆ ಎಂದು ವರ್ಜಿನಿಯಾ ಲಾಟರಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. 

ಕೋಟ್ಯಾಧಿಪತಿಯಾದ್ರೂ ಮಿಡಲ್ ಕ್ಲಾಸ್ ಜೀವನ, ಕೋಟಿ ಕೋಟಿ ಲಾಟರಿ ಸತ್ಯ ಮುಚ್ಚಿಟ್ಟ ದಂಪತಿ!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವೃತ್ತಿಪರತೆ ಅಂತ್ಯಸಂಸ್ಕಾರ, ಪ್ರಶ್ನೆ ಕೇಳಿದ ಪತ್ರಕರ್ತೆಗೆ ಕಣ್ಣು ಹೊಡೆದ ಪಾಕಿಸ್ತಾನ ಸೇನಾ ಲೆ.ಜನರಲ್
ಜಪಾನ್‌ನಲ್ಲಿ 7.5 ತೀವ್ರತೆಯ ಭೂಕಂಪ: ಧರಣಿ ಗರ ಗರನೇ ತಿರುಗಿದ ಕ್ಷಣದ ವೀಡಿಯೋಗಳು ವೈರಲ್